Bengaluru Gold Rate: ಬೆಂಗಳೂರಿನ ಚಿನ್ನ ಪ್ರಿಯರಿಗೆ ಬಿಗ್‌ ಶಾಕ್!‌ ಭಾರೀ ಏರಿಕೆ ಕಂಡ ಚಿನ್ನ, ಬೆಳ್ಳಿ ದರ

ಬೆಂಗಳೂರಿನಲ್ಲಿ ಅದೆಷ್ಟೋ ಮಂದಿ ಚಿನ್ನ, ಬೆಳ್ಳಿ ಮೇಲೆ ಹೂಡಿಕೆ ಮಾಡುತ್ತಾರೆ. ಆದ್ರೆ ಇತ್ತೀಚೆಗೆ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ದೀಪಾವಳಿ ನಂತರ ಹಲವು ದಿನಗಳವರೆಗೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಲೇ ಇತ್ತು. ಆದ್ರೆ ಇತ್ತೀಚೆಗೆ ಮತ್ತೆ ದಿಢೀರ್‌ ಏರಿಕೆ ಕಂಡಿದೆ. ಇಂದು (ನ.22) ಬೆಂಗಳೂರಿನಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿದ್ದು, ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

ಬೆಂಗಳೂರಿನ ಚಿನ್ನ ಪ್ರಿಯರಿಗೆ ಬಿಗ್‌ ಶಾಕ್!‌ ಭಾರೀ ಏರಿಕೆ ಕಂಡ ಬಂಗಾರ

ಬೆಂಗಳೂರಿನಲ್ಲಿ 24K ಚಿನ್ನದ ಎಷ್ಟಿದೆ?
ಬೆಂಗಳೂರಿನಲ್ಲಿ 24K ಚಿನ್ನ ಶುದ್ಧತೆಯಲ್ಲೂ ನಂಬರ್‌ ಒನ್‌. ಅದೇ ಕಾರಣದಿಂದ ಅದರ ಬೆಲೆ ಕೂಡಾ ಹೆಚ್ಚಿರುತ್ತದೆ. ಇಂದು 1 ಗ್ರಾಂ ಬೆಲೆ 12,584 ರೂ. ಆಗಿದ್ದು, ನಿನ್ನೆ 12,398 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹186 ರೂ. ಏರಿಕೆ ಕಂಡಿದೆ. ಅಂದರೆ ನಿನ್ನೆಗಿಂತಲೂ ಇಂದು ಏರಿಕೆಯ ಪ್ರಮಾಣ ಹೆಚ್ಚಾಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 1,00,672 ರೂ. ಆಗಿದ್ದು, ನಿನ್ನೆ 99,184 ರೂ. ಇತ್ತು. ಒಂದೇ ದಿನದಲ್ಲಿ 1,488 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,25,840 ರೂ. ಆಗಿದ್ದು, ನಿನ್ನೆ 1,23,980 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ, ಇಂದು 1,860 ರೂ. ಏರಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನದ ಬೆಲೆ ಇಂದು 12,58,400 ರೂ. ಆಗಿದ್ದು, ನಿನ್ನೆ 12,39,800 ರೂ. ಇತ್ತು. ನಿನ್ನೆಗಿಂತ ಇಂದು ಬರೋಬ್ಬರಿ 18,600 ರೂ. ಹೆಚ್ಚಳವಾಗಿದೆ.

ಬೆಂಗಳೂರಿನಲ್ಲಿ 22K ಚಿನ್ನದ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ ಇಂದು 11,535 ರೂ. ಆಗಿದ್ದು, ನಿನ್ನೆ 11,365 ರೂ. ಇತ್ತು. ಈ ಮೂಲಕ ಒಂದೇ ದಿನದಲ್ಲಿ ₹170 ರೂ. ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 92,280 ರೂ. ಆಗಿದ್ದು, ನಿನ್ನೆ 90,920 ರೂ. ಇತ್ತು. ಒಟ್ಟು 1,360 ರೂ. ಏರಿಕೆಯಾಗಿದೆ. ಹಾಗೆಯೇ 10 ಗ್ರಾಂ ಚಿನ್ನದ ಬೆಲೆ ಇಂದು ರೂ. 1,15,350 ಆಗಿದ್ದು, ನಿನ್ನೆ 1,13,650 ರೂ. ಇತ್ತು. ನಿನ್ನೆಗಿಂತ ಇಂದು ₹1,700 ರೂ. ಹೆಚ್ಚಳವಾಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ಇಂದು 11,53,500 ರೂಪಾಯಿ ಆಗಿದ್ದು, ನಿನ್ನೆ 11,36,500 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಬರೋಬ್ಬರಿ 17,000 ರೂ. ಹೆಚ್ಚಳವಾಗಿದೆ.

18K ಚಿನ್ನದ ಬೆಲೆ ಎಷ್ಟಿದೆ?
ಬೆಂಗಳೂರಿನಲ್ಲಿ ಇಂದು 18K ಚಿನ್ನದ 1 ಗ್ರಾಂ ಬೆಲೆ 9,438 ರೂಪಾಯಿಯಾಗಿದೆ. ನಿನ್ನೆ 9,299 ರೂ. ಇತ್ತು. ಒಟ್ಟು ₹139 ರೂ. ಏರಿಕೆಯಾಗಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು 75,504 ರೂ. ಆಗಿದ್ದು, ನಿನ್ನೆ 74,392 ರೂ. ಇತ್ತು. ಒಟ್ಟು 1,112 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 94,380 ರೂ. ಆಗಿದ್ದು, ನಿನ್ನೆ 92,990 ರೂ. ಇತ್ತು. ಒಟ್ಟು ₹1,390 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 9,43,800 ರೂ. ಆಗಿದ್ದು, ನಿನ್ನೆ 9,29,900 ರೂ. ಇತ್ತು. ಒಟ್ಟು 13,900 ರೂ. ಹೆಚ್ಚಳವಾಗಿದೆ..

ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಎಷ್ಟಿದೆ?
ನಿನ್ನೆ ಗುಡ್‌ ನ್ಯೂಸ್‌ ಕೊಟ್ಟಿದ್ದ ಬೆಳ್ಳಿ ಬೆಲೆ, ಇಂದು ಶಾಕ್‌ ನೀಡಿದೆ. ಅಂದರೆ, ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಭಾರೀ ಏರಿಕೆಯಾಗಿದೆ. 1 ಗ್ರಾಂ ಬೆಳ್ಳಿ ದರ ಇಂದು ₹164 ರೂ. ಆಗಿದ್ದು, ನಿನ್ನೆ ₹161 ರೂ. ಇತ್ತು. ಇಂದು ಒಟ್ಟು ₹3 ರೂ. ಇಳಿಕೆ ಕಂಡಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ದರ ಇಂದು ₹1,312 ರೂ. ಆಗಿದ್ದು, ನಿನ್ನೆ ₹1,288 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹24 ರೂ. ಇಳಿಕೆ ಕಂಡಿದೆ. ಹಾಗೆಯೇ 10 ಗ್ರಾಂ ಬೆಳ್ಳಿ ದರ ಇಂದು ₹1,640 ರೂ., 100 ಗ್ರಾಂ ಬೆಳ್ಳಿ ದರ ₹16,400 ರೂ. ಆಗಿದೆ. 1 ಕಿಲೋ ಬೆಳ್ಳಿ ಬೆಲೆ ₹1,64,000 ರೂ. ಆಗಿದ್ದು, ನಿನ್ನೆಗಿಂತ ಇಂದು ಏರಿಕೆ ಪ್ರಮಾಣದಲ್ಲಿ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+