Bharat Bandh: ಫೆಬ್ರವರಿ 12ಕ್ಕೆ ಭಾರತ್‌ ಬಂದ್‌! ಶಾಲೆ, ಬ್ಯಾಂಕ್‌ಗಳ ಮೇಲೆ ಬೀಳುತ್ತಾ ಪರಿಣಾಮ?

ಫೆಬ್ರವರಿ 12, 2026 ರಂದು ದೇಶಾದ್ಯಂತ ಬಂದ್‌ಗೆ ಕರೆ ಕೊಡಲಾಗಿದೆ. ಈ ಹಿನ್ನೆಲೆ ಭಾರತದ ಹಲವು ಕಡೆ ವ್ಯಾಪಾರ-ವಹಿವಾಟಿನಲ್ಲಿ, ಸಂಚಾರದಲ್ಲಿ ಅಡಚಣೆಯಾಗುವ ಸಾಧ್ಯತೆ ಇದೆ. ಇದೀಗ ಕೇಂದ್ರ ಕಾರ್ಮಿಕ ಸಂಘಟನೆಗಳು ಹಾಗೂ ರೈತ ಸಂಘಟನೆಗಳ ಬೆಂಬಲದೊಂದಿಗೆ 2026ರ ಫೆಬ್ರವರಿ 12ರಂದು 'ಭಾರತ್‌ ಬಂದ್‌'ಗೆ (Bharat Bandh) ಕರೆ ನೀಡಲಾಗಿದೆ. ಈ ಬಂದ್‌ ದೇಶದ ಹಲವಾರು ರಾಜ್ಯಗಳ ಮೇಲೆ ಪರಿಣಾಮ ಬೀಡಲಿದ್ದು, ಬ್ಯಾಂಕಿಂಗ್, ಸಾರಿಗೆ, ಸಾರ್ವಜನಿಕ ವಲಯದ ವ್ಯವಹಾರಗಳಲ್ಲಿ ಅಡ್ಡಿಯಾಗುವ ಸಾಧ್ಯತೆ ಇದೆ. ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಿಂದ (India-US Trade Deal) ರೈತರು ಆಕ್ರೋಶಗೊಂಡಿದ್ದು, ಈ ಹಿನ್ನೆಲೆ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದೆ.

ಫೆ.12ಕ್ಕೆ ಭಾರತ್‌ ಬಂದ್‌! ಶಾಲೆ, ಬ್ಯಾಂಕ್‌ ಮೇಲೆ ಬೀಳುತ್ತಾ ಪರಿಣಾಮ?

ಸಿಐಟಿಯು, ಎಐಟಿಯುಸಿ, ಇಂಟಿಯುಸಿ, ಎಚ್‌ಎಂಎಸ್ ಸೇರಿದಂತೆ 10 ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಬಂದ್‌ಗೆ ಕರೆ ನೀಡಿದೆ. ಕಳೆದ ವರ್ಷ ಜಾರಿಗೆ ಬಂದ ನಾಲ್ಕು ಹೊಸ ಕಾರ್ಮಿಕ ಸಂಹಿತೆಯನ್ನು ವಿರೋಧಿಸಿ ಈ ಬಂದ್‌ ಮಾಡಲಾಗುತ್ತಿದೆ. ಇವು ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸಿ, ಉದ್ಯೋಗ ಭದ್ರತೆ ಕುಗ್ಗಿಸಿ, ವಜಾಗೊಳಿಸುವಿಕೆಯನ್ನು ಸುಲಭಗೊಳಿಸುತ್ತವೆ ಎಂದು ಸಂಘಟನೆಗಳು ಆರೋಪಿಸಿವೆ.

ಭಾರತ್‌ ಬಂದ್‌ಗೆ ಕಾರಣಗಳೇನು?
ಹೊಸ ನಾಲ್ಕು ಕಾರ್ಮಿಕ ಸಂಹಿತೆ: 29 ಹಳೆಯ ಕಾರ್ಮಿಕ ಕಾನೂನುಗಳನ್ನು ಬದಲಾಯಿಸಿ, 2025ರ ನವೆಂಬರ್‌ನಲ್ಲಿ 4 ಕಾರ್ಮಿಕ ನೀತಿ ಸಂಹಿತೆಯನ್ನು (Wage Code, Industrial Relations Code, Social Security Code, Occupational Safety Code) ಜಾರಿಗೆ ತರಲಾಗಿತ್ತು. ಈ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ಬಂದ್‌ಗೆ ಕರೆ ಕೊಟ್ಟಿದೆ.

ರೈತರಿಗೆ ಸಂಬಂಧಿಸಿದ ನೀತಿಗಳು:
ಭಾರತ ಮತ್ತು ಅಮೆರಿಕಾ ನಡುವಿನ ವ್ಯಾಪಾರ ಒಪ್ಪಂದ ವಿರೋಧ: ಸಸ್ಯ ಆಮದು ಹೆಚ್ಚಾಗಿ ಸ್ಥಳೀಯ ಬೆಲೆಗಳು ಕುಸಿಯುತ್ತಿದೆ. ಇದರಿಂದ ರೈತರ ಆದಾಯಕ್ಕೂ ಹಾನಿ ಎಂಬ ಆತಂಕದಿಂದ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಂದರೆ ಈಗಾಗಲೇ ಅಮೆರಿಕವು ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ.50 ರಿಂದ ಶೇ. 18 ಕ್ಕೆ ಇಳಿಸಿದೆ. ಈ ಹಿನ್ನೆಲೆ ಸೋಯಾಬೀನ್‌ ಎಣ್ಣೆ, ಕೆಂಪು ಜೋಳ ಮತ್ತು ಪ್ರಾಣಿಗಳ ಆಹಾರವಾಗಿ ಬಳಸುವ DDS ಆಮದಿನಿಂದ ಸ್ಥಳೀಯ ಬೆಲೆಗಳು ಕುಸಿಯಬಹುದು ಎಂಬುದು ರೈತರಿಗೆ ಆತಂಕ.

ಬಂದ್‌ಗೆ ಯಾರೆಲ್ಲಾ ಬೆಂಬಲ?
ಈಗಾಗಲೇ ಸಂಯುಕ್ತ ಕಿಸಾನ್ ಮೋರ್ಚಾ (SKM) ಹಾಗೂ ಅಖಿಲ ಭಾರತ ಕಿಸಾನ್ ಸಭಾ (AIKS) ಸೇರಿದಂತೆ ರೈತ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ. ಭಾರತ-ಅಮೆರಿಕ ನಡುವಿನ ಪ್ರಸ್ತಾವಿತ ವ್ಯಾಪಾರ ಒಪ್ಪಂದವೇ ರೈತರ ಆಕ್ರೋಶಕ್ಕೆ ಮುಖ್ಯ ಕಾರಣ. ಶನಿವಾರದ ಹೇಳಿಕೆಯಲ್ಲಿ, ಎಸ್‌ಕೆಎಂ ಇದನ್ನು ಭಾರತೀಯ ಕೃಷಿಯ 'ಸಂಪೂರ್ಣ ಶರಣಾಗತಿ' ಎಂದು ಬಣ್ಣಿಸಿದೆ. ಡೈರಿ, ಪಶು ಆಹಾರ, ಸೋಯಾಬೀನ್ ಎಣ್ಣೆ ಹಾಗೂ ಇತರ ಕೃಷಿ ಆಮದುಗಳಿಂದ ದೇಶೀಯ ರೈತರಿಗೆ ತೀವ್ರ ಹಾನಿಯಾಗುತ್ತದೆ ಎಂಬುದು ಅವರ ಆರೋಪ.

ವಾಣಿಜ್ಯ ಸಚಿವರ ರಾಜೀನಾಮೆಗೆ ಆಗ್ರಹ
ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ರಾಜೀನಾಮೆಗೆ ಎಸ್‌ಕೆಎಂ ಒತ್ತಾಯಿಸಿದೆ. ಎಐಕೆಎಸ್ ಮುಖಂಡ ಕೃಷ್ಣ ಪ್ರಸಾದ್, ಈ ಒಪ್ಪಂದ ಭಾರತದ ಕೃಷಿ ಹಾಗೂ ಡೈರಿ ಕ್ಷೇತ್ರಗಳಿಗೆ ದೀರ್ಘಕಾಲೀನ ಪರಿಣಾಮ ಬೀರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಬ್ಯಾಂಕ್‌ ಸೇವೆಗಳಿಗೆ ಅಡ್ಡಿ!
ಫೆಬ್ರವರಿ 12ರಂದು ಬ್ಯಾಂಕಿಂಗ್ ಸೇವೆಗಳಲ್ಲಿ ತೀವ್ರ ವ್ಯತ್ಯಯವಾಗುವ ಸಾಧ್ಯತೆಯಿದೆ. ಸಾರ್ವಜನಿಕ ವಲಯದ ಬ್ಯಾಂಕ್ ಉದ್ಯೋಗಿಗಳು ಮತ್ತು ಅಧಿಕಾರಿಗಳು ಈ ಮುಷ್ಕರದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಎಐಬಿಇಎ, ಎಐಬಿಒಎ ಸೇರಿದಂತೆ ಪ್ರಮುಖ ಬ್ಯಾಂಕಿಂಗ್ ಯೂನಿಯನ್‌ಗಳು ಸದಸ್ಯರನ್ನು ಪ್ರತಿಭಟನೆಗೆ ಸೇರಲು ಕರೆ ನೀಡಿವೆ. ಜನವರಿ 27ರ ನಂತರ ಇದು ಎರಡನೇ ಬ್ಯಾಂಕ್ ಮುಷ್ಕರವಾಗಿದ್ದು, ಗ್ರಾಹಕರಿಗೆ ಇದರ ಪರಿಣಾಮ ಬೀಳಲಿದೆ.

ಈ ವಲಯಗಳಿಗೂ ತಟ್ಟಲಿದೆ "ಭಾರತ್‌ ಬಂದ್‌"!

  • ಸಾರ್ವಜನಿಕ ವಲಯದ ಬ್ಯಾಂಕ್‌ಗಳು
  • ಸರ್ಕಾರಿ ಕಚೇರಿಗಳು
  • ಸಾರ್ವಜನಿಕ ಸಾರಿಗೆ ಸೇವೆಗಳು
  • ಕೇರಳದಂತಹ ರಾಜ್ಯಗಳಲ್ಲಿ ಶಿಕ್ಷಣ ಸಂಸ್ಥೆಗಳು
  • ಪ್ರತಿಭಟನೆ ನಡೆಯುವ ಪ್ರದೇಶಗಳಲ್ಲಿ ಅಂಗಡಿಗಳು ಮುಚ್ಚುವ ಸಾಧ್ಯತೆ ಇದೆ.

ಯಾವುದೆಲ್ಲಾ ತೆರೆದಿರುತ್ತದೆ?

  • ಖಾಗಿ ಕಚೇರಿಗಳು (ಪರಿಸ್ಥಿತಿಗೆ ತಕ್ಕಂತೆ)
  • ಆಸ್ಪತ್ರೆಗಳು ಮತ್ತು ಆಂಬ್ಯುಲೆನ್ಸ್‌ ಸೇವೆಗಳು
  • ಏರ್‌ಪೋರ್ಟ್‌ಗಳು
  • ಎಟಿಎಂ, ಆನ್‌ಲೈನ್‌ ಬ್ಯಾಂಕಿಂಗ್‌

ಸಾರ್ವಜನಿಕರು ಬಂದ್‌ ದಿನ ಪರಿಸ್ಥಿರಿ ಗಮನಿಸಿಕೊಂಡು ಎಲ್ಲಾದರು ಹೋಗುವ ಪ್ಲಾನ್‌ ಮಾಡಿದರೆ ಉತ್ತಮ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+