ಟೆಲಿವಿಶನ್ ಲೋಕದ ದೈತ್ಯ ರಿಯಾಲಿಟಿ ಶೋ ಬಿಗ್‌ಬಾಸ್...ತನ್ನ 12ನೇ ಸೀಸನ್ ಮುಗಿಸಿದ್ದಾಯ್ತು. ಒಂದು ಟ್ವಿಸ್ಟ್ ಹಾಗೂ ಒಂದಷ್ಟು ಕಿತಾಪತಿಗಳಿಂದ ಕೂಡಿದ ಶೋ ಈಗ, ಒಂದು ಎಮೋಷನಲ್ ಎಂಡಿಂಗ್ ನೋಡಿದೆ. ಕೊನೆಗೂ ಸೀಸನ್ ಮುಗಿದಿದೆ. ಸೀಸನ್ ವಿನ್ನರ್ ಯಾರು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಾಗಿದೆ. ಅಂತೂ ಇಂತು ಬಹುತೇಕ ಕನ್ನಡ ಜನತೆ ಊಹಿಸಿದಂತೆ, ಗಿಲ್ಲಿ ನಟ ಅಲಿಯಾಸ್ ನಟರಾಜ ಗೆದ್ದು ಟ್ರೋಫಿ ಕೈಯಲ್ಲಿಡಿದು ಹೊರ ಬಂದಿದ್ದಾರೆ.

ರನ್ನರ್ ಅಪ್ ರಕ್ಷಿತಾ:
ಇನ್ನು ಫಸ್ಟ್ ರನ್ನರ್ ಅಪ್ ಸ್ಥಾನವನ್ನು ಕರಾವಳಿಯ ಘಾಟಿ ಹುಡುಗಿ ರಕ್ಷಿತಾ ಆವರಿಸಿಕೊಂಡು ಹೊರ ಹೊಮ್ಮಿದ್ದಾರೆ. ಅಂದರೆ ಈ ಸೀಸನ್‌ನ ಎರಡನೇ ಸ್ಥಾನದಲ್ಲಿದ್ದಾರೆ. ಹಾಗೂ ಮೂರನೇ ಸ್ಥಾನಕ್ಕೆ ಬಂದ ಕರವೇ ಹೋರಾಟಗಾರ್ತಿ ಅಶ್ವಿನಿ ಗೌಡ, ಸೆಕೆಂಡ್ ರನ್ನರ್ ಅಪ್ ಆಗಿದ್ದು, ಕಾವ್ಯ ಶೈವ ನಾಲ್ಕನೇ ಸ್ಥಾನ ಪಡೆದು ಮೂರನೇ ರನ್ನರ್ ಅಪ್ ಆಗಿದ್ದಾರೆ. ಟಾಪ್ 5 ಕಂಟೆಸ್ಟೆಂಟ್ ರಘು ಮತ್ತು ಆರನೇ ಸ್ಥಾನವನ್ನು ಧನುಶ್ ಪಡೆದು ಸಂತೃಪ್ತರಾಗಿದ್ದಾರೆ.
6ರ ವಿರುದ್ಧದ 12 ಜಟಾಪಟಿ:
ಇನ್ನು ಸೀಸನ್‌ಗೂ ಮೊದಲೇ ಅನೌನ್ಸ್ ಮಾಡಿದ್ದಂತೆ, ಈ ಸೀಸನ್ ಸ್ವಲ್ಪ ವಿಭಿನ್ನವಾಗಿತ್ತು. ಕಳೆದೆಲ್ಲಾ ಸೀಸನ್ ಒಂದು ಲೆಕ್ಕ, ಈ ಸೀಸನ್ ಒಂದು ಲೆಕ್ಕ ಎಂಬಂತೆ, ಇಲ್ಲಿ ಸಾಕಷ್ಟು ಟ್ವಿಸ್ಟ್ & ಟರ್ನ್‌ಗಳು ಬಂದವು. ಆರಂಭದಲ್ಲಿ ಬಿಗ್‌ಬಾಸ್ ಮನೆಗೆ ಕಾಲಿಟ್ಟ ಸ್ಪರ್ಧಿಗಳ ಪೈಕಿ, 6 ಮಂದಿ ಒಂಟಿ ಮತ್ತುಳಿದ 12 ಮಂದಿ ಇಬ್ಬಿಬ್ಬರಂತೆ ಜಂಟಿಯಾಗಿ ಒಳಗೆ ಬಂದ್ರು. ಅಂದರೆ ಆರು ಮಂದಿ ವಿರುದ್ಧ 12 ಸ್ಪರ್ಧಾಳುಗಳ ಆಟ ಇದಾಗಿತ್ತು.
ಜನಮನ ಗೆದ್ದ ಗಿಲ್ಲಿ:
ಗಿಲ್ಲಿ ನಟರು ಬಿಗ್ ಬಾಸ್ ಮನೆಗೆ ಕಾಲಿಟ್ಟ ದಿನದಿಂದಲೇ ತಮ್ಮ ನೈಜ ವ್ಯಕ್ತಿತ್ವ, ಸ್ಪಷ್ಟ ಅಭಿಪ್ರಾಯಗಳು ಮತ್ತು ತಂತ್ರಮಯ ಆಟದ ಮೂಲಕ ಗಮನ ಸೆಳೆದರು. ಯಾವುದೇ ಪರಿಸ್ಥಿತಿಯಲ್ಲೂ ಆತ್ಮಸ್ಥೈರ್ಯ ಕಳೆದುಕೊಳ್ಳದೆ, ಸಹಸ್ಪರ್ಧಿಗಳೊಂದಿಗೆ ಗೌರವಪೂರ್ಣವಾಗಿ ನಡೆದುಕೊಳ್ಳುವ ಗುಣವು ಅವರಿಗೆ ಪ್ರೇಕ್ಷಕರ ಮೆಚ್ಚುಗೆ ತಂದಿತು. ಕಠಿಣ ಟಾಸ್ಕ್‌ಗಳು ಬಂದಾಗಲೂ ಅವರು ತಮ್ಮ ಶಕ್ತಿ, ಚಾಣಾಕ್ಷತನ ಮತ್ತು ಧೈರ್ಯವನ್ನು ಪ್ರದರ್ಶಿಸಿದರು. ಈ ಮೂಲಕ ಅವರೇ ವಿನ್ನರ್ ಎಂಬುವಂತೆ ಪ್ರತಿಬಿಂಬಿತವಾಗಿತ್ತು.
ಗೆದ್ದ ಸ್ಪರ್ಧಿಗೆ ಏನೆಲ್ಲಾ ಬಹುಮಾನ:
ಮೊದಲ ಸ್ಪರ್ಧಿಯ ಎಲಿಮಿನೇಶನ್ ಘೋಷಣೆಗೆ ಮುನ್ನ, ಬಿಗ್ ಬಾಸ್ ಕನ್ನಡ ಸೀಸನ್ 12ರ ವೇದಿಕೆಯಲ್ಲಿ ನಿರೂಪಕ ಕಿಚ್ಚಾ ಸುದೀಪ್ ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುವ ಮಹತ್ವದ ಮಾಹಿತಿಯನ್ನು ಹಂಚಿಕೊಂಡರು. ಈ ಸೀಸನ್‌ನ ವಿಜೇತರಿಗೆ ದೊರೆಯುವ ಮಹಾ ಬಹುಮಾನವನ್ನು ಅವರು ಅಧಿಕೃತವಾಗಿ ಬಹಿರಂಗಪಡಿಸಿದರು. ಅದರಂತೆ, ಬಿಗ್ ಬಾಸ್ ಕನ್ನಡ 12ರ ಗೆದ್ದ ಸ್ಪರ್ಧಿಗೆ ರೂ. 50 ಲಕ್ಷ ನಗದು ಬಹುಮಾನ ಹಾಗೂ ಮಾರೂತಿ ಸುಜುಕಿ ಕಂಪನಿಯ ಆಕರ್ಷಕ ಕಾರು ನೀಡಲಾಗುತ್ತದೆ ಎಂದು ಸುದೀಪ್ ತಿಳಿಸಿದರು. ಅದರಂತೆಯೇ ಗೆಲುವನ್ನು ಸಾಧಿಸಿದ ಗಿಲ್ಲಿನಟನಿಗೆ ಬಹುಮಾನ ಸಿಕ್ಕಿದೆ. ಇದಿಷ್ಟೇ ಅಲ್ಲ ಗಿಲ್ಲಿ ಆಟ ಮೆಚ್ಚಿದ ನಟ ಕಿಚ್ಚ ಸುದೀಪ್ ಅವರು ಕೂಡ, ಗಿಲ್ಲಿಗೆ ವೈಯಕ್ತಿಕವಾಗಿ 10 ಲಕ್ಷ ರೂ. ಕೊಡುವುದಾಗಿ ಘೋಷಿಸಿದ್ದಾರೆ.
ರಕ್ಷಿತಾಗೆ ಸಿಕ್ಕ ಬಹುಮಾನವೇನು?
ರನ್ನರ್ ಅಪ್ ರಕ್ಷಿತಾಗೆ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಗೋಲ್ಡ್ ವತಿಯಿಂದ, 20 ಲಕ್ಷ ನಗದು ಬಹುಮಾನ ನೀಡಲಾಗಿದೆ. ಇನ್ನು ಜಾರ್ ಆಪ್ ವತಿಯಿಂದ ರಕ್ಷಿತಾಗೆ 5 ಲಕ್ಷ ಬಹುಮಾನ ಸಿಕ್ಕಿದೆ.
ಇದಷ್ಟೇ ಅಲ್ಲದೆ, ಫೈನಲ್ ಹಂತ ತಲುಪಿದ ಸ್ಪರ್ಧಿಗಳಿಗಾಗಿ ಇನ್ನೂ ಹಲವು ವಿಶೇಷ ಮತ್ತು ಸಣ್ಣ ಬಹುಮಾನಗಳನ್ನೂ ವ್ಯವಸ್ಥೆ ಮಾಡಲಾಗಿದೆ ಎಂದು ಕಿಚ್ಚಾ ಸುದೀಪ್ ಹೇಳಿದರು. ಅವುಗಳ ಸಂಪೂರ್ಣ ವಿವರಗಳನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಪ್ರಕಟಿಸಲಾಗುತ್ತದೆ ಎಂದೂ ಅವರು ಸ್ಪಷ್ಟಪಡಿಸಿದರು. ಈ ಎಲ್ಲ ಘೋಷಣೆಗಳು ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಕ್ಷಣಗಳನ್ನು ಇನ್ನಷ್ಟು ರೋಚಕವಾಗಿಸಿವೆ.


Click it and Unblock the Notifications