ದೇಶದ ಪ್ರಖ್ಯಾತ ಫುಡ್ ಡೆಲಿವರಿ ಕಂಪೆನಿಗಳಲ್ಲಿ ಒಂದಾಗಿರುವ ಝೊಮ್ಯಾಟೋದಿಂದ ಬಹುತೇಕ ಹೆಚ್ಚಿನವರು ಫುಡ್ ಆರ್ಡರ್ ಮಾಡಿರಬಹುದು. ಹೊರಗೆ ಹೋಗಬೇಕಾದ ಅನಿವಾರ್ಯತೆ ಇಲ್ಲದೆ ಮನೆಯಲ್ಲೇ ಇದ್ದುಕೊಂಡು ಅಪ್ಲಿಕೇಶನ್ ಮುಲಕ ರೆಸ್ಟೋರೆಂಟ್‌ಗಳಲ್ಲಿ ಫುಡ್ ಮೆನುವನ್ನು ಪರಿಶೀಲಿಸಿ, ನೇರವಾಗಿ ಆಹಾರವನ್ನು ಮನೆಗೆ ತರಿಸಿಕೊಳ್ಳುವ ಪ್ರಕ್ರಿಯೆಯನ್ನು ಝೊಮ್ಯಾಟೊ ನಿರ್ವಹಿಸುತ್ತದೆ. ಸದ್ಯ ಇಲ್ಲಿ ನಾವು ಹೇಳಹೊರಟಿರುವುದು ಝೊಮ್ಯಾಟೋ ಮಾಲಕತ್ವದ ಕ್ವಿಕ್ ಕಾಮರ್ಸ್ ವ್ಯವಸ್ಥೆಯಾಗಿರುವ ಬ್ಲಿಂಕಿಟ್ ಬಗ್ಗೆ. ಕೇವಲ 10 ನಿಮಿಷಗಳಲ್ಲೇ ದಿನಸಿ ಸಾಮಾಗ್ರಿಗಳನ್ನು ಮನೆಗೆ ತರಿಸಿಕೊಳ್ಳುವ ಮೂಲಕ ಬ್ಲಿಂಕಿಟ್ ಈಗಾಗಲೇ ಹೆಚ್ಚಿನವರ ಮನೆಮಾತಾಗಿದೆ. ಸದ್ಯ ಅಧಿಕ ಮೌಲ್ಯಗಳನ್ನು ಹೊಂದಿರುವ ವಸ್ತುಗಳನ್ನು ಕೇವಲ 30 ನಿಮಿಷಗಳಲ್ಲಿ ಮನೆಗೆ ತಲುಪಿಸುವ ಕ್ರಾಂತಿಕಾರಕ ಯೋಜನೆಯನ್ನು ಇದೇ ಝೊಮ್ಯಾಟೊದ ಅಂಗಸಂಸ್ಥೆಯಾದ ಬ್ಲಿಂಕಿಟ್ ಹಾಕಿಕೊಂಡಿದೆ. ಒಂದು ವೇಳೆ ಇದು ಸಾಕಾರಗೊಂಡರೆ ಇದೊಂದು ಮಾರುಕಟ್ಟೆಯಲ್ಲಿ ಕ್ರಾಂತಿ ನಡೆಸಲಿದೆ ಎನ್ನಲಾಗಿದೆ.
ಹೊಸ ಯೋಜನೆಗೆ ಕೈಹಾಕಿದ ಬ್ಲಿಂಕಿಟ್
ಈಗಾಗಲೇ 10 ನಿಮಿಷಗಳಲ್ಲಿ ದಿನಸಿ ವಸ್ತುಗಳನ್ನು ಮನೆಗೆ ತರಿಸಿಕೊಳ್ಳುವ ಮೂಲಕ ಗುರುತಿಸಿಕೊಂಡಿರುವ ಬ್ಲಿಂಕಿಟ್ ಸದ್ಯ ಹೊಸ ಯೋಜನೆಯತ್ತ ಕೈಹಾಕಿದೆ. ಅದರ ಮುಂದಿನ ಯೋಜನೆಯಂತೆ 30 ನಿಮಿಷಗಳಲ್ಲಿ ಹೆಚ್ಚಿನ ಮೌಲ್ಯದ ವಸ್ತುಗಳನ್ನು ಡಿಲಿವರಿ ಮಾಡುವ ಯೋಜನೆಯತ್ತ ಬ್ಲಿಂಕಿಟ್ ಚಿತ್ತ ಹರಿಸಿದೆ ಎನ್ನಲಾಗಿದೆ. ಆದರೆ ಸದ್ಯ ಅತ್ಯಲ್ಪ ಸಮಯದಲ್ಲಿ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳನ್ನು ನಾವು ಕಾಣುತ್ತಿದ್ದು, ಈ ನಡುವೆ ಬ್ಲಿಂಕಿಟ್‌ನ ಯೋಜನೆ ಸಫಲವಾಗಬಹುದೇ ಎಂದು ಮುಂದೆ ತಿಳಿದು ಬರಲಿದೆ. ಇದರ ಮುಂದಿನ ಯೋಜನೆಯಂತೆ ಬ್ಲಿಂಕಿಟ್ ಮುಂದೆ "ಎಕ್ಸ್‌ಪ್ರೆಸ್ ಡಾರ್ಕ್ ಸ್ಟೋರ್ಸ್" ತರಲು ತಯಾರಿ ನಡೆಸುತ್ತಿದೆ.

ಏನಿದು "ಎಕ್ಸ್‌ಪ್ರೆಸ್ ಡಾರ್ಕ್ ಸ್ಟೋರ್ಸ್"?
ಹೆಸರೇ ಹೇಳುವಂತೆ ಅತೀ ವೇಗವಾಗಿ ಪ್ರಮುಖ ವಸ್ತುಗಳನ್ನು ಮನೆಗೆ ತರಿಸುವ ವ್ಯವಸ್ಥೆಯೇ "ಎಕ್ಸ್‌ಪ್ರೆಸ್ ಡಾರ್ಕ್ ಸ್ಟೋರ್ಸ್‌ನ ಗುಣ. ಮೂಲಕ ತ್ವರಿತ ವಾಟರ್ ಹೀಟರ್‌ಗಳು, ಏರ್ ಪ್ಯೂರಿಫೈಯರ್‌ಗಳು, ಆಭರಣಗಳು ಮತ್ತು ಇತರ ಹೆಚ್ಚಿನ ಮೌಲ್ಯದ ವಸ್ತುಗಳನ್ನು ಕೇವಲ 30 ನಿಮಿಷಗಳಲ್ಲಿ ತಲುಪಿಸುವ ಯೋಜನೆಯಾಗಿದೆ. ಸದ್ಯ ಈ ಹೊಸ ಯೋಜನೆಯು ಸದ್ಯ ಕಾರ್ಯನಿರ್ವಹಿಸುತ್ತಿರುವ 10 ನಿಮಿಷಗಳ ಡೆಲಿವರಿ ಯೋಜನೆಗಿಂತ ಭಿನ್ನವಾಗಿದೆ. ಡಾರ್ಕ್ ಸ್ಟೋರ್‌ಗಳು ತ್ವರಿತ ವಾಣಿಜ್ಯದ ನರ ಕೇಂದ್ರಗಳಾಗಿದ್ದು, ಇವುಗಳು 3,000-4,000 ಚದರ ಅಡಿ ಗಾತ್ರದ ಮಿನಿ ಗೋದಾಮುಗಳಾಗಿವೆ. ಸದ್ಯ ಬ್ಲಿಂಕಿಟ್‌ನ ಹೊಸ "ಎಕ್ಸ್‌ಪ್ರೆಸ್ ಡಾರ್ಕ್ ಸ್ಟೋರ್‌ಗಳು ಅದಕ್ಕಿಂತ ಭಿನ್ನವಾಗಿದೆ. ಇವುಗಳು ಸುಮಾರು 7,000 ರಿಂದ 8,000 ಚದರ ಅಡಿಗಳಷ್ಟು ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿರುತ್ತದೆ. ಇದರಿಂದ ಗಾತ್ರದಲ್ಲಿ ದೊಡ್ಡದಾದ ಮತ್ತು ಹೆಚ್ಚಿನ ಸ್ಥಳಾವಕಾಶದ ಅಗತ್ಯವಿರುವ ದೊಡ್ಡ ಉತ್ಪನ್ನಗಳನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ.
ತಯಾರಿ ಈಗಾಗಲೇ ಶುರು
ಇನ್ನು ಬ್ಲಿಂಕಿಟ್‌ನ ಎಕ್ಸ್‌ಪ್ರೆಸ್ ಡಾರ್ಕ್ ಸ್ಟೋರ್‌ಗಳ ತಯಾರಿ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಅಲ್ಲದೆ ಮುಂದಿನ ಹಣಕಾಸು ವರ್ಷದ (FY26) ಮಧ್ಯದಲ್ಲಿ ಬ್ಲಿಂಕಿಟ್ ಯೋಜನೆಗಳು ಆರಂಭವಾಗಲಿದೆ ಎಂದು ಹೇಳಲಾಗಿದೆ. ಕಂಪನಿಯ ಸರಾಸರಿ ಆರ್ಡರ್ ಮೌಲ್ಯವನ್ನು (AOV) ಹೆಚ್ಚಿಸುವುದು ಮತ್ತು ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನೊಂದಿಗೆ ಹೆಚ್ಚು ನೇರವಾಗಿ ಸ್ಪರ್ಧಿಸುವ ಯೋಜನೆಯನ್ನು ಕಂಪೆನಿ ಹೊಂದಿದೆ ಎನ್ನಲಾಗಿದೆ. ಇನ್ನು ಪ್ರತಿಸ್ಪರ್ಧಿ ಸ್ವಿಗ್ಗಿಯ ಇನ್‌ಸ್ಟಾಮಾರ್ಟ್, ಫ್ಲಿಪ್‌ಕಾರ್ಟ್‌ನ ಮಿನ್ಯೂಟ್, ಟಾಟಾದ ಬಿಗ್ ಬಾಸ್ಕೆಟ್ ಹಾಗೂ ಝೆಪ್ಟೊಗೆ ಹೋಲಿಕೆ ಮಾಡಿದರೆ ಬ್ಲಿಂಕಿಟ್‌ನ ಎಕ್ಸ್‌ಪ್ರೆಸ್ ಡಾರ್ಕ್ ಸ್ಟೋರ್‌ಗಳು ಹೆಚ್ಚಿನ ಸರಾಸರಿ ಆರ್ಡರ್ ಮೌಲ್ಯವನ್ನು ಹೊಂದಿರುವುದು ಅದಕ್ಕೆ ದೊಡ್ಡ ಮುನ್ನಡೆ ಎನ್ನಲಾಗಿದೆ.
ಟಾಟಾದ ಬಿಗ್‌ಬಾಸ್ಕೆಟ್-ಬ್ಲಿಂಕಿಟ್ ನಡುವೆ ಸ್ಪರ್ಧೆ
ಟಾಟಾದ ಬಿಗ್‌ಬಾಸ್ಕೆಟ್ ಕಂಪೆನಿಯು 30 ನಿಮಿಷಗಳ ವಿತರಣೆಯ ಕಲ್ಪನೆಯೊಂದಿಗೆ ಹೊಸ ರೀತಿಯಲ್ಲಿ ವ್ಯವಹರಿಸಲು ಮುಂದಾಗಿದೆ. ಈ ಮೂಲಕ ಬ್ಲಿಂಕಿಟ್‌ನೊಂದಿಗೆ ಸ್ಪರ್ಧಿಸುವ ಯೋಜನೆ ಹಾಕಿಕೊಂಡಿದೆ. 30-ನಿಮಿಷಗಳಲ್ಲಿ ದುಬಾರಿ, ಹೆಚ್ಚಿನ ಮೌಲ್ಯದ ಉತ್ಪನ್ನಗಳನ್ನು ತಲುಪಿಸಲು ಟಾಟಾ ಒಡೆತನದ ವ್ಯವಹಾರಗಳಾದ ಕ್ರೋಮಾ ಮತ್ತು ಕ್ಲಿಕ್‌ನಂತಹ ಸ್ಟೋರ್‌ಗಳೊಂದಿಗೆ ಪಾಲುದಾರಿಕೆ ಹೊಂದಲು ಯೋಜಿಸುತ್ತಿದೆ ಎಂದು ಅದರ ಸಿಇಒ ಹರಿ ಮೆನನ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಇನ್ನು 10-ನಿಮಿಷಗಳ ವಿತರಣೆಗಳು ತಮ್ಮ ಉದ್ದೇಶಿತ ಬಳಕೆದಾರರನ್ನು ಪೂರೈಸುತ್ತವೆ. ಆದರೆ ಉದ್ಯಮದ ತಜ್ಞರ ಪ್ರಕಾರ 30-ನಿಮಿಷದ ವಿತರಣೆಗಳು ಒಟ್ಟಾರೆ ತ್ವರಿತ ವಾಣಿಜ್ಯ ಚಟುವಟಿಕೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ. ಯಾಕೆಂದರೆ ಈ ವಿಭಾಗದಲ್ಲಿ ಅತೀ ಹೆಚ್ಚಿನ ಬೆಲೆಯ ಉತ್ಪನ್ನಗಳು ಇರುವುದರಿಂದ ಆರ್ಥಿಕ ಚಟುವಟಿಕೆ ಕೂಡ ಹೆಚ್ಚಾಗುತ್ತದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications