ನಾಳೆ ದೇಶದೆಲ್ಲೆಡೆ ಧನ್ತೇರಸ್ ಹಬ್ಬ (Dhanteras Festival) ನಡೆಯಲಿದೆ. ಈ ಮಧ್ಯೆ ಭಾರತದಲ್ಲಿ ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ? ಹಬ್ಬದ ಸಂದರ್ಭದಲ್ಲಿ ಹಲವಾರು ಮಂದಿ ಚಿನ್ನ, ಬೆಳ್ಳಿ ಹೂಡಿಕೆ ಮಾಡುವ ಪ್ಲಾನ್ ಮಾಡಿರುತ್ತಾರೆ. ಅಲ್ಲದೇ ಚಿನ್ನದ ಬೆಲೆ ಕಡಿಮೆಯಾಗಬಹುದು (Gold Rate Today) ಎಂದು ನಿರೀಕ್ಷೆಯನ್ನೂ ಇಟ್ಟುಕೊಂಡಿರುತ್ತಾರೆ. ಆದ್ರೆ ಧನ್ತೇರಸ್ ಹಬ್ಬದ ಮುನ್ನಾ ದಿನವೇ ಚಿನ್ನ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ. ಅಂತೂ ದೀಪಾವಳಿ ಸಮಯದಲ್ಲಿ ಚಿನ್ನದ ಬೆಲೆ ಇಳಿಕೆಯಾಗುತ್ತೆ ಎಂದು ನಿರೀಕ್ಷೆಯಿಟ್ಟವರಿಗೇ ಹಬ್ಬದ ಮೊದಲೇ ನಿರಾಸೆ ತಂದಿದೆ. ಹಾಗಿದ್ರೆ ಧನ್ತೇರಸ್ ಮುನ್ನವೇ, ಇಂದು (ಅ.17) ಚಿನ್ನದ ಬೆಲೆ ಹೇಗಿದೆ ಗೊತ್ತಾ? 24K, 22K, 18K ಚಿನ್ನದ ಬೆಲೆ ಇಂದು ಎಷ್ಟಾಗಿದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ ಇಂದು ಹೇಗಿದೆ ಗೊತ್ತಾ 24K ಚಿನ್ನದ ಬೆಲೆ?
24K ಚಿನ್ನದ ಬೆಲೆ ಇತ್ತೀಚೆಗೆ ಭಾರೀ ಏರಿಕೆ ಕಾಣುತ್ತಿದೆ. ದಿನಹೋದಂತೆ ಮಧ್ಯಮ ವರ್ಗದ ಜನರಿಗೆ ಚಿನ್ನವನ್ನು ಮುಟ್ಟಿಯೂ ನೋಡದಂತಾಗಿಬಿಟ್ಟಿದೆ. ಇದೀಗ 24 ಕ್ಯಾರೆಟ್ ಚಿನ್ನದ ಒಂದು ಗ್ರಾಂ ಬೆಲೆ ಇಂದು ದಿಢೀರ್ ಅಂತ ರೂ.333 ಹೆಚ್ಚಾಗಿದೆ. ಅಂದರೆ ಇಂದು ಚಿನ್ನದ ಬೆಲೆ 13,277 ರೂಪಾಯಿ ಆಗಿದ್ದು, ನಿನ್ನೆ ಈ ಬೆಲೆ 12,944 ರೂ. ಇತ್ತು. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 1,06,216 ರೂಪಾಯಿ ಆಗಿದ್ದು, ನಿನ್ನೆ ₹1,03,552 ರೂ. ಇತ್ತು. ಈ ಮೂಲಕ ಒಂದೇ ದಿನದಲ್ಲಿ 8 ಗ್ರಾಂ ಚಿನ್ನದ ಬೆಲೆ 2,664 ರೂ.ನಷ್ಟು ಹೆಚ್ಚಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,32,770 ರೂ. ಗಡಿ ದಾಟಿದ್ದು, ನಿನ್ನೆ 1,29,440 ರೂ. ಇತ್ತು. ಈ ಮೂಲಕ 3,330 ರೂ. ಹೆಚ್ಚಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು ರೂ. 13,27,700 ಆಗಿದ್ದು, ನಿನ್ನೆ 12,94,400 ರೂ. ಇತ್ತು. ಅಂದರೆ ನಿನ್ನೆಗಿಂತ ಇಂದು ಚಿನ್ನದ ಬೆಲೆ ಒಟ್ಟು 33,300 ರೂ. ಹೆಚ್ಚಾಗಿದೆ.
22K ಚಿನ್ನದ ಬೆಲೆ ಹೇಗಿದೆ?
24K ಚಿನ್ನಕ್ಕಿಂತ 22K ಚಿನ್ನದ ಬೆಲೆ ಯಾವತ್ತೂ ಕಡಿಮೆಯೇ ಇರುತ್ತೆ. ಆದ್ರೆ ಇತ್ತೀಚೆಗೆ 22 ಕ್ಯಾರಟ್ ಚಿನ್ನದ ಬೆಲೆಯೂ ಏರಿಕೆಯಾಗುತ್ತಿದೆ. 22K ಚಿನ್ನದ 1 ಗ್ರಾಂ ಬೆಲೆ ಇಂದು 12,170 ರೂ. ಆಗಿದ್ದು, ನಿನ್ನೆ ಇದರ ಬೆಲೆ 11,865 ರೂ. ಇತ್ತು. ಅಂದರೇ ಒಂದೇ ದಿನದಲ್ಲಿ 22ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ ಬರೋಬ್ಬರಿ 305 ರೂ. ಹೆಚ್ಚಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 97,360 ರೂ. ಆಗಿದ್ದು, ನಿನ್ನೆ 94,920 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಚಿನ್ನದ ಬೆಲೆ 2,440 ರೂ.ನಷ್ಟು ಏರಿಕೆ ಕಂಡಿದೆ. 10 ಚಿನ್ನದ ಬೆಲೆ ಇಂದು 1,21,700 ರೂ. ಆಗಿದ್ದು, ನಿನ್ನೆ ಇದೇ ಚಿನ್ನದ ಬೆಲೆ 1,18,650 ರೂ. ಇತ್ತು. ಈ ಮೂಲಕ 10 ಗ್ರಾಂ ಚಿನ್ನದ ಬೆಲೆ ದಿಢೀರ್ ಆಗಿ 3,050 ರೂ. ಹೆಚ್ಚಾಗಿದೆ. 100 ಚಿನ್ನದ ಬೆಲೆಯಲ್ಲೂ 30,500 ರೂ. ಏರಿಕೆಯಾಗಿದ್ದು, ಒಟ್ಟು 12,17,000 ರೂ. ಆಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ ಬೆಲೆ ಸಾಮಾನ್ಯವಾಗಿ ಕಮ್ಮಿಯೇ ಇರುತ್ತೆ. ಆದ್ರೆ ಇದೀಗ 18 ಕ್ಯಾರಟ್ ಚಿನ್ನದಲ್ಲೂ ಭಾರೀ ಏರಿಕೆ ಕಂಡಿದೆ.18 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ನಿನ್ನೆಗೆ ಹೋಲಿಸಿದ್ರೆ ಇಂದು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಂದರೆ ಒಂದು ಗ್ರಾಂ ಚಿನ್ನದ ಬೆಲೆ 9,958 ರೂ.ನಷ್ಟಾಗಿದ್ದು, ನಿನ್ನೆ 9,708 ರೂ. ಇತ್ತು. ಈ ಮೂಲಕ 250 ರೂ. ಹೆಚ್ಚಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 79,664 ರೂಪಾಯಿ ಆಗಿದ್ದು, ನಿನ್ನೆ 77,664 ರೂಪಾಯಿ ಇತ್ತು. ಒಟ್ಟು ರೂ. 2,000 ಹೆಚ್ಚಾಗಿದೆ. ಅದೇ ರೀತಿ 10 ಗ್ರಾಂ ಮತ್ತು 100 ಗ್ರಾಂ ಚಿನ್ನದಲ್ಲೂ ಕ್ರಮವಾಗಿ 2,500 ರೂ. ಮತ್ತು 25,000 ರೂ. ಹೆಚ್ಚಾಗಿದೆ. ಅಂದರೆ 10 ಗ್ರಾಂ ಚಿನ್ನದ ಬೆಲೆ 99,580 ರೂ ಆಗಿದ್ದು, 100 ಗ್ರಾಂ ಚಿನ್ನದ ಬೆಲೆ 9,95,800 ರೂ. ಆಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಇಂದು ಹೇಗಿದೆ?
ಚೆನ್ನೈ: 24K ರೂ. 13,309, 22K ರೂ. 12,200, 18K ರೂ. 10,100
ಮುಂಬೈ: 24K ರೂ. 13,277, 22K ರೂ. 12,170, 18K ರೂ. 9,958
ದೆಹಲಿ: 24K ರೂ. 13,292, 22K ರೂ. 12,185, 18K ರೂ. 9,722
ಕೋಲ್ಕತ್ತಾ: 24K ರೂ. 13,277, 22K ರೂ. 12,170, 18K ರೂ. 9,958
ಬೆಂಗಳೂರು: 24K ರೂ. 13,277, 22K ರೂ. 12,170, 18K ರೂ. 9,958
ಹೈದರಾಬಾದ್: 24K ರೂ. 13,277, 22K ರೂ. 12,170, 18K ರೂ. 9,958
ಕೇರಳ: 24K ರೂ. 13,277, 22K ರೂ. 12,170, 18K ರೂ. 9,958
ಪುಣೆ: 24K ರೂ. 13,277, 22K ರೂ. 12,170, 18K ರೂ. 9,958
ವಡೋದರಾ: 24K ರೂ. 13,282, 22K ರೂ. 12,175, 18K ರೂ. 9,963
ಅಹಮದಾಬಾದ್: 24K ರೂ. 13,282, 22K ರೂ. 12,175, 18K ರೂ. 9,963
ಸ್ಪಾಟ್ ವಿವರ:
ರಾಯಿಟರ್ಸ್ ವರದಿ ಪ್ರಕಾರ, ಅಕ್ಟೋಬರ್ 17, ಶುಕ್ರವಾರ ಚಿನ್ನವು ಪ್ರತೀ ಔನ್ಸ್‌ಗೆ $4,300 ಕ್ಕಿಂತ ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ. ಅಲ್ಲದೇ ಕಳೆದ 17 ವರ್ಷಗಳಲ್ಲಿ ಇದು ಅತ್ಯುತ್ತಮ ವಾರವಾಗಿದೆ, ಏಕೆಂದರೆ ಅಮೆರಿಕದ ಪ್ರಾದೇಶಿಕ ಬ್ಯಾಂಕುಗಳಲ್ಲಿನ ದೌರ್ಬಲ್ಯ, ಜಾಗತಿಕ ವ್ಯಾಪಾರ ಘರ್ಷಣೆಗಳು ಮತ್ತು ಮತ್ತಷ್ಟು ದರ ಕಡಿತದ ಭರವಸೆಗಳು ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಗೆ ಮುಂದಾಗಿದ್ದಾರೆ. ಈ ಮೂಲಕ 0439 GMT ವೇಳೆಗೆ ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ 0.9% ಏರಿಕೆಯಾಗಿ $4,362.39 ಕ್ಕೆ ತಲುಪಿದೆ.
ಬೆಳ್ಳಿ ಬೆಲೆ ಹೇಗಿದೆ?
ಇನ್ನು ಚಿನ್ನದ ಬೆಲೆ ನಿನ್ನೆಗಿಂತ ಇಂದು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದ್ರೆ ಬೆಳ್ಳಿ ದರ ನಿನ್ನೆಗೆ ಹೋಲಿಸಿದ್ರೆ ಇಂದು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅಂದ್ರೆ ನಿನ್ನೆಗಿಂತಲೂ ಇಂದು ಬೆಳ್ಳಿಯನ್ನೂ ಇನ್ನಷ್ಟು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. 1 ಗ್ರಾಂ ಬೆಳ್ಳಿ ಬೆಲೆ ಇಂದು 185 ರೂ. ಆಗಿದ್ದು, ನಿನ್ನೆ 189 ರೂ. ಇತ್ತು. ಈ ಮೂಲಕ ಪ್ರತೀ ಗ್ರಾಂ ಬೆಳ್ಳಿ ಬೆಲೆಯಲ್ಲಿ 4 ರೂ.ನಷ್ಟು ಕಡಿಮೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆಯೂ ಇಂದು ₹1,480 ರೂ.ಗೆ ಇಳಿಕೆಯಾಗಿದೆ. ನಿನ್ನೆ ಬೆಳ್ಳಿ ದರ, 1,512 ರೂ. ಇತ್ತು. ನಿನ್ನೆಗಿಂತ ಇಂದು 32 ರೂ. ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿ ದರ ಇಂದು 1,850 ರೂ. ಆಗಿದ್ದು, ಒಟ್ಟು 40 ರೂ. ಇಳಿಕೆಯಾಗಿದೆ. ಹಾಗೆಯೇ 100 ಬೆಳ್ಳಿ ಬೆಲೆ ಇಂದು 4,00 ರೂ.ನಷ್ಟು ಇಳಿಕೆಯಾಗಿದ್ದು, ಈ ಮೂಲಕ 100 ಗ್ರಾಂ ಬೆಳ್ಳಿ ಬೆಲೆ 18,500 ರೂಪಾಯಿ ಆಗಿದೆ. 1000 ಗ್ರಾಂ ಬೆಲೆ ಇಂದು 1,85,000 ರೂಪಾಯಿಯಷ್ಟಿದ್ದು, ಒಟ್ಟು 4,000 ರೂ. ಇಳಿಕೆಯಾಗಿದೆ.
ಚಿನ್ನದ ಮೇಲಿನ ಹೂಡಿಕೆಯನ್ನು ಸುರಕ್ಷಿತ ಎಂದು ಹಲವರು ಭಾವಿಸುತ್ತಾರೆ. ತಜ್ಞರು ಕೂಡಾ ಚಿನ್ನದ ಮೇಲೆ ಹೂಡಿಕೆ ಮಾಡುವಂತೆ ಸಲಹೆ ನೀಡುತ್ತಾರೆ. ಆದ್ರೆ ಹೂಡಿಕೆದಾರರು, ಖರೀದಿದಾರರು ಮಾರುಕಟ್ಟೆ ಬೆಳವಣಿಗೆಗಳನ್ನು ಗಮನಿಸಿಕೊಳ್ಳುವುದು ಮುಖ್ಯ. ಇತ್ತೀಚೆಗಂತೂ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗುತ್ತಿದ್ದು, ಆದ್ದರಿಂದ ಚಿನ್ನದ ಮೇಲೆ ಹೂಡಿಕೆ, ಖರೀದಿ ಮಾಡಬೇಕು ಎಂದ ಪ್ಲಾನ್ ಮಾಡಿದ್ದವರು ಬೆಲೆ ನೋಡಿಕೊಂಡು ನಿರ್ಧಾರ ತೆಗೆದುಕೊಂಡರೆ ಉತ್ತಮ.
More From GoodReturns

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Bengaluru Gold Rate: ಸತತ ಮೂರನೇ ದಿನವೂ ಏರಿಕೆ ನೋಡಿದ ಚಿನ್ನದ ಬೆಲೆ..ಬೆಂಗಳೂರಲ್ಲಿ ಇಂದಿನ ರೇಟ್ ಎಷ್ಟು?

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Price India: ದಿಢೀರ್ ಏರಿಕೆ ಹಾದಿಯನ್ನೇ ಅನುಸರಿಸಿದ ಚಿನ್ನದ ಬೆಲೆ…25,100 ರೂ. ಏರಿಕೆ!

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Gold Rate Down: ಚಿನ್ನ ಪ್ರಿಯರಿಗೆ ಜಾಕ್ಪಾಟ್! ದಿಢೀರ್ 3,110 ರೂ. ಇಳಿಕೆ

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ



Click it and Unblock the Notifications