ಬ್ಲೂ ಲೈನ್ ಮೆಟ್ರೋ..ಬೆಂಗಳೂರು ಮೆಟ್ರೋ ಯೋಜನೆಯ ಅತ್ಯಂತ ನಿರ್ಣಾಯಕ ಭಾಗ. ಈ ಮಾರ್ಗವು ನಗರದ ಪೂರ್ವ ಮತ್ತು ಪಶ್ಚಿಮ ಭಾಗಗಳನ್ನು ಸಂಪರ್ಕಿಸುವ ನೂತನ ಮಾರ್ಗವಾಗಿದೆ. ಇದೊಂದು ತಂತ್ರಜ್ಞಾನಾಧಾರಿತ ಸಂಚಾರದ ಮೂಲಕ ಹೊಸ ದಿಕ್ಕು ತರುತ್ತಿರುವ ಯೋಜನೆಯಾಗಿದೆ. ಈ ಬ್ಲೂ ಲೈನ್ ಮೆಟ್ರೋವನ್ನು ಎರಡು ಹಂತಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಹಂತ2A, ಹಂತ2B ಎಂದು ಹೆಸರಿಸಲಾಗಿದೆ. ಈ ಹಂತ2A ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಕೆಆರ್ ಪುರಂ ನಡುವಿನ ಭಾಗವನ್ನು ಒಳಗೊಂಡಿದೆ. ಇದು ಒಟ್ಟು 13 ನಿಲ್ದಾಣಗಳೊಂದಿಗೆ ಔಟರ್ ರಿಂಗ್ ರೋಡ್‌ನ ಐಟಿ ಕಾರಿಡಾರ್ ಪ್ರದೇಶಗಳಿಗೆ ವೇಗದ ಸಂಪರ್ಕ ಕಲ್ಪಿಸುತ್ತದೆ.

ಅಂದಹಾಗೆ, ಬೆಂಗಳೂರು ಅತಿ ವೇಗವಾಗಿ ಬೆಳೆಯುತ್ತಿರುವ ನಗರ. ಐಟಿ ತಾಣವಾಗಿ ಮಾರ್ಪಟ್ಟು ಇಲ್ಲಿ ಉದ್ಯಮದ ಬೆಳವಣಿಗೆ ದಿನೇ ದಿನೆ ಏರಿಕೆಯನ್ನು ನೋಡುತ್ತಿದೆ. ದಿನಕ್ಕೆ ಲಕ್ಷಾಂತರ ಮಂದಿ ತಮ್ಮ ತಮ್ಮ ಕೆಲಸಗಳಿಗೆ ಪ್ರಯಾಣ ಮಾಡುತ್ತಲೇ ಇರುತ್ತಾರೆ. ಹೀಗಾಗಿಯೇ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಇನ್ನು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಎಷ್ಟೇ ವ್ಯಾಪಕವಾಗಿದ್ದರೂ, ಜನರನ್ನು ನಿಯಂತ್ರಿಸಲಾಗುತ್ತಿಲ್ಲ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತಷ್ಟು ಬೇಕೆನ್ನುವ ಮಟ್ಟಕ್ಕೆ ಹೋಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ಯೋಜನೆ ವಿಶೇಷವಾಗಿ ಕಾರ್ಯ ನಿರ್ವಹಿಸುತ್ತಿದೆ. ಈಗಾಗಲೇ ಮೆಟ್ರೋ ಮಾರ್ಗಗಳ ವಿಸ್ತರಣೆ ಕಾರ್ಯ ನಡೆಯುತ್ತಿದೆ. ಸದ್ಯ ನೇರಳೆ ಮಾರ್ಗ, ಹಸಿರು ಮಾರ್ಗ ಕಾರ್ಯ ನಿರ್ವಹಿಸುತ್ತಿದೆ. ಹಳದಿ ಮಾರ್ಗ, ಪಿಂಕ್ ಲೈನ್ ಮೆಟ್ರೋ ಕಾಮಗಾರಿಯೂ ನಡೆಯುತ್ತಿದೆ. ಇದರ ನಡುವೆ ಬ್ಲೂ ಲೈನ್ ಮೆಟ್ರೋ ಸಂಚಾರ ಸೌಕರ್ಯದಲ್ಲಿ ಹೊಸ ಬದಲಾವಣೆ ತರುವ ನಿರೀಕ್ಷೆಯಲ್ಲಿದೆ.
ಎಷ್ಟು ವೆಚ್ಚದ ಯೋಜನೆ ಇದು..?
ಈ ಬ್ಲೂ ಲೈನ್ ಮೆಟ್ರೋ ಮಾರ್ಗದ ಒಟ್ಟು ಉದ್ದ 58.19 ಕಿಲೋಮೀಟರ್ ಆಗಿದೆ. ಹೀಗಾಗಿ ಇದಕ್ಕೆ ಅಂದಾಜು ₹10,584 ಕೋಟಿ ವೆಚ್ಚವನ್ನು ವಿನಿಯೋಗಿಸಲಾಗುತ್ತಿದೆ. ಈ ಯೋಜನೆಯ ನಿರ್ಮಾಣ ಕಾರ್ಯ ಆರಂಭವಾಗಿರುವುದು 2022ರ ಫೆಬ್ರವರಿಯಲ್ಲಿ. ಈ ಯೋಜನೆ 2026ರ ಜೂನ್ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ನೀಲಿ ಮಾರ್ಗದ ಮೆಟ್ರೋ ಎಷ್ಟು ಅವಶ್ಯಕ..?
ನೀಲಿ ಮಾರ್ಗದ ಮೆಟ್ರೋ ಬಹಳ ಅವಶ್ಯಕವಾಗಿದೆ. ಏಕೆಂದರೆ ಇದು ನಗರದ ಪ್ರಮು ಪ್ರದೇಶಗಳಾದ ಕೆ.ಆರ್ ಪುರಂ, ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೂ ನೇರವಾಗಿ ಸಂಪರ್ಕಿಸುವ ಪ್ರಮುಖ ಯೋಜನೆಯಾಗಿದೆ. ಈ ಬ್ಲೂ ಲೈನ್ ಮೆಟ್ರೋದಿಂದ ವಾಹನಗಳ ಒತ್ತಡವನ್ನು ಕಡಿಮೆ ಮಾಡಬಹುದಾಗಿದೆ. ಇದು ಏರ್ ಪೋರ್ಟ್‌ಗೆ ನೇರವಾಗಿ ಸಂಪರ್ಕ ಮಾಡುವುದರಿಂದ, ಏರ್ ಪೋರ್ಟ್‌ಗೆ ತೆರಳುವ ಜನರು ಹೆಚ್ಚಿನ ಸಮಯ ಟ್ರಾಫಿಕ್‌ನಲ್ಲಿ ಕಳೆಯುವ ಬದಲು, ಅತಿ ವೇಗವಾಗಿ ಬ್ಲೂ ಲೈನ್ ಮೆಟ್ರೋ ಮೂಲಕ ವಿಮಾನ ನಿಲ್ದಾಣವನ್ನು ತಲುಪಬಹುದು. ಹೀಗಾಗಿ ಇದು ಅತಿ ಅವಶ್ಯಕವಾಗಿದೆ.
ಹಂತ 2A: ಐಟಿ ಕಾರಿಡಾರ್‌ಗೆ ಸುಲಭ ಸಂಪರ್ಕ:
ಆಗಲೇ ಹೇಳಿದಂತೆ ಹಂತ 2A ಯೋಜನೆಯು ಸಿಲ್ಕ್ ಬೋರ್ಡ್ ಮತ್ತು ಕೆ.ಆರ್ ಪುರಂ ನಡುವಿನ ಭಾಗದಲ್ಲಿ ಸಂಚರಿಸುತ್ತದೆ. ಈ ಭಾಗದಲ್ಲಿ ಒಟ್ಟು 13 ಮೆಟ್ರೋ ನಿಲ್ದಾಣಗಳನ್ನು ನಿರ್ಮಿಸಲಾಗುತ್ತದೆ. ಅಲ್ಲದೇ ಈ ಭಾಗವು ಔಟರ್ ರಿಂಗ್ ರೋಡ್ ಮೇಲೆ ಬಿದ್ದಿರುವ ವೈಟ್‌ಫೀಲ್ಡ್, ಮಾರತಹಳ್ಳಿ, ಮಹದೇವಪುರ, ಬೆಳ್ಳಂದೂರು, ಇಕೋ ಸ್ಪೇಸ್ ಮತ್ತು ಇನೋವೇಷನ್ ಹಬ್ ಇತ್ಯಾದಿ ಐಟಿ ಪ್ರದೇಶಗಳಿಗೆ ಸಂಚಾರ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ಉದ್ಯೋಗಿಗಳಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ. ಹಾಗೆಯೇ ಆರ್ಥಿಕ ಪ್ರಗತಿಗೂ ಇದು ಉತ್ತಮ ಆಯ್ಕೆಯಾಗಿದೆ.
ಹಂತ 2B: ವಿಮಾನ ನಿಲ್ದಾಣ ಸಂಪರ್ಕದ ದಿವ್ಯ ದಾರಿ:
ಇನ್ನು ಆಗಲೇ ಹೇಳಿದಂತೆ ಹಂತ 2B ಯೋಜನರೆಯು ಕೆ.ಆರ್ ಪುರಂ ಮತ್ತು ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಡುವೆ ಸಂಪರ್ಕ ಕಲ್ಪಿಸುತ್ತದೆ. ಬ್ಲೂ ಲೈನ್‌ನ ಈ ಮಾರ್ಗದಲ್ಲಿ ಒಟ್ಟು 17 ಮೆಟ್ರೋ ನಿಲ್ದಾಣಗಳಿರುತ್ತವೆ. ಇದರಿಂದ ನಗರದಲ್ಲಿ ವಾಸ ಮಾಡುತ್ತಿರುವ ಜನರಿಗೆ..ಅದರಲ್ಲೂ ನಗರದ ಮಧ್ಯ ಭಾಗ ವಾಸ ಮಾಡುತ್ತಿರುವ ಜನರು ನೇರವಾಗಿ ವಿಮಾನ ನಿಲ್ದಾಣಕ್ಕೆ ತಲುಪಲು ಸುಲಭವಾಗುತ್ತದೆ. ಹಾಗೆಯೇ ಟ್ಯಾಕ್ಸಿ ಅಥವಾ ಖಾಸಗಿ ವಾಹನ ಬಳಸುವ ಅವಶ್ಯಕತೆಯೂ ಇರುವುದಿಲ್ಲ. ಪ್ರಯಾಣದ ಸಮಯವೂ ಕಡಿಮೆಯಾಗುತ್ತದೆ. ಹಣವೂ ಉಳಿತಾಯವಾಗುತ್ತದೆ.
ಇನ್ನು ಈ ಯೋಜನೆಯ ಮಾಲೀಕತ್ವವನ್ನು ಬೆಂಗಳೂರು ಮೆಟ್ರೋ ರೈಲಯ ನಿಮಗ ಲಿಮಿಟೆಡ್ ವಶದಲ್ಲಿದೆ. ಬಿಎಂಆರ್‌ಸಿಎಲ್ ಕಳೆದ ಹಲವಾರು ವರ್ಷಗಳಿಂದ ಬೆಂಗಳೂರು ಮೆಟ್ರೋ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದು, ಈ ಬ್ಲೂ ಲೈನ್ ಕೂಡ ಅದೇ ಶ್ರೇಣಿಯಲ್ಲಿ ಯಶಸ್ಸು ಗಳಿಸುವ ನಿರೀಕ್ಷೆಯಿದೆ.


Click it and Unblock the Notifications