ಬೆಂಗಳೂರಿನಲ್ಲಿ ಇತ್ತೀಚೆಗೆ ವಿದ್ಯುತ್ ವ್ಯತ್ಯಯ ಸಮಸ್ಯೆಗಳು (Power Cut) ಆಗುತ್ತಲೇ ಇದೆ. ಇನ್ನು ಬೆಸ್ಕಾಂ (BESCOM) ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳು ಕೂಡಾ ಈ ಸಮಸ್ಯೆಗೆ ಸಿಲುಕಿಕೊಂಡಿದೆ. ಇದೀಗ ಬೆಂಗಳೂರು ಹತ್ತಿರದ ಕೋಲಾರ ಜಿಲ್ಲೆಯಲ್ಲಿ ಇಂದು (ಜ.25) ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ವರದಿಯಾಗಿದೆ.

ಹೌದು, ಕೋಲಾರ ಜಿಲ್ಲೆಯ ಕೆಲವು ಭಾಗಗಳಲ್ಲಿ ಜನವರಿ 25, 2026 ರಂದು ನಿಗದಿತ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ಕೈಗೊಳ್ಳುವ ಅಗತ್ಯ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳಿಂದಾಗಿ ಈ ಪವರ್ ಕಟ್ ಸಂಭವಿಸಲಿದೆ ಎಂದು ವರದಿಯಾಗಿದೆ.
ವಿದ್ಯುತ್ ಲೈನ್ ಸೇವೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ನಿರ್ವಹಣಾ ಕಾರ್ಯವನ್ನು ಕೈಗೊಳ್ಳಲಾಗಿದೆ. ಇನ್ನು ಕೆಪಿಟಿಸಿಎಲ್ (KPTCL) ಮತ್ತು ಬೆಸ್ಕಾಂ ತಂಡಗಳು 220 kV, 66 kV, ಹಾಗೂ 11 kV ಉಪಕೇಂದ್ರಗಳಲ್ಲಿ ದುರಸ್ತಿ ಮತ್ತು ಅಪ್‌ಡೇಟ್ ಕೆಲಸಗಳನ್ನು ಕೈಗೊಂಡಿದೆ. ಸುಗಮ ವಿದ್ಯುತ್ ಪೂರೈಕೆಗೆ ಇದು ಅತ್ಯಗತ್ಯ ಎಂದು ಸಂಸ್ಥೆ ಹೇಳಿದೆ.
ಇಲ್ಲೆಲ್ಲಾ ಇರಲ್ಲ ಕರೆಂಟ್
ಈ ವಿದ್ಯುತ್ ಕಡಿತದಿಂದ ಕೋಲಾರ ನಗರ, ವಕ್ಕಲೇರಿ, ಬಂಗಾರಪೇಟೆ ಪ್ರದೇಶ, ತಲಗುಂದ, ಟೆಕ್ಕೇಮಡು ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಇಂದು ಒಂದು ದಿನ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸಂಬಂಧಿತ ಉಪಕೇಂದ್ರಗಳಿಂದ ವಿದ್ಯುತ್ ಪಡೆಯುವ ಮತ್ತು ಒಂದೇ ನೆಟ್‌ವರ್ಕ್‌ಗೆ ಸಂಪರ್ಕಗೊಂಡಿರುವ ಇತರೆ ಪ್ರದೇಶಗಳಿಗೂ ಈ ಪವರ್ ಕಟ್ ಪರಿಣಾಮ ಬೀರಲಿದೆ ಎಂದು ವರದಿಯಾಗಿದೆ.
ಜನವರಿ 25, 2026 ರಂದು ಮಾತ್ರ ವಿದ್ಯುತ್ ಕಡಿತವಾಗಲಿದೆ ಎಂದು ವರದಿಯಾಗಿದೆ. ನಿರ್ವಹಣಾ ಕಾರ್ಯ ಪೂರ್ಣಗೊಂಡ ಕೂಡಲೇ ವಿದ್ಯುತ್ ಪೂರೈಕೆ ಪುನರಾರಂಭಗೊಳ್ಳುತ್ತದೆ. ಆದ್ದರಿಂದ, ಕಾಮಗಾರಿ ಪ್ರಗತಿಗನುಗುಣವಾಗಿ ಮತ್ತೆ ಹಿಂದಿನಂತೆ ಈ ನಗರಗಳಲ್ಲಿ ವಿದ್ಯುತ್ ಕಾರ್ಯಾಚರಣೆ ಆರಂಭವಾಗಬಹುದು ಎಂದು ಹೇಳಲಾಗಿದೆ. ಕೋಲಾರ ನಿವಾಸಿಗಳು ವಿದ್ಯುತ್ ವ್ಯತ್ಯಯಕ್ಕೆ ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.
ಜನರಿಗೆ ಸಲಹೆ:
ಈ ನಗರಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವ ಹಿನ್ನೆಲೆ ಜನರು ಮೊದಲೇ ಮುನ್ನೆಚ್ಚರಿಕೆ ವಹಿಸುವಂತೆ ಜನರಿಗೆ ಸಲಹೆ ನೀಡಲಾಗಿದೆ. ಮೊಬೈಲ್, ಲ್ಯಾಪ್‌ಟಾಪ್, ಅಡುಗೆ ಕೆಲಸಗಳನ್ನು ಮೊದಲೇ ಮಾಡಿಟ್ಟುಕೊಳ್ಳುವಂತೆ ಸಲಹೆ ನೀಡಲಾಗಿದೆ.
2026ರಲ್ಲಿ ಸಾಲು ಸಾಲು ಪವರ್ ಕಟ್!
ಬೆಸ್ಕಾಂ ವ್ಯಾಪ್ತಿಯಲ್ಲಿ ಪವರ್ ಕಟ್ ನಿರಂತವಾಗಿ ಸಂಭವಿಸುತ್ತಿದೆ. ಇದು ಬೆಸ್ಕಾಂ ವತಿಯಿಂ ಕೈಗೊಂಡಿರುವ ನಿರ್ವಹಣೆಯ ಭಾಗವಾಗಿದ್ದು, ವಿದ್ಯುತ್ ಸೇವೆಯನ್ನು ಸುಧಾರಿಸುವ ಉದ್ದೇಶದಿಂದ ಮತ್ತು ಭವಿಷ್ಯದ ತೊಂದರೆಗಳನ್ನು ತಪ್ಪಿಸುವ ಉದ್ದೇಶದಿಂದ ಕೈಗೊಳ್ಳಲಾಗುತ್ತಿದೆ. ಇನ್ನು ಈ ಪವರ್ ಕಟ್ ತಾತ್ಕಾಲಿಕವಾಗಿದ್ದರೂ, ಪೀಡಿತ ಪ್ರದೇಶಗಳಲ್ಲಿನ ನಿವಾಸಿಗಳು ಅಗತ್ಯ ಸಾಧನಗಳನ್ನು ಚಾರ್ಜ್ ಮಾಡಿಕೊಳ್ಳುವಂತೆ, ಬ್ಯಾಕಪ್ ವಿದ್ಯುತ್ ಸಂಗ್ರಹಿಸಿಟ್ಟುಕೊಳ್ಳುವಂತೆ, ತಮ್ಮ ಅಗತ್ಯ ಕೆಲಸಗಳನ್ನು ಮೊದಲೇ ಮಾಡಿ ಮುಗಿಸುವಂತೆ ಸಲಹೆ ನೀಡಲಾಗಿದೆ.
ಸದ್ಯ ಇಂದು ಕೋಲಾರದಲ್ಲಿ ಮಾತ್ರ ಸಂಭವಿಸಿದ್ದು, ಕಳೆದ ವಾರವಿಡೀ ಬೆಂಗಳೂರಿನ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು,


Click it and Unblock the Notifications