ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಬಳಕೆದಾರರಿಗೆ ದೊಡ್ಡ ಶಾಕ್ ನೀಡಲಿದೆ. ಸರ್ಕಾರಿ ಸ್ವಾಮ್ಯದ ಕಂಪನಿಯಾಗಿರುವ BSNL ಬರುವ ತಿಂಗಳಿನಿಂದ ಈಗ ಅಸ್ತಿತ್ವದಲ್ಲಿರುವ ಕೆಲವು ರೀಚಾರ್ಜ್ ಯೋಜನೆಗಳನ್ನ ನಿಲ್ಲಿಸಲು ಮುಂದಾಗಿದೆ. ಹೌದು ಪ್ರಮುಖವಾಗಿ ಈ ಮೂರು ಯೋಜನೆಗಳನ್ನ ನಿಲ್ಲಿಸಲು ಕಂಪನಿ ನಿರ್ಧರಿಸಿದೆ. ಈ ಯೋಜೆನಗಳ ಮೂಲಕ ಜನರು ಸಾಕಷ್ಟು ಪ್ರಯೋಜನಗಳನ್ನ ಪಡೆಯುತ್ತಿದ್ದರು ಆದ್ರೆ ಇನ್ಮುಂದೆ BSNL ಗ್ರಾಹಕರು ಈ ಯೋಜನೆಗಳನ್ನ ಬಳಕೆ ಮಾಡಲು ಆಗುವುದಿಲ್ಲ.
BSNL ತನ್ನ ಮೂರು ರೀಚಾರ್ಜ್ ಯೋಜನೆಗಳನ್ನ ಫೆಬ್ರವರಿ 10ರಿಂದ ನಿಲ್ಲಿಸಲಿದೆ. ವರದಿಗಳ ಪ್ರಕಾರ BSNLನ 201, 797 ಮತ್ತು 2,999 ರೀಚಾರ್ಜ್ ಪ್ಲಾನ್‌ಗಳು ಸ್ಥಗಿತಗೊಳ್ಳಲಿವೆ. ಇನ್ನು ಈ ಪ್ರಮುಖ ಮೂರು ಯೋಜನೆಗಳು ಯಾವ ಯಾವ ಪ್ರಯೋಜನಗಳನ್ನ ಹೊಂದಿವೆ ಎನ್ನುವುದನ್ನು ಇಲ್ಲಿ ತಿಳಿಯಿರಿ.

BSNLನ 201 ರೂ. ರೀಚಾರ್ಜ್ ಯೋಜನೆ
BSNLನ 201 ರೂಗಳ ರೀಚಾರ್ಜ್ ಯೋಜನೆಯು 90 ದಿನಗಳ ಮಾನ್ಯತೆಯನ್ನ ಹೊಂದಿದೆ. ಜೊತೆಗೆ 6GB ಡೇಟಾ ಮತ್ತು 300 ನಿಮಿಷಗಳ ಕರೆಯ ಸೌಲಭ್ಯವನ್ನ ನೀಡುತ್ತದೆ. ಇನ್ನು ಈ ಪ್ರಯೋಜನಗಳಲ್ಲದೇ ಇದು ಯಾವ ಪ್ರಯೋಜನಗಳನ್ನೂ ಒಳಗೊಂಡಿಲ್ಲ. ಆದ್ರೆ ಹೆಚ್ಚು ಡೆಟಾ ಬಳಕೆ ಮಾಡದಿರುವವರಿಗೆ ಇದು ಸೂಕ್ತವಾದ ಯೋಜನೆಯಾಗಿದೆ. ಆದ್ರೆ ಈ ಯೋಜನೆ ಮುಂದಿನ ತಿಂಗಳಿನಿಂದ ಗ್ರಾಹಕರಿಗೆ ಲಭ್ಯವಾಗುವುದಿಲ್ಲ.
BSNLನ 797 ರೂ. ರೀಚಾರ್ಜ್ ಯೋಜನೆ
BSNLನ 797 ರೂಗಳ ರೀಚಾರ್ಜ್ ಯೋಜನೆಯು 300 ದಿನಗಳ ಮಾನ್ಯತೆಯನ್ನ ಹೊಂದಿದೆ. ಜೊತೆಗೆ ಇದು ಅನಿಯಮಿತ ಕರೆ, ಪ್ರತಿದಿನ 2GB ಡೇಟಾ, ಮೊದಲ ಎರಡು ತಿಂಗಳುಗಳು 100 SMSಗಳ ಸೌಲಭ್ಯವನ್ನ ಇದು ಒಳಗೊಂಡಿದೆ. ಅಂದರೆ 60 ದಿನಗಳವರೆಗೆ 100 SMSಗಳು ಲಭ್ಯವಿದೆ. ಹಾಗೆ 60 ದಿನದ ನಂತರ ಡೇಟಾ ಮತ್ತು ಅನಿಯಮಿತ ಕರೆಯ ಸೌಲಭ್ಯವನ್ನ ಪಡೆಯಬಹುದು.
BSNLನ 2,999 ರೂ. ರೀಚಾರ್ಜ್ ಯೋಜನೆ
BSNLನ 2,999 ರೂಗಳ ರೀಚಾರ್ಜ್ ಯೋಜನೆಯು ಈ ಕಂನಿಯ ಅತ್ಯಂತ ದುಬಾರಿ ರೀಚಾರ್ಜ್ ಯೊಜನೆಯಾಗಿದೆ. ಇದು ಒಂದು ವರ್ಷದ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಜೊತೆಗೆ ಪ್ರತಿದಿನ 3GB ಡೇಟಾವನ್ನ ಇದು ಒಳಗೊಂಡಿರುತ್ತದೆ. ಇದಲ್ಲದೆ ಅನಿಯಮಿತ ಕರೆಗಳನ್ನ ಕೂಡ ಈ ಯೋಜನೆ ಒಳಗೊಂಡಿದೆ. ಹಾಗೆ ಪ್ರತಿದಿನ 100 SMSಗಳ ಪ್ರಯೋಜನವನ್ನ ನೀವು ಪಡೆಯಬಹುದು.
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಬಗ್ಗೆ ಇಲ್ಲಿ ತಿಳಿಯಿರಿ
BSNL (ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಯಾಗಿದ್ದು, ಸಂವಹನ ಸಚಿವಾಲಯದ ಅಡಿಯಲ್ಲಿ 2000 ರಲ್ಲಿ ಸ್ಥಾಪಿಸಲಾಯಿತು. ಇದು ಲ್ಯಾಂಡ್‌ಲೈನ್, ಮೊಬೈಲ್, ಬ್ರಾಡ್‌ಬ್ಯಾಂಡ್ ಮತ್ತು ಎಂಟರ್‌ಪ್ರೈಸ್ ಪರಿಹಾರಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ಸೇವೆಗಳನ್ನು ಒದಗಿಸುವ ದೇಶದ ಅತಿದೊಡ್ಡ ಟೆಲಿಕಾಂ ಸೇವಾ ಪೂರೈಕೆದಾರರಲ್ಲಿ ಒಂದಾಗಿದೆ. BSNL ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಕಾರ್ಯನಿರ್ವಹಿಸುತ್ತದೆ, ಅಗತ್ಯ ಸಂಪರ್ಕ ಸೇವೆಗಳನ್ನು ಒದಗಿಸುತ್ತದೆ, ವಿಶೇಷವಾಗಿ ಖಾಸಗಿ ಟೆಲಿಕಾಂ ಆಪರೇಟರ್‌ಗಳು ಸೀಮಿತ ಉಪಸ್ಥಿತಿಯನ್ನು ಹೊಂದಿರುವ ದೂರದ ಮತ್ತು ಕಡಿಮೆ ಪ್ರದೇಶಗಳಲ್ಲಿ.
BSNL ದೇಶದ ದೂರಸಂಪರ್ಕ ಮೂಲಸೌಕರ್ಯದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ, ಭಾರತದಾದ್ಯಂತ ದೂರಸಂಪರ್ಕ ಜಾಲಗಳ ವಿಸ್ತರಣೆಗೆ ಕೊಡುಗೆ ನೀಡಿದೆ. ಕಂಪನಿಯು ಸಂಪೂರ್ಣವಾಗಿ ಸರ್ಕಾರದ ಒಡೆತನದಲ್ಲಿದೆ ಮತ್ತು ದೇಶದಲ್ಲಿ ಸಂವಹನ ಸೇವೆಗಳಿಗೆ ಸಮಾನ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಕೇಂದ್ರವಾಗಿದೆ. ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ, BSNL ಖಾಸಗಿ ಟೆಲಿಕಾಂ ಆಪರೇಟರ್‌ಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ ಮತ್ತು ಆರ್ಥಿಕ ಸವಾಲುಗಳು, ಮಾರುಕಟ್ಟೆ ಷೇರು ನಷ್ಟ ಮತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಟೆಲಿಕಾಂ ಉದ್ಯಮದಲ್ಲಿ ಆಧುನೀಕರಣದ ಅಗತ್ಯತೆಯೊಂದಿಗೆ ಹೋರಾಡುತ್ತಿದೆ.
ಈ ಸವಾಲುಗಳ ಹೊರತಾಗಿಯೂ, BSNL ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ, ವಿಶೇಷವಾಗಿ ಕೈಗೆಟುಕುವ ಸೇವೆಗಳನ್ನು ಒದಗಿಸುವಲ್ಲಿ ಮತ್ತು ನಿರ್ಣಾಯಕ ಸಂವಹನ ಮೂಲಸೌಕರ್ಯವನ್ನು ನಿರ್ವಹಿಸುವಲ್ಲಿ ಅದರ ಕಾರ್ಯತಂತ್ರದ ಪಾತ್ರದ ಮೂಲಕ. ಕಂಪನಿಯು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಉಳಿಯಲು ಸಹಾಯ ಮಾಡಲು ಬಂಡವಾಳದ ಒಳಹರಿವು ಮತ್ತು ಆಧುನೀಕರಣ ಯೋಜನೆಗಳು ಸೇರಿದಂತೆ ಹಲವಾರು ಸುಧಾರಣೆಗಳ ಮೂಲಕ BSNL ಅನ್ನು ಪುನಶ್ಚೇತನಗೊಳಿಸುವಲ್ಲಿ ಸರ್ಕಾರವು ಕಾರ್ಯನಿರ್ವಹಿಸುತ್ತಿದೆ.
More From GoodReturns

ಏಪ್ರಿಲ್ 1ರಿಂದ ಈ ರಾಜ್ಯದ ಸರ್ಕಾರಿ ಜನರಿಗೆ ಹೊಸ ಪಿಂಚಣಿ...ಕೊನೆಯ ಸಂಬಳದ 50%ನಷ್ಟು ಖಚಿತ! ಈ ಗುಡ್ನ್ಯೂಸ್ ಯಾರಿಗೆ?

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

ಶೀಘ್ರ ನಿವೃತ್ತಿ ಮತ್ತು ಆರ್ಥಿಕ ಸ್ವಾತಂತ್ರ್ಯ...ಭಾರತೀಯ ಯುವಕರಿಗಾಗಿ FIRE ಚಳುವಳಿ ರಹಸ್ಯಗಳು!

Investment: ಹೂಡಿಕೆ ತಡವಾಗಿ ಮಾಡ್ತಿದ್ದೀರ? 35ರ ನಂತರ ಹೇಗೆ ಸಂಪತ್ತು ನಿರ್ಮಿಸಬೇಕು ಎಂದು ಇಲ್ಲಿ ತಿಳಿಯಿರಿ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Today: ಬೆಳ್ಳಿ ದರಕ್ಕೂ ತಟ್ಟಿದ ಇಸ್ರೇಲ್-ಇರಾನ್ ವಾರ್ ಬಿಸಿ! ಬೆಲೆ ಭಾರೀ ಏರಿಕೆ

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?



Click it and Unblock the Notifications