ಎಚ್ಚರ! ಆದಾಯ ತೆರಿಗೆ ನೋಟಿಸ್ ಕಳುಹಿಸಿಯೂ ವಂಚಿಸಬಹುದು: ಸತ್ಯಾಸತ್ಯತೆ ಹೀಗೆ ಪರಿಶೀಲಿಸಿ

ನವದೆಹಲಿ, ಮೇ 21: ಕಾಲ ಆಧುನಿಕತೆಯೆಡೆ , ಡಿಜಿಟಲ್ ಯುಗದ ಕಡೆ ಸಾಗುತ್ತಿದ್ದಂತೆ, ಸುಳ್ಳು ಮಾಹಿತಿ, ಮೋಸ ವಂಚನೆಯಂತ ಪ್ರಕರಣಗಳು ಹೆಚ್ಚುತ್ತಿವೆ. ವಂಚಕರು ಆಗಾಗ್ಗೆ ವೈಯಕ್ತಿಕ ಮಾಹಿತಿ ಅಥವಾ ಹಣವನ್ನು ಕದಿಯಲು, ಬ್ಯಾಂಕ್ ಸಂದೇಶ, ಆಧಾರ್ ಅಪ್ಡೇಟ್ ನಂತ ಅಧಿಕೃತ ಸಂವಹನಗಳ ಅನುಕರಣೆ ಮಾಡುತ್ತಾರೆ.

ಹೀಗಾಗಿ ಈ ಮೋಸದ ಬಗ್ಗೆ ಅರಿಯದೆ ಜನಸಾಮಾನ್ಯರು ವಂಚನೆಯ ಬಲೆಗೆ ಬೀಳುತ್ತಾರೆ. ಇದೇ ರೀತಿ ಮೋಸದ ಜಾಲದಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದ್ದು ಕೂಡಾ. ನೀವು ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್ ಸ್ವೀಕರಿಸಿದ್ರೆ ಅದು ನಕಲಿಯೋ ಅಥವಾ ಅಸಲಿಯೋ ಎಂದು ಜಾಗರೂಕರಾಗಿ ತಿಳಿದುಕೊಳ್ಳಬೇಕು.

ಆದಾಯ ತೆರಿಗೆ ನೋಟಿಸ್ ಕಳುಹಿಸಿಯೂ ವಂಚಿಸಬಹುದು

ಹೌದು ವಂಚಕರು ಈಗ ಬಳಸುತ್ತಿರುವ ತಂತ್ರ ಅಧಿಕೃತ ಸಂವಹನಗಳನ್ನು ಕಾಫಿ ಮಾಡಿ ನಿಜವೆಂದು ನಂಬಿಸಲು ಪ್ರಯತ್ನಿಸುತ್ತಾರೆ. ವಿವಿಧ ರೀತಿಯಲ್ಲಿ ಸುಳ್ಳು ಆದಾಯ ತೆರಿಗೆ ರಿಟರ್ನ್ಸ್ ಕಳುಹಿಸುವ ಮೂಲಕ ನಿಮ್ಮನ್ನು ವಂಚಿಸಲು ಪ್ರಯತ್ನಿಸಬಹುದು. ನಿಮ್ಮನ್ನು ಹೆದರಿಸಲು ಕೆಲವರು ಐಟಿ ಇಲಾಖೆ ನಿಮ್ಮ ಮೇಲೆ ತಕ್ಷಣ ಕ್ರಮ ಕೈಗೊಳ್ಳುವ ಬೆದರಿಕೆಯನ್ನು ಒಡ್ಡಬಹುದು.

ಮೇಲ್, SMS ಮತ್ತು ಫೋನ್ ಕರೆಗಳ ಮೂಲಕವೂ ವಂಚನೆಗೆ ಯತ್ನಿಸಬಹುದು. ಆದರೆ ಇನ್ಮುಂದೆ ಇಂತಹ ಸಂದೇಶಗಳಿಗೆ ಭಯಪಡಬೇಡಿ.. ಯಾಕೆಂದರೆ ತೆರಿಗೆದಾರರು ಸ್ವೀಕರಿಸಿದ ಸೂಚನೆ ನಿಜವೇ ಎಂದು ಪರಿಶೀಲಿಸಲು ಆದಾಯ ತೆರಿಗೆ ಇಲಾಖೆ ಆನ್‌ಲೈನ್ ವೇದಿಕೆಯನ್ನು ಒದಗಿಸಿದೆ. ನಿಮಗೆ ಬಂದಿರುವ ಸತ್ಯಾಸತ್ಯತೆಯನ್ನು ಸೆಕೆಂಡುಗಳಲ್ಲಿ ಪರಿಶೀಲಿಸಲು ಐಟಿ ಇಲಾಖೆಯು ಬಳಕೆದಾರ ಸ್ನೇಹಿ ಆನ್‌ಲೈನ್ ಸಾಧನವನ್ನು ಬಳಸಿಕೊಳ್ಳಬಹುದು.

ಐಟಿ ಇಲಾಖೆಯ ಈ ಆನ್‌ಲೈನ್ ವೇದಿಕೆಯಲ್ಲಿ ಬಳಕೆದಾರರು ಸ್ವೀಕರಿಸುವ ಯಾವುದೇ ಸಂವಹನವನ್ನು ದೃಢೀಕರಿಸಲು ಅಧಿಕಾರ ನೀಡುತ್ತದೆ. ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರಲಿ ಅಥವಾ ಇಲ್ಲದಿರಲಿ ಈ ಉಚಿತ ಸೇವೆ ಎಲ್ಲರಿಗೂ ಲಭ್ಯವಿರಲಿದೆ.

ನೀವು ಸ್ವೀಕರಿಸುವ ಆದಾಯ ತೆರಿಗೆ ಅಧಿಸೂಚನೆಗಳು ನಿಜವೇ ಎಂಬುದನ್ನು ಪರಿಶೀಲಿಸುವುದು ಹೇಗೆ?:

ಹಂತ 1: ಆದಾಯ ತೆರಿಗೆ ಇಲಾಖೆಯ ಅಧಿಕೃತ ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಿ https://www.incometax.gov.in/iec/foportal/
ಹಂತ 2: "ಕ್ವಿಕ್ ಲಿಂಕ್‌(Quick Links)" ಅಡಿಯಲ್ಲಿ "Authenticate Notice/Order Issued by ITD" ಕ್ಲಿಕ್ ಮಾಡಿ.
ಹಂತ 3: ವೆರಿಫಿಕೇಷನ್ ಮೆಥೆಡ್ ಆಯ್ಕ್ ಮಾಡಿ: ಒಂದು ಪಾನ್ ಕಾರ್ಡ್ ಬಳಸಿ ತಿಳಿದುಕೊಳ್ಳುವುದು. ಇನ್ನೊಂದು ಡಾಕ್ಯುಮೆಂಟ್ ಐಡೆಂಟಿಫಿಕೇಶನ್ ನಂಬರ್ (ಡಿಐಎನ್) ಬಳಸಿ ತಿಳಿಯುವುದು. ಎರಡು ವಿಧಾನಗಳಲ್ಲಿ ಒಂದನ್ನು ಬಳಸಿಕೊಂಡು OTP ಪರಿಶೀಲನೆಯನ್ನು ನಿರ್ವಹಿಸಿ
ಹಂತ 4: ಸೂಚನೆಯಿಂದ ಡಾಕ್ಯುಮೆಂಟ್ ಗುರುತಿನ ಸಂಖ್ಯೆ (DIN) ಮತ್ತು OTP ಪರಿಶೀಲನೆಗಾಗಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.. ನಿಮ್ಮ ಮೊಬೈಲ್‌ನಲ್ಲಿ OTP ಸ್ವೀಕರಿಸಿದ ನಂತರ, ಅದನ್ನು ನಮೂದಿಸಿ

ತತ್‌ಕ್ಷಣದ ದೃಢೀಕರಣ: ಅದರ ನಂತರ ನೀವು ಪರದೆಯ ಮೇಲೆ ಅಧಿಸೂಚನೆಯು ನಿಮಗೆ ನಿಜವಾಗಿದೆಯೇ ಅಥವಾ ಇಲ್ಲವೇ ಎಂಬುವುದನ್ನು ತಕ್ಷಣವೇ ಖಚಿತಪಡಿಸುತ್ತದೆ. ಒಂದು ವೇಳೆ ಇಲ್ಲದಿದ್ದರೆ, ನೀವು ನಿಮಗೆ ಬಂದ ಸೂಚನೆಯನ್ನು ನಿರ್ಲಕ್ಷಿಸಬಹುದು.

ನಿಜವಾದ ಆದಾಯ ತೆರಿಗೆ ಸಂಬಂಧಿತ ವಿವರಗಳನ್ನು ಕಂಡುಹಿಡಿಯುವುದು ಹೇಗೆ?:

1. ಅಧಿಕೃತ ಮೂಲ: ನಿಮ್ಮ ತೆರಿಗೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಸ್ವೀಕರಿಸಿದಾಗ ಅವರು ಕಳುಹಿಸುವ ಮೇಲ್ ಐಡಿ "@incometax.gov.in" ನೊಂದಿಗೆ ಕೊನೆಗೊಳ್ಳುತ್ತದೆಯೇ ಎಂದು ಪರಿಶೀಲಿಸಿ.
2. ನಿಮ್ಮ ಸಾಮಾನ್ಯ ಜ್ಞಾನವನ್ನು ಬಳಸಿ: ಮಾಹಿತಿಯ ಸತ್ಯವನ್ನು ತಿಳಿಯಲು ನಿಮ್ಮ ಸಾಮಾನ್ಯ ಜ್ಞಾನವನ್ನು ಬಳಸಿ. ಸರ್ಕಾರಿ ಏಜೆನ್ಸಿಗಳು ನಿಮ್ಮ ವೈಯಕ್ತಿಕ ವಿವರಗಳು, ಪಾಸ್‌ವರ್ಡ್‌ಗಳು ಮತ್ತು ಬ್ಯಾಂಕ್ ವಿವರಗಳನ್ನು ಎಂದಿಗೂ ಕೇಳುವುದಿಲ್ಲ ಎಂಬುವುದನ್ನು ನೆನಪಿಟ್ಟುಕೊಳ್ಳಬೇಕು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+