ಬಿಗ್‌ಬಾಸ್ ಕನ್ನಡ ಸೀಸನ್ 12 (Bigg Boss Kannada Season12) ಅದ್ಧೂರಿಯಾಗಿ ಮೂಡಿ ಬರುತ್ತಿದೆ. ಈ ಬಾರಿಯ ಕನ್ನಡ ಬಿಗ್‌ಬಾಸ್ ಒಂದಲ್ಲಾ ಒಂದು ಕಾರಣದಿಂದಾಗಿ ಸದಾ ಸುದ್ದಿಯಲ್ಲಿದೆ. ಆರಂಭದಲ್ಲಿ ಮಂಗಳೂರಿನ ಕುವರಿ ರಕ್ಷಿತಾ (Rakshitha) ಅವರನ್ನು ಹೊರ ಹಾಕುವ ಮೂಲಕ ಚರ್ಚೆಗೆ ಕಾರಣವಾದ್ರೆ, ನಂತರ ಮಾಲಿನ್ಯದ ಕಾರಣದಿಂದಾಗಿ ಬಿಗ್‌ಬಾಸ್ ಮನೆಗೆ ಬೀಗ ಜಡಿಯಲಾಗಿತ್ತು. ಇದೀಗ ಬಿಗ್‌ಬಾಸ್ ಮೇಲೆ ಆರೋಪದ ಸುರಿಮಳೆಯೇ ಕೇಳಿಬರುತ್ತಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12 ಇದೀಗ ಮತ್ತೆ ವಿವಾದಕ್ಕೆ ಗುರಿಯಾಗಿದೆ. ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ (kichcha Sudeep) ಅವರ ಮೇಲೆಯೇ ದೂರು ನೀಡಲಾಗಿದೆ. ಅಷ್ಟೇ ಅಲ್ಲದೇ ಸ್ಪರ್ಧಿಗಳಾದ ಅಶ್ವಿನಿ ಗೌಡ ಮತ್ತು ರಾಶಿಕಾ ಅವರ ವಿರುದ್ಧವೂ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಸಾಮಾಜಿಕ ಕಾರ್ಯಕರ್ತೆ ಸಂಧ್ಯಾ ಪವಿತ್ರಾ ಎನ್ (Sandhya Pavitra) ದೂರು ಸಲ್ಲಿಸಿದ್ದಾರೆ.
ದೂರು ನೀಡಿದ ಸಾಮಾಜಿಕ ಕಾರ್ಯಕರ್ತೆ
ದೂರಿನಲ್ಲಿ ಬಿಗ್‌ಬಾಸ್‌ನಲ್ಲಾಗುತ್ತಿರುವ ಕೀಳುಮಟ್ಟದ ವರ್ತನೆ, ಜಾತಿ ಆಧಾರಿತ ತಾರತಮ್ಯ ಮತ್ತು ದೈಹಿಕ ಹಲ್ಲೆಯನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಸದ್ಯ ಈ ಬಗ್ಗೆ ಸುದ್ದಿಗಳು ಕೂಡಾ ಹರಿದಾಡುತ್ತಿದೆ.
ಸಂಧ್ಯಾ ಪವಿತ್ರಾ ಅವರ ದೂರಿನ ಪ್ರಕಾರ, ನಿರೂಪಕ ಕಿಚ್ಚ ಸುದೀಪ್ ಒಂದು ಸಂಚಿಕೆಯಲ್ಲಿ ಸ್ಪರ್ಧಿ ರಕ್ಷಿತಾ ಅವರ ಬಗ್ಗೆ 'ಅವಹೇಳನಕಾರಿ ಮತ್ತು ಆಕ್ರಮಣಕಾರಿ' ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರು ನೀಡಲಾಗಿದೆ. ಈ ಮಾತುಗಳ ಧ್ವನಿ ಮತ್ತು ಸ್ವಭಾವ ರಾಷ್ಟ್ರೀಯ ದೂರದರ್ಶನದಲ್ಲಿ ಮಹಿಳೆಯರ ಬಗ್ಗೆ ಅಗೌರವವನ್ನು ತೋರಿಸಲಾಗಿದೆ ಎಂದು ಹೇಳಿದ್ದಾರೆ.
ಸುದೀಪ್ ಅವರಂತಹ ಸೆಲೆಬ್ರೆಟಿಗಳು ಇಂತಹ ಹೇಳಿಕೆಗಳು ವೀಕ್ಷಕರ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಮತ್ತು ಮನರಂಜನಾ ಜಾಗದಲ್ಲಿ ಮಹಿಳೆಯರನ್ನು ಅವಮಾನಿಸುವುದು ಸರಿಯಲ್ಲ ಎಂದು ಕಾರ್ಯಕರ್ತೆ ಅಭಿಪ್ರಾಯಪಟ್ಟಿದ್ದಾರೆ. ಈ ಪರಿಣಾಮ ಬೆಂಗಳೂರು ದಕ್ಷಿಣ ಜಿಲ್ಲಾ ಎಸ್.ಪಿ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.
ಕಿಚ್ಚ ಸುದೀಪ್ ಹೇಳಿದ್ದೇನು?
ಕಳೆದ 12 ಸೀಸನ್‌ಗಳಿಂದ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. ಕಿಚ್ಚ ಸುದೀಪ್ ಅವರ ನಿರೂಪಣಾ ಶೈಲಿಯಿಂದಲೇ ಸದ್ಯ ಬಿಗ್‌ಬಾಸ್ ಭಾರೀ ಜನಮೆಚ್ಚುಗೆಗೆ ಪಾತ್ರವಾಗಿದೆ ಎಂದರೆ ತಪ್ಪಾಗಲಾರದು. ನೂರಾರು ಸ್ಪರ್ಧಿಗಳ ಜೊತೆ ಚರ್ಚೆ ಮಾಡಿರುವ ಸುದೀಪ್ ಅವರು, ಕೋಪ ಬಂದಾಗ ಕ್ಲಾಸ್ ತೆಗೆದುಕೊಂಡಿದ್ದಾರೆ, ಕುಗ್ಗಿದಾಗ ಪ್ರೋತ್ಸಾಹಿಸಿದ್ದಾರೆ, ಗೆದ್ದಾಗ ಬೆನ್ನುತಟ್ಟಿದ್ದಾರೆ. ಅದೇ ನಿರೂಪಣಾ ಶೈಲಿ ಈ ಬಾರಿಯೂ ಮುಂದುವರೆದಿದೆ. ಆದ್ರೆ ಕಳೆದ ವಾರದ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಅವರು ರಕ್ಷಿತಾ ಅವರ ಜೊತೆ ಮಾತನಾಡುವ ಭರದಲ್ಲಿ "ಪಿತ್ತ ನೆತ್ತಿಗೆ ಏರುತ್ತದೆ" ಎಂಬ ಪದಬಳಕೆ ಮಾಡಿದ್ದರು. ಇದೀಗ ಈ ಹೇಳಿಕೆಯನ್ನು ಸಾಮಾಜಿಕ ಕಾರ್ಯಕರ್ತೆ ಸಂಧ್ಯಾ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಶ್ವಿನಿ, ರಿಷಾ ವಿರುದ್ಧವೂ ದೂರು!
ಇದಲ್ಲದೆ, ಬಿಗ್‌ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಅವರ ವಿರುದ್ಧವೂ ದೂರು ನೀಡಿದ್ದಾರೆ. ರಕ್ಷಿತಾ ಅವರನ್ನು ಉದ್ದೇಶಿಸಿ ಜಾತಿ ಆಧಾರಿತ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಅಶ್ವಿನಿ ಗೌಡ, ಎಸ್ ಹಾಗೂ ಸ್ಲಂ ಎಂದು ಬಳಸಿದ್ದಾರೆ. ನಾನು ಈ ಬಗ್ಗೆ ದೂರು ಕೊಟ್ಟಿದ್ದೇನೆ ಎಂದು ಸಂಧ್ಯಾ ಹೇಳಿದ್ದಾರೆ. ಅಷ್ಟೇ ಅಲ್ಲದೇ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ರಿಷಾ ವಿರುದ್ಧವೂ ದೂರು ನೀಡಲಾಗಿದೆ.
ಗಿಲ್ಲಿನಟ ವಿರುದ್ಧವೂ ದೂರು ದಾಖಲು!
ಬಿಗ್‌ಬಾಸ್‌ನಲ್ಲಿ ಸದ್ಯ ಭಾರೀ ಸದ್ದು ಮಾಡುತ್ತಿರುವ ಸ್ಪರ್ಧಿಯೆಂದರೆ ಅದು ಗಿಲ್ಲಿನಟ. ಆದರೆ ಇದೀಗ ಕಾಮಿಡಿ ಕಿಲಾಡಿ ಖ್ಯಾತಿಯ ಗಿಲ್ಲಿನಟ ವಿರುದ್ಧವೂ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿನಟ ಹೆಣ್ಣುಮಕ್ಕಳಿಗೆ ಟಾರ್ಚರ್ ನೀಡುತ್ತಿದ್ದಾರೆ ಎಂದು ಆರೋಪ ಮಾಡಿ, ಕುಶಕಾ ಎಂಬವವರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications