ಬೆಂಗಳೂರು ಏರ್‌ಪೋರ್ಟ್ (Bengaluru Airport) ಹೋಗೋರಿಗೆ ಸದ್ಯ ದೊಡ್ಡ ಸಮಸ್ಯೆಯೆಂದರೆ ಅದು ಟ್ರಾಫಿಕ್ ಸಮಸ್ಯೆ. ಅದಕ್ಕೆ ಕಾರಣ ಹಲವು ಆದರೂ, ಸರ್ವೀಸ್ ರೋಡ್‌ಗಳೂ ಕೂಡಾ ಒಂದಾಗಿತ್ತು. ಆದ್ರೆ ಇದೀಗ ಬಹಳ ದಿನಗಳಿಂದ ನಿರೀಕ್ಷೆಯಲ್ಲಿದ್ದ ಜಕ್ಕೂರು ಸರ್ವೀಸ್ ರೋಡ್ (Jakkur Service R ಕೊನೆಗೂ ಸಂಚಾರ ಮುಕ್ತವಾಗಿದೆ. ಕೊನೆಗೂ ಪ್ರಯಾಣಿಕರಿಗಾಗಿ ಜಕ್ಕೂರು ಸರ್ವಿಸ್ ರಸ್ತೆಯನ್ನು ತೆರೆಯುವ ಮೂಲಕ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಗುಡ್ ನ್ಯೂಸ್ ಕೊಟ್ಟಿದೆ.

ಬೆಂಗಳೂರು ನಗರದ ಉತ್ತರಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದೀಗ ಮಹತ್ವದ ನಿರ್ಧಾರ ಕೈಗೊಂಡಿದೆ. ಆ ಪ್ರಕಾರ, ಹಲವಾರು ಸಮಸ್ಯೆಗಳಿಗೆ ಕಾರಣವಾಗಿದ್ದ ಜಕ್ಕೂರು ಸರ್ವೀಸ್ ರೋಡ್ ಇದೀಗ ಸಂಚಾರ ಮುಕ್ತವಾಗಿದೆ.
ಏರ್‌ಪೋರ್ಟ್ ಪ್ರಯಾಣಿಕರಿಗೆ ಗುಡ್ ನ್ಯೂಸ್!
ಬೆಂಗಳೂರು ವಿಮಾನ ನಿಲ್ದಾಣದ ರಸ್ತೆಗಳು ಸದ್ಯ ಸಂಚಾರ ದಟ್ಟಣೆಯಿಂದ ತುಂಬಿ ತುಳುಕುತ್ತಿದೆ. ಆದ್ರೆ ಇದೀಗ ಜಕ್ಕೂರು ರಸ್ತೆ ಉದ್ಘಾಟನೆಯಿಂದಾಗಿ ಏರ್‌ಪೋರ್ಟ್ ಕಡೆಗಿನ ದಾರಿಯಲ್ಲಿನ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸಹಕಾರನಗರ ಮತ್ತು ಯಲಹಂಕದ ಪ್ರಯಾಣಿಕರು ಸದ್ಯ ನಿಟ್ಟುಸಿರು ಬಿಡುವಂತಾಗಿದೆ. ಇನ್ನು ಈ ಹೊಸ ರಸ್ತೆ, ಸ್ಥಳೀಯ ಸಂಚಾರ ಮತ್ತು ಹೆದ್ದಾರಿ ವಾಹನಗಳನ್ನು ಪ್ರತ್ಯೇಕಿಸಿ ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತದೆ.
ಸಂಚಾರ ದಟ್ಟಣೆಯಿಂದ ಮುಕ್ತಿ
ವರ್ಷಗಳಿಂದಲೂ ಜಕ್ಕೂರು ರಸ್ತೆ ಸಂಚಾರ ದಟ್ಟಣೆಯ ಪ್ರಮುಖ ಕೇಂದ್ರಬಿಂದುವಾಗಿ ಗುರುತಿಸಿಕೊಂಡಿತ್ತು. ಅಲ್ಲದೇ ಸ್ಥಳೀಯ ವಾಹನಗಳು ಮತ್ತು ವೇಗದ ಹೆದ್ದಾರಿ ಸಂಚಾರದಿಂದಾಗಿ, ಪ್ರಯಾಣಿಕರಿಗೂ ಹಲವು ಸಮಸ್ಯೆಗಳು ಎದುರಾಗುತ್ತಿತ್ತು. ಅದರಲ್ಲೂ ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳೊಂದಿಗೆಯೇ, ಸ್ಥಳೀಯ ಸಂಚಾರ ಮಾಡುವ ಪ್ರಯಾಣಿಕರು ಸಂಚರಿಸಬೇಕಿತ್ತು.
ಆದರೆ ಇದೀಗ ಕೊನೆಗೂ ಸರ್ವೀಸ್ ರೋಡ್ ಕಾರ್ಯಾರಂಭ ಮಾಡಿರುವುದರಿಂದ, ಸ್ಥಳೀಯ ಪ್ರಯಾಣಿಕರು ಮುಖ್ಯ ಹೆದ್ದಾರಿಯಲ್ಲೇ ಸಂಚಾರ ಮಾಡಬೇಕಿಲ್ಲ. ಇದು ಸ್ಥಳೀಯ ಸಂಚಾರಕ್ಕೆ ಮತ್ತಷ್ಟು ಸುಗಮವಾಗಲಿದೆ, ಅಪಘಾತಗಳ ಅಪಾಯವನ್ನು ಕಡಿಮೆ ಮಾಡಲಿದೆ. ಅಧಿಕಾರಿಗಳ ಪ್ರಕಾರ, ಈ ರಸ್ತೆಯನ್ನು ನೆರೆಹೊರೆಯ ಸಂಚಾರವನ್ನು ರಾಷ್ಟ್ರೀಯ ಹೆದ್ದಾರಿ ವಾಹನಗಳಿಂದ ಪ್ರತ್ಯೇಕಿಸುವ ಉದ್ದೇಶದಿಂದಲೇ ಕಾರ್ಯರೂಪಕ್ಕೆ ತರಲಾಗಿದೆ ಎನ್ನಲಾಗಿದೆ. ಅಲ್ಲದೇ ಈ ಯೋಜನೆ ಆ ಪ್ರದೇಶದ ನಿವಾಸಿಗಳ ಬಹುಕಾಲದ ಬೇಡಿಕೆಯಾಗಿತ್ತು.
ವಿಳಂಬಕ್ಕೆ ಹಲವು ಅಡ್ಡಿ
ಇನ್ನು ಜಕ್ಕೂರು ಸರ್ವೀಸ್ ರಸ್ತೆ ಕಾರ್ಯಾರಂಭಕ್ಕೆ ಹಲವು ಸವಾಲುಗಳು ಎದುರಾಗಿತ್ತು. ಅದರಲ್ಲೂ ಭೂಮಿ-ಸಂಬಂಧಿತ ಹಾಗೂ ಕಾಮಗಾರಿ ಸವಾಲುಗಳಿಂದ ಈ ಯೋಜನೆ ಆರಂಭಿಸಲು ಹಲವು ಸವಾಲುಗಳು ಎದುರಾಗಿತ್ತು. ಇದೇ ವಿಳಂಬ ಹಲವು ಬಾರಿ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ ಜಕ್ಕೂರು ರಸ್ತೆಯ ಕಾರ್ಯಾರಂಭದಿಂದಾಗಿ ಹಲವು ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ. ಅಲ್ಲದೇ ಬೆಂಗಳೂರು ಏರ್‌ಪೋರ್ಟ್ ಪ್ರಯಾಣಿಕರಂತೂ ಆರಾಮದಾಯಕವಾಗಿ ಪ್ರಯಾಣ ಮಾಡಬಹುದಾಗಿದೆ.
ಈ ಹೊಸ ರಸ್ತೆಯು ಜಕ್ಕೂರು ಸುತ್ತಮುತ್ತಲಿನ ವಸತಿ ಪ್ರದೇಶಗಳಿಗೂ ಸಂಪರ್ಕವನ್ನು ಕಲ್ಪಿಸುವುದಲ್ಲದೇ, ವಿಮಾನ ನಿಲ್ದಾಣಕ್ಕೆ ಹೋಗುವ-ಬರುವ ವಾಹನಗಳಿಗೆ ತಡೆರಹಿತ ಸಂಚಾರ ಅವಕಾಶ ನೀಡುವ ಮೂಲಕ ಸುಗಮ ಸಂಚಾರಕ್ಕೆ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.


Click it and Unblock the Notifications