ಬೆಂಗಳೂರು: ದಿನೇ ದಿನೇ ಸೈಬರ್ ವಂಚನೆಗಳು ಹೆಚ್ಚುತ್ತಿವೆ. ಜನರಿಗೆ ಎಸ್‌ಎಮ್‌ಎಸ್‌ಗಳ ಮೂಲಕ ಲಿಂಕ್ ಕಳಿಸಿ ಜನರ ಬಳಿ ಹಣ ಕೀಳುವುದು ಈಗ ಸಹಜವಾಗಿಬಿಟ್ಟಿದೆ. ನಿಮಗೆ ಲಾಟರಿ ಬಂದಿದೆ, ನೀವಿಲ್ಲಿ ಲೋನ್ ಪಡೆಯಬಹುದು ಹಾಗೆ ಇನ್ನು ಇತರೆ ಹತ್ತು ಹಲವು ಕಾರಣವನ್ನಿಟ್ಟುಕ್ಕೊಂಡು ಜನರನ್ನ ಸೆಳೆಯುವ ಕೆಲಸ ಮಾಡುತ್ತಾರೆ.
ಇನ್ನು ಇಂತಹ ವಂಚನೆಯ ಕುರಿತು ದೂರುಗಳು ಹೆಚ್ಚಾದ ಹಿನ್ನೆಲೆ ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ಜನರಿಗೆ ಈ ಬಗ್ಗೆ ಸಲಹೆಯನ್ನ ನೀಡಿದ್ದಾರೆ. ದುರುದ್ದೇಶಪೂರಿತ ಲಿಂಕ್‌ಗಳನ್ನ ಓಪನ್ ಮಾಡುವ ಮೊದಲು ಆಲೋಚಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನು ಗುರುವಾರ ಬಿಡುಗಡೆ ಮಾಡಿದ ಸಲಹೆಯಲ್ಲಿ ಜನರನ್ನ ಮೋಸಗೊಳಿಸಲು ವಂಚಕರು ಟ್ರಾಫಿಕ್ ಪೋಲಿಸ್ ಮುಖವಾಡ ಧರಿಸಿ ವಂಚಿಸಲು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ. ಅಂದರೆ ಟ್ರಾಫಿಕ್ ಪೋಲಿಸ್ ಎಂದು ಹೇಳಿಕೊಂಡು ವೈಯಕ್ತಿಕ ಮಾಹಿತಿ ಪಡೆದು ಹಣ ಪಾವಿತುಸುವಂತೆ ಹೇಳಿ ಜನರ ಬಳಿ ಹಣವನ್ನ ಕೀಳುತ್ತಿರುವುದರ ಬಗ್ಗೆ ಸಂಚಾರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಪಾವತಿಸದ ಟ್ರಾಫಿಕ್ ದಂಡವನ್ನ ಪಾವತಿಸಿ ಎಂದು ಹೇಳಿ ನಕಲಿ ಕರೆಗಳನ್ನ ಮಾಡುವುದು, ಹಾಗೆ ನಕಲಿ ವಿಮೆ ಅಥವಾ ವಾಹನ ನೋಂದಣಿ ಸೇವೆಗಳನ್ನ ನೀಡುವುದು, ಹಾಗೆ ಹಿಟ್‌ರನ್ ಆರೋಪದಲ್ಲಿ ಭಾಗಿಯಾಘಿರುವ ಆರೋಪ, ಜೊತೆಗೆ ಸಂಚಾರ ಉಲ್ಲಂಘನೆ ವಿಡಿಯೋ ತುಣುಕುಗಳು ನಮ್ಮ ಬಳಿ ಇವೆ ಎಂದು ಹೇಳಿ ಜನರನ್ನ ಮೋಸಮಾಡುತ್ತಿದ್ದಾರೆ. ಇಂತಹ ಕರೆಗಳಿಂದ ನೀವು ಬಹಳ ಜಾಗುರೂಕರಾಗಿರಿ ಜೊತೆಗೆ ಎಚ್ಚರಿಕೆಯಿಂದಿರಿ ಎಂದು ಪೊಲೀಸರು ನಾಗರಿಕರಿಗೆ ಸಲಹೆಯನ್ನ ನೀಡಿದ್ದಾರೆ.
ವೈಯಕ್ತಿಕ ಮಾಹಿತಿಯನ್ನ ಸಂಗ್ರಹಿಸಿ ನಿಮ್ಮ ಮಾಹಿತಿಯನ್ನ ಖಚಿತಪಡಿಸಿ ಎಂದು ಕೇಳುವ ಯಾವುದೇ ನಕಲಿ ಕರೆ ಅಥವಾ ಲಿಂಕ್‌ಗಳ ಬಗ್ಗೆ ಹೆಚ್ಚು ಗಮನವಿರಲಿ ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ನೀವೇನಾದ್ರು ಈ ರೀತಿಯ ಕರೆ ಅಥವಾ ಸಂದೇಶಗಳನ್ನ ಸ್ವೀಕರಿಸಿದ್ದರೆ, ಸತ್ಯಾಸತ್ಯತೆಗಳನ್ನ ಪರಿಶೀಲನೆ ಮಾಡಲು ನೇರವಾಗಿ ನೀವು ಇಲಾಖೆಯನ್ನು ಸಂಪರ್ಕಿಸಬಹುದು. ಈ ಮೂಲಕ ನಿಮಗೆ ಬಂದಿರುವ ಮಾಹಿತಿಯನ್ನ ನೀವು ದೃಢೀಕರಿಸಿ ಎಂದು ಸಂಚಾರ ಪೊಲೀಸರು ಜನರಿಗೆ ಸಲಹೆ ನೀಡಿದ್ದಾರೆ. ಇಲಾಖೆಯ ಅಧಿಕೃತ ವೆಬ್‌ಸೈಟ್ btp.gov.in ಮೂಲಕ ಅಥವಾ ಸಹಾಯವಾಣಿಗಳು 080-22868550 ಮತ್ತು 080-22868444 ಮೂಲಕ ಮಾಹಿತಿಯನ್ನ ತಿಳಿಸಬಹುದು.
ಜೊತೆಗೆ ಈ ಎಲ್ಲಾ ಮಾಹಿತಿಗಳನ್ನ ನೀವು ಹಂಚಿಕೊಳ್ಳುವ ಮೊದಲು ಅಧಿಕಾರಿ ಗುರುತುಗಳನ್ನ ಪರಿಶೀಲನೆ ಮಾಡಿ ಎಂದು ನಾಗರಿಕೆಇಗೆ ಸಲಹೆ ನೀಡಿದ್ದಾರೆ.ಹಾಗೆ ದಂಡವನ್ನು ಪಾವತಿಸಲು ಅಥವಾ ಸೇವೆಗಳನ್ನು ಪ್ರವೇಶಿಸಲು ಅಧಿಕೃತ ವೆಬ್‌ಸೈಟ್‌ಗಳನ್ನ ಬಳಸಿ. ನಿಮ್ಮ ಸಾಫ್ಟ್‌ವೇರ್ ಮತ್ತು ಆಪರೇಟಿಂಗ್ ಸಿಸ್ಟಂಗಳನ್ನು ಅಪ್‌ಡೇಟ್ ಆಗಿದೆಯಾ ಎಂದು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಯಾರಾದರೂ ಅನುಮಾನಾಸ್ಪದ ಕರೆಗಳು ಅಥವಾ ಸಂದೇಶಗಳನ್ನು ಸ್ವೀಕರಿಸಿದರೆ ಅವುಗಳನ್ನು [email protected] ಗೆ ವರದಿ ಮಾಡಬಹುದು ಎಂದು ಇಲಾಖೆ ತಿಳಿಸಿದೆ.


Click it and Unblock the Notifications