ಭಾರತದಲ್ಲಿ (India) ಇಂದು ಬಹುತೇಕ ಮನೆಗಳಲ್ಲಿ ಎಲ್‌ಪಿಸಿ ಗ್ಯಾಸ್ (LPG Gas) ಬಳಕೆಯಲ್ಲಿದೆ. ಸೌದೆ ಒಲೆಯಲ್ಲಿ ಅಡುಗೆ ಮಾಡುವುದನ್ನು ಕಡಿಮೆ ಮಾಡುವ ಉದ್ದೇಶದಿಂದ, ಕೇಂದ್ರ ಸರ್ಕಾರ ಗೃಹಿಣಿಯರ ಅನುಕೂಲಕ್ಕಾಗಿ ಜಾರಿಗೆ ತಂದ ಅಗತ್ಯ ಯೋಜನೆಗಗಳಲ್ಲಿ ಉಜ್ವಲ ಯೋಜನೆಯೂ (Ujjwala Yojana) ಒಂದು. ಈ ಯೋಜನೆಯಿಂದಾಗಿ ಸದ್ಯ ಗ್ರಾಮೀಣ ಭಾಗಗಳಲ್ಲೂ ಇಂದು ಎಲ್‌ಪಿಜಿ ಗ್ಯಾಸ್ ಬಳಸುವಂತಾಗಿದೆ. ಕೈಗೆಟಕುವ ದರದಲ್ಲಿ ಜನಸಾಮಾನ್ಯರಿಗೂ ಸಿಗಬೇಕೆಂಬ ಉದ್ದೇಶದಿಂದ ಸಬ್ಸಿಡಿ ದರ ನೀಡುವ ಮೂಲಕ ಎಲ್‌ಪಿಜಿ ಗ್ಯಾಸ್ ವಿತರಿಸಲಾಗುತ್ತಿತ್ತು. ಆದ್ರೆ ಇದೀಗ ಹೊಸ ವರ್ಷ ಆರಂಭಕ್ಕೂ ಮುನ್ನವೇ ಎಲ್‌ಪಿಜಿ ಗ್ಯಾಸ್ ಬಳಕೆದಾರರಿಗೆ ಬಿಗ್ ಶಾಕ್ ಎದುರಾಗಿದೆ.

ಹೌದು, ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಹಲವು ನಿಯಮಗಳು ಬದಲಾಗುವುದು ಸಾಮಾನ್ಯ. ಆದ್ರೆ ಇದೀಗ ಹೊಸ ವರ್ಷಕ್ಕೂ ಮುನ್ನವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಭಾರೀ ಏರಿಕೆಯಾಗುತ್ತೆ ಎಂದು ನಿರೀಕ್ಷಿಸಲಾಗಿದೆ. ಹಾಗಿದ್ರೆ ನಿಜವಾಗ್ಲೂ ಏರಿಕೆಯಾಗುತ್ತಾ? ಇದಕ್ಕೆ ಕಾರಣವೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಎಲ್‌ಪಿಜಿ ಸಿಲಿಂಡರ್ ಬೆಲೆ ಭಾರೀ ಏರಿಕೆ?
ಕೇಂದ್ರ ಸರ್ಕಾರ ಜಾರಿಗೆ ತಂದ ಉಜ್ವಲ ಯೋಜನೆ ಭಾರೀ ಅನುಕೂಲವಾಗಿದೆ. ಈ ಮೂಲಕ ಕಡಿಮೆ ಬೆಲೆಗೆ ಜನಸಾಮಾನ್ಯರು ಅಂದರೆ ಬಿಪಿಎಲ್ ಕಾರ್ಡ್ ಹೊಂದಿರುವವರು ಗ್ಯಾಸ್ ಸಿಲಿಂಡರ್ ಪಡೆಯಬಹುದಾಗಿತ್ತು. ಆದ್ರೆ ಇದೀಗ ಈ ಸಬ್ಸಿಡಿ ಹಣ ಬರುತ್ತಿಲ್ಲ. ಆದರೆ ಇದೇ ಸಬ್ಸಿಡಿ ಇಂದು ದೊಡ್ಡ ಹೊರೆಯಾಗಿದೆ. ಸಬ್ಸಿಡಿಯಿಂದಾಗಿ ತೈಲ ಮಾರುಕಟ್ಟೆ ಕಂಪನಿಗಳು (OMC) ಆರ್ಥಿಕವಾಗಿ ಹಿನ್ನಡೆ ಮತ್ತು ನಷ್ಟ ಅನುಭವಿಸುತ್ತಿದೆ ಎಂದು ವರದಿಯಾಗಿದೆ. ಅಲ್ಲದೇ ಮುಂದಿನ ತಿಂಗಳಲ್ಲಿ ಸಬ್ಸಿಡಿ ಹಣ ಬಿಡುಗಡೆ ಮಾಡಲು ಸರ್ಕಾರ ಸಿದ್ಧವಾಗಿದೆ.
ಆದರೆ ಕಂಪನಿಗಳಿಗೆ ಸಬ್ಸಿಡಿ ಬರದೇ ಇರುವ ಕಾರಣ ಈ ನಷ್ಟಕ್ಕೆ ಕಾರಣವಾಗಿದೆ. ಆದ್ದರಿಂದ ತೈಲ ಮಾರುಕಟ್ಟೆಗಳು ಎದುರಿಸುತ್ತಿರುವ ಆರ್ಥಿಕ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
LPG ಬಳಕೆದಾರರ ಜೇಬಿಗೆ ಕತ್ತರಿ!
ತೈಲ ಮಾರುಕಟ್ಟೆ ಕಂಪನಿಗಳು ಸದ್ಯ ನಷ್ಟದ ಹಾದಿ ಹಿಡಿದಿರುವುದರಿಂದ ಬೆಲೆ ಏರಿಕೆಯಾಗಬಹುದು ಎಂದು ಹೇಳಲಾಗುತ್ತಿದೆ. ಇದರಿಂದ ಮತ್ತೆ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳಲಿದೆ. ಇನ್ನು ಸರ್ಕಾರ ಕೂಡಾ ಈಗಾಗಲೇ 30 ಸಾವಿರ ಕೋಟಿ ರೂ. ಸಬ್ಸಿಡಿ ಪರಿಹಾರ ನೀಡಲು ಸಜ್ಜಾಗಿದೆ. ಅತ್ತ ಅಮೆರಿಕಾದಿಂದಲೂ ಎಲ್‌ಪಿಜಿ ಆಮದು ಮಾಡಿಕೊಳ್ಳಲು ಭಾರತ ಒಪ್ಪಂದ ಮಾಡಿಕೊಂಡಿದ್ದು, ಇದರಿಂದ ಮತ್ತಷ್ಟು ವೆಚ್ಚವಾಗಲಿದೆ. ಈ ಪರಿಣಾಮ ಗ್ಯಾಸ್ ಸಿಲಿಂಡರ್ ಬೆಲೆ ಗಗನಕ್ಕೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ನಷ್ಟದಲ್ಲಿ ತೈಲ ಮಾರುಕಟ್ಟೆ ಕಂಪನಿಗಳು!
ಎಲ್‌ಪಿಜಿ ಸಬ್ಸಿಡಿಯಿಂದಾಗಿ ಈಗಾಗಲೇ ತೈಲ ಕಂಪನಿಗಳು ನಷ್ಟದಲ್ಲಿದೆ. ಪ್ರಸ್ತುತ, 53,700 ಕೋಟಿ ರೂ. ನಷ್ಟದಲ್ಲಿದೆ ಎನ್ನಲಾಗಿದೆ, ಸೆಪ್ಟೆಂಬರ್ 2025ರ ವೇಳೆಗೆ ಒಟ್ಟು ನಷ್ಟದ ಮೊತ್ತ 53,700 ಕೋಟಿ ರೂ.ಗಳಿಷ್ಟಿತ್ತು. ಆದರೆ ಇದೀಗ ಸರ್ಕಾರ ಸಬ್ಸಿಡಿ ಬಿಡುಗಡೆ ಮಾಡಲು ಸಜ್ಜಾಗಿದ್ದು, ನಷ್ಟ ಸರಿದೂಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಮುಂದಿನ ತಿಂಗಳೊಳಗೆ ಸರ್ಕಾರ ಸಬ್ಸಿಡಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದರಿಂದ ನಷ್ಟದಲ್ಲಿದ್ದ ಕಂಪನಿಗಳಿಗೆ ತಾತ್ಕಾಲಿಕ ಪರಿಹಾರ ಸಿಗಲಿದೆ. ಆದರೂ ಬೆಲೆ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.


Click it and Unblock the Notifications