ಭಾರತದಲ್ಲಿ ಅದಾನಿ ,ಟಾಟಾ , ರಿಲಾಯನ್ಸ್ ಸಂಸ್ಥೆಗಳ ಬಹುಕೋಟಿ ಬಿಸಿನೆಸ್ ಗಳಿವೆ, ಈ ಪೈಕಿ ಅಭರಣ ವ್ಯಾಪಾರ ಕೂಡಾ ಒಂದು. ದೇಶದಲ್ಲಿ ತಮ್ಮದೇ ಆದ ಉದ್ಯಮ ಸಾಮ್ರಾಜ್ಯ ಕಟ್ಟಿಕೊಂಡಿರುವ ಇವರೆಲ್ಲರಿಗೂ ಪೈಪೋಟಿ ಕೊಡೋಕೆ ಜಗತ್ತಿನ ಅತಿ ದೊಡ್ಡ ಬ್ರ್ಯಾಂಡ್ ತಯಾರಾಗಿ ನಿಂತಿದ್ದು, ಇದು ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಕಾಲಿಡಲಿದೆ.
ಟರ್ಕಿ ಮೂಲದ ವಜ್ರ ಆಭರಣ ಬ್ರ್ಯಾಂಡ್ "ಝೆನ್ ಡೈಮಂಡ್" ಭಾರತದ ಪ್ರಮುಖ ಮೆಟ್ರೋಪಾಲಿಟನ್ ಪ್ರದೇಶಗಳಾದ ಮುಂಬೈ, ದೆಹಲಿ ಮತ್ತು ಬೆಂಗಳೂರು ಪ್ರವೇಶಿಸಿ ತನ್ನ ಉದ್ಯಮವನ್ನು ಕಾರ್ಯಾರಂಭ ಯೋಜನೆ ರೂಪಿಸುತ್ತಿದೆ. ಯುವಕರು ಮತ್ತು ಮಧ್ಯವಯಸ್ಕ ಗ್ ರಾಹಕರನ್ನು ಗುರಿಯಾಗಿಸಿ ಭಾರತದ ವಿಸ್ತರಿಸುತ್ತಿರುವ ಮಾರುಕಟ್ಟೆಯನ್ನು ಗಮನದಲ್ಲಿರಿಸಿಕೊಂಡು ಆರಂಭದಲ್ಲಿ ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಉದ್ಯಮ ಪ್ರಾರಂಭಿಸಲು ಪ್ಲ್ಯಾನ್ ಮಾಡಿಕೊಂಡಿದೆ.

ಝೆನ್ ಡೈಮಂಡ್ ನಂತರದ ಹಂತಗಳಲ್ಲಿ ಟೈರ್-2 ಮತ್ತು ಟೈರ್-3 ನಗರಗಳಲ್ಲಿ ಬಿಸಿನೆಸ್ ವಿಸ್ತರಿಸಲಿದ್ದು, ಆನ್‌ಲೈನ್ ಮಾತ್ರವಲ್ಲದೇ , ರಿಟೇಲ್ ಸ್ಟೋರ್ ಗಳನ್ನು ತೆರೆಯುವ ಗುರಿಯನ್ನು ಹೊಂದಿದೆ. ಈ ಹೊಸ ಉದ್ಯಮವು ಮುಕೇಶ್ ಅಂಬಾನಿಯವರ ರಿಲಯನ್ಸ್, ಅದಾನಿ ಗ್ರೂಪ್ ಮತ್ತು ಟಾಟಾ ಗ್ರೂಪ್ ಅಡಿಯಲ್ಲಿ ಬರುವ ಆಭರಣ ಕಂಪೆನಿಗಳಿಗೆ ಪೈಪೋಟಿ ನೀಡಲಿದೆ.
"ಝೆನ್ ಡೈಮಂಡ್" ಅನ್ನು ಇಸ್ತಾನ್‌ಬುಲ್‌ನಲ್ಲಿ 2000 ರಲ್ಲಿ ಎಮಿಲ್ ಗುಜೆಲಿಸ್ ಆರಂಭಿಸಿದ್ದು, ಇದು ಪ್ರಪಂಚದಾದ್ಯಂತ ಸುಮಾರು 400 ಮಳಿಗೆಗಳನ್ನು ಹೊಂದಿದೆ. ಝೆನ್ ಡೈಮಂಡ್ ಗ್ರೂಪ್‌ನ ಅಧ್ಯಕ್ಷ ಎಮಿಲ್ ಗುಜೆಲಿಸ್, ಬ್ರ್ಯಾಂಡ್‌ನ ಭಾರತ ಸಾಹಸವನ್ನು ಮುನ್ನಡೆಸಲು, ಡೈಮಂಡ್ ಮತ್ತು ಆಭರಣ ವ್ಯಾಪಾರದಲ್ಲಿ ಮತ್ತು ಏಷ್ಯಾದ ಮಾರುಕಟ್ಟೆ ಬಗ್ಗೆ ಅಗಾಧ ಅನುಭವು ಇರುವ ನೀಲ್ ಸೋನಾವಾಲಾ ಅವರೊಂದಿಗೆ ಕೈಜೋಡಿಸಿದ್ದಾರೆ.

ಉದ್ಯಮಕ್ಕೆ ನೀಲ್ ಸೋನಾವಾಲಾ ಡಿ ಬೀರ್ಸ್ ಗ್ರೂಪ್‌ನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದು ಇದು ವಿಶ್ವದ ಅತಿದೊಡ್ಡ ವಜ್ರ ಗಣಿಗಾರಿಕೆ ಕಂಪನಿಯಾಗಿದೆ. ಇದಲ್ಲದೇ ಹಾಂಗ್ ಕಾಂಗ್, ಚೀನಾ ಮತ್ತು ಆಗ್ನೇಯ ಏಷ್ಯಾದಾದ್ಯಂತ ಆಭರಣ ವಿತರಣಾ ಜಾಲಗಳಲ್ಲಿ ನೀಲ್ ಸೋನಾವಾಲಾ ವ್ಯಾಪಕ ಅನುಭವವನ್ನು ಹೊಂದಿದ್ದಾರೆ. ಝೆನ್ ಡೈಮಂಡ್‌ನ ಭಾರತದ ಬಿಸಿನೆಸ್‌ನಲ್ಲೂ ಪ್ರಮುಖ ಹುದ್ದೆಯನ್ನು ಸೋನಾವಾಲಾ, ನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಮಾತನಾಡಿರುವ ನೀಲ್ ಸೋನಾವಾಲಾ ಅವರು, ಭಾರತದ ಆನ್‌ಲೈನ್ ಖರೀದಿದಾರಿಗೆ ಮತ್ತು ರಿಟೇಲ್ ಮಳಿಗೆಗೆ ಬೇಟಿ ನೀಡುವ ಗ್ರಾಹಕರಿಗೆ ್ "ಅತ್ಯುತ್ತಮ ಗ್ರಾಹಕ ಸೇವೆ" ಝೆನ್ ಡೈಮಂಡ್ ನೀಡಲಿದ್ದು ಅಂತರರಾಷ್ಟ್ರೀಯ ಆಭರಣ ಪ್ರವೃತ್ತಿಗಳಿಗೆ ಪ್ರವೇಶಿಸುವಂತೆ ಭಾರತದಲ್ಲಿ ವಜ್ರದ ಆಭರಣಗಳ ಶಾಪಿಂಗ್ ಅನುಭವವನ್ನು ಪರಿವರ್ತಿಸಲಿದೆ ಎಂದು ಹೇಳಿದ್ದಾರೆ.


Click it and Unblock the Notifications