ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ರೀತಿಯಲ್ಲಿ ಬೆಂಗಳೂರಿನಲ್ಲಿ ಮತ್ತೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನ ನಿರ್ಮಿಸಲು ಸರ್ಕಾರ ಈಗಾಗಲೇ ನಿರ್ಧಾರ ಮಾಡಿದೆ. ಇನ್ನು ಇದರ ಕಾಮಗಾರಿಯ ಕೆಲಸ ಮಾತ್ರ ಆಗಬೇಕಿದೆ. ಎರಡನೇ ಏರ್‌ಪೋರ್ಟ್‌ನ ಕಮಗಾರಿಯನ್ನ ಆರಂಭಿಸಲು ಸರ್ಕಾರ ಸಕಲ ಸಿದ್ಧತೆಗಳನ್ನ ಮಾಡಿಕೊಳ್ತಿದೆ. ಅಲ್ಲದೆ ವಿಮಾಣ ನಿಲ್ದಾಣದ ನಿರ್ಮಾಣಕ್ಕೆ ಈಗಾಗಲೇ ಸೈಟ್ ಆಯ್ಕೆ ಹಂತ ಕೂಡ ಅಂತಿಮ ಘಟ್ಟದಲ್ಲಿದೆ. ಮೂಲಸೌಕರ್ಯ ಇಲಾಖೆ ಈಗಾಗಲೇ ಮೂರು ಸ್ಥಳಗಳನ್ನ ಶಾರ್ಟ್‌ಲಿಸ್ಟ್ ಮಾಡಿದ್ದು, ಆ ಸ್ಥಳಗಳ ಕುರಿತು ವಿಮಾನ ನಿಲ್ದಾಣ ಪ್ರಾದಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸರ್ಕಾರ ಯೋಜಿಸಿದೆ.
ಆದ್ರೆ ಬೆಂಗಳೂರಿನಿಂದ ಬರೀ 35 ಕಿಲೋ ಮೀಟರ್ ದೂರದಲ್ಲಿರುವ ತಮಿಳುನಾಡಿನ ಹೊಸೂರಿನಲ್ಲಿರುವ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣದಿಂದ ತುರ್ತು ಪರಿಸ್ಥಿತಿ ಉದ್ಭವಿಸುತ್ತದೆ, ಇದು ನಗರದ ವಾಯುಯಾನದ ಮೇಲೆ ಪರಿಣಾಮ ಬೀರಬಹುದು ಎಂದು ಸರ್ಕಾರ ತಿಳಿಸಿದೆ.

ಶಾರ್ಟ್ ಲಿಸ್ಟ್ ಮಾಡಿದ ಸೈಟ್‌ಗಳು ಕಿರಿದಾಗಿವೆ
ಸಲಹಾ ಸಂಸ್ಥೆಯ ಹಿಂದಿನ ಅಧ್ಯಯನಗಳು ಹೊಸ ವಿಮಾನ ನಿಲ್ದಾಣಕ್ಕೆ ಏಳು ಸ್ಥಳಗಳನ್ನ ಶಾರ್ಟ್ಲಿಸ್ಟ್ ಮಾಡಿದೆ. ಆದ್ರೂ, ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ಚುನಾವಣೆಗೆ ಸಂಬಂಧಿಸಿದ ಗೊಂದಲಗಳಿಂದಾಗಿ ನಿಲ್ದಾಣದ ಪ್ರಕ್ರಿಯೆ ವಿಳಂಬವಾಗ್ತಿದೆ. ಸಧ್ಯಕ್ಕೆ ಉಪಚುನಾವಣೆ ಅಂತಿಮಗೊಂಡಿದ್ದು, ಅಧಿಕಾರಿಗಳು ವೇಗವಾಗಿ ಈ ನಿಲ್ದಾಣದ ಕಾರ್ಯವನ್ನ ಆರಂಭಿಸಿದ್ದಾರೆ. ಹೆಗಳನ್ನಚ್ಚಿನ ವಿಳಂಬವಾಗದೇ ಸ್ಥಳವನ್ನು ಅಂತಿಮಗೊಳಿಸುವುದಾಗಿ ಸರ್ಕಾರ ತಿಳಿಸಿದೆ ಎಂದು ಮೂಲಸೌಕರ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.
ಚರ್ಚೆಯಲ್ಲಿರುವ ಪ್ರಮುಖ ಸ್ಥಳಗಳು
ಸರ್ಕಾರ ಶಾರ್ಟ್‌ಲಿಸ್ಟ್ ಮಾಡಿದ ಮೂರು ಸೈಟ್‌ಗಳನ್ನ ಪರಿಶೀಲನೆ ಮಾಡಲು ಮುಂದಾಗಿದೆ. ತುಮಕೂರು ಮತ್ತು ರಾಮನಗರದ ಸಮೀಪವಿರುವ ಸ್ಥಳಗಳನ್ನ ಪರಿಗಣಿಸಿ ಅವುಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಆದರೆ ಉತ್ತರದಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೀವ್ರವಾದ ಟ್ರಾಫಿಕ್ ಅನ್ನು ಕಡಿಮೆ ಮಾಡಲು ತಜ್ಞರು ಮತ್ತು ಮಧ್ಯಸ್ಥಗಾರರು ದಕ್ಷಿಣ ಬೆಂಗಳೂರು ಸೈಟ್ ಕಡೆಗೆ ಮಖಮಾಡಿದ್ದಾರೆ.
ಸ್ಕೈಡೆಕ್ ಪ್ರಸ್ತಾವನೆಯು ಸಂಕೀರ್ಣತೆಯನ್ನು ಒಳಗೊಂಡಿದೆ
ಹೆಮ್ಮಿಗೆಪುರಕ್ಕೆ ಯೋಜಿಸಲಾದ ಸ್ಕೈಡೆಕ್ ಯೋಜನೆ, ಈ ಪ್ರಕ್ರಿಯೆಗೆ ಬಹುದೊಡ್ಡ ತೊಡಕಾಗಿ ಮಾರ್ಪಟ್ಟಿದೆ. ಇದರಿಂದಾಗಿ ವಿಮಾನ ನಿಲ್ದಾಣದ ಸ್ಥಳಗಳಲ್ಲಿ ಆಗುವ ಏರ್ ಟ್ರಾಫಿಕ್ ಕಾರ್ಯಾಚರಣೆಗಳಿಗೆ ಅಡ್ಡಿಯಾಗಬಹುದು. ಇನ್ನು ಈಕುರಿತು ಸರ್ಕಾರ ಸಾರ್ವಜನಿಕರ ಅಭಿಪ್ರಾಯವನ್ನ ಸಂಗ್ರಹಿಸಿದೆ. ಇದರಲ್ಲಿ 300ಕ್ಕೂ ಹೆಚ್ಚು ಜನರ ಅಭಿಪ್ರಾಯ ಸಂಗ್ರಹವಾಗಿದೆ. ಅದರಲ್ಲಿ ಹಿರಿಯ ಬಿಬಿಎಂಪಿ ಅಧಿಕಾರಿಯೊಬ್ಬರು, "ಸ್ಕೈಡೆಕ್‌ಗೆ ಬೇಕಾದ ಪರ್ಯಾಯ ಸ್ಥಳ ಇನ್ನೂ ಪರಿಶೀಲನೆಯಲ್ಲಿದೆ ಎಂದು ಹೇಳಿದ್ದಾರೆ.
ತಮಿಳುನಾಡಿನಿಂದ ಸ್ಪರ್ಧಾತ್ಮಕ ಒತ್ತಡ
ತಮಿಳುನಾಡು ಹೊಸೂರು ವಿಮಾನ ನಿಲ್ದಾಣ ಯೋಜನೆಯನ್ನು ಸಕ್ರಿಯವಾಗಿ ಮುಂದುವರಿಸುವುದರಿಂದಾಗಿ, ಕರ್ನಾಟಕವು ತನ್ನ ಯೋಜನೆಗಳನ್ನು ವೇಗವಾಗಿ ಟ್ರ್ಯಾಕ್ ಮಾಡಲು ಕಷ್ಟವನ್ನ ಎದುರಿಸುವಂತಾಗಿದೆ. ಹಾಗೆ ರಾಜ್ಯ ಸರ್ಕಾರ ಮಾತ್ರ ಈ ಸ್ಪರ್ಧೆಯಲ್ಲಿ ಉಳಿದುಕೊಂಡೆ ವಿಳಂಬವಾಗದಂತೆ ತನ್ನ ಕಾರ್ಯಗಳನ್ನ ಮಾಡಲಿದೆ ಎಂದು ಅಧಿಕಾರಿಗಳು ಹಾಳಿದ್ದಾರೆ.
ಬೆಂಗಳೂರಿನ ಭವಿಷ್ಯದ ವಿಮಾನ ನಿಲ್ದಾಣದ ಮೂಲಸೌಕರ್ಯವನ್ನು ರೂಪಿಸಲು ಬೇಕಾದ ಕಾರ್ಯತಂತ್ರ, ಸಾರ್ವಜನಿಕ ಮತ್ತು ವ್ಯವಸ್ಥಾಪನಾ ಆದ್ಯತೆಗಳನ್ನು ಜೋಡಿಸಲು ಸರ್ಕಾರವು ಕೆಲಸ ಮಾಡ್ತಿದೆ, ಈ ಮೂಲಕ ಸರ್ಕಾರದಿಂದ ಅತೀ ಶೀಘ್ರದಲ್ಲೇ ನಿಲ್ದಾಣದ ಕಾರ್ಯಗಳ ಬಗ್ಗೆ ನಿರೀಕ್ಷಿಸಲಾಗಿದೆ.
ಒಟ್ನಲ್ಲಿ ಈ ಎಲ್ಲಾ ಅಡತಡೆಗಳ ಮಧ್ಯೆ ಎರಡನೇ ವಿಮಾನ ನಿಲ್ದಾಣದ ಕಾಮಗಾರಿಯನ್ನ ಆರಂಭಕ್ಕೆ ಸೈಟ್‌ಗಳು ಶಾರ್ಟ್‌ಲಿಸ್ಟ್ ಆಗಿವೆ. ಇನ್ನೇನಿದ್ರು ಸಾರ್ವಜನಿಕರು ಕಾಮಗಾರಿ ಆರಂಭಕ್ಕೆ ದಿನಗಳನ್ನ ಮಾತ್ರ ಎಣಿಸಬೇಕಿದೆ. ಇನ್ನು ಇದಕ್ಕೆ ಎಷ್ಟೇ ತೊಡಕುಗಳಾದ್ರು ಕೂಡ ತ್ವರಿತವಾಗಿ ನಿಲ್ದಾಣದ ಕಾಮಗಾರಿ ಕಾರ್ಯವನ್ನ ಆರಂಭ ಮಾಡ್ತೇವೆ ಎಂದು ಸರ್ಕಾರ ಭರವಸೆಯನ್ನ ನೀಡಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications