SIP Investment: ವಿದೇಶದಲ್ಲಿ ಉನ್ನತ ಶಿಕ್ಷಣಕ್ಕಾಗಿ SIP ಮೂಲಕ ಹಣ ಉಳಿತಾಯ ಮಾಡುವುದು ಹೇಗೆ..?

ವಿದೇಶಕ್ಕೆ ಕಳುಹಿಸಿ ಉನ್ನತ ಶಿಕ್ಷಣವನ್ನು ತಮ್ಮ ಮಕ್ಕಳಿಗೆ ಕೊಡಿಸಬೇಕೆಂದು ಭಾರತೀಯ ಪೋಷಕರ ದೊಡ್ಡ ಕನಸು.. ಆದರೆ ವಿದೇಶದಲ್ಲಿ ಶಿಕ್ಷಣ ಪಡೆಯಬೇಕೆಂದರೇ ಕನಸ್ಸಿನ ಮಾತೇ ಸರಿ.ಯಾಕೆಂದರೆ ಅಲ್ಲಿ ಶಿಕ್ಷಣ ವ್ಯವಸ್ಥೆ ದುಬಾರಿ. ಅಲ್ಲಿ ವಾಸಿಸಲು ಸಹ ಹೆಚ್ಚಿನ ಹಣವನ್ನು ಖರ್ಚ ಮಾಡಬೇಕಾಗುತ್ತದೆ ಎಂದು ಹಲವಾರು ತಂದೆ- ತಾಯಿಯರು ಯೋಜನೆಯನ್ನು ಮಾಡುತ್ತಾರೆ.. ಹೀಗೆ ನೀವು ಯೋಜನೆ ಮಾಡುತ್ತಿದ್ದರೆ ತಲೆಯಿಂದ ಮೊದಲು ತಗೆದು ಹಾಕಿ.

ವಿದೇಶದಲ್ಲಿ ಉನ್ನತ ಶಿಕ್ಷಣಗಾಗಿ SIP ಹೇಗೆ ಆರ್ಥಿಕ ನೆರವು  ನೀಡುತ್ತದೆ

ಹೌದು,ವಿದೇಶದಲ್ಲಿ ನಿಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಲು ಈಗಿನಿಂದಲ್ಲೂ ಸರಿಯಾದ ಹಣಕಾಸು ಯೋಜನೆ ರೂಪಿಸುವುದು ಅತ್ಯಗತ್ಯ. ಶಿಕ್ಷಣಕ್ಕಾಗಿ ಹಣವನ್ನು ಹೊಂದಿಸಲು ಒಂದು ಉತ್ತಮ ಮಾರ್ಗವೆಂದರೆ ವ್ಯವಸ್ಥಿತ ಹೂಡಿಕೆ ಯೋಜನೆ (SIP).

ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಚಿಕ್ಕ ವಯಸ್ಸಿನಲ್ಲಿಯೇ ಎಸ್‌ಐಪಿ ನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸುವುದರಿಂದ, ಹಣಕಾಸಿನ ಮೇಲೆ ಹೆಚ್ಚಿನ ಒತ್ತಡವಿಲ್ಲದೆ, ದೀರ್ಘಾವಧಿಯಲ್ಲಿ ಉತ್ತಮ ಮೊತ್ತವನ್ನು ಯಳಿಸಲು ನಿಮ್ಮಗೆ ಸಹಾಯ ಮಾಡುತ್ತದೆ. ವಿದೇಶಿ ಶಿಕ್ಷಣಕ್ಕೆ SIP ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತಿಳಿಯಲು ಮುಂದೆ ಓದಿ.

ವಿದೇಶಿ ಶಿಕ್ಷಣಕ್ಕಾಗಿ SIP: ಯಾವಾಗ ಆರಂಭ ಮಾಡಬೇಕು..?

ವಿದೇಶದಲ್ಲಿ ಶಿಕ್ಷಣ ಪಡೆಯಲು ಬಯಸುವಂತಹ ಮಕ್ಕಳಿಗೆ ಪೋಷಕರು ಆದಷ್ಟು ಬೇಗ SIP ಹೂಡಿಕೆಯನ್ನು ಪ್ರಾರಂಭಿಸುವುದು ಉತ್ತಮ. ಸಾಮಾನ್ಯವಾಗಿ, ಮಗು 1 ರಿಂದ 5 ವರ್ಷ ವಯಸ್ಸಿನಲ್ಲಿದ್ದಾಗಲೇ SIP ಪ್ರಾರಂಭಿಸುವುದು ಸೂಕ್ತ. ಏಕೆಂದರೆ, ಇದು 15 ರಿಂದ 20 ವರ್ಷಗಳ ಹೂಡಿಕೆ ಅವಧಿಯನ್ನು ನೀಡುತ್ತದೆ. ಇದರಿಂದ ಚಕ್ರಬಡ್ಡಿಯ ಲಾಭವನ್ನು ಪಡೆಯಬಹುದು ಮತ್ತು ಮಾಸಿಕ ಆರ್ಥಿಕ ಹೊರೆಯನ್ನು ಕಡಿಮೆ ಮಾಡಬಹುದು. ಬೇಗ ಪ್ರಾರಂಭಿಸುವುದರಿಂದ, ಹೂಡಿಕೆ ಮಾಡಲು ಸುಲಭವಾಗುತ್ತದೆ, ಕಾಲಾನಂತರದಲ್ಲಿ ಹೂಡಿಕೆಯು ಗಟ್ಟಿಯಾಗಿ ಬೆಳೆಯುತ್ತದೆ ಮತ್ತು ಮಾರುಕಟ್ಟೆಯ ಏರಿಳಿತಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಒಂದು ವೇಳೆ ತಡಮಾಡಿದರೆ, ಹೂಡಿಕೆಯ ಮೇಲಿನ ಆದಾಯವು ಕಡಿಮೆಯಾಗುತ್ತದೆ ಮತ್ತು ಮಾಸಿಕ ಕಂತುಗಳೂ ಹೆಚ್ಚಾಗುವಂತಹ ಸಾಧ್ಯತೆ ಇರುತ್ತದೆ.

ಇನ್ವೆಸ್ಟ್ ಎಜುಕೆ ಆದಿತ್ಯ ಅಗರ್ವಾಲ್ ಅವರ ಪ್ರಕಾರ, ನಿಮ್ಮ ಮಗು 3 ವರ್ಷದವಿದ್ದಾಗ SIP ಪ್ರಾರಂಭಿಸಿದರೆ, ಆತನಿಗೆ ಕಾಲೇಜು ಶಿಕ್ಷಣಕ್ಕೆ 15 ವರ್ಷಗಳಿರುತ್ತದೆ. ಆಗ ನೀವು 1 ಕೋಟಿ ರೂಪಾಯಿಗಳನ್ನು ಗಳಿಸಲು ತಿಂಗಳಿಗೆ ಕೇವಲ 20,000 ರೂಪಾಯಿಗಳನ್ನು 12% CAGR ನಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಅದೇ 2 ಕೋಟಿ ರೂಪಾಯಿಗಳನ್ನು ಗಳಿಸಲು ತಿಂಗಳಿಗೆ 40,000 ರೂಪಾಯಿಗಳ SIP ಸಾಕಾಗುತ್ತದೆ. ಆದರೆ ನೀವು ಐದು ವರ್ಷ ತಡಮಾಡಿದರೆ, ಅದೇ 1 ಕೋಟಿ ರೂಪಾಯಿ ಗುರಿಯನ್ನು ತಲುಪಲು ಮಾಸಿಕ SIP ಮೊತ್ತವು 10 ವರ್ಷಗಳಲ್ಲಿ ತಿಂಗಳಿಗೆ 33,000 ರೂಪಾಯಿಗಳವರೆಗೂ ಏರಿಕೆಯಾಗುತ್ತದೆ.

SIP ಕ್ಯಾಲ್ಕುಲೇಟರ್: ಎಷ್ಟು ಹೂಡಿಕೆ ಮಾಡಬೇಕು?

ನೀವು SIP ಕ್ಯಾಲ್ಕುಲೇಟರ್ ಬಳಕೆಯನ್ನು ಮಾಡಿಕೊಂಡು 10-15 ವರ್ಷಗಳಲ್ಲಿ 50 ಲಕ್ಷದಿಂದ 1 ಕೋಟಿ ರೂಪಾಯಿಗಳವರೆಗೆ ಹಣವನ್ನು ಗಳಿಸಲು, ನಿಮ್ಮ ಹೂಡಿಕೆ ಅವಧಿ ಮತ್ತು ನಿರೀಕ್ಷಿತ ಆದಾಯಕ್ಕೆ ಅನುಗುಣವಾಗಿ ಮಾಸಿಕ ಕಂತುಗಳನ್ನು ಲೆಕ್ಕಗಳನ್ನು ಹಾಕಬಹುದು ಅದು ಹೇಗೆ ಎಮಬುವುದನ್ನು ಈ ಕೆಳಗಿನಂತೆ ತಿಳಿಯಿರಿ

ಅವಧಿಗುರಿ ಮೊತ್ತಅಂದಾಜು ಮಾಸಿಕ SIP (12% CAGR)
15 ವರ್ಷಗಳು₹1 ಕೋಟಿ₹12,000 - ₹13,000
15 ವರ್ಷಗಳು₹2 ಕೋಟಿ₹24,000 - ₹26,000
10 ವರ್ಷಗಳು₹1 ಕೋಟಿ₹52,000 - ₹54,000
10 ವರ್ಷಗಳು₹2 ಕೋಟಿ₹104,000 - ₹108,000

ಲಾಂಚ್‌ಎಡ್ ಗ್ಲೋಬಲ್‌ ಕಾಜಲ್ ದವೆ ಅವರ ಪ್ರಕಾರ, ಸುಮಾರು 12% ವಾರ್ಷಿಕ ಆದಾಯದೊಂದಿಗೆ, ತಿಂಗಳಿಗೆ 12,000-15,000 ರೂಪಾಯಿಗಳನ್ನು ಹೂಡಿಕೆ ಮಾಡಿದರೆ 15 ವರ್ಷಗಳಲ್ಲಿ 50 ಲಕ್ಷ ರೂಪಾಯಿಗಳನ್ನು ಗಳಿಸಬಹುದು. ಅದೇ 1 ಕೋಟಿ ರೂಪಾಯಿಗಳನ್ನು ಗಳಿಸಲು ತಿಂಗಳಿಗೆ 25,000-30,000 ರೂಪಾಯಿಗಳನ್ನು ಹೂಡಿಕೆ ಮಾಡುವುದು ಅಗತ್ಯ. ಈ ಗುರಿಗಳನ್ನು 10 ವರ್ಷಗಳಲ್ಲಿ ತಲುಪಲು, ಈ ಹೂಡಿಕೆಗಳು ತಿಂಗಳಿಗೆ 30,000-50,000 ರೂಪಾಯಿಗಳಿಗೆ ಏರಿಸಬೇಕಾಗುತ್ತದೆ. ಹೆಚ್ಚುತ್ತಿರುವ ಬೋಧನಾ ವೆಚ್ಚವನ್ನು ಸರಿದೂಗಿಸಲು ವಾರ್ಷಿಕವಾಗಿ ಈ ಯೋಜನೆಗಳನ್ನು ಪರಿಶೀಲಿಸುವುದು ಮತ್ತು SIP ಗಳನ್ನು ಸರಿಹೊಂದಿಸುವುದು ಮುಖ್ಯ. ಮೊದಲೇ ಯೋಜನೆ ರೂಪಿಸುವುದು ಬಹಳ ಮುಖ್ಯ.

ಇನ್‌ಗುಡ್‌ನ ಸಂಸ್ಥಾಪಕ ರೋಹಿತ್ ಆರ್ ಚೌಹಾಣ್ ಅವರ ಪ್ರಕಾರ, "ವಿದೇಶಿ ಶಿಕ್ಷಣಕ್ಕಾಗಿ 50 ಲಕ್ಷದಿಂದ 1 ಕೋಟಿ ರೂಪಾಯಿಗಳವರೆಗೆ ಹಣವನ್ನು ಗಳಿಸಲು, ಪೋಷಕರು ತಮ್ಮ SIP ಮೊತ್ತವನ್ನು ಹೂಡಿಕೆ ಅವಧಿ ಮತ್ತು ನಿರೀಕ್ಷಿತ ಆದಾಯಕ್ಕೆ ಅನುಗುಣವಾಗಿ ಹೊಂದಿಸಬೇಕು. ವಾರ್ಷಿಕವಾಗಿ 12% ಆದಾಯವನ್ನು ಊಹಿಸಿಕೊಂಡರೆ, 15 ವರ್ಷಗಳವರೆಗೆ ತಿಂಗಳಿಗೆ 8,800 ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಸರಿಸುಮಾರು 50 ಲಕ್ಷ ರೂಪಾಯಿಗಳನ್ನು ಗಳಿಸಬಹುದು. ಅದೇ ತಿಂಗಳಿಗೆ 17,500 ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಸುಮಾರು 1 ಕೋಟಿ ರೂಪಾಯಿಗಳನ್ನು ಗಳಿಸಬಹುದು.

ಒಂದು ವೇಳೆ ಸಮಯ ಕಡಿಮೆ ಇದ್ದರೆ, ಅಂದರೆ 10 ವರ್ಷಗಳಲ್ಲಿ 50 ಲಕ್ಷ ರೂಪಾಯಿಗಳನ್ನು ಗಳಿಸಲು ತಿಂಗಳಿಗೆ 21,700 ರೂಪಾಯಿಗಳನ್ನು ಮತ್ತು 1 ಕೋಟಿ ರೂಪಾಯಿಗಳನ್ನು ಗಳಿಸಲು 43,500 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ಬೇಗ ಪ್ರಾರಂಭಿಸುವುದರಿಂದ ಹಣಕಾಸಿನ ಹೊರೆಯನ್ನು ಕಡಿಮೆ ಮಾಡಬಹುದು. ಅಲ್ಲದೆ ಹಣದುಬ್ಬರ, ಕರೆನ್ಸಿ ಏರಿಳಿತ ಮತ್ತು ಬದಲಾಗುತ್ತಿರುವ ಶೈಕ್ಷಣಿಕ ಗುರಿಗಳಿಗೆ ಅನುಗುಣವಾಗಿ ಹೊಂದಾಣಿಕೆ ಮಾಡಲು ನಿಮ್ಮಗೆ ಅನುವು ಮಾಡಿಕೊಡುತ್ತದೆ.

ಹೆಚ್ಚಿನ ಸಂದರ್ಭಗಳಲ್ಲಿ ವಿದೇಶಿ ಶಿಕ್ಷಣಕ್ಕೆ 50 ಲಕ್ಷದಿಂದ 1 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಹಣ ಬೇಕಾಗುತ್ತದೆ. ಹೀಗಾಗಿ ಪೋಷಕರು ಆದಷ್ಟು ಬೇಗ SIP ಅನ್ನು ಪ್ರಾರಂಭಿಸುವುದು ಬಹಳ ಮುಖ್ಯ. ಸಾಮಾನ್ಯವಾಗಿ ಮಗು 3 ರಿಂದ 5 ವರ್ಷ ವಯಸ್ಸಿನಲ್ಲಿದ್ದಾಗ ಪ್ರಾರಂಭಿಸಬೇಕು. ಇದರಿಂದ 12-15 ವರ್ಷಗಳ ಹೂಡಿಕೆ ವಿಂಡೋ ಸಿಗುತ್ತದೆ.

ರೋಹಿತ್ ಆರ್ ಚೌಹಾಣ್ ಅವರ ಪ್ರಕಾರ, "ಇದು ಚಕ್ರಬಡ್ಡಿಯ ಲಾಭವನ್ನು ಪಡೆಯಲು ಮತ್ತು ವಾರ್ಷಿಕವಾಗಿ ಸರಾಸರಿ 5-7% ರಷ್ಟು ಹೆಚ್ಚಾಗುವ ಕರೆನ್ಸಿ ಮತ್ತು ಬೋಧನಾ ಶುಲ್ಕದ ಹಣದುಬ್ಬರವನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಮೊದಲೇ ಯೋಜನೆ ರೂಪಿಸುವುದರಿಂದ ಮಾಸಿಕ ಖರ್ಚುಗಳನ್ನು ಕಡಿಮೆ ಮಾಡಬಹುದು ಮತ್ತು ಮಾರುಕಟ್ಟೆ ಏರಿಳಿತಗಳನ್ನು ತಡೆಯಬಹುದು. ಉದಾಹರಣೆಗೆ, 12% ವಾರ್ಷಿಕ ಆದಾಯದಲ್ಲಿ 15,000 ರೂಪಾಯಿಗಳ ಮಾಸಿಕ SIP ಅನ್ನು 15 ವರ್ಷಗಳವರೆಗೆ ಪ್ರಾರಂಭಿಸಿದರೆ ಸರಿಸುಮಾರು 75 ಲಕ್ಷ ರೂಪಾಯಿಗಳನ್ನು ಗಳಿಸಬಹುದು."

ಭಾರತೀಯ ವಿದ್ಯಾರ್ಥಿಗಳ ವಿದೇಶಿ ಶಿಕ್ಷಣದ ಕನಸು

2024 ರ ಹೊತ್ತಿಗೆ, ಸುಮಾರು 13 ಲಕ್ಷ ಭಾರತೀಯ ವಿದ್ಯಾರ್ಥಿಗಳು ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಇದು ಹಿಂದಿನ ವರ್ಷಗಳಿಗಿಂತ ಗಮನಾರ್ಹ ಹೆಚ್ಚಳವಾಗಿದೆ. ವಿದೇಶದಲ್ಲಿ ಕಲಿಯುವ ಕನಸು ಲಕ್ಷಾಂತರ ಭಾರತೀಯ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಲ್ಲಿದೆ. ಆದರೆ ಕಳೆದ ದಶಕದಲ್ಲಿ, ಅಂತರರಾಷ್ಟ್ರೀಯ ಶಿಕ್ಷಣದ ವೆಚ್ಚವು ವಾರ್ಷಿಕವಾಗಿ 6-8% ರಷ್ಟು ಹೆಚ್ಚಾಗಿದೆ.

ಆದಿತ್ಯ ಅಗರ್ವಾಲ್ ಅವರ ಪ್ರಕಾರ, "ಇಂದು ಅಮೆರಿಕಾದಲ್ಲಿ ನಾಲ್ಕು ವರ್ಷಗಳ ಪದವಿ ಕಾರ್ಯಕ್ರಮಕ್ಕೆ 1 ಕೋಟಿಯಿಂದ 1.5 ಕೋಟಿ ರೂಪಾಯಿಗಳವರೆಗೆ ವೆಚ್ಚವಾಗಬಹುದು ಮತ್ತು 5 ವರ್ಷಗಳಲ್ಲಿ ಇದು 2 ಕೋಟಿ ರೂಪಾಯಿಗಳಿಗಿಂತ ಹೆಚ್ಚಾಗಬಹುದು. ಇದಕ್ಕೆ ಜೀವನ ವೆಚ್ಚಗಳು, ಕರೆನ್ಸಿ ಸವಕಳಿ, ಪ್ರಯಾಣ ಮತ್ತು ವಿಮೆಯನ್ನು ಸೇರಿಸಿದರೆ, ಸ್ಪಷ್ಟವಾದ ಹಣಕಾಸು ಯೋಜನೆಯಿಲ್ಲದೆ ಕುಟುಂಬಗಳಿಗೆ ಇದು ಎಷ್ಟು ಬೇಗನೆ ದೊಡ್ಡ ಹೊರೆಯಾಗುತ್ತದೆ ಎಂದು ಊಹಿಸಿಕೊಳ್ಳುವುದು ಕಷ್ಟ."

ಇಂತಹ ಸಂದರ್ಭದಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆಗಳು (SIP) ಒಂದು ವರದಾನವಾಗಿವೆ. ಇದು ಇತರ ಹಣಕಾಸು ಗುರಿಗಳಿಗೆ ಅಡ್ಡಿಯಾಗದಂತೆ ಅಥವಾ ದುಬಾರಿ ಸಾಲಗಳನ್ನು ಮಾಡದೆಯೇ ಶಿಕ್ಷಣಕ್ಕಾಗಿ ದೊಡ್ಡ ಮೊತ್ತವನ್ನು ಸಂಗ್ರಹಿಸಲು ಪೋಷಕರಿಗೆ ಅನುವು ಮಾಡಿಕೊಡುತ್ತದೆ. ಅಲ್ಲದೆ ಇದು ರೂಪಾಯಿ ವೆಚ್ಚದ ಸರಾಸರಿಯಿಂದಲೂ ಲಾಭವನ್ನು ನೀಡುತ್ತದೆ.

ಒಂದು ಯಶಸ್ವಿ ಶಿಕ್ಷಣ ನಿಧಿಯನ್ನು ನಿರ್ಮಿಸಲು ಶಿಸ್ತು, ವೈವಿಧ್ಯತೆ ಮತ್ತು ಮೊದಲೇ ಯೋಜನೆ ರೂಪಿಸುವುದು ಮುಖ್ಯ. SIP ಗಳು ನಿಮ್ಮ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಸಮಯದ ಆಧಾರದ ಮೇಲೆ ಮ್ಯೂಚುವಲ್ ಫಂಡ್‌ಗಳು, ಇಕ್ವಿಟಿ, ಹೈಬ್ರಿಡ್ ಅಥವಾ ಅಂತರರಾಷ್ಟ್ರೀಯ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ.

Disclaimer: ಈ ಲೇಖನವು ಕೇವಲ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ನೀಡಲಾಗುತ್ತಿದೆ. ಇದು ಅಮೂಲ್ಯವಾದ ಲೋಹದ ಉತ್ಪನ್ನಗಳು, ಸರಕುಗಳು, ಭದ್ರತೆಗಳು ಅಥವಾ ಇತರ ಹಣಕಾಸು ಸಾಧನಗಳನ್ನು ಖರೀದಿಸಲು, ಮಾರಾಟ ಮಾಡಲು ವಿನಂತಿಯಲ್ಲ. ಗ್ರೇನಿಯಂ ಇನ್ಫರ್ಮೇಷನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಅದರ ಅಂಗಸಂಸ್ಥೆಗಳು, ಸಹವರ್ತಿಗಳು ಮತ್ತು ಈ ಲೇಖನದ ಲೇಖಕರು ಈ ಲೇಖನದಲ್ಲಿನ ಮಾಹಿತಿಯ ಆಧಾರದ ಮೇಲೆ ಉಂಟಾಗುವ ನಷ್ಟಗಳು ಮತ್ತು/ಅಥವಾ ಹಾನಿಗಳಿಗೆ ನಾವು ಜವಾಬ್ದಾರರಲ್ಲ

FAQs
ವಿದೇಶಿ ಶಿಕ್ಷಣಕ್ಕಾಗಿ SIP: ಯಾವಾಗ ಪ್ರಾರಂಭಿಸಬೇಕು?
ಪೋಷಕರು ಆದಷ್ಟು ಬೇಗ SIP ಹೂಡಿಕೆ ಮಾಡಲು ಪ್ರಾರಂಭಿಸುವುದು ಉತ್ತಮ.
SIP ಕ್ಯಾಲ್ಕುಲೇಟರ್: ಎಷ್ಟು ಹೂಡಿಕೆ ಮಾಡಬೇಕು?
SIP ಕ್ಯಾಲ್ಕುಲೇಟರ್ ಬಳಸಿ ನಿಮ್ಮ ಹೂಡಿಕೆ ಅವಧಿ ಮತ್ತು ನಿರೀಕ್ಷಿತ ಆದಾಯಕ್ಕೆ ಅನುಗುಣವಾಗಿ ಮಾಸಿಕ ಕಂತುಗಳನ್ನು ಲೆಕ್ಕ ಹಾಕಬಹುದು.
15 ವರ್ಷಗಳಿಂದ 1 ಕೋಟಿ ರೂಪಾಯಿಯ ಗುರಿಯನ್ನು ತಲುಪಲು ಎಷ್ಟು ಹೂಡಿಕೆ ಮಾಡಬೇಕು?
15 ವರ್ಷಗಳಲ್ಲಿ 1 ಕೋಟಿ ರೂಪಾಯಿಗಳನ್ನು ಗಳಿಸಲು ತಿಂಗಳಿಗೆ ₹12,000 - ₹13,000 ಹೂಡಿಕೆ ಮಾಡಬೇಕು.
10 ವರ್ಷಗಳಲ್ಲಿ 2 ಕೋಟಿ ರೂಪಾಯಿಯ ಗುರಿಯನ್ನು ತಲುಪಲು ಎಷ್ಟು ಹೂಡಿಕೆ ಮಾಡಬೇಕು?
10 ವರ್ಷಗಳಲ್ಲಿ 2 ಕೋಟಿ ರೂಪಾಯಿಗಳನ್ನು ಗಳಿಸಲು ತಿಂಗಳಿಗೆ ₹104,000 - ₹108,000 ಹೂಡಿಕೆ ಮಾಡಬೇಕು.
ವಿದ್ಯಾಭ್ಯಾಸ ವೆಚ್ಚವನ್ನು ಸರಿದೂಗಿಸಲು ಏನನ್ನು ಮಾಡಬೇಕು?
ಹೆಚ್ಚುವರಿ ಬೋಧನಾ ವೆಚ್ಚಗಳನ್ನು ಸರಿದೂಗಿಸಲು ವಾರ್ಷಿಕವಾಗಿ ಯೋಜನೆಗಳನ್ನು ಪರಿಶೀಲಿಸುವುದು ಮತ್ತು SIP ಗಳನ್ನು ಸರಿಹೊಂದಿಸುವುದು ಮುಖ್ಯ.
GoodReturns Finance

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+