ಬೆಂಗಳೂರು: ನಮ್ಮ ಮೆಟ್ರೋ (Namma Metro) ಪ್ರತಿಯೊಬ್ಬರಿಗೂ ಬೇಕಾದ ಅಗತ್ಯ ಸಾರಿಗೆ ವ್ಯವಸ್ಥೆ. ಬೆಲೆ ಏರಿಕೆ ಬಗ್ಗೆ ಎಷ್ಟೇ ವಿರೋಧ ವ್ಯಕ್ತವಾದರೂ, ಜನ ಮೆಟ್ರೋ ಬಳಸೋದನ್ನು ಮಾತ್ರ ಇನ್ನೂ ನಿಲ್ಲಿಸಿಲ್ಲ. ಪ್ರತಿದಿನ ಲಕ್ಷಗಟ್ಟಲೆ ಮಂದಿ ಈ ಮೆಟ್ರೋ ಮೂಲಕ ಪ್ರಯಾಣಿಸ್ತಾರೆ. ಗಂಟೆಗಟ್ಟಲೆ ಪ್ರಯಾಣ ಮಾಡಬೇಕಾದ ಅನಿವಾರ್ಯತೆಯ ನಡುವೆ, ಮೆಟ್ರೋ ಕೆಲವೇ ನಿಮಿಷಗಳಲ್ಲಿ ಜನರನ್ನು ಗಮ್ಯಸ್ಥಾನಕ್ಕೆ ಮುಟ್ಟುವಂತೆ ಮಾಡುತ್ತೆ. ಇದೇ ಕಾರಣದಿಂದ ನಮ್ಮ ಮೆಟ್ರೋ ಎಲ್ಲರಿಗು ಅಗತ್ಯವಾಗಿಬಿಟ್ಟಿದೆ. ಇದೀಗ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ನಡೆಸುತ್ತಿರುವ ಮೆಟ್ರೋ ಕಾಮಗಾರಿಗಾಗಿ ಔಟರ್ ರಿಂಗ್ ರೋಡ್‌ನ (Outer Ring Road) 9ನೇ ಮೇನ್ ಜಂಕ್ಷನ್ ನಿಂದ 5ನೇ ಮೇನ್‌ವರೆಗಿನ ಸರ್ವಿಸ್ ರಸ್ತೆಯನ್ನು ಮುಂದಿನ 45 ದಿನಗಳ ಕಾಲ ಬಂದ್ ಮಾಡುವುದಾಗಿ ಸಂಚಾರಿ ಪೊಲೀಸರು ಸೂಚನೆ ನೀಡಿದ್ದಾರೆ. ಸಂಚಾರ ದಟ್ಟಣೆಯಂತಹ ಸಮಸ್ಯೆಗಳನ್ನು ಪರಿಹರಿಸುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪತ್ರದಲ್ಲಿ ಸೂಚನೆ ನೀಡಿದ್ದಾರೆ.

ಪೋಲೀಸರ ಪತ್ರದಲ್ಲಿ ಏನಿದೆ?
ಎಚ್‌ಎಸ್‌ಆರ್ ಲೇಔಟ್ ಸಂಚಾರ ಪೊಲೀಸರು ಎಕ್ಸ್ ನಲ್ಲಿ ಹೊರಡಿಸಿದ ಸಂಚಾರ ಸಲಹೆಯ ಪ್ರಕಾರ, ಔಟರ್ ರಿಂಗ್ ರೋಡ್‌ನ 9 ನೇ ಮೇನ್ ರೋಡ್ ಜಂಕ್ಷನ್‌ನಿಂದ 5 ನೇ ಮೇನ್ ರೋಡ್ ಜಂಕ್ಷನ್‌ವರೆಗಿನ ಸರ್ವಿಸ್ ರಸ್ತೆಯನ್ನು ಅಕ್ಟೋಬರ್ 6, 2025 ರಿಂದ 45 ದಿನಗಳವರೆಗೆ ಮುಚ್ಚಲಾಗುವುದು. ಹೆಚ್.ಎಸ್.ಆರ್ ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೊರವರ್ತುಲ ರಸ್ತೆಯ 9ನೇ ಮುಖ್ಯರಸ್ತೆ ಜಂಕ್ಷನ್‌ನಿಂದ 5ನೇ ಮುಖ್ಯ ರಸ್ತೆ ಜಂಕ್ಷನ್ ವರೆಗೆ ಸರ್ವಿಸ್ ರಸ್ತೆಯಲ್ಲಿ ನಮ್ಮ ಮೆಟ್ರೋ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ಈ ನಿರ್ಧಾರ ಕೈಗೊಂಡಿರುವುದಾಗಿ ಬರೆದುಕೊಂಡಿದ್ದಾರೆ.
ಪರ್ಯಾಯ ಮಾರ್ಗ ಬಳಸಲು ಮನವಿ:
ಇನ್ನು ಈ 45 ದಿನಗಳಲ್ಲಿ ಪರ್ಯಾಯ ಮಾರ್ಗ ಬಳಸುವಂತೆ ಸೂಚನೆ ನೀಡಿದ್ದು, ಕಾಮಗಾರಿ ಮುಗಿಯುವ ವರೆಗೆ ಇಬ್ಬಲೂರ್ ಕಡೆಯಿಂದ ಬಂದು ಸಿಲ್ಕ್ ಬೋರ್ಡ್ ಜಂಕ್ಷನ್ ಕಡೆಗೆ ಸಂಚರಿಸುವ ವಾಹನ ಸವಾರರು 14ನೇ ಮುಖ್ಯ ರಸ್ತೆ ಫೈಓವರ್ ಮೂಲಕ ಮುಖ್ಯರಸ್ತೆಯಲ್ಲಿಯೇ 5ನೇ ಮುಖ್ಯರಸ್ತೆ ಜಂಕ್ಷನ್ ಗೆ ಸಾಗಿ ಅಥವಾ ಇತರ ಹೆಚ್.ಎಸ್.ಆರ್. ಲೇಔಟ್ ಒಳಭಾಗದ ರಸ್ತೆಗಳ ಮೂಲಕ ಸಾಗಿ ಸಿಲ್ಕ್ ಬೋರ್ಡ್ ಹಾಗು ಹೊಸೂರು ಮುಖ್ಯರಸ್ತೆ ಮೂಲಕ ಸಂಚರಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಸಂಚಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸೂಚನೆಯಂತೆ, ಕಾಮಗಾರಿಯ ಅವಧಿಯಲ್ಲಿ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸಬೇಕು. ಇಬ್ಬಲೂರ್ ಕಡೆಯಿಂದ ಬಂದು ಸಿಲ್ಕ್ ಬೋರ್ಡ್ ಜಂಕ್ಷನ್ ಕಡೆಗೆ ಹೋಗುವ ವಾಹನಗಳು 14ನೇ ಮುಖ್ಯ ರಸ್ತೆ ಫೈಓವರ್ ಮೂಲಕ 5ನೇ ಮುಖ್ಯರಸ್ತೆ ಜಂಕ್ಷನ್‌ಗೆ ಸಾಗಬಹುದು. ಅಥವಾ, ಹೌಸ್‌ಹೋಲ್ ದಾರಿಗಳ ಮೂಲಕ ಒಳಭಾಗದ ರಸ್ತೆಗಳ ಮೂಲಕ ಸಿಲ್ಕ್ ಬೋರ್ಡ್ ಮತ್ತು ಹೊಸೂರು ಮುಖ್ಯರಸ್ತೆ ಮೂಲಕ ಸಂಚರಿಸುವಂತೆ ಸೂಚಿಸಲಾಗಿದೆ.


Click it and Unblock the Notifications