ಬಿಲಿಯನೇರ್‌ ಸ್ಟ್ರೀಟ್‌: ಬೆಂಗಳೂರಿನ ಈ ಸ್ಥಳ ಆಗರ್ಭ ಶ್ರೀಮಂತರಿಗೆ ನೆಲೆಯಾಗಿದೆ! ಯಾವುದು? ತಿಳಿಯಿರಿ

ಸಿಲಿಕಾನ್‌ ಸಿಟಿ ಬೆಂಗಳೂರು ಎಲ್ಲಾ ವರ್ಗದ ಎಲ್ಲಾ ಭಾಗದ ಜನರಿಗೆ ನೆಲೆಯಾಗಿದೆ. ಎಲ್ಲರಿಗೂ ಜಾಗವನ್ನ ನೀಡಿರುವ ಈ ನಗರದಲ್ಲಿ ಆಗರ್ಭ ಶ್ರೀಮಂತರಿಗೇನು ಕಡಿಮೆ ಇಲ್ಲ. ಐಟಿ ಸಿಟಿಯಾಗಿ ಹೊರಹೊಮ್ಮುತ್ತಿರುವ ಬೆಂಗಳೂರು ಅತೀ ಹೆಚ್ಚು ಶ್ರೀಮಂತರನ್ನ ಕೂಡ ಒಳಗೊಂಡಿದೆ. ಅಲ್ಲದೆ ಬೆಂಗಳೂರಿನ ಈ ನಗರವಂತು ಶ್ರೀಮಂತರ ತಾಣವಾಗಿ ಬಿಟ್ಟಿದೆ. ಅಲ್ಲದೆ ಈ ನಗರಕ್ಕೆ ಬಿಲಿಯನೇರ್‌ ಸ್ಟ್ರೀಟ್‌ ಎಂದೇ ಕರೆಯುತ್ತಾರೆ. ಇನ್ನು ಆ ನಗರ ಯಾವುದು ಎನ್ನುವುದನ್ನು ಇಲ್ಲಿ ನೋಡೋಣ.

ಬೆಂಗಳೂರಿನ ಸ್ಟಾರ್ಟ್‌ಅಪ್‌ ಹಬ್‌ ಆಗಿರುವ ಕೋರಮಂಗಲ ಆಗರ್ಭ ಶ್ರೀಮಂತರ ತಾಣವಾಗಿದೆ. ಹೌದು ಅತ್ಯಂತ ಪ್ರತಿಷ್ಠಿತ ನಗರಗಳಲ್ಲಿ ಒಂದಾಗಿರುವ ಕೋರಮಂಗಲ 3ನೇ ಬ್ಲಾಕ್ ಬಿಲಿಯನೇರ್‌ ಸ್ಟ್ರೀಟ್‌ ಎಂದೇ ಹೆಸರುವಾಸಿಯಾಗಿದೆ. ಸ್ಟಾರ್ಟ್‌ ಅಪ್‌ ಸಂಸ್ಥಾಪಕರಿಂದ ಹಿಡಿದು ಸಿಇಒಗಳು, ರಾಜಕಾರಣಿಗಳು ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಗೆ ನೆಲೆಯಾಗಿದೆ.

ಆಗರ್ಭ ಶ್ರೀಮಂತರಿಗೆ ನೆಲೆಯಾಗಿದೆ ಬೆಂಗಳೂರಿನ ಈ ಜಾಗ!

ಕ್ವೆಸ್ ಕಾರ್ಪ್ ಎಂಡಿ ಅಜಿತ್ ಐಸಾಕ್ ಅವರು ₹ 67.5 ಕೋಟಿಗೆ 10,000 ಚದರ ಅಡಿ ಪ್ಲಾಟ್ ಅನ್ನು ಕೊಂಡುಕೊಂಡಾಗ, ಈ ಪ್ರದೇಶ ಬೆಂಗಳೂರಿನ ರಿಯಲ್ ಎಸ್ಟೇಟ್ ಇತಿಹಾಸದಲ್ಲೇ ದಾಖಲೆಯನ್ನ ಮಾಡುವ ಮೂಲಕ ಪ್ರಸಿದ್ಧಿಯನ್ನ ಪಡೆದಿದೆ.

ಅದಕ್ಕೂ ಹಿಂದೆ ಟಿವಿಎಸ್ ಮೋಟಾರ್ಸ್ ಪ್ರತಿ ಚದರ ಅಡಿಗೆ 68,597 ರೂಗಳನ್ನ ನೀಡಿ ಜಾಗವನ್ನ ಖರೀದಿ ಮಾಡುವ ಮೂಲಕ ದಾಖಲೆಯನ್ನ ಬರೆದಿತ್ತು. ಈ ಅಸಾಧಾರಣ ಬೆಲೆಯಿಂದಾಗಿ ಈ ಪ್ರದೇಶಗಳಿಗೆ ಹೆಚ್ಚಿನ ಬೇಡಿಕೆ ಕೂಡ ಆರಂಭವಾಯಿತು. ತಜ್ಞರು ಹೇಳುವ ಪ್ರಕಾರ, ನಗರದ ವಿಶಾಲ ಮಾರುಕಟ್ಟೆಯ ಪ್ರವೃತ್ತಿಯಿಂದ ಕೋರಮಂಗಲದ ರಿಯಲ್ ಎಸ್ಟೇಟ್ ಬೆಲೆಗಳು ತುಂಬಾ ಕಡಿಮೆ ಪ್ರಭಾವಿತವಾಗಿವೆ ಎನ್ನಲಾಗುತ್ತದೆ.

Housing.comನ ಡೇಟಾದ ಪ್ರಕಾರ ಕೋರಮಂಗಲ 3ನೇ ಬ್ಲಾಕ್‌ ಆಸ್ತಿ ಮೌಲ್ಯಗಳಲ್ಲಿ ಉನ್ನತ ಪ್ರವೃತ್ತಿಯತ್ತ ಸಾಗುತ್ತಿದೆ. ಅಲ್ಲದೆ 2024 ರ ಮೂರನೇ ತ್ರೈಮಾಸಿಕದಲ್ಲಿ ಅಲ್ಲಿನ ಪ್ರದೇಶಗಳ ಬೆಲೆಗಳು ಪ್ರತಿ ಚದರ ಅಡಿಗೆ ಶೇಕಡಾ 9.5 ರಷ್ಟು ಏರಿಕೆಯಾಗಿ 35,000 ಕ್ಕೆ ತಲುಪಿದೆ. ಕಳೆದ ವರ್ಷದ ಹಿಂದೆ ಇದು 32,000 ಆಗಿತ್ತು. ವಿಶೇಷವಾಗಿ ಕೋರಮಂಗಲ 3 ನೇ ಬ್ಲಾಕ್ ಅದರ ಹೆಚ್ಚಿನ ಮೌಲ್ಯಮಾಪನಗಳ ಮೂಲಕ ಮುನ್ನಡೆಸುತ್ತದೆ. ಇಲ್ಲಿರುವ ದೊಡ್ಡ ಫ್ಲಾಟ್‌ಗಳು, ಹಾಗೆ 4,000 ಚದರ ಅಡಿಗಳ ಪ್ರದೇಶಗಳು ಬೆಂಗಳೂರಿನ ಬಿಲಿಯನೇರ್‌ಗಳು ಮತ್ತು ವ್ಯಾಪಾರ ದೈತ್ಯರನ್ನ ಆಕರ್ಷಿಸುತ್ತದೆ.

ಪ್ರಧಾನ ಸ್ಥಳಗಳು ಮತ್ತು ಸೌಕರ್ಯಗಳು

ಈ ಪ್ರದೇಶವು ಐಷಾರಾಮಿ ನಿವಾಸಗಳ ಜೊತೆಗೆ, ಬನ್ನೇರುಘಟ್ಟ ರಸ್ತೆ, ಬೆಳ್ಳಂದೂರು ಮತ್ತು ಎಲೆಕ್ಟ್ರಾನಿಕ್ ಸಿಟಿಯಂತಹ ಪ್ರಮುಖ ಉದ್ಯೋಗ ಕೇಂದ್ರಗಳಿಗೆ ಹತ್ತಿರದಲ್ಲಿದೆ. ಜೊತೆಗೆ ಉನ್ನತ ದರ್ಜೆಯ ಶಾಲೆಗಳು, ಶಾಪಿಂಗ್ ಮಾಲ್‌ಗಳು ಮತ್ತು ದೊಡ್ಡ ದೊಡ್ಡ ಆಸ್ಪತ್ರೆಗಳನ್ನ ಹೊಂದಿದೆ. ಹೀಗಾಗಿ ಈ ಸಂಪರ್ಕ ಬೆಂಗಳೂರಿನ ಶ್ರೀಮಂತರನ್ನ ಹೆಚ್ಚು ಆಕರ್ಷಿಸುತ್ತದೆ.

ಪ್ರಬಾವಿ ನಿವಾಸಿಗಳು

ಪ್ರಖ್ಯಾತ ಜನರಿಗೆ ಇದು ನೆಲೆಯಾಗಿದೆ. ಫ್ಲಿಪ್‌ಕಾರ್ಟ್ ಸಹ-ಸಂಸ್ಥಾಪಕ ಸಚಿನ್ ಬನ್ಸಾಲ್, ಇನ್ಫೋಸಿಸ್ ಸಹ-ಸಂಸ್ಥಾಪಕರಾದ ನಂದನ್ ನಿಲೇಕಣಿ ಮತ್ತು ಕ್ರಿಸ್ ಗೋಪಾಲಕೃಷ್ಣನ್ ಮತ್ತು ನಾರಾಯಣ ಹೆಲ್ತ್‌ನ ಡಾ ದೇವಿ ಶೆಟ್ಟಿ ಸೇರಿದಂತೆ ಪ್ರಮುಖ ವ್ಯಕ್ತಿಗಳು ಈ ಪ್ರದೇಶಗಳಲ್ಲಿ ಮನೆಗಳನ್ನ ಹೊಂದಿದ್ದಾರೆ. ಈ ಪ್ರದೇಶದ ಅಕ್ಕ ಪಕ್ಕ ಇರುವ ಹೆರಿಟೇಜ್ ವಿಲ್ಲಾಗಳು, ಆಧುನಿಕ ಮನೆಗಳನ್ನ ಸಾಮಾನ್ಯವಾಗಿ ಉತ್ತಮ ಮಾದರಿಯ ವಾಸ್ತುಶಿಲ್ಪಿಗಳಿಂದ ವಿನ್ಯಾಸಗೊಳಿಸಲಾಗಿದೆ.

ಹಾಗೆ ಇಲ್ಲಿರುವ ಅನೇಕ ಆಸ್ತಿಗಳು ಖಾಸಗಿ ಉದ್ಯಾನವನಗಳು, ಪೂಲ್‌ಗಳು ಮತ್ತು ಜಿಮ್‌ಗಳು ಸೇರಿದಂತೆ ಐಷಾರಾಮಿ ಸೌಕರ್ಯಗಳನ್ನು ಒಳಗೊಂಡಿವೆ. ಇದರ ಜೊತೆಗೆ ಸೌರ ಫಲಕಗಳು, ಮಳೆನೀರು ಕೊಯ್ಲು ಮುಂತಾದ ಸಮರ್ಥನೀಯ ವೈಶಿಷ್ಟ್ಯಗಳನ್ನ ಇದು ಹೊಂದಿದೆ.

ಅಲ್ಲದೆ ಕೋರಮಂಗಲದ 3ನೇ ಬ್ಲಾಕ್‌ನಲ್ಲಿ ಆಸ್ತಿಯನ್ನು ಹೊಂದುವುದು ಪ್ರತಿಷ್ಠೆಯ ಸಂಕೇತವಾಗಿದೆ. ಇದು ಸಾಮಾಜಿಕ ಸ್ಥಾನಮಾನ ಹಾಗೆ ಯಶಸ್ಸಿನ ಗುರುತಾಗಿದೆ. ಇಲ್ಲಿ ಮನೆಯನ್ನ ಹೊಂದುವುದು ಪ್ರತಿಷ್ಠಿತ ಸಂಕೇತವೆಂದು ಜನರು ಪರಿಗಣಿಸುತ್ತಾರೆ ಎಂದು ಸ್ಥಳೀಯ ಬ್ರೋಕರ್‌ಗಳು ಹೇಳುತ್ತಾರೆ.

ರಿಯಲ್ ಎಸ್ಟೇಟ್ ಏರಿಕೆ

ನೈಟ್ ಫ್ರಾಂಕ್ ಪ್ರಕಾರ ಬೆಂಗಳೂರಿನಲ್ಲಿರುವ ವಸತಿಗಳು ಜುಲೈ-ಸೆಪ್ಟೆಂಬರ್ 2024 ತ್ರೈಮಾಸಿಕದಲ್ಲಿ ಹಿಂದಿನ ವರ್ಷಕ್ಕಿಂತ 10 ಪ್ರತಿಶತದಷ್ಟು ಏರಿಕೆಯಾಗಿವೆ. ಭಾರತದ ಅಗ್ರ ಎಂಟು ನಗರಗಳಿಗೆ ಹೋಲಿಕೆ ಮಾಡಿದ್ರೆ ಈ ನಗರಗಳಲ್ಲಿ ಹೆಚ್ಚು ಏರಿಕೆಯನ್ನ ನಾವು ಕಾಣಬಹುದು.

ಸ್ಕ್ವೇರ್ ಯಾರ್ಡ್‌ಗಳ ಮಾಹಿತಿಯ ಪ್ರಕಾರ ಕೋರಮಂಗಲದಲ್ಲಿ 2024 ರಲ್ಲಿ ಪ್ರತಿ ಚದರ ಅಡಿಗೆ 19,149 ರೂ. ಸರಾಸರಿ ಬೆಲೆಯನ್ನ ಹೊಂದಿತ್ತು. 2023 ರಲ್ಲಿ 13,355 ರಿಂದ ಶೇಕಡಾ 43ರಷ್ಟು ಗಮನಾರ್ಹಾಗಿ ಹೆಚ್ಚಳವಾಗಿದೆ. ಇದರ ಮಧ್ಯೆ, ಬಾಡಿಗೆ ಮನೆಗಳ ಬೆಲೆಗಳು ಏರಿಕೆಯಾಗಿವೆ. 2024ರಲ್ಲಿ ಮಾಸಿಕ ಬಾಡಿಗೆಗಳು 48,000 ರೂಗಳಿಂದ 1,34, 400 ರೂಗಳ ನಡುವೆ ಇದೆ. ಕಳೆದ ವರ್ಷ 49,500 ರಿಂದ - ₹ 90,000 ರೂ. ಏರಿೆಯಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+