ದಕ್ಷಿಣ ಪೆಸಿಫಿಕ್‌ನಲ್ಲಿರುವ ಸಣ್ಣ ದ್ವೀಪ ರಾಷ್ಟ್ರವಾದ ವನವಾಟು ಪೌರತ್ವ ಪಡೆದಿದ್ದ, ಐಪಿಎಲ್ ಸಂಸ್ಥಾಪಕ ಲಲಿತ್ ಮೋದಗೆ ಈಗ ದೊಡ್ಡ ಶಾಕ್ ಎದುರಾಗಿದೆ. ಅದೇನಂದ್ರೆ ಲಲಿತ್ ಮೋದಿಗೆ ಪಾಸ್‌ಪೋರ್ಟ್ ನೀಡುವಂತೆ ಆದೇಶಿದ್ದ, ಪ್ರಧಾನಿ ಜೋಥಮ್ ನಾಪಟ್ ಅವರೇ , ಈಗ ಆ ಪಾಸ್‌ಪೋರ್ಟ್‌ನ ರದ್ದುಗೊಳಿಸುವಂತೆ ಆದೇಶ ಮಾಡಿದ್ದಾರೆ. ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ಗೆ ತಮ್ಮ ಭಾರತೀಯ ಪಾಸ್‌ಪೋರ್ಟ್ ಅನ್ನು ಶರಣಾಗಲು ಅರ್ಜಿ ಸಲ್ಲಿಸಿದ್ದಾರೆ. ಇದರಿಂದ ಲಲಿತ್ ಮೋದಿ ಅವರಿಗೆ ದೊಡ್ಡ ವಿಘ್ನ ಎದುರಾದಂತಾಗಿದೆ.

ಇನ್ನು ಲಲಿತ್ ಮೋದಿಯವರ ವಿರುದ್ಧ ಹಣಕಾಸು ಅಕ್ರಮಗಳ ಆರೋಪಗಳಿವೆ. ಇದೇ ಕಾರಣದಿಂದ ಅವರ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಲಾಗಿದೆ. ಅಂದರೆ ಲಲಿತ್ ಮೋದಿ ಅವರು ಭಾರತದ ಗಡಿಪಾರು ತಪ್ಪಿಸಿಕೊಳ್ಳಲು, ವನವಾಟು ದೇಶದ ಪೌರತ್ವದ ಮೊರೆ ಹೋಗಿದ್ದರ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ ಸಿಟಿಜನ್‌ಶಿಪ್ ಕಮಿಷನ್ ಕೂಡಲೇ ಅವರ ಪಾಸ್‌ಪೋರ್ಟ್‌ನ ರದ್ದುಗೊಳಿಸಬೇಕೆಂದು ಆದೇಶ ಹೊರಡಿಸಲಾಗಿದೆ. ಈ ಪ್ರಕರಣ ಭಾರತದ ಶ್ರೀಮಂತ ವ್ಯಕ್ತಿಗಳು ಬೇರೆ ದೇಶಗಳಲ್ಲಿ ಪೌರತ್ವ ಅಥವಾ ಶಾಶ್ವತ ವಾಸಸ್ಥಳ ಪಡೆಯಲು ತೋರುತ್ತಿರುವ ಆಸಕ್ತಿಯನ್ನು ಹೈಲೈಟ್ ಮಾಡುತ್ತದೆ.
ಪೌರತ್ವ ಮತ್ತು ಶಾಶ್ವತ ನಿವಾಸದ ವ್ಯತ್ಯಾಸ:
ಭಾರತೀಯ ಶ್ರೀಮಂತರು ಬೇರೆ ದೇಶಗಳಿಗೆ ಸ್ಥಳಾಂತರಗೊಳ್ಳಲು, ಬೇರೆ ಬೇರೆ ಮಾರ್ಗಗಳನ್ನು ಅನುಸರಿಸುತ್ತಾರೆ. ಅದರಲ್ಲಿ ಮುಖ್ಯವಾಗಿ ಪೌರತ್ವ ಮತ್ತು ಶಾಶ್ವತ ನಿವಾಸ...ಪೌರತ್ವ ವ್ಯವಸ್ಥೆಯಲ್ಲಿ ವ್ಯಕ್ತಿಗೆ ಆ ದೇಶದ ಪೂರ್ತಿ ಹಕ್ಕುಗಳು ದೊರೆಯುತ್ತವೆ. ಅಂದರೆ..ಪಾಸ್‌ಪೋರ್ಟ್, ಮತದಾನದ ಹಕ್ಕು, ವೀಸಾ-ರಹಿತ ಪ್ರವೇಶ ಮುಂತಾದ ಸೌಲಭ್ಯಗಳನ್ನು ಇದು ನೀಡುತ್ತದೆ. ಶಾಶ್ವತ ನಿವಾಸ ಸೌಲಭ್ಯದಲ್ಲಿ PR ಹೊಂದಿರುವ ವ್ಯಕ್ತಿಯು ಆ ದೇಶದಲ್ಲಿ ವಾಸಿಸಲು, ಕೆಲಸ ಮಾಡಲು ಮತ್ತು ವ್ಯವಹರಿಸಲು ಅವಕಾಶ ಪಡೆಯುತ್ತಾನೆ. ಆದರೆ ಪೌರತ್ವದಂತ ಸಂಪೂರ್ಣ ಹಕ್ಕುಗಳು ಇಲ್ಲ.
ಹೂಡಿಕೆ ಮೂಲಕ ಪೌರತ್ವ ಯೋಜನೆಯು ದೊಡ್ಡ ಹಣಕಾಸಿನ ಕೊಡುಗೆ ಅಥವಾ ಹೂಡಿಕೆಗೆ ಬದಲಾಗಿ ಪಾಸ್‌ಪೋರ್ಟ್ ನೀಡುವ ವ್ಯವಸ್ಥೆಯಾಗಿದೆ. ಇದರಡಿ, ಕೆರಿಬಿಯನ್ ರಾಷ್ಟ್ರಗಳಾದ ಆಂಟಿಗುವಾ ಮತ್ತು ಬಾರ್ಬುಡಾ, ಸೇಂಟ್ ಕಿಟ್ಸ್ ಮತ್ತು ನೆವಿಸ್, ಸೇಂಟ್ ಲೂಸಿಯಾ, ಗ್ರೆನಡಾ, ಮತ್ತು ಡೊಮಿನಿಕಾ ಮೊದಲಾದ ದೇಶಗಳು ಪೌರತ್ವ ನೀಡುತ್ತವೆ. ಇತರ ದೇಶಗಳ ಪೈಕಿ ಕಾಂಬೋಡಿಯಾ, ಸಿಂಗಾಪುರ ಮತ್ತು ಆಸ್ಟ್ರೇಲಿಯಾ ಕೂಡ ಈ ಕಾರ್ಯಕ್ರಮವನ್ನು ಹೊಂದಿವೆ. ಇವು ವ್ಯಕ್ತಿಯು ಹೂಡಿಕೆ ಮಾಡುವ ಆಧಾರದ ಮೇಲೆ ಪೌರತ್ವ ನೀಡುತ್ತವೆ.
ಇನ್ನು ಕಾಂಬೋಡಿಯಾದಲ್ಲಿ ಪೌರತ್ವ ಪಡೆಯಲು ಕನಿಷ್ಟ $245,000 ಹೂಡಿಕೆ ಮಾಡಬೇಕು, ಅದರಂತೆ ಸಿಂಗಾಪುರದಲ್ಲಿ ಎರಡು ವರ್ಷಗಳ ವಾಸಸ್ಥಳಕ್ಕಾಗಿ $7 ಮಿಲಿಯನ್ ಹೂಡಿಕೆ ಮಾಡಬೇಕಾಗಿದೆ. ಇತ್ತ ಆಸ್ಟ್ರೇಲಿಯಾ ಮಾತ್ರ ದೊಡ್ಡ ನಿವ್ವಳ ಮೌಲ್ಯ ಹೊಂದಿರುವ ಹೆಚ್ಚಿನ ಕೌಶಲ್ಯಪೂರ್ಣ ವ್ಯಕ್ತಿಗಳಿಗೆ ಮಾತ್ರ ಈ ಅವಕಾಶ ನೀಡುತ್ತದೆ. ಟರ್ಕಿ, ಗ್ರೀಸ್, ಹಂಗೇರಿ, ಮತ್ತು ಬ್ರೆಜಿಲ್ ಕೂಡ ಗೋಲ್ಡನ್ ವೀಸಾ ಯೋಜನೆಗಳ ಮೂಲಕ ವಾಸಸ್ಥಳ ನೀಡುತ್ತವೆ.
ಡಿಜಿಟಲ್ ಉದ್ಯಮಿಗಳಿಗೆ ವಿಶೇಷ ವೀಸಾಗಳು:
ಇನ್ನು ಕೆಲವು ದೇಶಗಳಲ್ಲಿ ಡಿಜಿಟಲ್ ಉದ್ಯಮಿಗಳಿಗೆ ವಿಶೇಷ ವೀಸಾ ಅವಕಾಶಗಳನ್ನು ನೀಡುತ್ತವೆ. ಇದರಿಂದ ಜನರು ತಮ್ಮ ತಾಯ್ನಾಡಿಗೆ ತೆರಿಗೆ ಪಾವತಿಸುವಾಗ ವಿದೇಶದಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಸಾಧ್ಯವಾಗುತ್ತದೆ. ಅಂದರೆ ಎಸ್ಟೋನಿಯಾ, ಜರ್ಮನಿ, ಮತ್ತು ನಾರ್ವೆ ಅಂತಹ ವೀಸಾಗಳನ್ನು ಒದಗಿಸುತ್ತವೆ. ಲಲಿತ್ ಮೋದಿ ಪ್ರಕರಣವು ಭಾರತದ ಶ್ರೀಮಂತ ಉದ್ಯಮಿಗಳು ಮತ್ತು ಹೂಡಿಕೆದಾರರು ತಮ್ಮ ಹಣಕಾಸು ಹಾಗೂ ಭವಿಷ್ಯದ ದೃಷ್ಟಿಯಿಂದ ಬೇರೆ ದೇಶದ ಪೌರತ್ವ ಅಥವಾ ವಾಸಸ್ಥಳ ಪಡೆಯಲು ಮಾಡುವ ಪ್ರಯತ್ನದ ಒಂದು ಉದಾಹರಣೆಯಾಗಿರಬಹುದು.
ಲಲಿತ್ ಮೋದಿ ಪ್ರಕರಣದಿಂದಾದ ಪ್ರಭಾವ..?
ಲಲಿತ್ ಮೋದಿ ಅವರು ಭಾರತದಲ್ಲಿ ಹಣಕಾಸು ಅಕ್ರಮ ಆರೋಪ ಎದುರಿಸುತ್ತಿರುವುದರಿಂದ ಅವರಿಗೆ ಈಗ ದೊಡ್ಡ ಸಂಕಷ್ಟ ಎದುರಾಗಿದೆ. ಅಂದರೆ ಅವರು ವನವಾಟು ಪೌರತ್ವವನ್ನು ಪಡೆದು ಭಾರತದ ಹೊರಗೆ ಉಳಿಯಲು ಪ್ರಯತ್ನಿಸುತ್ತಿದ್ದಾರೆ. ಇದು ಭಾರತದ ಶ್ರೀಮಂತ ಉದ್ಯಮಿಗಳು ಮತ್ತು ಹೂಡಿಕೆದಾರರು ಬೇರೊಬ್ಬ ದೇಶದ ಪೌರತ್ವ ಅಥವಾ ವಾಸಸ್ಥಳವನ್ನು ಪಡೆಯಲು ಹೇಗೆ ಒತ್ತಾಯಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಇದರಿಂದ ಅಂತರಾಷ್ಟ್ರೀಯ ಪೌರತ್ವ ಮತ್ತು ವಲಸೆ ನೀತಿಗಳ ಬಗ್ಗೆ ಹೆಚ್ಚು ಚರ್ಚೆ ನಡೆಯಬಹುದು.


Click it and Unblock the Notifications