ಮುಂಬೈ ಜೂನ್ 4: ಒಂದು ಕಡೆ ಲೋಕಸಭಾ ಚುನಾವಣೆ ಫಲಿತಾಂಶಗಳು ಹೊರಬೀಳುತ್ತರಿದ್ದಂತೆ ಇನ್ನೊಂದು ಕಡೆ ಭಾರತದ ಷೇರು ಆರುಕಟ್ಟೆ ಪ್ರಪಾತಕ್ಕೆ ಕುಸಿದಿದೆ. ಎಕ್ಸಿಟ್ ಪೋಲ್ ನಂತರ ಸಾರ್ವಕಾಲಿಕ ದಾಖಲೆ ಏರಿಕೆ ಕಂಡಿದ್ದ ಮಾರ್ಕೆಟ್ ಜೂ. 4 ಬೆಳಗ್ಗೆ 11.30 ರ ವೇಳಗೆ 3500 ಅಂಕಗಳ ಮಹಾಕುಸಿತ ಕಂಡಿದೆ.
ಮತೆಣಿಕೆ ಆರಂಭವಾಗುತ್ತಿದ್ದಂತೆ ಷೇರುಪೇಟೆಯಲ್ಲಿ ಕುಸಿತ ಆರಂಭವಾಯಿತು. ಸೆನ್ಸೆಕ್ಟ್ 72940ಕ್ಕೆ ಬಂದು ನಿಂತಿದೆ. ಇನ್ನೊಂದು ಕಡೆ ನಿಫ್ಟಿ ಬರೋಬ್ಬರಿ 1 ಸಾವಿರ ಅಂಕ ಕಳೆದುಕೊಂಡಿತು. ಮಾರುಕಟಟೆಯಲ್ಲಿ ಬೆಳಗ್ಗೆ 11.30 ರ ವೇಳೆಗೆ ಶೇ. 4.5 ರಷ್ಟು ಕುಸಿತ ಕಂಡುಬಂತು.
ಸೋಮವಾರ ಭಾರತದ ಷೇರು ಮಾರುಕಟ್ಟೆಯ ಶೇ. 3ಕ್ಕಿಂತ ಹೆಚ್ಚು ಏರಿಕೆ ಕಂಡಿತ್ತು. ಆದರೆ ಮಂಗಳವಾರ ಮಹಾಕುಸಿತ ಆರಂಭವಾಯಿತು.

ಚುನಾವಣೋತ್ತರ ಸಮೀಕ್ಷೆಗಳು ಎನ್ ಡಿಎ ಮೈತ್ರಿಕೂಟ ಭಾರೀ ಅಂತರದ ಗೆಲುವು ದಾಖಲಿಸಲಿವೆ ಎಂದು ಹೇಳಿದ್ದವು. ಇದರ ಪರಿಣಾಮ ಷೇರು ಮಾರುಕಟ್ಟೆ ಮೇಲೆ ಆಗಿತ್ತು.
ಎಚ್ಯುಎಲ್, ನೆಸ್ಲೆ, ಟಿಸಿಎಸ್, ಬ್ರಿಟಾನಿಯಾ, ಸನ್ ಫಾರ್ಮಾ, ಡಿವಿಸ್ ಲ್ಯಾಬ್ಸ್, ಅಪೋಲೋ ಆಸ್ಪತ್ರೆ, ಏಷ್ಯನ್ ಪೇಮೆಂಟ್ಸ್, ಟೈಟಾನ್, ಡಾಕ್ಟರ್ ರೆಡ್ಡೀಸ್ ಲ್ಯಾಬ್ಸ್, ಹೀರೋ ಮೋಟೋಕಾರ್ಪ್, ಈ ಮಹಾಕುಸಿತದ ನಡುವೆಯೂ ಏರಿಕೆ ದಾಖಲಿಸಿವೆ.
ರಿಲಾಯನ್ಸ್, ಅದಾನಿ ಎಂಟರ್ಪ್ರೈಸಸ್, ಅದಾನಿ ಪೋರ್ಟ್ಸ್, ಎಚ್ಡಿಎಫ್ಸಿ ಬ್ಯಾಂಕ್, ಎಸ್ಬಿಐ, ವಿಪ್ರೋ, ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ ಆಟೊ, ಏಚರ್ ಮೋಟಾರ್ಸ್ ಮೊದಲಾದ ಷೇರುಗಳು ತೀವ್ರ ಕುಸಿತ ಕಂಡವು. ಅದಾನಿ ಎಂಟರ್ ಪ್ರೈಸಸ್ ಬರೋಬ್ಬರಿ 677 ಅಂಕ ಕುಸಿತ ಕಂಡಿದೆ.


Click it and Unblock the Notifications