ಆರ್ಡರ್ ಮಾಡಿದ್ರೆ ಕೇವಲ 30 ನಿಮಿಷಗಳಲ್ಲಿ ಪಿಜ್ಜಾ ಪಡೆಯಬಹುದು, ರುಚಿ-ಶುಚಿಯಾದ ಆಹಾರ ತಯಾರಿಸಲು ಮನೆಗೆ ಬೇಕಾದ ಸಾಮಾಗ್ರಿಯೂ ಥಟ್ ಪಟ್ ಅಂತ ತರಿಸಬಹುದು. ಆದ್ರೇ ಅದೇ ಆರೋಗ್ಯದ ಸಮಸ್ಯೆ ಬಂದಾಗ ಮಾತ್ರ ಅಂಬ್ಯುಲೆನ್ಸ್ ಸರಿಯಾದ ಸಮಯಕ್ಕೆ ಬರಲು ಯಾಕೆ ಸಾಧ್ಯವಿಲ್ಲ.! ಆರೋಗ್ಯದ ವಿಚಾರಕ್ಕೆ ಬಂದಾಗ ಗೋಲ್ಡನ್ ಅವರ್ ಅನ್ನೋದು ಬಹಳ ಮುಖ್ಯವಾಗುತ್ತದೆ. ಆದರೆ ಬಹಳಷ್ಟು ಘಟನೆಗಳನ್ನು ಬೇಕು ಎಂದಾಗ ಅಂಬ್ಯುಲೆನ್ಸ್ ಸೇವೆಗಳು ತರಾತುರಿಯಲ್ಲಿ ಸಿಗೋದೇ ಇಲ್ಲ.
ಭಾರತದಲ್ಲಿ ತುರ್ತು ಸಂದರ್ಭಗಳಲ್ಲಿ ಆ್ಯಂಬುಲೆನ್ಸ್‌ಗೆ ಕರೆಯಿಸಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿದೆ. ಇದು ತುರ್ತು ಸೇವೆಗಳಲ್ಲಿನ ಗಂಭೀರ ಕೊರತೆಯನ್ನು ಎತ್ತಿ ತೋರಿಸುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ, ಪ್ರಮುಖ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ ಆಗಿರುವ ಬ್ಲಿಂಕಿಟ್, ತ್ವರಿತ 10 ನಿಮಿಷಗಳ ಒಳಗೆ ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸುವ ಗುರಿಯೊಂದಿಗೆ ಆ್ಯಂಬುಲೆನ್ಸ್ ಸೇವೆಯನ್ನು ಪ್ರಾರಂಭಿಸಿದೆ. ಬ್ಲಿಂಕಿಟ್‌ನ ಆ್ಯಂಬುಲೆನ್ಸ್ ಸೇವೆಯು 2025 ರ ಜನವರಿ 2 ರಂದು ಗುರುಗ್ರಾಮದಲ್ಲಿ ಅಧಿಕೃತವಾಗಿ ಕಾರ್ಯಾರಂಭ ಮಾಡಿದ್ದು, ಐದು ಆ್ಯಂಬುಲೆನ್ಸ್‌ಗಳು ಸೇವೆ ಆರಂಭಿಸಿವೆ.

ಬ್ಲಿಂಕಿಟ್ ಸಿಇಒ ಅಲ್ಬಿಂದರ್ ದಿಂಡ್ಸಾ ಗುರ್ಗಾಂವ್ ನಿವಾಸಿಗಳಿಗೆ ಈ ಸೇವೆ ಘೋಷಿಸಿದ್ದು ಬ್ಲಿಂಕಿಟ್ ಬಳಕೆದಾರರು ಈಗ ಕೇವಲ 10 ನಿಮಿಷಗಳಲ್ಲಿ ತಮ್ಮ ಮನೆ ಬಾಗಿಲಿಗೆ ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಸೇವೆಗಳನ್ನು ಆರ್ಡರ್ ಮಾಡಿ ಪಡೆಯಬಹುದಾಗಿದೆ.
"ನಮ್ಮ ನಗರಗಳಲ್ಲಿ ವೇಗದ ಮತ್ತು ವಿಶ್ವಾಸಾರ್ಹವಾದ ಆ್ಯಂಬುಲೆನ್ಸ್ ಸೇವೆ ಲಭ್ಯವಾಗುವಂತೆ ಮಾಡುವ ದಿಕ್ಕಿನಲ್ಲಿ ನಾವು ಮೊದಲ ದಿಟ್ಟ ಹೆಜ್ಜೆ ಇಟ್ಟಿದ್ದೇವೆ. ಇಂದಿನಿಂದಲೇ ಗುರುಗ್ರಾಮದಲ್ಲಿ ಐದು ಆ್ಯಂಬುಲೆನ್ಸ್‌ಗಳು ಸೇವೆ ಆರಂಭಿಸಲಿವೆ. ನಾವು ಈ ಸೇವೆಯನ್ನು ಹೆಚ್ಚಿನ ಪ್ರದೇಶಗಳಿಗೆ ವಿಸ್ತರಿಸುತ್ತಿದ್ದಂತೆ, ಬ್ಲಿಂಕಿಟ್ ಅಪ್ಲಿಕೇಶನ್‌ನಲ್ಲಿ ಬೇಸಿಕ್ ಲೈಫ್ ಸಪೋರ್ಟ್ (ಬಿಎಲ್‌ಎಸ್) ಆ್ಯಂಬುಲೆನ್ಸ್ ಬುಕ್ ಮಾಡುವ ಆಯ್ಕೆ ನಿಮಗೆ ಕಾಣಿಸಲಾರಂಭಿಸುತ್ತದೆ" ಎಂದು ಸಿಇಒ ತಮ್ಮ ಟ್ವಿಟರ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಬ್ಲಿಂಕಿಟ್ ಆಂಬ್ಯುಲೆನ್ಸ್ ಸೇವೆಯಲ್ಲಿ ಏನೇನು ಸೌಲಭ್ಯಗಳಿವೆ?
ಬ್ಲಿಂಕಿಟ್ ಹೇಳಿಕೆ ಪ್ರಕಾರ ಬ್ಲಿಂಕಿಟ್ ಅಪ್ಲಿಕೇಶನ್‌ನಲ್ಲಿ ಆಂಬ್ಯುಲೆನ್ಸ್ ಕರೆ ಮಾಡುವ ಬೇಸಿಕ್ ಲೈಫ್ ಸಪೋರ್ಟ್ (ಬಿಎಲ್‌ಎಸ್) ಆಯ್ಕೆಯನ್ನು ಬಳಕೆದಾರರಿಗೆ ನೀಡಲಾಗಿರುತ್ತದೆ. ಈ ಆಂಬ್ಯುಲೆನ್ಸ್‌ಗಳಿಗೆ ಆಮ್ಲಜನಕ ಸಿಲಿಂಡರ್‌ಗಳು, ಎಇಡಿ (ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್), ಸ್ಟ್ರೆಚರ್, ಮಾನಿಟರ್, ಸಕ್ಷನ್ ಯಂತ್ರ ಮತ್ತು ಅಗತ್ಯ ತುರ್ತು ಔಷಧಗಳು ಮತ್ತು ಚುಚ್ಚುಮದ್ದುಗಳು ಸೇರಿದಂತೆ ಅಗತ್ಯ ಜೀವ ಉಳಿಸುವ ಉಪಕರಣಗಳನ್ನು ಒಳಗೊಂಡಿರುತ್ತದೆ. ಅಗತ್ಯವಿರುವವರನ್ನು ಸುರಕ್ಷಿತವಾಗಿ ಸಾಗಿಸಲು ಅವರಿಗೆ ಸ್ಕೂಪ್ ಸ್ಟ್ರೆಚರ್ ಮತ್ತು ಗಾಲಿಕುರ್ಚಿಯನ್ನು ಒದಗಿಸುತ್ತದೆ.
ಪ್ರತಿ ವಾಹನವನ್ನು ಒಬ್ಬ ತರಬೇತಿ ಪಡೆದ ಪ್ಯಾರಾಮೆಡಿಕಲ್ ಸಿಬ್ಬಂದಿ, ಒಬ್ಬ ಸಹಾಯಕ ಮತ್ತು ತರಬೇತಿ ಪಡೆದ ಚಾಲಕರು ನಿರ್ವಹಿಸಲಿದ್ದಾರೆ. ಸದ್ಯ ಈ ಸೇವೆ ಗುರುಗ್ರಾಮದಲ್ಲಿ ಮಾತ್ರ ಲಭ್ಯವಿದ್ದು ಮುಂದೆ ಇದು ಬೇರೆ ಬೇರೆ ನಗರಗಳಿಗೆ ಸೇವೆ ವಿಸ್ತರಿಸಲಿದೆ.
ಸೇವೆಯ ವೆಚ್ಚ ಎಷ್ಟು?
ಈ ಸೇವೆಗೆ ಎಷ್ಟು ವೆಚ್ಚವಾಗಲಿದೆ ಎಂಬುದನ್ನು ಧಿಂದ್ಸಾ ಅವರು ಬಹಿರಂಗಪಡಿಸಿಲ್ಲವಾದರೂ, "ಲಾಭ ಗಳಿಸುವುದೇ ನಮ್ಮ ಗುರಿಯಲ್ಲ. ನಾವು ಈ ಸೇವೆಯನ್ನು ಗ್ರಾಹಕರಿಗೆ ಕೈಗೆಟುಕುವ ವೆಚ್ಚದಲ್ಲಿ ನಿರ್ವಹಿಸುತ್ತೇವೆ ಮತ್ತು ದೀರ್ಘಕಾಲೀನವಾಗಿ ಈ ಪ್ರಮುಖ ಸಮಸ್ಯೆಯನ್ನು ಪರಿಹರಿಸಲು ಹೂಡಿಕೆ ಮಾಡುತ್ತೇವೆ. ಈ ಸೇವೆ ನಮಗೆ ಹೊಸತಾಗಿದೆ ಮತ್ತು ಮುಖ್ಯವಾಗಿದೆ, ಆದ್ದರಿಂದ ನಾವು ಈ ಸೇವೆಯನ್ನು ಎಚ್ಚರಿಕೆಯಿಂದ ನಿರ್ವಹಿಸಿ ಬಳಿಕ ವಿಸ್ತರಿಸುತ್ತಿದ್ದೇವೆ. ಮುಂದಿನ ಎರಡು ವರ್ಷಗಳಲ್ಲಿ ಎಲ್ಲಾ ಪ್ರಮುಖ ನಗರಗಳಿಗೆ ಈ ಸೇವೆಯನ್ನು ವಿಸ್ತರಿಸುವುದು ನಮ್ಮ ಗುರಿಯಾಗಿದೆ" ಎಂದು ಅವರು ಹೇಳಿದ್ದಾರೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಚಿನ್ನದ ಬೆಲೆ ಇಂದು ಏರಿಕೆ? ಖರೀದಿಸುವ ಮುನ್ನ ಇದನ್ನು ನೋಡಿ



Click it and Unblock the Notifications