ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್. ಇದೀಗ ಉದ್ಯೋಗಿಗಳು ನಿವೃತ್ತಿ ನಂತರ ಆರ್ಥಿಕವಾಗಿ ಬಲ ಪಡೆಯಲು ಹೊಸ ನಿರ್ಧಾರಗಳನ್ನು ಕೈಗೊಂಡಿದೆ. ಇದೀಗ ಸರ್ಕಾರ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಮತ್ತು ಯೂನಿಫೈಡ್ ಪಿಂಚಣಿ ಯೋಜನೆ (UPS) ಅಡಿಯಲ್ಲಿ ಹೊಸ ಹೂಡಿಕೆ ಆಯ್ಕೆಗಳನ್ನು ನೀಡಿದೆ. ಹಣಕಾಸು ಸಚಿವಾಲಯ ತೆಗೆದುಕೊಂಡ ಈ ನಿರ್ಧಾರದಿಂದ, ಸರ್ಕಾರಿ ನೌಕರರು ಇನ್ಮೇಲೆ ಎರಡು ಹೊಸ ಹೂಡಿಕೆ ಯೋಜನೆಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು.

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಮತ್ತು ಯೂನಿಫೈಡ್ ಪಿಂಚಣಿ ಯೋಜನೆ (UPS) ಅಡಿಯಲ್ಲಿ ಕೇಂದ್ರ ಸರ್ಕಾರದ ನೌಕರರಿಗೆ ಹೊಸದಾಗಿ, ಎರಡು ಹೂಡಿಕೆ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಲೈಫ್ ಸೈಕಲ್ ಮತ್ತು ಬ್ಯಾಲೆನ್ಸ್ಡ್ ಲೈಫ್ ಸೈಕಲ್ ಎಂಬ ಎರಡು ಹೂಡಿಕೆ ಆಯ್ಕೆಗಳನ್ನು ವಿಸ್ತರಿಸುವಂತೆ ಹಣಕಾಸು ಸಚಿವಾಲಯ ಅನುಮೋದನೆ ನೀಡಿದೆ.
ಬೇಡಿಕೆಗೆ ಕೇಂದ್ರದ ಪ್ರತಿಕ್ರಿಯೆ:
ಈ ಎರಡು ಯೋಜನೆಗಳು ಮೊದಲು ಸರ್ಕಾರಿ-ಅಲ್ಲದ ಉದ್ಯೋಗಿಗಳಿಗೆ ಮಾತ್ರ ಆಯ್ಕೆಗಳಿತ್ತು. ಆದ್ರೆ ಹಲವು ದಿನಗಳಿಂದ ಕೇಂದ್ರ ಸರ್ಕಾರಿ ನೌಕರರಿಗೆ ನೀಡಬೇಕೆಂಬ ಬೇಡಿಕೆ ಹೆಚ್ಚಾಗಿತ್ತು. ಇದೀಗ ಕೊನೆಗೂ ಕೇಂದ್ರದ ಉದ್ಯೋಗಿಗಳಿಗೂ ಅವಕಾಶ ನೀಡಿದೆ. ನಿವೃತ್ತಿ ಯೋಜನೆಗಳಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ನೌಕರರು ತಮ್ಮ ನಿವೃತ್ತಿ ನಿಧಿಯನ್ನು ತಮ್ಮ ಆದ್ಯತೆಗೆ ಅನುಗುಣವಾಗಿ ಸರಿ ಹೊಂದಿಸಲು ಇದು ಅನುವು ಮಾಡಿಕೊಡುತ್ತದೆ.
NPS ಅಡಿಯಲ್ಲಿ, ಉದ್ಯೋಗಿಗಳ ಆದ್ಯತೆಗೆ ತಕ್ಕಂತೆ ಈಗ ಮೂರು ಆಯ್ಕೆಗಳಿವೆ. ಮೊದಲನೆಯದು ಡೀಫಾಲ್ಟ್ ಸ್ಕೀಮ್, ಇದರಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಮಾಡಿದ ನಿಯಮದ ಪ್ರಕಾರ ಹೂಡಿಕೆ ಹಣ ಶೇರ್ ಮಾಡಲಾಗುತ್ತದೆ. ಇದರಲ್ಲಿ ಅಪಾಯ ಕಡಿಮೆ. ಎರಡನೆಯದು ಸ್ಕೀಮ್ G. ಇದು ಸರ್ಕಾರಿ ಅಡಿಯಲ್ಲಿ ಶೇ.100 ರಷ್ಟು ಹೂಡಿಕೆ ಮಾಡುವ ಮತ್ತು ಆದಾಯ ಪಕ್ಕಾ ನೀಡುವ ಯೋಜನೆ. ನಿರ್ದಿಷ್ಟ ಆದಾಯ ಪಡೆಯಲು ಬಯಸುವವರಿಗೆ ಇದು ಉತ್ತಮ.
ಲೈಫ್ ಸೈಕಲ್ ಹೂಡಿಕೆ ಮೂರು ರೀತಿಯಲ್ಲಿದೆ. LC-25 ಯೋಜನೆಯಡಿಯಲ್ಲಿ, ಗರಿಷ್ಠ ಇಕ್ವಿಟಿ ಹಂಚಿಕೆ ಶೇಕಡಾ 25% ರವರೆಗೆ ಇರುತ್ತದೆ. ವಯಸ್ಸು ಹೆಚ್ಚಾದಂತೆ ಈಕ್ವಿಟಿ ಪಾಲು ಕೂಡಾ ಇಳಿಕೆಯಾಗುತ್ತದೆ. ಆದ್ದರಿಂದ, ಇದರಲ್ಲಿ ಅಪಾಯ ಕಡಿಮೆ. LC-50 ಯೋಜನೆಯಲ್ಲಿ, ಗರಿಷ್ಠ ಇಕ್ವಿಟಿ ಹಂಚಿಕೆ ಶೇಕಡಾ 50% ರಷ್ಟು ಇರಲಿದೆ. ಅದೇ ರೀತಿ LC-75 ಯೋಜನೆಯಡಿಯಲ್ಲಿ, ಗರಿಷ್ಠ ಇಕ್ವಿಟಿ ಹಂಚಿಕೆ ಶೇಕಡಾ 75% ರವರೆಗೆ ಇರುತ್ತದೆ. ಯುವಕರಿಗೆ ಇದು ಸೂಕ್ತ. ಏಕೆಂದರೆ ಈ ಮೂಲಕ ದೀರ್ಘಾವಧಿಯವರೆಗೆ ಹೂಡಿಕೆ ಮಾಡಬಹುದು ಮತ್ತು ಹೆಚ್ಚು ಲಾಭ ಪಡೆಯಬಹುದು.
ಇನ್ನು ಬ್ಯಾಲೆನ್ಸ್ಡ್ ಲೈಫ್ ಸೈಕಲ್ (BLC) ಆಯ್ಕೆಯು LC50 ರ ಅಪ್ಡೇಟ್ ಮಾಡಿದ ಆವೃತ್ತಿಯಾಗಿದ್ದು, 45 ನೇ ವಯಸ್ಸಿನಿಂದ ಇಕ್ವಿಟಿ ಹಂಚಿಕೆಯು ಕ್ರಮೇಣವಾಗಿ ಕಡಿಮೆಯಾಗುತ್ತದೆ. ಇದು ನೌಕರರು ಬಯಸಿದರೆ ದೀರ್ಘಕಾಲದವರೆಗೆ ಇಕ್ವಿಟಿಗಳಲ್ಲಿ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ.


Click it and Unblock the Notifications