ಬೆಂಗಳೂರು, ಅಕ್ಟೋಬರ್, 04: ಬೆಸ್ಕಾಂ 9 ಜಿಲ್ಲೆಗಳಿಗೆ ವಿದ್ಯುತ್ ಪೂರೈಕೆ ಮಾಡುತ್ತಿದೆ. ಈ ಮೂಲಕ ಇದು ರಾಜ್ಯದಲ್ಲೇ ಅತೀ ಹೆಚ್ಚು ಜಿಲ್ಲೆಗಳಿಗೆ ವಿದ್ಯುತ್ ಪೂರೈಸುವ ಘಟಕ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಇದೀಗ ಇದರ ಆನ್‌ಲೈನ್ ಸೇವೆಗಳು ಇಂದಿನಿಂದ ಮೂರು ದಿನಗಳ ಕಾಲ ಸ್ಥಗಿತವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸಾಮಾನ್ಯವಾಗಿ ವಿದ್ಯುತ್‌ಗೆ ಸಂಬಂಧಿತ ಸಮಸ್ಯೆಗಳು, ಕಾಮಗಾರಿ ನಡೆಯುವಂತಹ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯನ್ನು ಸ್ಥಗಿಸಗೊಳಿಸಲಾಗುತ್ತಿತ್ತು. ಇದೀಗ ಇಂದಿನಿಂದ ಅಂದರೆ ಅಕ್ಟೋಬರ್ 4ರಿಂದ ಮೂರು ದಿನಗಳ ಕಾಲ ಬೆಸ್ಕಾಂ ಆನ್‌ಲೈನ್ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತ ಆಗಲಿದೆ. ಕಾರಣ ಏನು ಎನ್ನುವ ಮಾಹಿತಿ ಇಲ್ಲಿದೆ ತಿಳಿಯಿರಿ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಉನ್ನತೀಕರಿಸುವ ಹಿನ್ನೆಲೆ ಅಕ್ಟೋಬರ್ 4ರಿಂದ ಮೂರು ದಿನಗಳವರೆಗೆ ತನ್ನ ಆನ್‌ಲೈನ್ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತ ಆಗಲಿದೆ. ಅಕ್ಟೋಬರ್ 4ರ ರಾತ್ರಿ 9ರಿಂದ ಅಕ್ಟೋಬರ್ 7ರ ಬೆಳಗ್ಗೆ 6ರವರೆಗೆ ಗ್ರಾಹಕ ಪೋರ್ಟಲ್ ಪ್ರವೇಶಿಸಲಾಗುವುದಿಲ್ಲ.ಆನ್‌ಲೈನ್ ಬಿಲ್ ಪಾವತಿಗಳನ್ನು ಅಕ್ಟೋಬರ್ 4ರಂದು ರಾತ್ರಿ 9ರಿಂದ ಅಕ್ಟೋಬರ್ 5 ರಂದು ಬೆಳಗ್ಗೆ 11ರವರೆಗೆ ನಿಷ್ಕ್ರಿಯಗೊಳಿಸಲಾಗುತ್ತದೆ.
ಈ ನಿಗದಿತ ಅಲಭ್ಯತೆಯು IPDS IT ಹಂತ-2 ಯೋಜನೆಯ ಪ್ರಮುಖ ಅಂಶವಾಗಿರುವ RAPDRP IT ಅಪ್ಲಿಕೇಶನ್‌ಗಳಿಗೆ ಅಪ್‌ಗ್ರೇಡ್ ಭಾಗ ಆಗಿದೆ. ಇದು ಐಟಿ ಮೂಲಸೌಕರ್ಯವನ್ನು ಹೆಚ್ಚಿಸಲು ಮತ್ತು ಬೆಸ್ಕಾಂನ ಕಾರ್ಯಾಚರಣಾ ಪ್ರದೇಶಗಳಲ್ಲಿ ಸೇವೆಯ ವಿತರಣೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಈ ವ್ಯವಸ್ಥೆಯ ಉನ್ನತೀಕರಣದಿಂದ ಹೊಸ ಸಂಪರ್ಕ ಪ್ರಕ್ರಿಯೆ, ಹೆಸರು ಮತ್ತು ಸುಂಕ ಬದಲಾವಣೆ, ಹೆಸರು ವರ್ಗಾವಣೆ ಮತ್ತು ತಾತ್ಕಾಲಿಕ ಸಂಪರ್ಕಗಳಂತಹ ಕಾರ್ಯಾಚರಣೆಗಳಿಗೆ RAPDRP ಅಪ್ಲಿಕೇಶನ್ ಲಭ್ಯವಿರುವುದಿಲ್ಲ.
ಜೊತೆಗೆ ಬೆಸ್ಕಾಂ ಕ್ಯಾಶ್ ಕೌಂಟರ್ ಪಾವತಿ, ಹೊಸ ಸಂಪರ್ಕಗಳು, ಹೆಸರು ಮತ್ತು ವಿಳಾಸ ಬದಲಾವಣೆ ಸೇರಿ ಇನ್ನಿತರ ಸೇವೆಗಳಿಗಾಗಿ ಗ್ರಾಹಕ ಪೋರ್ಟಲ್ ಕಾರ್ಯನಿರ್ವಹಿಸುವುದಿಲ್ಲ. RAPDRP ಸೇವೆ ಇಲ್ಲದ ಹಿನ್ನೆಲೆ ಮೊಬೈಲ್ ಅಪ್ಲಿಕೇಷನ್ ಕೂಡ ಸ್ಥಗಿತಗೊಳ್ಳಲಿದೆ. ಇನ್ನು ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ ಸಹಾಯವಾಣಿ ಸಂಖ್ಯೆ 1912ಕ್ಕೆ ಕರೆ ಮಾಡಿ ಅಥವಾ ಬೆಸ್ಕಾಂ ವೆಬ್‌ಸೈಟ್‌ಗೆ ನೀಡಬಹುದಾಗಿದೆ ಎಂದು ಮಾಹಿತಿ ನೀಡಿದೆ.
ಈಗಿನ ಕಾಲದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ದಿನಕ್ಕೊಂದು ಬದಲಾವಣೆಗಳು ಆಗುತ್ತಿರುತ್ತವೆ. ಅದಕ್ಕೆ ತಕ್ಕಂತೆ ಸಂಸ್ಥೆ, ಕಚೇರಿಗಳು ಹೊಂದಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಹಳೇ ಮಾದರಿಯ ವ್ಯವಸ್ಥೆಯಿಂದ ಸ್ವಲ್ಪ ಮುಂದೆ ಹೋಗಿ ಕೆಲಸವನ್ನು ತ್ವರಿತಗತಿಯಲ್ಲಿ ಮುಗಿಸಬೇಕಾಗಿರುತ್ತದೆ. ಇದು ಒಂಥರಾ ಹೇಗಿದೆ ಅಂದ್ರೆ, ಕಾಲ ಬದಲಾದಂತೆಲ್ಲ ಜನರು ಚೇಂಜ್ ಕೇಳ್ತಾರೆ ಅನ್ನೋ ರೀತಿಯಲ್ಲಿದೆ.
ಹಾಗೆಯೇ ಇದೀಗ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಉನ್ನತೀಕರಿಸುವ ಹಿನ್ನೆಲೆ ತನ್ನ ಎಲ್ಲಾ ಆನ್‌ಲೈನ್ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಇನ್ನೂ ಈ ಬೆಸ್ಕಾಂ ಕಂಪನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಮತ್ತು ದಾವಣಗೆರೆ ಒಟ್ಟು 9 ಜಿಲ್ಲೆಗಳಿಗೆ ವಿದ್ಯುತ್ ಪೂರೈಕೆ ಮಾಡುತ್ತಿದೆ.


Click it and Unblock the Notifications