ಹಿರಿಯ ನಾಗರಿಕರಿಗೆ ಅಂಚೆ ಕಚೇರಿಯಲ್ಲಿದೆ ಬೆಸ್ಟ್ ಸ್ಕೀಮ್..ಇಲ್ಲಿ ಹೂಡಿಕೆ ಮಾಡಿ ಮಾಸಿಕ ₹21,550 ಗಳಿಸಬಹುದು..!

ಅಭಿವೃದ್ಧಿ ಪಥದತ್ತ ಬದಲಾಗುತ್ತಿರುವ ಜಗತ್ತು..ಜಗತ್ತು, ಕಾಲ ಬದಲಾದಂತೆ ತಾವೂ ಬದಲಾಗುತ್ತಿರುವ ಜನರು. ಹೀಗೆ ಬದಲಾವಣೆಯ ನಡುವೆ ಸುಗಮವಾಗಿ ಜೀವನ ಸಾಗಿಸಬೇಕು ಅಂದ್ರೆ ಆದಾಯ ಬಹುಮುಖ್ಯವಾದ ಅಂಶ. ಬೇಕಾದ್ದನ್ನೆಲ್ಲ ಕೊಂಡು, ಇಚ್ಛೆ ಬಂದಂತೆ ಬದುಕಲು ಎಷ್ಟೇ ಆದಾಯ ಇದ್ದರೂ ಸಾಕಾಗುವುದಿಲ್ಲ. ಹೀಗಿರುವಾಗ ಕಡಿಮೆ ಆದಾಯದಲ್ಲಿ ಜೀವನ ಸಾಗಿಸುವುದೆಂದರೆ ಅಷ್ಟು ಸುಲಭವಲ್ಲ. ಆದಾಯ ಕಡಿಮೆ ನೀಡಿ ಅತಿಹೆಚ್ಚು ಖರ್ಚು ಮಾಡಿಸುತ್ತಿರುವ ಕಾಲ ಇದಾಗಿದೆ. ಹೀಗಾಗಿ ಒಂದು ಆದಾಯ ಬೇಕೇ ಬೇಕು ಅಲ್ವಾ..ಆದರೆ ವಯಸ್ಸಾದವರಿಗೆ ಕೆಲಸಕ್ಕೆ ಹೋಗಿ ದುಡಿಯುವ ಸಾಮರ್ಥ್ಯ ಇರುವುದಿಲ್ಲ ಅಂಥವರಿಗೊಂದು ಇಲ್ಲಿದೆ ಸೂಕ್ತ ಯೋಜನೆಯ ಕುರಿತ ಮಾಹಿತಿ.

ವಯೋಮಿತಿಯ ಸಮಸ್ಯೆ ಇಂದಲೋ, ಅನಾರೋಗ್ಯದ ಸಮಸ್ಯೆಯಿಂದಲೋ ಕೆಲವರಿಗೆ ದುಡಿಮೆ ಮಾಡಲಾಗುವುದಿಲ್ಲ. ಅಂಥವರೂ ಸ್ಥಿರ ಆದಾಯ ನೋಡಬೇಕು ಎನಿಸಿದಲ್ಲಿ, ಅಂಚೆ ಕಚೇರಿಯ ಈ ಯೋಜನೆ ಬಹಳ ಸಹಾಯಕರವಾಗಿದೆ. ಅದು ಯಾವುದೆಂದರೆ ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS). ಇದು ಹಿರಿಯ ನಾಗರಿಕರಿಗಾಗಿಯೇ ಇರುವ ಯೋಜನೆ. ಈ ಒಂದು ಯೋಜನೆಯ ಮೂಲಕ ಪ್ರತಿ ತಿಂಗಳು 20.500 ರೂ.ವರೆಗೆ ಆದಾಯ ಗಳಿಸಬಹುದು. ಅದಕ್ಕೂ ಮೊದಲು ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕು.

SCSS ಯೋಜನೆಯಲ್ಲಿ ಹೂಡಿಕೆ ಮಾಡಿ ಆದಾಯ ಗಳಿಸಿ

SCSS ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೇಗೆ..?

60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಕನಿಷ್ಠ 1,000 ರೂ. ಹೂಡಿಕೆ ಮಾಡುವ ಮೂಲಕ, ಪೋಸ್ಟ್ ಆಫೀಸ್‌ ಅಥವಾ ಬ್ಯಾಂಕ್‌ನಲ್ಲಿ ಖಾತೆ ತೆರೆಯಬೇಕು. ಅದಕ್ಕಿಂತ ಹೆಚ್ಚು ಹೂಡಿಕೆ ಮಾಡ ಬಯಸುವವರು 1000ಕ್ಕೆ ಗುಣಾಂಕವಾಗಿ ಗರಿಷ್ಠ ರೂ. 30 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಗಮನವಿರಲಿ 1 ಲಕ್ಷಕ್ಕಿಂತ ಹೆಚ್ಚು ಹಣ ಹೂಡಿಕೆ ಮಾಡುವುದಾದರೆ, ಚೆಕ್‌ ಮೂಲಕ ಮಾತ್ರ ಪಾವತಿಸಬೇಕು. ಈ ಯೋಜನೆಯ ಅವಧಿ 5 ವರ್ಷಗಳಾಗಿದ್ದು, ಅದನ್ನು ಮುಂದುವರೆಸಲು ಬಯಸಿದರೆ 3 ವರ್ಷಗಳ ಕಾಲ ಹೆಚ್ಚಿಗೆ ಮುಂದುವರೆಸಬಹುದು.
ಇನ್ನು 60 ವರ್ಷ ಮೇಲ್ಪಟ್ಟ ಯಾವುದೇ ಹಿರಿಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಜೊತೆಗೆ 55 ರಿಂದ 60 ವರ್ಷ ವಯಸ್ಸಿನೊಳಗಿನ ವಯಸ್ಕರೂ ಹೂಡಿಕೆ ಮಾಡ ಬಯಸಿದಲ್ಲಿ, ಅವರಿಗೂ ಒಂದು ಆಯ್ಕೆಯಿದೆ. ಅದೇನೆಂದರೆ, ಇದರಲ್ಲಿ ಹೂಡಿಕೆ ಮಾಡಲು ತಮ್ಮ ಕೆಲಸದಿಂದ ಸ್ವಯಂ ನಿವೃತ್ತಿ (VRS) ಪಡೆದಿರಬೇಕು. ಆಗ ಮಾತ್ರ ಈ ಯೋಜನೆಯ ಲಾಭವನ್ನು, 55 ರಿಂದ 60 ವರ್ಷ ವಯಸ್ಸಿನೊಳಗಿನ ವಯಸ್ಕರೂ ಪಡೆಯಬಹುದು. ಜೊತೆಗೆ ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದವರು 50 ವರ್ಷ ವಯಸ್ಸಿನಲ್ಲೇ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆ ಮತ್ತೊಂದು ರೀತಿಯಲ್ಲೂ ಉಪಯುಕ್ತವಾಗುತ್ತದೆ. ಹೇಗೆಂದರೆ ಯಾರಾದರೂ ತಮ್ಮ ಸಂಗಾತಿ ಜೊತೆ ಜಂಟಿ ಖಾತೆ ಕೂಡ ತೆರೆಯಬಹುದು.

SCSS ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಏನು ಲಾಭ..?

ಈ SCSS (ಹಿರಿಯ ನಾಗರಿಕರ ಉಳಿತಾಯ ಯೋಜನೆ) ಯಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರಿಕರಿಗೆ, ವರ್ಷಕ್ಕೆ 8.2%ನಷ್ಟು ಬಡ್ಡಿ ದೊರೆಯುತ್ತದೆ. ಇತರೆ ಯೋಜನೆಗಳಿಗಿಂತ ಇದರಲ್ಲಿ ಉಳಿತಾಯ ಕೂಡ ಹೆಚ್ಚಿದೆ. ಅಲ್ಲದೇ ಹೂಡಿಕೆದಾರರು ತಮ್ಮ ಹೂಡಿಕೆ ಮೇಲಿನ ಬಡ್ಡಿಯನ್ನು ತಿಂಗಳಿಗೊಮ್ಮೆ ವಿತ್‌ ಡ್ರಾ ಮಾಡಿಕೊಳ್ಳಬಹುದು.

ಗರಿಷ್ಠ ಮೊತ್ತವಾದ 30 ಲಕ್ಷ ರೂ.ಗಳನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಮೂರು ತಿಂಗಳಿಗೆ 60,150 ರೂ. ಬಡ್ಡಿ ರೂಪದಲ್ಲಿ ಕೈ ಸೇರುತ್ತದೆ. ಇದನ್ನು ವರ್ಷಕ್ಕೆ ಲೆಕ್ಕ ಮಾಡಿದರೆ 2.46 ಲಕ್ಷ ರೂ. ಆದಾಯ ಗಳಿಸಿದಂತಾಗುತ್ತದೆ. ಹೀಗೆ ಹೂಡಿಕೆದಾರರು ಈ ಯೋಜನೆಯಿಂದ ತಿಂಗಳಿಗೆ ಸುಮಾರು 20,500 ರೂ. ಗಳಿಸಬಹುದು. ಒಟ್ಟಾರೆಯಾಗಿ ಇದರಿಂದ 5 ವರ್ಷಕ್ಕೆ 42 ಲಕ್ಷದ 3 ಸಾವಿರ ರೂ. ಆದಾಯ ಸಿಗುತ್ತದೆ. ಅಂದರೆ ಹೂಡಿಕೆದಾರರು ಗಳಿಸುವ ಒಟ್ಟು ಬಡ್ಡಿ 12 ಲಕ್ಷದ 3 ಸಾವಿರ ರೂ. ಆಗಿರುತ್ತದೆ.

ಇನ್ನು ಜಂಟಿ ಖಾತೆಯಲ್ಲಿ ಗರಿಷ್ಠ 60 ಲಕ್ಷ ರೂ. ಹೂಡಿಕೆ ಮಾಡಬೇಕಾಗುತ್ತದೆ. ಅಂದರೆ ಪ್ರತಿ ಮೂರು ತಿಂಗಳಿಗೆ 1 ಲಕ್ಷ 20 ಸಾವಿರದ 300 ರೂ. ಬಡ್ಡಿ ಸಿಗುತ್ತದೆ. ವಾರ್ಷಿಕವಾಗಿಇ 4 ಲಕ್ಷ 81 ಸಾವಿರದ 200 ರೂ. ಬಡ್ಡಿ ಕೈ ಸೇರುತ್ತದೆ. ಅಂದರೆ 5 ವರ್ಷಕ್ಕೆ 84 ಲಕ್ಷದ 6 ಸಾವಿರ ರೂ ಒಟ್ಟು ಮೊತ್ತ ಸಿಗುತ್ತದೆ. ಒಟ್ಟಾರೆ ಬಡ್ಡಿ ಇಲ್ಲಿ 24 ಲಕ್ಷದ 6 ಸಾವಿರ ಸಿಗುತ್ತದೆ.

ಹೀಗೆ ವಯಸ್ಸಾದವರಿಗೂ ಅತಿಹೆಚ್ಚು ಆದಾಯ ನೀಡುವ ಅಂಚೆ ಕಚೇರಿಯ ಈ ಯೋಜನೆ, ನಿಜಕ್ಕೂ ಉಪಯೋಗಕರವಾಗಿದೆ. ಅಂಚೆ ಕಚೇರಿಯು ಎಲ್ಲಾ ವರ್ಗದವರಿಗೂ ಹೆಚ್ಚು ಆದಾಯ ನೀಡುವಲ್ಲಿ ಯಶಸ್ವಿಯಾಗಿದೆ. ಎಲ್ಲರಿಗೂ ಸ್ವಾವಲಂಬಿಗಳಾಗಿ ಬದುಕಲು ಜೀವನ ರೂಪಿಸಿಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+