ಸದ್ಯ ಬಿಗ್‌ಬಾಸ್ ಕನ್ನಡ 12ನಲ್ಲಿ ಎಲ್ಲರನ್ನ ನಕ್ಕು ನಗಿಸ್ತಿರೋ ಗಿಲ್ಲಿ ನಟ, ಕರ್ನಾಟಕದ ಜನತೆಗೆ ಫೇವರೇಟ್ ಕಂಟೆಸ್ಟೆಂಟ್. ಎಲ್ಲಿ ನೋಡಿದ್ರೂ ಗಿಲ್ಲಿ ಹವಾ ಮಾತ್ರ ದಿನೇ ದಿನೆ ಜೋರಾಗ್ತಿದೆ. ಟೈಮಿಗೆ ಕರೆಕ್ಟ್ ಆಗಿ ಸ್ಪಾಂಟೇನಿಯಸ್ ಕಾಮಿಡಿ ಮಾಡಿ, ನಗಿಸ್ತಿರೋ ಇವರು ನಿಜಕ್ಕೂ ಅತ್ಯುತ್ತಮ ಕಲಾವಿದ. ಯಾವುದೇ ಬ್ಯಾಗ್ರೌಂಡ್ ಇಲ್ಲದೇ ಕನ್ನಡ ಕಿರುತೆರೆಯಲ್ಲಿ, ರಿಯಾಲಿಟಿ ಶೋಗಳ ಮೂಲಕ ಮೋಡಿ ಮಾಡಿರುವ ಗಿಲ್ಲಿ ಬಗ್ಗೆ ಎಷ್ಟೋ ಜನರಿಗೆ ಪೂರ್ತಿ ಗೊತ್ತಿಲ್ಲ. ಅವ್ರ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳು, ಕಷ್ಟ ಪಟ್ಟು ದುಡಿದು ಅವರು ಮಾಡಿಕೊಂಡಿರುವ ಆಸ್ತಿ ಬಗ್ಗೆ ಇಲ್ಲಿದೆ ಒಂದು ಮಾಹಿತಿ.

ಹೌದು, ಗಿಲ್ಲಿ ನಟ ವೃತ್ತಿಯಲ್ಲಿ ಹಾಸ್ಯ ಕಲಾವಿದರಾಗಿ ಪ್ರಾರಂಭಿಸಿದ್ರು. ಟಿವಿ ಶೋಗಳು, ರಿಯಾಲಿಟಿ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಭಾಗವಹಿಸುವ ಮೂಲಕ ಅವರು ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಈಗ ಬಿಗ್‌ಬಾಸ್ ಕನ್ನಡ 12 ರಿಯಾಲಿಟಿ ಶೋಗೆ ಹೋದಮೇಲಂತೂ ಅವ್ರ ಹವಾ ಜೋರಾಗಿದೆ. ಈ ಶೋ ಮೂಲಕ ಕನ್ನಡ ಜನತೆಗೆ ಗೊತ್ತಾಗಿದ್ದೇನೆಂದರೆ, ಕಾರ್ಯಕ್ರಮಗಳಲ್ಲಷ್ಟೇ ಅಲ್ಲ. ನಿಜ ಜೀವನದಲ್ಲೂ ಜನರನ್ನು ನಕ್ಕಿ ನಗಿಸುತ್ತಾರೆ. ಸುತ್ತ ಮುತ್ತಲಿರುವ ಜನರನ್ನು ಖುಷಿಯಿಂದ ಇಡುತ್ತಾರೆ. ಯಾರೇನೆ ಅಂದರೂ ಮನಸ್ಸಿಗೆ ತೆಗೆದುಕೊಳ್ಳದೇ ಎಲ್ಲವನ್ನೂ ಸ್ಪೋರ್ಟಿವ್ ಆಗಿ ತೆಗೆದುಕೊಳ್ಳುತ್ತಾರೆ. ಈವರ ಈ ನಡೆ ನುಡಿ ಜನರ ಮನ ಗೆದ್ದಿದೆ. ಅಷ್ಟೇ ಅಲ್ಲ ಗಿಲ್ಲಿ ನಟನ ವಿರುದ್ಧ ಯಾರೇ ಮಾತಾಡಿದ್ರು, ಕನ್ನಡ ಜನತೆ ಪಾಲಿಗೆ ಅವರೇ ವಿಲನ್ ಆಗುತ್ತಿದ್ದಾರೆ ಅಂದ್ರೂ ತಪ್ಪಾಗಲ್ಲ.
ಆದಾಯದ ಮೂಲಗಳು:
ಗಿಲ್ಲಿ ನಟ ಮುಖ್ಯವಾಗಿ ಟಿವಿ ಶೋಗಳು, ರಿಯಾಲಿಟಿ ಕಾರ್ಯಕ್ರಮಗಳು ಮತ್ತು ಅತಿಥಿ ಕಾರ್ಯಕ್ರಮಗಳಿಂದ ಆದಾಯ ಗಳಿಸುತ್ತಾರೆ. ಬಿಗ್‌ಬಾಸ್ ಕನ್ನಡ 12 ಶೋದಲ್ಲಿ ಅವರು ವಾರಕ್ಕೆ ಸುಮಾರು ₹50,000 ರಷ್ಟು ಸಂಬಳ ಪಡೆಯುತ್ತಾರೆ ಎಂದು ವರದಿಯಾಗಿವೆ. ಈ ನಿರಂತರ ವೇತನ ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಭಾಗವಹಿಸುವಿಕೆ ಅವರ ಹಣಕಾಸಿನ ಸ್ಥಿತಿಯನ್ನು ಉತ್ತಮವಾಗಿ ರೂಪಿಸಿದೆ.
ಆಸ್ತಿ ಹೂಡಿಕೆಗಳು ಮತ್ತು ಖರೀದಿಗಳು:
ಗಿಲ್ಲಿ ನಟ ತಮ್ಮ ಸಂಪತ್ತಿನ ಭಾಗವಾಗಿ ಪ್ರಮುಖ ಹೂಡಿಕೆಗಳನ್ನು ಮಾಡಿರುವರು. 2025 ರಲ್ಲಿ ಅವರು ₹23 ಲಕ್ಷ ಮೌಲ್ಯದ ಎಂಜಿ ಹೆಕ್ಟಾರ್ ಕಾರು ಖರೀದಿಸಿದ್ದಾರೆ. ಇವರಿಗೆ ಇಂತಹ ಕಾರು ಖರೀದಿಗಳು ಮತ್ತು ಇತರ ಆಸ್ತಿ ಹೂಡಿಕೆಗಳು ಅವರ ಹಣಕಾಸಿನ ಸ್ಥಿತಿಯನ್ನು ದೃಢಪಡಿಸುತ್ತವೆ. ಮನೆ, ಕಾರು, ಮತ್ತು ಆರ್ಥಿಕ ಹೂಡಿಕೆಗಳಿಂದ ಅವರು ತಮ್ಮ ಸಂಪತ್ತಿನ ಮಟ್ಟವನ್ನು ಹೆಚ್ಚಿಸಿದ್ದಾರೆ.
ಅಂದಾಜು ಸಂಪತ್ತು:
2025ರ ಅಂದಾಜು ಪ್ರಕಾರ, ಗಿಲ್ಲಿ ನಟಾ ಅವರ ಸಂಪತ್ತು ಸುಮಾರು 70 ಲಕ್ಷವೆಂದು ತೋರಿಸಲಾಗಿದೆ. ಈ ಅಂಕೆ ನಿಖರ ಹಣಕಾಸಿನ ದಾಖಲೆಗಳ ಆಧಾರವಲ್ಲ, ಬದಲಾಗಿ ಅವರ ವೃತ್ತಿ, ಕಾರ್ಯಕ್ರಮಗಳು ಮತ್ತು ಹೂಡಿಕೆಗಳನ್ನು ಆಧರಿಸಿ ಅವರ ಹಣಕಾಸಿನ ಸ್ಥಿತಿಯ ಒಟ್ಟಾರೆ ದೃಷ್ಟಿಯನ್ನು ನೀಡುತ್ತದೆ. ಬ್ಯಾಂಕ್ ದಾಖಲೆಗಳು ಅಥವಾ ತೆರಿಗೆ ದಾಖಲೆಗಳು ಸಾರ್ವಜನಿಕವಾಗಿ ಲಭ್ಯವಿಲ್ಲ.
ಗಿಲ್ಲಿ ನಟ ಯಶಸ್ಸಿನ ಕಾರಣ:
ಗಿಲ್ಲಿ ನಟ ಅವರು ತಮ್ಮ ಪ್ರತಿಭೆ, ಸಹಜ ಹಾಸ್ಯ ಮತ್ತು ಶ್ರಮದ ಮೂಲಕ ಕನ್ನಡ ಮನರಂಜನಾ ಉದ್ಯಮದಲ್ಲಿ ಪ್ರಭಾವಿ ಸ್ಥಾನ ಪಡೆದಿದ್ದಾರೆ. ಅವರು ಕೇವಲ ಹಾಸ್ಯದಿಂದ ಪ್ರೇಕ್ಷಕರಿಗೆ ಮನೋರಂಜನೆ ನೀಡುವುದಲ್ಲದೆ, ತಮ್ಮ ವೃತ್ತಿ ಜೀವನದಲ್ಲಿ ಬದ್ಧತೆಯಿಂದ ಆದಾಯ ಮತ್ತು ಹೂಡಿಕೆಗಳನ್ನು ನಿರ್ವಹಿಸುವ ಮೂಲಕ ಆರ್ಥಿಕ ದೃಷ್ಟಿಯಿಂದ ಯಶಸ್ಸು ಸಾಧಿಸಿದ್ದಾರೆ.
ಮಳವಳ್ಳಿ ನಟರಾಜ್ ಎಂಬ ಇವರು ಈಗ ಕನ್ನಡ ಜನತೆ ಪಾಲಿಗೆ ಮನೆಮಗ ಗಿಲ್ಲಿನಟ ಆಗಿದ್ದಾರೆ. ಇವರು ಪ್ರತಿಭೆ ಮತ್ತು ಪರಿಶ್ರಮದಿಂದ ಕನ್ನಡ ಮನರಂಜನಾ ಉದ್ಯಮದಲ್ಲಿ ನಿರಂತರವಾಗಿ ಹೆಸರು ಮಾಡುತ್ತಿದ್ದಾರೆ. ಅವರು ಹಾಸ್ಯ ಪ್ರೇಮಿಗಳಿಗೆ ಪ್ರೀತಿ ಮತ್ತು ಮನೋರಂಜನೆಯನ್ನು ನೀಡುವ ಮೂಲಕ ತಮ್ಮ ವೃತ್ತಿಯನ್ನು ದೃಢಪಡಿಸಿದ್ದಾರೆ.
(ಹಕ್ಕುತ್ಯಾಗ: ವ್ಯಕ್ತಿಗತ ವಿಶ್ಲೇಷಕರ ಅಥವಾ ಘಟಕಗಳ ಅಭಿಪ್ರಾಯಗಳು ಮತ್ತು ಶಿಫಾರಸುಗಳು ಮಾತ್ರ ಇಲ್ಲಿ ಸೂಚಿಸಲಾಗಿದೆ ಮತ್ತು ಅವು Goodreturns.in ಅಥವಾ Greynium Information Technologies Private Limited (ಒಟ್ಟಿಗೆ "ನಾವು" ಎಂದು ಉಲ್ಲೇಖಿಸಲಾಗಿದೆ) ಅವರ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಯಾವುದೇ ವಿಷಯದ ನಿಖರತೆ, ಪೂರ್ಣತೆ ಅಥವಾ ನಂಬಿಕಾರ್ಹತೆಯನ್ನು ನಾವು ಖಚಿತಪಡಿಸುವುದಿಲ್ಲ, ಸಮರ್ಥಿಸುತ್ತಿಲ್ಲ ಅಥವಾ ಹೊಣೆಗಾರರಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ_SECURITIES_ ಖರೀದಿ ಅಥವಾ ಮಾರಾಟವನ್ನು ಪ್ರೇರೇಪಿಸುವುದಿಲ್ಲ. ಎಲ್ಲಾ ಮಾಹಿತಿಯು ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ನೀಡಲಾಗಿದ್ದು, ಯಾವುದೇ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಲೈಸೆನ್ಸ್ ಪಡೆದ ಹಣಕಾಸು ಸಲಹೆಗಾರರಿಂದ ಸ್ವತಃ ಪರಿಶೀಲಿಸುವುದು ಅಗತ್ಯ.)
More From GoodReturns

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Vande Bharat: ಸುಂದರ ನೋಟ, ವೇಗದ ಸೇವೆ; ವಂದೇ ಭಾರತ್ ರೈಲಿನ ವಿಶೇಷ ಮಾರ್ಗಗಳಿವು!

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications