ಬಿಎಂಟಿಸಿ ಸಂಸ್ಥೆ ತನ್ನ ನೌಕರರ ಸಂಘಟನೆಯನ್ನು ಬಲಪಡಿಸಲು ಹೊಸ ಮೈಲಿಗಲ್ಲು ಸೃಷ್ಟಿಸಿದೆ. ನೂರು ಹೊಸ ಬಸ್‌ಗಳನ್ನು ರಸ್ತೆಗೆ ಬಿಡುವುದರ ಜೊತೆಗೆ, 2,286 ಜೀವನ ಸಿಕ್ಕಿಂದತಾಗಿದೆ. ಅಂದರೆ ಇತ್ತೀಚೆಗೆ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಬಿಎಂಟಿಸಿಯು, 2,286 ಕಂಡಕ್ಟರ್ ಹುದ್ದೆಗಳನ್ನು ಭರ್ತಿ ಮಾಡಿದೆ.

ಹೌದು, ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಧಿಕೃತ ನೇಮಕಾತಿ ಆದೇಶ ವಿತರಿಸಿದೆ. ಬಹುಕಾಲದಿಂದ ನಿರೀಕ್ಷಿತವಾಗಿದ್ದ ಈ ಪ್ರಕ್ರಿಯೆ ಈಗ ಸರ್ಕಾರದ ಸಾರಿಗೆ ವ್ಯವಸ್ಥೆಗೆ ಹೊಸ ಶಕ್ತಿಯ ತುಡಿತವನ್ನು ಒದಗಿಸಿದೆ. ಇನ್ನು ಈ ನೇಮಕಾತಿಯಲ್ಲಿ ಆಯ್ಕೆಯಾದವರಿಗೆ ಒಂದಷ್ಟು ಕಲಿಕೆಯನ್ನೂ ನೀಡಲಾಗುತ್ತಿದೆ.
ಪ್ರಮುಖ ಹಂತ: 7 ದಿನಗಳ ತರಬೇತಿ ಕಾರ್ಯಕ್ರಮ:
ಹೊಸದಾಗಿ ನೇಮಕಗೊಂಡ ಸಿಬ್ಬಂದಿಯನ್ನು ಬಿಎಂಟಿಸಿ ವಿಭಾಗ ಅವರಿಗೆ ನೇರವಾಗಿ ಕಚೇರಿಗೆ ತರಲಿಲ್ಲ. ಬದಲಾಗಿಎ ಅವರಿಗೆ ವಿಶೇಷ ತರಬೇತಿ ಕಾರ್ಯಕ್ರಮವನ್ನು ನೀಡಿದೆ. ಅಂದರೆ ಏಳು ದಿನಗಳ ಕಾಲ ಅವರಿಗೆ ಕಂಡಕ್ಟರ್‍ಗಳಲ್ಲಿರುವ ಮೂಲ ಕೌಶಲ್ಯವನ್ನು ವೃದ್ಧಿಸುವ ಗುರಿ ಜೊತೆಗೆ, ನವೀನ ತಂತ್ರಜ್ಞಾನಗಳು ಮತ್ತು ಸಾರ್ವಜನಿಕ ಸಂವಹನ ತಂತ್ರಗಳನ್ನು ಪರಿಚಯಿಸುತ್ತದೆ. ಟಿಕೆಟ್ ವಿತರಣೆ, ಪ್ರಯಾಣಿಕರೊಂದಿಗೆ ಪರಿಣಾಮಕಾರಿ ಸಂವಹನ, ಆಪತ್ತು ನಿರ್ವಹಣಾ ಕ್ರಮಗಳು ಹಾಗೂ ಇತ್ತೀಚಿನ ಡಿಜಿಟಲ್ ಸಾಧನಗಳ ಬಳಕೆ ಕುರಿತು ಶಾಖೆಯವರಿಂದ ತರಬೇತಿ ನೀಡಲಾಗುತ್ತದೆ.
ಸ್ಪರ್ಧಾತ್ಮಕ ಆಯ್ಕೆ ಪ್ರಕ್ರಿಯೆ:
ಇನ್ನು ಈ ನೇಮಕಾತಿ ಪ್ರಕ್ರಿಯೆಯಲ್ಲಿ 2,286 ಹುದ್ದೆಗಳನ್ನು ಭರ್ತಿ ಮಾಡಲಾಗಗಿದೆ. ಬಿಎಂಟಿಸಿ ತನ್ನ ಅಧೀನದಲ್ಲಿ 2,500 ಖಾಲಿ ಹುದ್ದೆಗಳನ್ನು ಹೊಂದಿತ್ತು. ಇದಕ್ಕಾಗಿ ಸಂಪೂರ್ಣ 23,021 ಅರ್ಜಿಗಳು ಬಂದಿದ್ದು, ಸ್ಪರ್ಧೆ ಬಹಳ ತೀವ್ರವಾಗಿತ್ತು. ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ ಶೇ.30 ಅಂಕಗಳನ್ನು ಪಡೆದ 4,722 ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆ ಮತ್ತು ದೈಹಿಕ ಪರೀಕ್ಷೆಗೆ ಆಯ್ಕೆ ಮಾಡಲಾಗಿತ್ತು. ಈ ಪರಿಗಣನೆಯ ನಂತರ 4,267 ಅಭ್ಯರ್ಥಿಗಳು ಅರ್ಹರಾಗಿದ್ದು, ಅಂತಿಮವಾಗಿ 2,286 ಅಭ್ಯರ್ಥಿಗಳನ್ನೇ ನೇಮಕ ಮಾಡಲು ಆಯ್ಕೆ ಮಾಡಲಾಯಿತು.
ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಹಲವರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಈ ಕೆಲಸಕ್ಕಾಗಿ ನಾನು ವರ್ಷಗಳಿಂದ ತಯಾರಿ ಮಾಡಿಕೊಂಡಿದ್ದೆ. ನನ್ನ ಕುಟುಂಬದ ಜವಾಬ್ದಾರಿ ನನ್ನ ಮೇಲೆ ಇತ್ತು. ಬಿಎಂಟಿಸಿ ಉದ್ಯೋಗ ದೊರೆತಿರುವುದು ನನಗೆ ಜೀವನದ ತಿರುವು ಮೂಡಿಸಿತು, ಎಂದು ಹೊಸ ನೇಮಕಗೊಂಡ ಅಭ್ಯರ್ಥಿಗಳೊಬ್ಬರು ತಮ್ಮ ಸಂತೋಷ ಹಂಚಿಕೊಂಡರು. ಇತರರು ಕೂಡಾ ತಮ್ಮ ಶ್ರಮ ಫಲಿತಾಂಶ ನೀಡಿದಂತಾಗಿದೆ ಎಂದು ಭಾವನೆ ವ್ಯಕ್ತಪಡಿಸಿದ್ದಾರೆ.
ವೇತನ ಚೀಟಿಗೆ ತಕ್ಷಣದ ಮೊಬೈಲ್ ಪ್ರವೇಶ:
ಇನ್ನು ಬಿಎಂಟಿಸಿ ಇತ್ತೀಚಿಗೆ ತನ್ನ ನೌಕರರಿಗಾಗಿ ಡಿಜಿಟಲ್ ವೇತನ ವ್ಯವಸ್ಥೆಯನ್ನು ಪರಿಚಯಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಮೂಲಕ ಉದ್ಯೋಗಿಗಳು ತಮ್ಮ ಮಾಸಿಕ ವೇತನ ಚೀಟಿಗಳು ಮತ್ತು ಫಾರ್ಮ್-16 ದಾಖಲೆಗಳನ್ನು emlslog.in ವೆಬ್‌ಸೈಟ್ ಮೂಲಕ ನೇರವಾಗಿ ತಮ್ಮ ಮೊಬೈಲ್‌ಗಳಿಂದ ನೋಡಬಹುದು ಮತ್ತು ಡೌನ್‌ಲೋಡ್ ಮಾಡಬಹುದು. ಈ ಹೊಸ ವ್ಯವಸ್ಥೆಯು ಕಾಗದದ ಬಳಕೆಯನ್ನು ಕಡಿಮೆ ಮಾಡುತ್ತದೆ, ವ್ಯವಸ್ಥೆಯ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ ಮತ್ತು ಸಿಬ್ಬಂದಿಗೆ ಹೆಚ್ಚಿನ ಅನುಕೂಲತೆ ಒದಗಿಸುತ್ತದೆ.
ಈ ನೇಮಕಾತಿಯಿಂದ ಬಿಎಂಟಿಸಿ ತನ್ನ ಸಾರಿಗೆ ಸೇವೆಗಳಿಗೆ ನವ ಚೈತನ್ಯ ನೀಡಿದಂತಾಗಿದೆ. ನವ ಉದ್ಯೋಗಿಗಳ ನೇಮಕಾತಿಯು ನಿರುದ್ಯೋಗಿಗಳಿಗೂ ಉತ್ತಮ ಅವಕಾಶ ಒದಗಿಸಿದ್ದು, ಸಂಸ್ಥೆಯ ಸೇವಾ ಗುಣಮಟ್ಟದಲ್ಲಿ ಉತ್ತಮತೆ ತರಲು ಸಹಾಯ ಮಾಡಲಿದೆ. ಜೊತೆಗೆ, ಡಿಜಿಟಲ್ ಪರಿವರ್ತನೆಯ ಮೂಲಕ ಆಡಳಿತ ಪ್ರಕ್ರಿಯೆಗಳು ಇನ್ನಷ್ಟು ವೇಗ ಮತ್ತು ಪಾರದರ್ಶಕತೆಯೊಂದಿಗೆ ಕಾರ್ಯನಿರ್ವಹಿಸಲಿವೆ ಎಂಬ ನಿರೀಕ್ಷೆ ಇದೆ.
2,286 ಹೊಸ ಕಂಡಕ್ಟರ್‌ಗಳಿಗೆ ನೇಮಕಾತಿ ಆದೇಶ ನೀಡಿರುವ ಬಿಎಂಟಿಸಿ, ತನ್ನ ಸಾರಿಗೆ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಸಿಬ್ಬಂದಿ ಕೊರತೆಯನ್ನು ಪರಿಹರಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ಈ ನೇಮಕಾತಿ ಕಾರ್ಯದಿಂದಾಗಿ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ನೂತನ ಶಕ್ತಿ ಸಿಕ್ಕಿದ್ದು, ನಗರದಲ್ಲಿ ಬಸ್ ಸೇವೆಗಳ ಪರಿಣಾಮಕಾರಿತ್ವ ಮತ್ತಷ್ಟು ಸುಧಾರಣೆಯಾಗಲಿದೆ. ಇದೇ ವೇಳೆ, ಬಿಎಂಟಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಹುದ್ದೆಗಳ ನೇಮಕಾತಿಗೆ ಮುಂದಾಗಬಹುದೆಂಬ ನಿರೀಕ್ಷೆಯೂ ಇದೆ.
More From GoodReturns

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!



Click it and Unblock the Notifications