ಪಾಸ್‌ಪೋರ್ಟ್‌ನಿಂದ ಹಿಡಿದು ಬ್ಯಾಂಕ್ ಅಕೌಂಟ್ (Passport To Bank Account) ಓಪನ್ ಮಾಡಬೇಕೆಂದರೂ ಆಧಾರ್ ಕಾರ್ಡ್ ಬಹುಮುಖ್ಯ ದಾಖಲೆಯಾಗಿದೆ. ಯಾವುದೇ ಹಣಕಾಸು ಸಂಬಂಧಿಯ, ಉದ್ಯೋಗ ಸಂಬಂಧಿತ ವಿಷಯಗಳಲ್ಲಿ ಆಧಾರ್ ಕಾರ್ಡ್ ಗುರುತಿನ ಪುರಾವೆಯಾಗಿ ಬಹುಮುಖ್ಯ ಪಾತ್ರವಹಿಸುತ್ತದೆ. ಆದ್ದರಿಂದ ಆಧಾರ್ ಕಾರ್ಡ್ (Aadhaar Card) ಪ್ರತಿಯೊಬ್ಬ ಭಾರತೀಯರಿಗೂ ಒಂದು ಅಗತ್ಯ ದಾಖಲೆಯಾಗಿ ಬದಲಾಗಿದೆ. ಬ್ಯಾಂಕ್ ಖಾತೆ, ಗ್ಯಾಸ್ ಸಬ್ಸಿಡಿ, ಪಿಂಚಣಿ ಅಥವಾ ವಿದ್ಯಾರ್ಥಿವೇತನದಂತಹ ಬಹುತೇಕ ಎಲ್ಲ ಸರ್ಕಾರಿ ಹಾಗೂ ಸೌಲಭ್ಯಗಳನ್ನು ಪಡೆಯಬೇಕೆಂದರೂ ಆಧಾರ್ ಕಾರ್ಡ್ ನೀಡಲೇಬೇಕು.

ಆದ್ದರಿಂದ ಯಾರೆಲ್ಲಾ ಆಧಾರ್ ಕಾರ್ಡ್ ಹೊಂದಿಲ್ಲವೋ, ಅಪ್‌ಗ್ರೇಡ್ ಮಾಡಿಲ್ಲವೋ ಅವು ಕಡ್ಡಾಯವಾಗಿ ಅಪ್‌ಡೇಟ್ ಮಾಡಲೇಬೇಕು. ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಬ್ಲಾಕ್ ಆದ್ರೆ, ಹಲವು ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ.
2.5 ಕೋಟಿಗೂ ಆಧಾರ್ ಕಾರ್ಡ್ ಬ್ಲಾಕ್!
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ನೀಡಿದ ಮಾಹಿತಿಯ ಪ್ರಕಾರ, ಇದೀಗ ಭಾರತೀಯರಿಗೆ ಶಾಕಿಂಗ್ ವರದಿಯೊಂದಿದೆ. ಏಕೆಂದರೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಇದುವರೆಗೆ 2.5 ಕೋಟಿಗೂ ಹೆಚ್ಚು ಆಧಾರ್ ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸಿದೆ ಎಂದು ವರದಿಯಾಗಿದೆ. ಆಧಾರ್ ದಾಖಲೆಗಳನ್ನು ಸರಿಯಾಗಿ ಮತ್ತು ಸುರಕ್ಷಿತವಾಗಿಡುವ ಉದ್ದೇಶದಿಂದ ಈ ಪ್ರಮುಖ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಆಧಾರ್ ಕಾರ್ಡ್‌ಗಳನ್ನು ಏಕೆ ನಿಷ್ಕ್ರಿಯಗೊಳಿಸಲಾಗುತ್ತದೆ?
UIDAI ತನ್ನ ಡೇಟಾಬೇಸ್ ಅನ್ನು ನಿರಂತರವಾಗಿ ಆಗಾಗ ಪರಿಶೀಲಿಸುತ್ತಿರುತ್ತದೆ. ವ್ಯಕ್ತಿ ಮರಣ ಹೊಂದಿದ್ದರೂ ಆ ಮಾಹಿತಿ ಇನ್ನೂ ಅಪ್ಡೇಟ್ ಆಗದಿದ್ದರೆ, ಆಧಾರ್ ಸಂಖ್ಯೆಯ ದುರುಪಯೋಗವಾಗುವ ಸಾಧ್ಯತೆ ಇದೆ. ಆದ್ದರಿಂದ ಯುಐಡಿಎಐ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮೃತರ ಆಧಾರ್ ಸಂಖ್ಯೆಗಳನ್ನು ಸಕ್ರಿಯವಾಗಿಡುವುದು ಅಪಾಯಕಾರಿ ಎಂದು ಸರ್ಕಾರ ಹೇಳುತ್ತದೆ. ಇವುಗಳನ್ನು ನಕಲಿ ಬ್ಯಾಂಕ್ ಖಾತೆ ತೆರೆಯಲು, ಮೃತರ ಹೆಸರಿನಲ್ಲಿ ಸಿಮ್ ಕಾರ್ಡ್ ಪಡೆಯಲು ಅಥವಾ ಸರ್ಕಾರಿ ಯೋಜನೆಗಳಲ್ಲಿ ಅಕ್ರಮ ಲಾಭ ಗಳಿಸಲು ಇದು ದಾರಿ ಮಾಡಿಕೊಡಲಿದೆ. ಆದ್ದರಿಂದ, ಇಂತಹ ಪ್ರಕರಣಗಳಲ್ಲಿ ಆಧಾರ್ ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸಿ, ವಂಚನೆಯಿಂದ ಜನರನ್ನು ರಕ್ಷಿಸುವುದೇ ಇದರ ಮುಖ್ಯ ಗುರಿ.
ಮನೆಯಿಂದಲೇ ಆಧಾರ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ನಿಮ್ಮ ಆಧಾರ್ ಆಕ್ಟಿವ್ ಆಗಿದ್ಯಾ? ಅಥವಾ ಬ್ಲಾಕ್ ಆಗಿದ್ಯಾ? ಎಂದು ತಿಳಿಯಲು, ಮನೆಯಿಂದಲೇ ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು. ಅದಕ್ಕಾಗಿ ಕೆಲವು ಟ್ರಿಕ್ಸ್ ಫಾಲೋ ಮಾಡಬೇಕು.
- ಮೊದಲಿಗೆ, UIDAI ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- "My Aadhaar" ವಿಭಾಗದಲ್ಲಿ "Verify Aadhaar Number" ಆಯ್ಕೆ ಮಾಡಿ.
- ಆ ನಂತರ 12 ಅಂಕಿಯ ಆಧಾರ್ ನಂಬರ್ ಅನ್ನು ಆಡ್ ಮಾಡಿ.
- ಬಳಿಕ ಕ್ಯಾಪ್ಚಾ ಕೋಡ್ ಭರ್ತಿ ಮಾಡಿ. ಆಗ ನಿಮಗೆ ನಿಮ್ಮ ಆಧಾರ್ ಕಾರ್ಡ್ ಆಕ್ಟಿವ್ ಆಗಿದ್ಯಾ ಎಂದು ಚೆಕ್ ಮಾಡಬಹುದು.
ಇನ್ನು ಆಧಾರ್ ಕಾರ್ಡ್ ಎಂಬುದು ಕೇವಲ ಒಂದು ಕಾರ್ಡ್ ಅಲ್ಲ, ಅದೊಂದು ಬಹಳ ಮುಖ್ಯ ದಾಖಲೆ. ಇದು ಸಕ್ರಿಯವಾಗಿದ್ದರೆ ಮಾತ್ರ, ನಿಮಗೆ ಇತರ ಸೌಲಭ್ಯಗಳನ್ನು ಪಡೆಯಲು ಸಹಾಯಕವಾಗಲಿದೆ. ಆದ್ದರಿಂದ ಎಷ್ಟೋ ಮಂದಿ ಆಧಾರ್ ಸ್ಟೇಟಸ್ ಚೆಕ್ ಮಾಡುವುದೇ ಇಲ್ಲ. ಆದರೆ ಆಧಾರ್ ಕಾರ್ಡ್ ಅನ್ನು ಕಾಲ ಕಾಲಕ್ಕೆ ಚೆಕ್ ಮಾಡುತ್ತಿರಬೇಕು. ಏಕೆಂದರೆ ಒಂದು ವೇಳೆ ಆಧಾರ್ ಕಾರ್ಡ್ ಬ್ಲಾಕ್ ಆದ್ರೆ, ಹಲವು ಸಮಸ್ಯೆಗಳು ಎದುರಾಗುತ್ತದೆ.


Click it and Unblock the Notifications