ಏರ್‌ಟೇಲ್‌, ಜಿಯೋ ರಿಚಾರ್ಜ್‌ ಯೋಜನೆಗಳಲ್ಲಿ ದೊಡ್ಡ ಅಪ್‌ಡೇಟ್‌! ಅಗ್ಗವಾಗಲಿದೆಯಾ ರೀಚಾರ್ಜ್‌ ದರ? ತಿಳಿಯಿರಿ

ಏರ್‌ಟೇಲ್‌ ಮತ್ತು ಜಿಯೋ ಕಂಪನಿಗಳು ತಮ್ಮ ರಿಚಾರ್ಜ್‌ ಯೋಜನೆಗಳಲ್ಲಿ ಹೊಸ ಬದಲಾವಣೆಯನ್ನ ತರಲಿವೆ. ಭಾರತದಲ್ಲಿ ಪ್ರಮುಖ ಟೆಲಿಕಾಂ ಕಂಪನಿಗಳಾಗಿರುವ ಭಾರತಿ ಏರ್‌ಟೆಲ್‌ ಮತ್ತು ರಿಲಯೆನ್ಸ್‌ ಜಿಯೋ ಕಂಪನಿಗಳು ತಾವು ಈಗಾಗಲೇ ನೀಡುತ್ತಿರುವ ರೀಚಾಜ್‌ ಯೋಜನೆಗಳನ್ನ ಪರಿಷ್ಕರಿಸಲಿವೆ. ಹೌದು ಈ ಹಿಂದೆ ಎಲ್ಲರಿಗು ಒಂದೇ ರೀತಿ ಇರುತ್ತಿದ್ದ ರೀಚಾರ್ಜ್‌ ಬೆಲೆಯಲ್ಲಿ ಬದಲಾವಣೇ ಬರಲಿದೆ. ಇನ್ಮೇಲೆ ವಾಯ್ಸ್‌ ಕಾಲ್‌ ಹಾಗು SMSಗಾಗಿಯೇ ಒಂದು ರೀಚಾರ್ಜ್ ಯೋಜನೆಯನ್ನ ಪರಿಚಯಿಸಲಿವೆ.

ಗ್ರಾಹಕರಿಗೆ ರೀಚಾರ್ಜ್ ಬೆಲೆಗಳನ್ನ ಕೈಗೆಟುಕುವ ದರದಲ್ಲಿ ನೀಡುವ ಉದ್ದೇಶದಿಂದಾಗಿ ಎರಡೂ ಟೆಲಿಕಾಂ ಕಂಪನಿಗಳೂ ಕೂಡ ಈ ಹೊಸ ಬದಲಾವಣೇಯನ್ನ ತರಲು ಮುಂದಾಗಿವೆ. ಜೊತೆಗೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಯ ನಿಯಂತ್ರಕ ಪರಿಶೀಲನೆಯನ್ನು ಅನುಸರಿಸಲಿವೆ.

ಏರ್‌ಟೇಲ್‌, ಜಿಯೋ ರಿಚಾರ್ಜ್‌ ಯೋಜನೆಗಳಲ್ಲಿ ದೊಡ್ಡ ಅಪ್‌ಡೇಟ್‌!

ಧ್ವನಿ ಮತ್ತು SMS ಯೋಜನೆಯ ಅಗತ್ಯವೇನು?

ಏರ್‌ಟೆಲ್‌ ಮತ್ತು ಜಿಯೋ ಟೆಲಿಕಾಂ ಕಂಪನಿಗಳು ಎರಡೂ ಕೂಡ ತಮ್ಮ ರಿಚಾರ್ಜ್ ಯೋಜನೆಗಳ ಜೊತೆಗೆ ಡೇಟಾ ಸೇವೆಯನ್ನ ಕೂಡ ಒಳಗೊಂಡಿವೆ. ಆದ್ರೆ ಡೆಟಾ ಸೇವೆಯನ್ನ ಬಳಕೆ ಮಾಡದ ಗ್ರಾಹಕರಿಗೆ ಈ ಎರಡನ್ನೂ ಪಾವತಿಸುವ ಸ್ಥಿತಿ ಎದುರಾಗಿದೆ. ಹೀಗಾಗಿ ಈ ಪ್ರತ್ಯೇಕ ರಿಚಾರ್ಜ್ ಯೋಜನೆ ಅಗತ್ಯವೆಂದು ಎರಡೂ ಟೆಲಿಕಾಂ ಕಂಪನಿಗಳು ಪರಿಗಣಿಸಿವೆ. ಅಲ್ಲದೆ ವಯಸ್ಸಾದ ಬಳಕೆದಾರರು ಮತ್ತು ಗ್ರಾಮೀಣ ಬಳಕೆದಾರರು ಹೆಚ್ಚಿನವರು ಅನಗತ್ಯವಾಗಿ ಈ ಡೇ ಟವನ್ನು ಪಾವತಿಸುತ್ತಿದ್ದಾರೆ. ಇನ್ನು ಇತ್ತೀಚೆಗೆ ಈ ಕುರಿತಾಗಿ ಗ್ರಾಹಕರ ದೂರುಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ವಾಯ್ಸ್‌ ಕಾಲ್‌ ಹಾಗು SMS ಅನ್ನು ಪ್ರತ್ಯೇಕಗೊಳಿಸುವಂತೆ TRAI ಮಾರ್ಗಸೂಚಿಯನ್ನ ಬಿಡುಗಡೆ ಮಾಡಿದೆ. ಹೀಗಾಗಿ ಏರ್‌ಟೆಲ್‌, ಜಿಯೋ ಮತ್ತು ವಡಾಫೋನ್‌-ಐಡಿಯಾ(Vi) ಈ ಯೋಜನೆಗಳನ್ನ ಪರಿಷ್ಕರಿಸಲು ಮುಂದಾಗಿವೆ.

TRAIನ ಇತ್ತೀಚಿನ ಬದಲಾವಣೆಗಳು ಮತ್ತು ಉಡಾವಣೆಗಳನ್ನ ಗಮನಿಸಿದಾಗ, ಕೆಲವು ಸೇವಾ ಪೂರೈಕೆದಾರರು ಧ್ವನಿ ಮತ್ತು SMS ಪ್ಯಾಕ್‌ಗಳನ್ನ ಪ್ರತ್ಯೇಕವಾಗಿ ಆರಂಭಿಸಿದ್ದಾರೆ ಎನ್ನುವುದು ತಿಳಿದುಬಂದಿದೆ. ಅದು ಆರಂಭವಾದ ದಿನಾಂಕದಿಂದ ಕೆಲವೇ ದಿನಗಳಲ್ಲಿ TRAIಗೆ ಇದು ವರದಿಯಾಗಿದೆ. ಇದಲ್ಲದೆ ಇತ್ತೀಚೆಗೆ ಬಿಡುಗಡೆ ಮಾಡಿದ ವೋಚರ್‌ಗಳನ್ನ TRAI ಪರಿಶೀಲನೆ ಮಾಡುತ್ತಿದೆ ಎಂದು ಈಗಾಗಲೇ ಅಸ್ತಿತ್ವದಲ್ಲಿರುವ ನಿಯಂತ್ರಕ ನಿಬಂಧನೆಗಳು ತಿಳಿಸಿವೆ.

ಜಿಯೋದ ಹೊಸ ಯೋಜನೆಗಳ ಬಗ್ಗೆ ತಿಳಿಯಿರಿ

ರಿಲಯನ್ಸ್‌ ಜಿಯೋ ತನ್ನ ಮೊದಲ 1,958 ರೂಗಳ ರೀಚಾರ್ಜ್ ಯೋಜನೆಯ ಬದಲಾಗಿ 1,748ರೂ. ಯೋಜನೆಯನ್ನ ತರ್ತಿದೆ. ಇದು 336 ದಿನಗಳ ಮಾನ್ಯತೆಯನ್ನ ಹೊಂದಿದೆ. ಇದು ಅನಿಯಮಿತ ಧ್ವನಿ ಕರೆಗಳು ಮತ್ತು 3,600 SMS ಜೊತೆಗೆ JioTV, JioCinema ಮತ್ತು JioCloud ನಂತಹ Jio ಅಪ್ಲಿಕೇಶನ್‌ಗಳಿಗೆ ಪ್ರವೇಶ ನೀಡುತ್ತಿದೆ. ಈ ರೀಚಾರ್ಜ್ ಯೋಜನೆಯು ದೀರ್ಘಾವಧಿಯ ಯೋಜನೆಯಾಗಿದೆ. ಆದರೆ ವೆಚ್ಚ-ಪರಿಣಾಮಕಾರಿ ಪರಿಹಾರವನ್ನು ನೀಡುವ ಗುರಿಯನ್ನ ಹೊಂದಿದೆ.

ಇದರ ಜೊತೆಗೆ ಜಿಯೋದ 458 ರೂಗಳ ರೀಚಾರ್ಜ್ ಯೋಜನೆಯ ಬದಲಾಗಿ 448 ರೂಗಳ ಹೊಸ ಯೋಜನೆ ಬರಲಿದೆ. ಇದು 84 ದಿನಗಳ ಮಾನ್ಯತೆಯನ್ನ ಹೊಂದಿದೆ. ಹಾಗೆ ಅನಿಯಮಿತ ಧ್ವನಿ ಕರೆಗಳು ಮತ್ತು 1,000 SMS ಒಳಗೊಂಡಿದೆ. ಜೊತೆಗೆ JioTV, JioCinema, ಮತ್ತು JioCloudನಂತಹ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನ ನೀಡುತ್ತದೆ. ಇದು ಬೆಲೆ ಕಡಿತದ ಹೊರತಾಗಿಯೂ, ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಅಲ್ಲದೆ ಇದು ಅಲ್ಪಾವಧಿಯ ಬಳಕೆದಾರರಿಗೆ ಅದರ ಮನವಿಯನ್ನು ನಿರ್ವಹಿಸುತ್ತದೆ.

ಏರ್‌ಟೆಲ್‌ನ ಹೊಸ ಯೋಜನೆಗಳ ಬಗ್ಗೆ ತಿಳಿಯಿರಿ

ಏರ್‌ಟೆಲ್‌ನ 1,959 ರೂಗಳ ವಾರ್ಷಿಕ ರೀಚಾರ್ಜ್‌ ಯೋಜನೆಯ ಬದಲಾಗಿ 1,849 ರೂಗಳ ಯೋಜನೆಯನ್ನ ತರ್ತಿದೆ. ಇದು 365 ದಿನಗಳ ಮಾನ್ಯತೆ ಹೊಂದಿದ್ದು, ಅನಿಯಮಿತ ಧ್ವನಿ ಕರೆಗಳು ಮತ್ತು 3,600 SMSಗಳನ್ನ ಒಳಗೊಂಡಿದೆ. ಜೊತೆಗೆ ಅಪೊಲೊ 24/7 ಸರ್ಕಲ್ ಸದಸ್ಯತ್ವ ಮತ್ತು ಉಚಿತ ಹಲೋ ಟ್ಯೂನ್ ಸೇವೆ ಸೇರಿದಂತೆ ಉತ್ತಮ ಬಹುಮಾನಗಳನ್ನ ಕೂಡ ಒಳಗೊಂಡಿದೆ. ಹಾಗೆ ಇದು ಜಿಯೋಗಿಂತ ಭಿನ್ನವಾಗಿ, ಯೋಜನೆಯ ಮಾನ್ಯತೆಯನ್ನ ಕಡಿತಗೊಳಿಸಿಲ್ಲ. ಇದು ಮೊದಲಿನಂತೆ ಹೆಚ್ಚು ಸ್ಥಿರವಾದ ದೀರ್ಘಾವಧಿಯ ಕೊಡುಗೆಯಾಗಿದೆ.

ಇತ್ತ ಏರ್‌ಟೆಲ್‌ನ 499 ರೂಗಳ ರೀಚಾರ್ಜ್ ಯೋಜನೆ ಬದಲಾಗಿ 469 ರೂಗಳ ರೀಚಾರ್ಜ್ ಯೋಜನೆಯನ್ನ ತರ್ತಿದೆ. ಇದು 84 ದಿನಗಳ ಮಾನ್ಯತೆಯನ್ನ ಹೊಂದಿದ್ದು, ಅನಿಯಮಿತ ಧ್ವನಿ ಕರೆಗಳು ಮತ್ತು 900 SMSಗಳನ್ನ ಒಳಗೊಂಡಿದೆ. ಜೊತೆಗೆ ಅಪೊಲೊ 24/7 ಸರ್ಕಲ್ ಸದಸ್ಯತ್ವ ಮತ್ತು ಉಚಿತ ಹಲೋ ಟ್ಯೂನ್ ಸೇವೆಯನ್ನ ನೀಡ್ತಿದೆ. ಈ ಪರಿಷ್ಕೃತ ಯೋಜನೆ ಅದೇ ವೈಶಿಷ್ಟ್ಯಗಳ ಜೊತೆಗೆ ಕಡಿಮೆ ವೆಚ್ಚ ರೀಚಾರ್ಜ್ ಯೋಜನೆಯನ್ನ ನೀಡುತ್ತಿದೆ.

ಒಟ್ನಲ್ಲಿ TRAI ಪರಿಶೀಲನೆಯನ್ನ ಮಾಡುತ್ತಿರುವುದರಿಂದ, ಈ ರೀಚಾರ್ಜ್ ಯೋಜನೆಗಳ ಬೆಲೆ ಮತ್ತು ಕೊಡುಗೆಗಳಲ್ಲಿ ಸಾಕಷ್ಟು ಬದಲಾವಣೆಗಳನ್ನ ನಾವು ಮುಂದಿನ ದಿನಗಳಲ್ಲಿ ನೋಡಬಹುದು. ಜೊತೆಗೆ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ, ಧ್ವನಿ-ಕೇಂದ್ರಿತ ಪ್ರಿಪೇಯ್ಡ್ ಯೋಜನೆಗಳನ್ನ ಪಡೆಯಬಹುದಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+