ಬಹುದಿನಗಳಿಂದ ಕಾಯುತ್ತಿದ್ದ ಮೆಟ್ರೋ ಪ್ರಯಾಣಿಕರಿಗೆ BMRCL ಸಿಹಿ ಸುದ್ದಿಯನ್ನ ನೀಡ್ತಿದೆ. ಜನರೆಲ್ಲ ಬಹು ನಿರೀಕ್ಷೆಯಿಂದ ಕಾಯುತ್ತಿದ್ದ, ಬೆಂಗಳೂರು ವಿಮಾನ ನಿಲ್ದಾಣ ರಸ್ತೆ ಮೆಟ್ರೋ ಜೂನ್ 2026ರೊಳಗೆ ಪೂರ್ಣಗೊಳ್ಳಲಿದೆ ಎಂದು ನಮ್ಮ ಮೆಟ್ರೋ ಮಾಹಿತಿ ನೀಡಿದೆ. ಹೆಬ್ಬಾಳದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗ ಮೆಟ್ರೋ ಕಾಮಗಾರಿ ಪೂರ್ಣಗೊಳ್ಳಲಿದ್ದು, 2026ರೊಳಗೆ ಎಲ್ಲಾ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಇನ್ನು ಬಹು ವರ್ಷಗಳಿಂದ ಬಹುನಿರೀಕ್ಷೆಯ ನಂತರ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗುವ ಮೆಟ್ರೋ ಮಾರ್ಗದ ಕೆಲಸ ಪೂರ್ಣ ಗೊಳ್ಳುತ್ತಿದೆ. ಈ ಮೂಲಕ ಜನರ ಕನಸನ್ನ ಪೂರ್ಣಗೊಳಿಸುವಲ್ಲಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಯಶಸ್ವಿಯಾಗಿದ್ದು, ಮುಂಬರುವ 2026ರೊಳಗೆ ಸಾರ್ವಜನಿಕರ ಸೇವೆಗೆ ತೆರೆಯುವ ನಿರೀಕ್ಷೆಯಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಎಲ್) ನೇರ ಮೆಟ್ರೋ ಸಂಪರ್ಕವನ್ನು ಕಲ್ಪಿಸಲು ಬೆಂಗಳೂರು ಸಜ್ಜಾಗಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಹೆಬ್ಬಾಳದಿಂದ ವಿಮಾನ ನಿಲ್ದಾಣದವರೆಗಿನ ನಮ್ಮ ಮೆಟ್ರೋ ಮಾರ್ಗವನ್ನು ಸುಮಾರು 18 ತಿಂಗಳುಗಳಲ್ಲಿ ಪೂರ್ಣಗೊಳಿಸಲಿದೆ. ಜೂನ್ 2026ರೊಳಗೆ ಸಾರ್ವಜನಿಕ ಬಳಕೆಗೆ ಗುರಿಪಡಿಸಲಾಗಿದೆ.
37 ಕಿಲೋಮೀಟರ್ ವ್ಯಾಪ್ತಿಯನ್ನು ಒಳಗೊಂಡಂತೆ ಕೆಆರ್ ಪುರಂನಿಂದ ವಿಮಾನ ನಿಲ್ದಾಣದವರೆಗೆ ಈ ಯೋಜನೆಗೆ ಅಂದಾಜು ರೂ. 9,616.51 ಕೋಟಿ ಮೊತ್ತ ವೆಚ್ಚವಾಗಿದೆ. ಒಮ್ಮೆಇದೆ ಕಾರ್ಯಚರಣೆ ಪೂರ್ಣಗೊಂಡ ನಂತರ, ಈ ಮಾರ್ಗದಲ್ಲಿ ವಿಮಾನ ನಿಲ್ದಾಣಕ್ಕೆ ಹಾಗೆ ಅಲ್ಲಿಂದ ಬೇರೆಡೆಗೆ ಪ್ರಯಾಣ ಮಾಡುವವರಿಗೆ ಪ್ರಯಾಣದ ಅನುಭವವನ್ನು ಹೆಚ್ಚು ಸುಗಮಗೊಳಿಸುತ್ತದೆ. ಅಲ್ಲದೆ ಈ ಮೆಟ್ರೋ ಮಾರ್ಗವು 17 ಮೆಟ್ರೋ ನಿಲ್ದಾಣಗಳನ್ನು ಒಳಗೊಂಡಿದೆ ಜೊತೆಗೆ ಎತ್ತರದ ಮತ್ತು ಭೂಗತ ವಿಭಾಗಗಳ ಮಿಶ್ರಣವನ್ನು ನೀಡುತ್ತದೆ.
ಹೆಚ್ಚುವರಿಯಾಗಿ ಹೆಬ್ಬಾಳದಿಂದ ವಿಮಾನ ನಿಲ್ದಾಣದ ವಿಸ್ತರಣೆಗೆ, ಅಕ್ಟೋಬರ್ 2026ರ ವೇಳೆಗೆ ಕೆಆರ್ ಪುರಂನಿಂದ ವಿಮಾನ ನಿಲ್ದಾಣ ಮಾರ್ಗವನ್ನು ತೆರೆಯಲು ಬಿಎಂಆರ್‌ಸಿಎಲ್ ಯೋಜಿಸಿದೆ. ಇದು ನಗರದ ವಿವಿಧ ಪ್ರದೇಶಗಳಿಗೆ ಪ್ರಯಾಣಿಸುವ ಮತ್ತು ಬರುವ ಜನರಿಗೆ ಹೆಚ್ಚಿನ ಸಂಪರ್ಕವನ್ನು ಇದು ಒದಗಿಸುತ್ತದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನನಿತ್ಯ ಜನರು ಎದುರಿಸುತ್ತಿರುವ ಒಂದೇ ಒಂದು ಸಮಸ್ಯೆಯೆಂದರೆ ಅದು ಟ್ರಾಫಿಕ್ ಮಾತ್ರ. ಇನ್ನು ಈ ಬಹುದೊಡ್ಡ ಸಮಸ್ಯೆಯನ್ನ ಒಂದು ಹಂತದಲ್ಲಿ ಕಡಿಮೆ ಮಾಡ್ತಿರೋದು ಮೆಟ್ರೋ. ಆದ್ರೆ ಇನ್ನು ಹಲವು ಕಡೆ ಇನ್ನು ಮೆಟ್ರೋ ಕಾಮಗಾರಿ ನಡೆಯುತ್ತಿದ್ದು ಜನರು ವಾಹನ ದಟ್ಟಣೆಯಿಂದ ಪರದಾಡುತ್ತಿದ್ದಾರೆ. ಹೀಗಾಗಿ BMRCL ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ಮೆಟ್ರೋ ಸೇವೆಯನ್ನು ನೀಡಲು ಹಲವು ಕ್ರಮಗಳನ್ನ ತೆಗೆದುಕೊಳ್ತಿದೆ.
ಈ ಮಾರ್ಗವಾಗಿ ಬರುವಂತಹ ಮೆಟ್ರೊ ನಿಲ್ದಾಣಗಳು
ಈ ಮೆಟ್ರೋ ಮಾರ್ಗದಲ್ಲಿ ಕಸ್ತೂರಿನಗರ, ಹೊರಮಾವು, ಎಚ್‌ಆರ್‌ಬಿಆರ್ ಲೇಔಟ್ (ಹಿಂದಿನ ಬಾಬುಸಾಹೇಬ್ ಪಾಳ್ಯ), ಕಲ್ಯಾಣ ನಗರ, ಎಚ್‌ಬಿಆರ್ ಲೇಔಟ್, ನಾಗವಾರ, ವೀರಣ್ಣಪಾಳ್ಯ, ಕೆಂಪಾಪುರ, ಹೆಬ್ಬಾಳ, ಕೊಡಿಗೆಹಳ್ಳಿ, ಯಲಹಂಕ (ಕೋಗಿಲು ಕ್ರಾಸ್), ಬಾಗಲೂರು ಕ್ರಾಸ್, ಬೆಟ್ಟಹಲಸೂರು ಅಥವಾ ಚಿಕ್ಕಜಾಲ, ದೊಡ್ಡಜಾಲ, ಏರ್‌ಪೋರ್ಟ್ ಸಿಟಿ (ಹಿಂದೆ ಸ್ಕೈ ಗಾರ್ಡನ್, ಗ್ರೇಡ್‌ನಲ್ಲಿ ನಿರ್ಮಿಸಲಾಗುವುದು) ಮತ್ತು ಕೆಐಎಎಲ್ ಟರ್ಮಿನಲ್ ಇದರಲ್ಲಿ ಒಳಗೊಂಡಿದೆ.
ನಿಗದಿತ ಸಮಯದಲ್ಲಿ ಈ ಯೋಜನೆಯು ತನ್ನ ಗುರಿಗಳನ್ನು ತಲುಪುತ್ತದೆ ಎಂದು ಖಚಿತಪಡಿಸಿಕೊಳ್ಳಲು BMRCL ಸಹ ಕೆಲಸವನ್ನು ಇದು ವೇಗಗೊಳಿಸಿದೆ. ಈ ಹೊಸ ಮೆಟ್ರೋ ಮಾರ್ಗವು ಸಂಪರ್ಕವನ್ನು ಹೆಚ್ಚಿಸುವುದಲ್ಲದೆ ನಗರದ ಅತೀ ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಈ ಮಾರ್ಗ ಮೆಟ್ರೋ ಸಹಾಯ ಮಾಡುತ್ತದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications