ಬೆಂಗಳೂರು, ಮಾರ್ಚ್ 24: ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಯಾರಿಗೆ ಗೊತ್ತಿಲ್ಲ ಹೇಳಿ? ಕೈಗಾರಿಕೋದ್ಯಮಿಯಾಗಿರುವ ಆನಂದ್ ಟ್ವಿಟರ್ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಆಕ್ಟಿವ್ ಆಗಿದ್ದು, ಆಗ್ಗಾಗೆ ತಮ್ಮ ಎಕ್ಸ್ ಖಾತೆಯಲ್ಲಿ ಆಗಾಗ ಟ್ವೀಟ್ ಮಾಡುತ್ತಾ, ಸ್ಫೂರ್ತಿದಾಯಕ ಹಾಗೂ ಆಕರ್ಷಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.
ಜೊತೆಗೆ ಭಾರತದ ಮೂಲೆಮೂಲೆಯಲ್ಲಿರುವ ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾರೆ. ಬದುಕಿನ ಪಾಠಗಳ ಮೂಲಕ ಯುವಕರಿಗೆ ಪ್ರೇರಣೆಯಾಗುತ್ತಿದ್ದಾರೆ. ಹೀಗಾಗಿಯೇ ಅವರು ಉದ್ಯಮ ಕ್ಷೇತ್ರದ ಜತೆಜತೆಗೆ ಸಾಮಾಜಿಕ ಜಾಲತಾಣಗಳ ಪ್ರಭಾವಿ ವ್ಯಕ್ತಿಯೂ ಆಗಿದ್ದಾರೆ.

ಆನಂದ್ ಗೋಪಾಲ್ ಮಹೀಂದ್ರಾ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾಗಿದ್ದು, ಇದು ಭಾರತದ ಅತಿದೊಡ್ಡ ಸಂಘಟಿತ ಸಂಸ್ಥೆಗಳಲ್ಲಿ ಒಂದಾಗಿದೆ. ಭಾರತದಲ್ಲಿ ವ್ಯವಹರಿಸುವುದರ ಹೊರತಾಗಿ ಮಹೀಂದ್ರಾ ಗ್ರೂಪ್ 100 ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಬಲ ಅಸ್ತಿತ್ವವನ್ನು ಹೊಂದಿದೆ. ಇಂತಹ ದೈತ್ಯ ಉದ್ಯಮಿ ಪ್ರೀತಿಗಾಗಿ 17 ವರ್ಷದ ಹುಡುಗಿ ಹಿಂದೆ ಬಿದ್ದಿದ್ದ ಸ್ಟೋರಿ ನಿಮಗೆ ಗೊತ್ತಾ?
ಆನಂದ್ ಮಹೀಂದ್ರಾ ಅವರ ಪ್ರೇಮಕಥೆ:
ಆನಂದ್ ಮಹೀಂದ್ರಾ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಗ ತಮ್ಮ ಕಾಲೇಜು ಅಸೈನ್ ಮೆಂಟ್ ಗಾಗಿ ವಿದ್ಯಾರ್ಥಿಗಳೆಲ್ಲಾ ಸೇರಿ ಫಿಲ್ಮ್ ತಯಾರಿಸಬೇಕಾಗಿತ್ತು. ಅವರು ಇದಕ್ಕಾಗಿ ಇಂದೋರ್‌ಗೆ ಬಂದಿದ್ದರು. ಈ ವೇಳೆ ಅನುರಾಧ ಎಂಬ 17 ವರ್ಷದ ಹುಡುಗಿಯ ಪರಿಚಯವಾಯಿತು. ಆಕೆಯ ಕಡೆಗೆ ಆಕರ್ಷಿತರಾಗಿ ಡೇಟಿಂಗ್ ಮಾಡಲಾರಂಭಿಸಿದರು. ಜೀವನ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಇಚ್ಚಿಸಿ ಆಕೆಯೊಂದಿಗೆ ಹೆಚ್ಚಿನ ಸಮಯ ಕಳೆಯಲು ತಮ್ಮ ಸೆಮಿಸ್ಟರ್ ತೆಗೆದುಕೊಳ್ಳದೇ ಇರಲು ನಿರ್ಧರಿಸಿದರು.
ಆನಂದ್‌ಗೆ ಅವರಿಗೆ ಸುಲಭದ ಹೆಜ್ಜೆಯಾಗಿರರಲ್ಲಿಲ್ಲ ಆದರೂ ಅನುರಾಧ ತಮ್ಮ ಉಳಿದ ಜೀವನದ ಭಾಗವಾಗಬೇಕೆಂದು ಮನವರಿಕೆಯಾಗಿ, ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ಮಾಡಿ, ಆನಂದ್ ಮಹೀಂದ್ರಾ ತಮ್ಮ ಗೆಳತಿ ಅನುರಾಧಾಗೆ ಸಿನಿಮಾಶೈಲಿಯಲ್ಲೇ ಲವ್ ಪ್ರಪೋಸ್ ಮಾಡಿದ್ದರು. ತಮ್ಮ ಅಜ್ಜಿಯ ಉಂಗುರದೊಂದಿಗೆ ಪ್ರೀತಿಗಾಗಿ ನಿವೇದಿಸಿಕೊಂಡಾಗ ಅನುರಾದ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದರು.
1985 ಜೂ. 17ರಂದು, ಆನಂದ್ ಮತ್ತು ಅನುರಾಧ ದಾಂಪತ್ಯ ಜೀವನ ಪ್ರವೇಶಿಸಿ ನಂತರ ಅಮೇರಿಕಾಕ್ಕೆ ತೆರಳಿದರು. ಈ ದಂಪತಿಗೆ ದಿವ್ಯಾ ಮತ್ತು ಆಲಿಕಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆನಂದ್ ಅವರು ತಮ್ಮ ಉದ್ಯಮಶೀಲತೆಯ ಪಯಣದಲ್ಲಿ ಪತ್ನಿ ಅನುರಾಧ ಬೆನ್ನೆಲುಬಾಗಿ ನಿಂತಿರುವುದಕ್ಕೆ ಅಗ್ಗಾಗ್ಗೆ ಅವರನ್ನು ಹೊಗಳುತ್ತಿರುತ್ತಾರೆ ಭಾರತದ ಸೆಲೆಬ್ರಿಟಿ ಜೋಡಿಗಳಲ್ಲಿ ಇವರು ಕೂಡಾ ಒಬ್ಬರಾಗಿದ್ದಾರೆ.
ಫೋರ್ಬ್ಸ್ ಪ್ರಕಾರ, ಬಿಲಿಯನೇರ್ ಉದ್ಯಮಿ, ಆನಂದ್ ಮಹೀಂದ್ರಾ ಅವರ ಅಂದಾಜು ನಿವ್ವಳ ಮೌಲ್ಯವು ಸುಮಾರು 2.6 ಬಿಲಿಯನ್ USD ಆಗಿದೆ, ಅಂದರೆ ಭಾರತೀಯ ರೂಪಾಯಿಗಳಲ್ಲಿ ಇದು ರೂ. 26,000 ಕೋಟಿ. ರೂಪಾಯಿ ಆಗಿದೆ. ಫೋರ್ಬ್ಸ್ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಅವರು 90 ನೇ ಸ್ಥಾನದಲ್ಲಿದ್ದರೆ, ಆನಂದ್ ಮಹೀಂದ್ರಾ ಫೋರ್ಬ್ಸ್ ವಿಶ್ವದ ಬಿಲಿಯನೇರ್‌ಗಳ ಪಟ್ಟಿಯಲ್ಲಿ 1434 ನೇ ಸ್ಥಾನದಲ್ಲಿದ್ದಾರೆ.
ಇಂಟರ್ನೆಟ್ ಬಳಕೆದಾರರು ಆನಂದ್ ಮಹೀಂದ್ರಾ ಅವರನ್ನು ಭಾರತದ ಶ್ರೀಮಂತರ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಯಾವಾಗ ಏರುತ್ತೀರಿ ಎಂದು ಪ್ರಶ್ನಿಸಿದ್ದಾಗ ಅವರು "ಸತ್ಯವೆಂದರೆ ನಾನು ಎಂದಿಗೂ ಶ್ರೀಮಂತನಾಗುವುದಿಲ್ಲ. ಏಕೆಂದರೆ ಶ್ರೀಮಂತನಾಗುವುದು ನನ್ನ ಬಯಕೆಯಾಗಿರಲಿಲ್ಲ" ಎಂದು ಎಲ್ಲರ ಹೃದಯವನ್ನು ಗೆಲ್ಲುವ ಪ್ರತಿಕ್ರಿಯೆ ನೀಡಿದ್ದರು.
ದಾನ ದೇಣಿಗೆ ನೀಡುವುದರಲ್ಲಿ ಅತಿ ಹೆಚ್ಚು ತೊಡಗಿಸಿಕೊಂಡಿರುವ ಭಾರತದ ಕೆಲವು ಬಿಲಿಯನೇರ್‌ಗಳಲ್ಲಿ ಕೆಲವರಲ್ಲಿ ಆನಂದ್ ಕೂಡಾ ಒಬ್ಬರಾಗಿದ್ದಾರೆ. ಅನುರಾಧಾ ಮಹೀಂದ್ರಾ ಲಕ್ಸುರಿ ಲೈಫ್ ಸ್ಟೈಲ್ ಮ್ಯಾಗಜೀನ್ ವೆರ್ವ್‌ನ ಸಂಸ್ಥಾಪಕರಾಗಿದ್ದಾರೆ. ಮ್ಯಾನ್ಸ್ ವರ್ಲ್ಡ್ ಮ್ಯಾಗಜೀನ್‌ನ ಸಹ-ಸಂಸ್ಥಾಪಕರಾಗಿದ್ದಾರೆ. ಅನುರಾಧ ಮುಂಬೈನಲ್ಲಿ ಜನಿಸಿದ್ದು, ಮುಂಬೈನ ಪ್ರತಿಷ್ಠಿತ ಸೋಫಿಯಾ ಕಾಲೇಜಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದರು. ಅವರು ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಂವಹನ ಕುರಿತು ಅದ್ಯಯನ ಮಾಡಿದ್ದು ಬಳಿಕ ಪತ್ರಿಕೋದ್ಯಮದ ಮೂಲಕ ತಮ್ಮ ವೃತ್ತಿಪರ ಪ್ರಯಾಣವನ್ನು ಪ್ರಾರಂಭಿಸಿದ್ದರು.
ಆನಂದ್ ಅವರ ಉದ್ಯಮಿಯಾಗಿ ಮಾದರಿಯಾಗಿರುವಂತೆ, ಇಂದು ಅವರ ೪೦ ವರ್ಷಗಳ ಸುದೀರ್ಘ ದಾಂಪತ್ಯ ಜೀವನವೂ ಇಂದಿನ ಜನತೆ ಆದರ್ಶಪ್ರಾಯವಾಗಿದೆ.


Click it and Unblock the Notifications