ಬೆಂಗಳೂರಿನಲ್ಲಿ (Bengaluru) ಒಂದು ಕಡೆಯಿಂದ ಮತ್ತೊಂದು ಕಡೆ ಹೋಗೋದು ಸುಲಭ. ಆದ್ರೆ ಟ್ರಾಫಿಕ್ ಸಮಸ್ಯೆಯಿಂದಾಗಿ ಕೆಲವೊಮ್ಮೆ ಹೋಗೋದೆ ಬೇಡವೆಂಬಂತೆ ಭಾಸವಾಗುತ್ತೆ. ದಿನಕ್ಕೆ ಲಕ್ಷಗಟ್ಟಲೆ ವಾಹನಗಳು ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುತ್ತದೆ. ಆದ್ರೆ ಅದರಲ್ಲೂ ಬಸ್‌ಗಳ ಅವಸ್ಥೆ ಕೇಳೋದೆ ಬೇಡ. ಆದ್ರೆ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ (BMTC), ಕೆಎಸ್‌ಆರ್‌ಟಿಸಿ ಇಲಾಖೆಗಳು ಡೈಲಿ ಪಾಸ್, ಮಾಸಿಕ ಪಾಸ್ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಇದೀಗ ಪಾಸ್ ಪಡೆಯುವ ಪ್ರಯಾಣಿಕರಿಗೆ ಗುಡ್ ನ್ಯೂಸ್ ಒಂದಿದೆ.

ಹೌದು, ಯಾರೆಲ್ಲಾ ಈ ಬಸ್ ಪಾಸ್ ಪಡೆಯುತ್ತಿದ್ದೀರೋ, ಅವರಿಗೆಲ್ಲಾ ಬಂಪರ್ ಸುದ್ದಿ. ಪಾಸ್ ದರ ಇಳಿಕೆಯಾಗಿದ್ದು, ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ವಜ್ರ ಬಸ್ ವಾರದ ಪಾಸ್ ದರ ಕಡಿತ!
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಇದೀಗ ವಜ್ರ ಎಸಿ ಬಸ್‌ಗಳ ವಾರದ ಪಾಸ್ ದರದಲ್ಲಿ ಇಳಿಕೆ ಮಾಡಿದೆ. ಬಸ್ ದರ ಏರಿಕೆಯಾದಂತೆ, ಕಳೆದ ಆಗಸ್ಟ್‌ನಲ್ಲಿ ವಜ್ರ ಬಸ್‌ನ ವಾರದ ಪಾಸ್ ದರವೂ ಏರಿಕೆಯಾಗಿತ್ತು. ಅದರಂತೆ 750 ರೂ.ಗೆ ಏರಿಕೆ ಕಂಡಿತ್ತು. ಆದ್ರೆ ಇದೀಗ ಪ್ರಯಾಣಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ, ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸುವ ಉದ್ದೇಶದಿದ 50 ರೂ. ಕಡಿತಗೊಳಿಸಿದೆ. ಅಂದರೆ ಇನ್ಮೇಲೆ 700 ರೂ. ಆಗಲಿದೆ. ಈ ನಿರ್ಧಾರವು ವಜ್ರ ಸೇವೆಯನ್ನು ಉತ್ತಮಗೊಳಿಸುವುದಲ್ಲದೇ, ಟೋಲ್ ಶುಲ್ಕವನ್ನು ಹೊರತುಪಡಿಸಿ 700 ರೂ. ಆಗಿದೆ.
ಆಪ್ ಮೂಲಕವೇ ಪಡೆಯಿರಿ ಪಾಸ್!
ಇನ್ನು ವಜ್ರ ವಾರದ ಪಾಸ್ ಅನ್ನು Tummoc ಆಪ್ ಮೂಲಕವೂ ಪಡೆಯಬಹುದು. ಪ್ರಯಾಣಿಕರು tummoc ಆಪ್ ಡೌನ್‌ಲೋಡ್ ಮಾಡಿಕೊಂಡರೆ ಸಾಕು, ಅಲ್ಲಿಯೇ ಲಾಗಿನ್ ಆಗುವ ಮೂಲಕ ಬಿಎಂಟಿಸಿಯ ಯಾವುದೇ ಬಸ್ ಪಾಸ್ ಸೌಲಭ್ಯವನ್ನು ಪಡೆಯಬಹುದು.
ಎಲೆಕ್ಟ್ರಿಕ್ ಬಸ್ ಕಂಪನಿಗಳಿಗೆ 25 ಕೋಟಿ ದಂಡ!
ಬಿಎಂಟಿಸಿಯಿಂದ ಎಲೆಕ್ಟ್ರಿಕ್ ಬಸ್‌ಗಳು ಕಾರ್ಯನಿರ್ವಹಿಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ಇತ್ತೀಚೆಗೆ ವರವಾಗಿದ್ದ ಇವಿ ಬಸ್‌ಗಳು ಅದೆಷ್ಟೋ ಪ್ರಯಾಣಿಕರಿಗೆ ಯಮನಾಗಿಬಿಟ್ಟಿದೆ. ಕಾರಣ ಅಪಘಾತ ವರದಿ. ಬೆಂಗಳೂರಿನಲ್ಲಿ ದಿನೇ ದಿನೇ ಆಕ್ಸಿಡೆಂಟ್ ವರದಿಗಳು ಹೆಚ್ಚಾಗುತ್ತಲೇ ಇದೆ. ಆಕ್ಸಿಡೆಂಟ್ ಜೊತೆಗೆ ಬ್ರೇಕ್ ಡೌನ್, ಬ್ಯಾಟರಿ ಸಮಸ್ಯೆಗಳು ಕೂಡಾ ತಲೆದೋರಿವೆ. ಇದೇ ಕಾರಣದಿಂದ ಪ್ರಯಾಣಿಕರಿಂದ ಆರೋಪವೂ ಕೇಳಿಬರುತ್ತಿದೆ. ಇದನ್ನೆಲ್ಲಾ ಆಲಿಸಿದ ಬಿಎಂಟಿಸಿ, ಕಳಪೆ ಸೇವೆ ಮತ್ತು ಒಪ್ಪಂದ ಉಲ್ಲಂಘನೆ ಮಾಡಿದಕ್ಕಾಗಿ ಬಿಎಂಟಿ ನಾಲ್ಕು ಖಾಸಗಿ ಕಂಪನಿಗಳಿಗೆ 25 ಕೋಟಿ ರೂ.ಗೂ ಹೆಚ್ಚು ದಂಡ ವಿಧಿಸಿದೆ.
ಬ್ರೇಕ್ ಡೌನ್, ಬ್ಯಾಟರಿ ಸಮಸ್ಯೆಗಳು ಇತ್ತೀಚೆಗೆ ಎಲೆಕ್ಟ್ರಿಕ್ ಬಸ್‌ಗಳಲ್ಲಿ ಹೆಚ್ಚಾಗುತ್ತಿದೆ. ಇದರಿಂದ ಬೆಂಗಳೂರಿನಲ್ಲಿ ನಡುರೋಡಿನಲ್ಲಿ ಇವಿ ಬಸ್‌ಗಳು ಕೆಟ್ಟುನಿಲ್ಲುವಂತಾಗಿದೆ. ಅಲ್ಲದೇ ಒಪ್ಪಂದಂತೆ ಕಾರ್ಯನಿರ್ವಹಿಸದ 4 ಖಾಸಗಿ ಕಂಪನಿಗಳಿಗೆ ಬಿಎಂಟಿಸಿ 25 ಕೋಟಿ ರೂ. ಹೆಚ್ಚು ದಂಡ ಹಾಕಲಾಗಿದೆ ಎಂದು ವರದಿಯಾಗಿದೆ. ಅಲ್ಲದೇ ಅಪಘಾತಗಳನ್ನು ತಡೆಯಲು ಬಿಎಂಟಿಸಿ ಚಾಲಕರಿಗೆ ಈಗಾಗಲೇ ತರಬೇತಿ ಕೂಡಾ ನೀಡಲಾಗುತ್ತದೆ.


Click it and Unblock the Notifications