ಬೆಂಗಳೂರಿಗರಿಗೆ ನಮ್ಮ ಮೆಟ್ರೋ (BMRCL) ಗುಡ್ ನ್ಯೂಸ್ ಕೊಟ್ಟಿದ್ದು, ಇದರಿಂದ ಊರಿನಿಂದ ಬಂದು ಮಹಾನಗರಿ ಸೇರಿಕೊಳ್ಳುವರಿಂದ ಹಿಡಿದು, ಬೆಳಗ್ಗಿನ ಶಿಫ್ಟ್ ನಲ್ಲಿ ಕೆಲಸಕ್ಕೆ ಹೋಗುವ ನೌಕರಿಗೂ ಇದರಿಂದ ಅನುಕೂಲವಾಗಲಿದೆ.
ಹೌದು ಈವರೆಗೆ ಪ್ರತಿದಿನ ಬೆಳಗ್ಗೆ ೫ ಗಂಟೆಗೆ ಆರಂಭವಾಗುತ್ತಿದ್ದ ನಮ್ಮ ಮೆಟ್ರೋ ಇನ್ಮುಂದೆ ಪ್ರತಿ ವಾರಾಂತ್ಯದಲ್ಲಿ ಊರಿಗೆ ಹೋಗಿ ಹಿಂದಿರುಗುವ ಪ್ರಯಾಣಿಕರಿಗೆ ಸಹಾಯವಾಗಲಿ ಎಂದು ಪ್ರತಿ ಸೋಮವಾರ ಬೆಳಗ್ಗೆ 4.15ರಿಂದಲೇ ಮೆಟ್ರೋ ಸಂಚಾರ ಆರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ (BMRCL) ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹೊಸ ವ್ಯವಸ್ಥೆಯು ಜ.13ರಿಂದಲೇ ಜಾರಿಗೆ ಬರಲಿದ್ದು, ಪ್ರತಿ ಸೋಮವಾರವು ಮುಂಜಾನೆ 4.15ಕ್ಕೆ ಮೆಟ್ರೋ ಆರಂಭವಾಗಲಿದ್ದು, ಉಳಿದ ದಿನಗಳಲ್ಲಿ ಎಂದಿನಂತೆ ಅಂದರೆ ಬೆಳಗ್ಗೆ 5 ಕ್ಕೆ ಸಂಚಾರ ಇರಲಿದೆ. ನಗರಕ್ಕೆ ಹಿಂತಿರುಗುವ ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ನಮ್ಮ ಮೆಟ್ರೋ ನೂತನ ಸೇವೆ ಆರಂಭಿಸಿದ್ದು ಇದರಿಂದ ಆಟೋ ಹಾಗೂ ಕ್ಯಾಬ್‌ನಲ್ಲಿ ಪ್ರಯಾಣಿಕರಿಂದ ಪಡೆಯುವ ಸುಲಿಗೆಗೆ ಬ್ರೇಕ್ ಬೀಳಲಿದೆ. ಯಾಕೆಂದರೆ ಶನಿವಾರ, ಭಾನುವಾರದ ವೀಕೆಂಡ್‌ನಲ್ಲಿ ಸಿಟಿ ಹೊರಗೆ ಹೋಗುವ ಪ್ರಯಾಣಿಕರು ಸೋಮವಾರ ನಗರಕ್ಕೆ ಬಂದಿಳಿಯುತ್ತಿದ್ದಂತೆ ಬೆಳಗಿನ ಜಾವ ಆಟೋ,ಕ್ಯಾಬ್ ,ಬಸ್‌ಗಳ ಕಡೆ ಮುಖ ಮಾಡುತ್ತಿದ್ದರು. ಇದೀಗ ಮೆಟ್ರೋ ಸೇವೆ ಆರಂಭ ಬೆಂಗಳೂರಿಗೆ ವಾಪಸ್ ಆಗುವ ಪ್ರಯಾಣಿಕರಿಗೆ ನಿಜಕ್ಕೂ ವರದಾನವಾಗಲಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ Bengaluru Metro Rail Corporation Limited(BMRCL), "ಬೆಂಗಳೂರು ನಗರದಿಂದ ವಾರಾಂತ್ಯದಲ್ಲಿ ಊರಿಗೆ ತೆರಳಿ ನಂತರ ಸೋಮವಾರ ನಗರಕ್ಕೆ ಹಿಂದಿರುಗುವ ಪ್ರಯಾಣಿಕರ ಅನುಕೂಲಕ್ಕಾಗಿ ಮುಂಜಾನೆ ಸಂಪರ್ಕವನ್ನು ಒದಗಿಸಬೇಕಿದೆ. ಈ ಹಿನ್ನೆಲೆಯಲ್ಲಿ, ನಮ್ಮ ಮೆಟ್ರೋ ನಿಗಮವು ಪ್ರತಿ ಸೋಮವಾರದಂದು ಮಾತ್ರ ಎಲ್ಲಾ ನಿಲ್ದಾಣಗಳಿಂದ ಮೆಟ್ರೋ ಸೇವೆಯನ್ನು 2025ರ ಜನವರಿ 13ರಿಂದ ಜಾರಿಗೆ ಬರುವಂತೆ ಬೆಳಗ್ಗೆ 4:15 ರಿಂದ ಪ್ರಾರಂಭಿಸಲಿದೆ. ಎಲ್ಲಾ ಟರ್ಮಿನಲ್ ರೈಲು ಸೇವೆಗಳು ಮತ್ತು ಮೆಜೆಸ್ಟಿಕ್ ಇಂಟರ್‌ಚೇಂಜ್ ಸೇವೆಗಳು
ಆರಂಭವಾಗುತ್ತದೆ. ಉಳಿದಂತೆ ವಾರದ ಉಳಿದ ಎಲ್ಲ ದಿನಗಳಂದು ಮೆಟ್ರೋ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪ್ರಯಾಣಿಕರು ತಮ್ಮ ಸುಗುಅಮ ಸಂಚಾರಕ್ಕೆ ಈ ಸೇವೆಯನ್ನು ಬಳಸಿಕೊಳ್ಳಬಹುದು " ಎಂದು ಹೇಳಿದೆ.
ನಮ್ಮ ಮೆಟ್ರೋ ನಿಗಮದ ಈ ಹೊಸ ನಿರ್ಧಾರಿಂದ ನಾಗಸಂದ್ರ, ಗೊರಗುಂಟೆಪಾಳ್ಯ, ಯಶವಂತಪುರ ಮತ್ತು ರೈಲ್ವೆ ಮತ್ತು ಬಸ್ ನಿಲ್ದಾಣಗಳಿಗೆ ಸಮೀಪವಿರುವ ಇತರ ಮೆಟ್ರೋ ನಿಲ್ದಾಣಗಳಿಂದ ಮುಂಜಾನೆ ರೈಲು ಏರಲು ಜನರಿಗೆ ಸಹಾಯ ಮಾಡುತ್ತದೆ.
ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ ಯಾವಾಗ?
ಆರ್‌ವಿ ರಸ್ತೆ - ಬೊಮ್ಮಸಂದ್ರ ನಡುವಿನ 18.8 ಕಿ.ಮೀ ಉದ್ದದ ನಮ್ಮ ಮೆಟ್ರೋ ಮಾರ್ಗಗಳಲ್ಲಿ ಹಳದಿ ಮಾರ್ಗ (ಯೆಲ್ಲೋ ಲೈನ್)ಯಾವಾಗ ಆರಂಭ ಎಂಬುವುದು ಅನೇಕರ ಪ್ರಶ್ನೆಯಾಗಿದೆ. ಈ ಮಾರ್ಗದ ಕಾಮಗಾರಿ ಈಗಾಗಲೇ ಪೂರ್ಣವಾಗಿದ್ದು, ರೈಲು ಸಂಚಾರ ಪ್ರಾಯೋಗಿಕ ಪರೀಕ್ಷೆಯೂ ಮುಕ್ತಾಯವಾಗಿದೆ. ಆದರೆ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕಾಗಿ ಸ್ವದೇಶಿ ನಿರ್ಮಿತ ಡ್ರೈವರ್‌ಲೆಸ್ ರೈಲು ಪಶ್ಚಿಮ ಬಂಗಾಳದ ಕೊಲ್ಕತ್ತಾದ ಟಿಟಾಗರ್ ನಿಂದ ಬರಬೇಕಾಗಿದ್ದು ಈ ಕಾರ್ಯಕ್ಕೆ ಈಗಾಗಲೇ ಚಾಲನೆ ದೊರಕಿದೆ. ಜನವರಿ ಅಂತ್ಯಕ್ಕೆ ಮೆಟ್ರೋಗಳು ರೈಲು ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಸಿಗ್ನಲಿಂಗ್ ಟೆಸ್ಟಿಂಗ್, ಹಳಿಗೆ ಜೋಡಣೆ, ಇತ್ಯಾದಿ ಟೆಸ್ಟ್ ನಡೆಸುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತೆ ಆದರೆ ಮಾರ್ಚ್ ಅಥವಾ ಏಪ್ರಿಲ್ ಏಪ್ರಿಲ್ ಮೊದಲ ವಾರದಲ್ಲಿ ಮೆಟ್ರೋ ಕಾರ್ಯಾಚರಣೆ ಆರಂಭವಾಗಬಹುದು.


Click it and Unblock the Notifications