ಅಮೆಜಾನ್, ಫ್ಲಿಪ್‌ಕಾರ್ಟ್‌ನ ಇನ್ನೂ ನಂಬಬೇಕಾ..? BIS ದಾಳಿ..ಲಕ್ಷಾಂತರ ಮೌಲ್ಯದ ನಕಲಿ ವಸ್ತುಗಳು ವಶ..!

ಭಾರತದಲ್ಲಿ ಅಮೆಜಾನ್, ಫ್ಲಿಪ್‌ಕಾರ್ಟ್‌ಗಳಂತಹ ಇ-ಕಾಮರ್ಸ್‌ ಕಂಪನಿಗಳು ಬಹು ವ್ಯಾಪಕವಾಗಿ ತನ್ನ ಸೇವೆಗಳನ್ನು ಒದಗಿಸುತ್ತಿವೆ. ಕೋಟ್ಯಂತರ ಜನರು ಅಮೆಜಾನ್, ಫ್ಲಿಪ್‌ಕಾರ್ಟ್‌ಗಳಂತಹ ಶಾಪಿಂಗ್ ಅಪ್ಲಿಕೇಷನ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಹಣ ಉಳಿಸುವ ಉದ್ದೇಶವನ್ನೇ ಬಂಡವಾಳ ಮಾಡಿಕೊಂಡ, ಇವು ಮಾರುಕಟ್ಟೆಯಲ್ಲಿ ಪ್ರಚಲಿತವಾಗಿ ಸೇವೆ ಸಲ್ಲಿಸುತ್ತಿವೆ. ಜನರು ಕೂಡ ಕಡಿಮೆ ಬೆಲೆಯಲ್ಲಿ ಉತ್ತಮ ಉತ್ಪನ್ನಗಳು ಸಿಗುತ್ತವೆ ಎಂದು ಇ-ಕಾಮರ್ಸ್ ವೆಬ್‌ಸೈಟ್‌ಗಳ ಮೇಲೆ ಹೆಚ್ಚು ಡಿಪೆಂಡ್ ಆಗಿದ್ದಾರೆ. ಬೇಕಾದ ಎಲ್ಲಾ ವಸ್ತುಗಳನ್ನು ಕುಳಿತಲ್ಲಿಯೇ ಆರ್ಡರ್ ಮಾಡಬಹುದು. ಉಪ್ಪಿನಿಂದ ಹಿಡಿದು ವಾಹನಗಳವರೆಗೂ ಇವು ಸೇವೆ ಸಲ್ಲಿಸುತ್ತಿವೆ. ಆದರೆ ಜನರ ನಂಬಿಕೆ ಹೊಡೆಯುವ ಕೆಲಸ ಕೊನೆಗೂ ಆಗಿ ಹೋಗಿದೆ.

ಅಮೆಜಾನ್, ಫ್ಲಿಪ್‌ಕಾರ್ಟ್‌ನ ಇನ್ನೂ ನಂಬಬೇಕಾ..?

ಹೌದು, ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ದೆಹಲಿಯ, ದೆಹಲಿಯ ಪ್ರಮುಖ ಇ-ಕಾಮರ್ಸ್ ವಿತರಕರಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ ಗೋಡಾನ್ ಮೇಲೆ ನಡೆಸಿದ ದಾಳಿಯಲ್ಲಿ, ಊಹೆಗೂ ಮೀರಿದ ನಕಾರಾತ್ಮಕ ಫಲಿತಾಂಶ ಸಿಕ್ಕಿದೆ. ಅದೇನೆಂದರೆ ಈ ದಾಳಿಯು ಸುಮಾರು 15 ಗಂಟೆಗಳ ಕಾಲ ನಿರಂತರವಾಗಿ ನಡೆದಿದ್ದು, ISI ಸರ್ಟಿಫಿಕೇಟ್ ಇಲ್ಲದೇ ಇದ್ದರೂ ಕೆಲವು ಬ್ರಾಂಡೆಡ್ ವಸ್ತುಗಳ ಮಾರಾಟವಾಗುತ್ತಿದೆ. ಅದು ಕೂಡ ನಕಲಿ ISI ಗುರುತು ನೀಡಿ..ಹೀಗೆ ನಕಲಿ ಐಎಸ್‌ಐ ಗುರುತು ಹೊಂದಿದ ಸಾವಿರಾರು ಕಳಪೆ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಉತ್ಪನ್ನಗಳು ಹಾಗೂ ಬ್ರಾಂಡೆಡ್ ಹೆಸರಿನಲ್ಲಿ ಜನರನ್ನು ಯಾಮಾರಿಸುತ್ತಿರುವವರಿಗೆ ತಕ್ಕ ಶಾಸ್ತಿಯಾಗಿದೆ.

ನಕಲಿ ISI ಗುರುತಿನ ಮೂಲಕ ಜನರಿಗೆ ಯಾಮಾರಿಸಲಾಗುತ್ತಿದೆ ಎಂಬ ಮಾಹಿತಿ ಈ ಮೂಲಕ ತಿಳಿಯಬಹುದಾಗಿದೆ. ಈ ದಾಳಿಯು ಗ್ರಾಹಕರ ಹಿತರಕ್ಷಣೆಗೆ ಹಾಗೂ ಗುಣಮಟ್ಟದ ಮಾನದಂಡಗಳನ್ನು ಖಚಿತಪಡಿಸುವ ಉದ್ದೇಶದಿಂದ ಜರುಗಿಸಿದ್ದು, ಭಾರತ ಸರ್ಕಾರವು ಗುಣಮಟ್ಟ ನಿಯಂತ್ರಣದ ಮೇಲೆ ಹೆಚ್ಚು ಗಮನ ಹರಿಸುತ್ತಿದೆ.

ವಶಪಡಿಸಿಕೊಂಡ ಉತ್ಪನ್ನಗಳು:

ಬಿಐಎಸ್‌ ಅಧಿಕಾರಿಗಳು ಸುಮಾರು ₹70 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ನಕಲಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅಂದರೆ ಅಧಿಕಾರಿಗಳು ದೆಹಲಿಯ ಮೋಹನ್ ಸಹಕಾರಿ ಕೈಗಾರಿಕಾ ಪ್ರದೇಶದಲ್ಲಿರುವ, ಅಮೆಜಾನ್ ಸೆಲ್ಲರ್ಸ್ ಪ್ರೈವೇಟ್ ಲಿಮಿಟೆಡ್‌ ಗೋಡಾನ್‌ ಮೇಲೆ ದಾಳಿ ಮಾಡಿದರು. ಆಗ ಅಲ್ಲಿ ಕಾನೂನುಬಾಹಿರ ಉತ್ಪನ್ನಗಳ ದೊಡ್ಡ ಪ್ರಮಾಣದಲ್ಲಿರುವ ಸಂಗ್ರಹ ಪತ್ತೆಯಾಯಿತು. ಸುಮಾರು 3,500 ಕ್ಕೂ ಹೆಚ್ಚು ವಸ್ತುಗಳಿಗೆ ISI ಪ್ರಮಾಣ ಪತ್ರವೇ ಇಲ್ಲ. ವಶಪಡಿಸಿಕೊಂಡ ವಸ್ತುಗಳಲ್ಲಿ ಮುಖ್ಯವಾಗಿ ಗೀಸರ್, ಮಿಕ್ಸರ್ ಮತ್ತು ಇತರ ವಿದ್ಯುತ್ ಉಪಕರಣಗಳು ಇದ್ದವು.

ಫ್ಲಿಪ್‌ಕಾರ್ಟ್‌ಗೆ ಸಂಬಂಧಿಸಿದ ಇನ್‌ಸ್ಟಾಕಾರ್ಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಗೋಡಾನ್ ಮೇಲೆ ನಡೆಸಿದ ದಾಳಿಯಲ್ಲೂ ಹಲವು ಅನುಮೋದನೆ ಇಲ್ಲದ ವಸ್ತುಗಳು ಪತ್ತೆಯಾದವು. ಪ್ರಮುಖವಾಗಿ 590 ಜೋಡಿ ಕ್ರೀಡಾ ಪಾದರಕ್ಷೆಗಳು ISI ಪ್ರಮಾಣಪತ್ರವಿಲ್ಲದೆ ಮಾರಾಟಕ್ಕೆ ಸಿದ್ಧಗೊಂಡಿದ್ದವು. ಈ ವಶಪಡಿಸಿಕೊಳ್ಳಲಾದ ಎಲ್ಲಾ ಉತ್ಪನ್ನಗಳ ಒಟ್ಟು ಮೌಲ್ಯ ₹70 ಲಕ್ಷಕ್ಕಿಂತ ಹೆಚ್ಚಾಗಿದೆ.

ISI ಪ್ರಮಾಣಪತ್ರವಿಲ್ಲದ ಉತ್ಪನ್ನಗಳನ್ನು ನೀಡಿದರೆ ಏನು ಕ್ರಮ..?

2016ರ BIS ಕಾಯ್ದೆಯ ಸೆಕ್ಷನ್ 29(3) ಅಡಿಯಲ್ಲಿ ಭಾರತ ಸರ್ಕಾರವು, ಅಡಿಯಲ್ಲಿ ಕಠಿಣ ಕಾನೂನುಗಳನ್ನು ಜಾರಿಗೆ ತಂದಿದೆ. ಇದರ ಅನುಸಾರ ISI ಪ್ರಮಾಣಪತ್ರವಿಲ್ಲದ ಉತ್ಪನ್ನಗಳನ್ನು ತಯಾರಿಸುವುದು, ವಿತರಿಸುವುದು, ಮಾರಾಟ ಮಾಡುವುದು, ಸಂಗ್ರಹಿಸುವುದು ಅಥವಾ ಪ್ರದರ್ಶಿಸುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಾವುದೇ ಕಂಪನಿಗಳು ಅಥವಾ ವ್ಯಾಪಾರಿಗಳು ಈ ನಿಯಮಗಳನ್ನು ಉಲ್ಲಂಘಿಸಿದರೆ, ಜೈಲು ಶಿಕ್ಷೆ ಅಥವಾ ದಂಡ, ಅಥವಾ ಎರಡನ್ನೂ ವಿಧಿಸುವ ಅವಕಾಶವಿದೆ. ಇದು ಗ್ರಾಹಕರಿಗೆ ಸುರಕ್ಷಿತ ಉತ್ಪನ್ನಗಳನ್ನು ಒದಗಿಸಲು ಸರ್ಕಾರದ ನಿರ್ಧಾರಾತ್ಮಕ ಕ್ರಮವಾಗಿದೆ. ಪ್ರಸ್ತುತ, ಭಾರತ ಸರ್ಕಾರವು 769 ವಿವಿಧ ಉತ್ಪನ್ನಗಳಿಗಾಗಿ ಕಡ್ಡಾಯ BIS ಪ್ರಮಾಣೀಕರಣದ ನಿಯಮಗಳನ್ನು ಜಾರಿಗೆ ತಂದಿದೆ. ಆನ್‌ಲೈನ್ ಶಾಪಿಂಗ್ ವೇದಿಕೆಗಳು, ಇ-ಕಾಮರ್ಸ್ ಕಂಪನಿಗಳು ಮತ್ತು ರಿಟೇಲ್ ಮಾರ್ಕೆಟ್‌ಗಳಲ್ಲಿ ಮಾರಾಟವಾಗುವ ಎಲ್ಲಾ ಉತ್ಪನ್ನಗಳು IS ಮಾನದಂಡಗಳಿಗೆ ಅನುಗುಣವಾಗಿರಬೇಕೆಂದು ಸರ್ಕಾರ ಒತ್ತಾಯಿಸುತ್ತಿದೆ.

ಹೀಗಾಗಿ ಭವಿಷ್ಯದಲ್ಲಿ, ಎಲ್ಲಾ ಕಂಪನಿಗಳು ಗುಣಮಟ್ಟದ ಮಾನದಂಡಗಳನ್ನು ಅನುಸರಿಸುವುದು ಮತ್ತು ISI ಪ್ರಮಾಣೀಕರಣ ಹೊಂದಿರುವ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡುವುದು ಅತ್ಯಗತ್ಯವಾಗಿದೆ. ಇದರಿಂದ ಗ್ರಾಹಕರಿಗೆ ಉತ್ತಮ ಸೇವೆಗಳು ಲಭ್ಯವಾಗುವುದರ ಜೊತೆಗೆ, ಭಾರತದ ಮಾರುಕಟ್ಟೆಯ ಗುಣಮಟ್ಟದ ವಿಶ್ವಾಸಾರ್ಹತೆಯು ಹೆಚ್ಚಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+