ಲಂಡನ್, ಜೂನ್ 30: ಭಾರತೀಯ ದೂರಸಂಪರ್ಕ ಉದ್ಯಮಿ, ಏರ್‌ಟೆಲ್ ಕಂಪನಿ ಮಾಲೀಕ ಸುನಿಲ್ ಮಿತ್ತಲ್ ಅವರು ಲಂಡನ್ ಮೂಲದ ದಿವಾಳಿಯಾದ ಟೆಲಿಕಮ್ಯುನಿಕೇಷನ್ ಸಂಸ್ಥೆ OneWebಗೆ ಬಿಡ್ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಮಿತ್ತಲ್ ಅವರ ಭಾರತಿ ಏರ್‌ಟೆಲ್ ಲಿಮಿಟೆಡ್‌ನ ಒಂದು ಘಟಕವು ಲಂಡನ್ ಮೂಲದ OneWeb ಗೆ ಯುಕೆ ಸರ್ಕಾರದ ಬೆಂಬಲದೊಂದಿಗೆ ಬಿಡ್ ಪ್ರಸ್ತಾಪವನ್ನು ನೀಡಿದೆ. ಈ ಕಂಪನಿ ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದೆ.
OneWeb ಸಾಫ್ಟ್‌ಬ್ಯಾಂಕ್ ಗ್ರೂಪ್ ಅನ್ನು ಒಳಗೊಂಡಿರುವ ಕಂಪನಿಯಾಗಿದೆ. ಆದರೆ ಈ ಬಗ್ಗೆ ಭಾರತಿ ಏರ್‌ಟೆಲ್ ಅಧಿಕೃತ ಮಾಹಿತಿನ್ನು ಹೊರಗೆಡವಿಲ್ಲ ಎಂದು ದಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
500 ಮಿಲಿಯನ್ ಡಾಲರ್ ಹಣ
ಬಿಡ್ ಭಾಗವಾಗಿ ಯುಕೆ ಸರ್ಕಾರವು ಇತರ ಹೂಡಿಕೆದಾರರೊಂದಿಗೆ OneWeb ಗೆ ಸುಮಾರು 500 ಮಿಲಿಯನ್ ಡಾಲರ್ ಹಣವನ್ನು ನೀಡಲು ಯೋಜಿಸಿದೆ. ಕಳೆದ ಶುಕ್ರವಾರ ಸುನಿಲ್ ಮಿತ್ತಲ್ ಅವರು ಬಿಡ್ ಸಲ್ಲಿಸಿದ್ದಾರೆ ಎಂದು ವರದಿ ಹೇಳಿದೆ.
ವಿದೇಶಿ ಹೂಡಿಕೆಯನ್ನು ಆಕರ್ಷಿಸಲು
ಭಾರತ, ಚೀನಾ ಮತ್ತು ಯು.ಎಸ್ ಸೇರಿದಂತೆ ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಪ್ರಯತ್ನಿಸುತ್ತಿದ್ದಾರೆ. ಇದರ ಭಾಗವಾಗಿ ಸುನೀಲ್ ಮಿತ್ತಲ್ ಅವರು ದೊಡ್ಡ ಪ್ರಾಜೆಕ್ಟ್ ಗೆ ಕೈ ಹಾಕಿದ್ದಾರೆ ಎನ್ನಲಾಗಿದೆ.
ಕೋವಿಡ್ 19 ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿದ OneWeb
OneWeb ಟಿಲಿಕಮ್ಯುನಿಕೇಷನ್ ಕಂಪನಿ ಪ್ರಸ್ತುತ ಕೋವಿಡ್ 19 ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿದೆ. ಕಂಪನಿ ಮಾರ್ಚ್ 27 ರಂದು ದಿವಾಳಿತನದ ಪ್ರಕಟಣೆ ನೀಡಿತ್ತು. ಮಿತ್ತಲ್ ಅವರ ಕಂಪನಿ ಭಾರತದ ಎರಡನೇ ಅತಿದೊಡ್ಡ ವೈರ್‌ಲೆಸ್ ಆಪರೇಟರ್ ಭಾರತಿ ಏರ್‌ಟೆಲ್ ಲಿಮಿಟೆಡ್ ಅನ್ನು ನಿರ್ವಹಿಸುತ್ತದೆ.
41 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ
ಭಾರ್ತಿ ಏರ್‌ಟೆಲ್‌ನ ಷೇರುಗಳು ಈ ವರ್ಷ 24% ಏರಿಕೆಯಾಗಿದ್ದು, ಕಂಪನಿಗೆ ಸುಮಾರು 41 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯವನ್ನು ನೀಡಿದೆ. ಭಾರತಿ ಏರ್‌ಟೆಲ್ ಅಲ್ಲದೇ ಇತರ ಕೆಲ ಕಂಪನಿಗಳೂ OneWeb ಗೆ ಬಿಡ್ ಸಲ್ಲಿಸಲು ಮುಂದಾಗಿವೆ ಎನ್ನಲಾಗಿದೆ.


Click it and Unblock the Notifications