"ನಮ್ಮ ಮೆಟ್ರೋ" (Namma Metro) ಬೆಂಗಳೂರಿಗರ ಜೀವನಾಡಿ. ಟ್ರಾಫಿಕ್ ಸಮಸ್ಯೆಯಿಂದ ಸುಸ್ತಾಗಿರುವವರು ಬಹುತೇಕ ಇತ್ತೀಚೆಗೆ ಮೆಟ್ರೋಗೆ ಅವಲಂಬಿತರಾಗಿದ್ದಾರೆ. ಭಾರೀ ಅಗ್ಗದಲ್ಲಿದ್ದ ಮೆಟ್ರೋ ಇಂದು ದುಬಾರಿಯಾಗಿಬಿಟ್ಟಿದೆ. ಇತ್ತೀಚೆಗಷ್ಟೇ ನಮ್ಮ ಮೆಟ್ರೋ ದರ (Metro Price) ಪರಿಷ್ಕರಣೆಯಾಗಿದ್ದು, ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ಆದ್ರೆ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಮಾತ್ರ ಇನ್ನೂ ಇಳಿಕೆಯಾಗಿಲ್ಲ. ಅದೇ ಕಾರಣದಿಂದ ವರ್ಷದಿಂದ ವರ್ಷಕ್ಕೆ ಮೆಟ್ರೋ ಮಾರ್ಗಗಳು ಕೂಡಾ ವಿಸ್ತರಣೆಯಾಗುತ್ತಿದೆ. ಇದೀಗ ನಮ್ಮ ಮೆಟ್ರೋ ತನ್ನ ಮೂರನೇ ಹಂತದ (3rd Phase Metro) ಕಾಮಗಾರಿಗೆ ಮುಂದಾಗಿದ್ದು, ಈ ಮೂಲಕ ಬೆಂಗಳೂರಿನ ಅತಿ ಉದ್ದದ ವಯಾಡಕ್ಟ್ ನಿರ್ಮಾಣ ಮಾಡಲು ಸಿದ್ಧವಾಗಿದೆ.

ನಮ್ಮ ಮೆಟ್ರೋನ ಹಂತ 3ರ ಅಡಿಯಲ್ಲಿ ಬೆಂಗಳೂರಿನ ಅತಿ ಉದ್ದದ ಫ್ಲೈಓವರ್ ನಿರ್ಮಾಣವಾಗಲಿದೆ. ಈ ವಯಾಡಕ್ಟ್ 5 ಸ್ಥಳಗಳಲ್ಲಿ ಪ್ರವೇಶ ಮತ್ತು ನಿರ್ಗಮನ ರ್ಯಾಂಪ್‌ಗಳು ಮತ್ತು 9 ಸ್ಥಳಗಳಲ್ಲಿ ಲೂಪ್‌ಗಳನ್ನು ನಿರ್ಮಿಸಲಾಗುತ್ತದೆ ಎಂದು ವರದಿಯಾಗಿದೆ. ಅಂದರೆ ಸಂಚಾರ ದಟ್ಟಣೆಯ ದೃಷ್ಟಿಯಿಂದ ಈ ರೀತಿಯ ಯೋಜನೆಗ ಮುಂದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರಿನ ಅತೀ ಉದ್ದದ ವಯಾಡಕ್ಟ್!
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL), ತನ್ನ 3ನೇ ಹಂತದಲ್ಲಿ 44.65 ಕಿ.ಮೀನಲ್ಲಿ, 37.121 ಕಿ.ಮೀ ಡಬಲ್ ಡೆಕ್ಕರ್ ವಯಾಡಕ್ಟ್ ಅನ್ನು ನಿರ್ಮಿಸಲು ರೆಡಿಯಾಗಿದೆ. ಇದು ಎರಡು ಕಾರಿಡಾರ್‌ಗಳನ್ನು ಹೊಂದಿರಲಿದೆ ಎಂದು ವರದಿಯಾಗಿದೆ.
ಇದರಲ್ಲಿ ಮೊದಲ ಕಾರಿಡಾರ್, ಜೆಪಿನಗರ 4ನೇ ಫೇಸ್‌ನಿಂದ ಕೆಂಪಾಪುರಕ್ಕೆ, ಔಟರ್ ರಿಂಗ್ ರೋಡ್‌ನ ಪಶ್ಚಿಮ ಭಾಗವನ್ನು ಒಳಗೊಂಡಿರಲಿದೆ. ಅದೇ ರೀತಿ ಡೆಲ್ಮಿಯಾ ಸರ್ಕಲ್‌ನಿಂದ ಹೆಬ್ಬಾಳದವರೆಗಿನ 28.486 ಕಿ.ಮೀ ಡಬಲ್ ಡೆಕ್ಕರ್ ವಯಾಡಕ್ಟ್ ಅನ್ನು ಒಳಗೊಂಡಿರುತ್ತದೆ ಎನ್ನಲಾಗಿದೆ. ಈ ಮೂಲಕ ನಗರದ ಅತೀ ಉದ್ದದ ಫ್ಲೈಓವರ್ ಇದು ಎಂದು ಗುರುತಿಸಿಕೊಳ್ಳಲಿದೆ.
ಇನ್ನು ಎರಡನೇ ಮೆಟ್ರೋ ಮಾರ್ಗ, ಹೊಸಳ್ಳಿಯಿಂದ ಕಡಬಗರೆಗೆ ಮಾಗಡಿ ರಸ್ತೆಯುದ್ದಕ್ಕೂ, ಕೆಹೆಚ್‌ಬಿ ಕಾಲೋನಿಯಿಂದ ಕಡಬಗೆರೆವರೆಗಿನ 8.635 ಕಿ.ಮೀ ಡಬಲ್ ಡೆಕ್ಕರ್ ಅನ್ನು ಒಳಗೊಂಡಿರಲಿದೆ.
ಮಾಹಿತಿ ಪ್ರಕಾರ, ರಾಗಿಗುಡ್ಡ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ಡಬಲ್ ಡೆಕ್ಕರ್‌ನಂತೆಯೇ ಮೆಟ್ರೋ ಮಾರ್ಗವು ಕೆಳಗಿನ ಡೆಕ್ಕರ್‌ನಲ್ಲಿ ಚಲಿಸುತ್ತದೆ.
ಇನ್ನು ಕಾರಿಡಾರ್ 1 ರಲ್ಲಿ, ಡಬಲ್ ಡೆಕ್ಕರ್ ಡೆಲ್ಮಿಯಾ ವೃತ್ತದಿಂದ ಆರಂಭ ಮಾಡಲಾಗುತ್ತದೆ. ಪ್ರಸ್ತುತ ಇರುವ ಫ್ಲೈಓವರ್ ಅನ್ನು ತೆಗೆದು, 631 ಮೀಟರ್ ಪ್ರವೇಶ ಮತ್ತು ನಿರ್ಗಮನ ರ್ಯಾಂಪ್‌ನೊಂದಿಗೆ ಈ ಡಬಲ್ ಡೆಕ್ಕರ್ ನಿರ್ಮಾಣ ಕಾಣಲಿದೆ. ಆರಂಭ ಡೆಲ್ಮಿಯಾ ವೃತವಾದ್ರೆ, ಇನ್ನು ಲಾಸ್ಟ್ ಪಾಯಿಂಟ್ ಹೆಬ್ಬಾಳವಾಗಿರುತ್ತದೆ. ನಂತರ ಮೆಟ್ರೋ ಮಾರ್ಗ ಟರ್ಮಿನಲ್ ಸ್ಟಾಪ್ ಆಗಿರುವ ಕೆಂಪಾಪುರ ಕಡೆಗೆ ಮುಂದುವರೆಯಲಿದೆ.
9,692.33 ಕೋಟಿ ರೂಪಾಯಿ ವೆಚ್ಚದ ಈ ಡಬಲ್ ಡೆಕ್ಕರ್ ಯೋಜನೆಗೆ ಕರ್ನಾಟಕ ಸರ್ಕಾರ ಸಂಪೂರ್ಣವಾಗಿ ಹಣ ನೀಡಲಿದೆ. ಅದರಲ್ಲೂ ರಾಜ್ಯ ಸರ್ಕಾರ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮೂಲಕ 50% ನೀಡಿದರೆ, ಉಳಿದ 40% ಸಾಲದ ಮೂಲಕ ನೀಡಲಿದೆ.
6 ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣ:
ಇನ್ನು ಮುಂಬರುವ 3ನೇ ಹಂತದ ಮೆಟ್ರೋ ಮಾರ್ಗವು 6 ಇಂಟರ್‌ಚೇಂಜ್ ನಿಲ್ದಾಣಗಳನ್ನು ಹೊಂದಿರುತ್ತದೆ ಎನ್ನಲಾಗಿದೆ. ಅದರಲ್ಲಿ ಜೆಪಿನಗರ 4ನೇ ಫೇಸ್ (ಪಿಂಕ್ ಲೈನ್), ಜೆಪಿ ನಗರ (ಗ್ರೀನ್ ಲೈನ್), ಮೈಸೂರು ರಸ್ತೆ (ಪರ್ಪಲ್ ಲೈನ್), ಸುಮನಹಳ್ಳಿ ಕ್ರಾಸ್ (C1 & C2), ಗೊರಗುಂಟೆಪಾಳ್ಯ (ಗ್ರೀನ್ ಲೈನ್) ಮತ್ತು ಕೆಂಪಾಪುರ (ಬ್ಲೂ ಲೈನ್)


Click it and Unblock the Notifications