ಮಹಿಳೆಯರಿಗಾಗಿ BOB ಟಿಯಾರಾ ಕ್ರೆಡಿಟ್‌ ಕಾರ್ಡ್‌..ಶಾಪಿಂಗ್, ಟ್ರಾವೆಲ್, ಸಿನಿಮಾಗಳ ಮೇಲೆ ಭರ್ಜರಿ ಡಿಸ್ಕೌಂಟ್..!

ಸಾಮಾನ್ಯವಾಗಿ ಎಲ್ಲರೂ ಕ್ರೆಡಿಟ್‌ ಕಾರ್ಡ್‌ಗಳನ್ನು ಹೊಂದಿರುತ್ತಾರೆ. ತಮಗೆ ಬರುವ ಆದಾಯದ ಅನುಸಾರ ಕ್ರೆಡಿಟ್‌ ಕಾರ್ಡ್‌ನಿಂದ ಇಂತಿಷ್ಟು ಮಿತಿಗಳನ್ನು ಪಡೆಯಬಹುದು. ಹಾಗೂ ತಮಗೆ ಇರುವ ಅಗತ್ಯತೆಗಳಿಗೆ ತಕ್ಕಂತೆ ಈ ಕ್ರೆಡಿಟ್‌ ಕಾರ್ಡ್‌ಗಳು ಸಹಾಯಕವಾಗಿರುತ್ತವೆ. ಅದರಂತೆ ಇದೀಗ ಮಹಿಳೆಯರಿಗೆ ಬ್ಯಾಂಕ್ ಆಫ್ ಬರೋಡಾ, BOB ಟಿಯಾರಾ ಕ್ರೆಡಿಟ್ ಕಾರ್ಡ್ ಪರಿಚಯಿಸಿದೆ. ಇದರ ವೈಶಿಷ್ಟ್ಯತೆಗಳೇನು ಎಂಬುದನ್ನು ಇಲ್ಲಿ ತಿಳಿಯೋಣ.

BOB ಟಿಯಾರಾ ಕ್ರೆಡಿಟ್‌ ಕಾರ್ಡ್‌ ನೀಡುತ್ತಿದೆ ಭರ್ಜರಿ ಡಿಸ್ಕೌಂಟ್‌..!

BOB ಟಿಯಾರಾ ಕ್ರೆಡಿಟ್ ಕಾರ್ಡ್‌ನ ವೈಶಿಷ್ಟ್ಯಗಳು:

ಈ ಕಾರ್ಡ್ ವಿಶೇಷವಾಗಿ ಮಹಿಳೆಯರಿಗಾಗಿ ವಿತರಿಸಲಾಗುತ್ತದೆ. ಮಹಿಳೆಯರ ಅಗತ್ಯತೆಗಳನ್ನು ಮನಗಂಡು ಈ ಕಾರ್ಡ್ ವಿನ್ಯಾಸಗೊಳಿಸಲಾಗಿದೆ. ಅಂದರೆ ಖರೀದಿ, ಆರೋಗ್ಯ, ಪ್ರವಾಸ ಇತ್ಯಾದಿ ವಿಭಾಗಗಳಲ್ಲಿ ಮಹಿಳೆಯರು ಹೆಚ್ಚು ಉಳಿತಾಯ ಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.

1. 5X ವೇಗದ ರಿವಾರ್ಡ್ ಪಾಯಿಂಟ್‌ಗಳು

ಬಳಕೆದಾರರು ಪ್ರತಿ ₹100 ಖರ್ಚಿಗೆ 15 ರಿವಾರ್ಡ್‌ ಪಾಯಿಂಟ್‌ಗಳನ್ನು ಪಡೆಯಬಹುದು. ಈ ರಿವಾರ್ಡ್ ಪಾಯಿಂಟ್‌ಗಳು ಆಹಾರ, ಪ್ರವಾಸ ಮತ್ತು ಅಂತರಾಷ್ಟ್ರೀಯ ವ್ಯವಹಾರಗಳಿಗೆ ಅನ್ವಯಿಸುತ್ತವೆ. 5X ವೇಗದ ರಿವಾರ್ಡ್‌ ಪಾಯಿಂಟ್‌ಗಳು 5000 ಪಾಯಿಂಟ್‌ಗಳವರೆಗೂ ಪಡೆಯಬಹುದು. ಈ ಲಿಮಿಟ್‌ನ ನಂತರ ಬಳಕೆದಾರರು ಸಾಮಾನ್ಯ ರಿವಾರ್ಡ್‌ ಪಾಯಿಂಟ್‌ಗಳನ್ನು ಪಡೆಯುತ್ತಾರೆ.

2. ಸಾಮಾನ್ಯ ರಿವಾರ್ಡ್ ಪಾಯಿಂಟ್‌ಗಳು:

ಎಲ್ಲಾ ವರ್ಗಗಳ ಮೇಲೆ ಪ್ರತಿ 100 ರೂ. ಖರ್ಚಿಗೆ 3 ರಿವಾರ್ಡ್ ಪಾಯಿಂಟ್‌ಗಳು ಸಿಗುತ್ತವೆ. ಕ್ರೆಡಿಟ್ ಕಾರ್ಡ್ ಬಳಸಿ ಮಾಡಿದ, UPI ವ್ಯವಹಾರಗಳಿಗೆ ಪ್ರತಿ ಸ್ಟೇಟ್ಮೆಂಟ್ ಚಕ್ರಕ್ಕೆ ಗರಿಷ್ಠ 500 ಬಹುಮಾನ ಪಾಯಿಂಟ್‌ಗಳ ಮಿತಿ ಇರುತ್ತದೆ.

3. ಶಾಪಿಂಗ್ ರಿಯಾಯಿತಿಗಳು:

ಈ BOB ಟಿಯಾರಾ ಕ್ರೆಡಿಟ್ ಕಾರ್ಡ್ ಪ್ರತಿ ತ್ರೈಮಾಸಿಕ ಶಾಪಿಂಗ್ ರಿಯಾಯಿತಿಗಳನ್ನು ಒದಗಿಸುತ್ತದೆ. ಅಂದರೆ ಬಿಗ್‌ ಬಾಸ್ಕೆಟ್‌ ಮೇಲೆ ₹250 ರಿಯಾಯಿತಿ. ಮಿಂತ್ರಾ, ನೈಕಾ, ಫ್ಲಿಪ್‌ಕಾರ್ಟ್‌ ಪ್ರತಿಯೊಂದರ ಮೇಲೆ ₹500 ರಿಯಾಯಿತಿ. ಪ್ರತಿ ತ್ರೈಮಾಸಿಕದಲ್ಲಿ ಲ್ಯಾಕ್‌ಮಿ ಸಲೂನ್‌ ಮೇಲೆ ₹1,500 ರಿಯಾಯಿತಿ ಒದಗಿಸಲಾಗುತ್ತದೆ.

ಹಾಗೆಯೇ ಈ ಕಾರ್ಡ್ ಸ್ವಿಗ್ಗಿ ಒನ್‌ 3 ತಿಂಗಳ ಉಚಿತ ಸದಸ್ಯತ್ವ ಒದಗಿಸಲಾಗುತ್ತದೆ. ಇದರಿಂದ ಆಹಾರ ಮತ್ತು Instamart ಆರ್ಡರ್‌ಗಳ ಅನ್‌ಲಿಮಿಟೆಡ್ ಉಚಿತ ಡೆಲಿವರಿ ಪಡೆಯಬಹುದು. ಈ ಎಲ್ಲಾ ರಿಯಾಯಿತಿಗಳು ಕ್ಯಾಲೆಂಡರ್ ತ್ರೈಮಾಸಿಕ ಆಧಾರದ ಮೇಲೆ ಲಭ್ಯವಿರುತ್ತವೆ. ಅಂದರೆ ಜನವರಿ 1 ರಿಂದ ಮಾರ್ಚ್ 31, ಏಪ್ರಿಲ್ 1 ರಿಂದ ಜೂನ್ 30, ಜುಲೈ 1 ರಿಂದ ಸೆಪ್ಟೆಂಬರ್ 30, ಅಕ್ಟೋಬರ್ 1 ರಿಂದ ಡಿಸೆಂಬರ್ 31.. ಹೀಗೆ ಈ ತ್ರೈಮಾಸಿಕ ಆಧಾರದ ಮೇಲೆ ಈ ರಿಯಾಯಿತಿಗಳನ್ನು ನೀಡಲಾಗುತ್ತದೆ.

4. ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ:

ಈ BOB ಟಿಯಾರಾ ಕ್ರೆಡಿಟ್ ಕಾರ್ಡ್ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಪ್ರಯೋಜನಗಳನ್ನು ಕೂಡ ಉಚಿತವಾಗಿ ಒದಗಿಸುತ್ತದೆ. ಅಂದರೆ ಮಹಿಳೆಯರ ಆರೋಗ್ಯ ತಪಾಸಣೆಗೆ Mammogram ಪ್ಯಾಕೇಜ್, Women Health & Pap Smear ಪ್ಯಾಕೇಜ್, ಹಾಗೂ 6 ತಿಂಗಳ Fitpass Pro ಉಚಿತ ಸದಸ್ಯತ್ವ. ಈ ಪ್ಯಾಕೇಜ್‌ನಿಂದ ಮಹಿಳೆಯರು 2,500ಕ್ಕೂ ಹೆಚ್ಚು ಪ್ರೀಮಿಯಂ ಜಿಮ್ ಮತ್ತು ಫಿಟ್ನೆಸ್ ಸ್ಟುಡಿಯೊಗಳಿಗೆ ಪ್ರವೇಶ ಪಡೆಯಬಹುದು.

5. ಏರ್‌ಪೋರ್ಟ್ ಲೌಂಜ್ ಪ್ರವೇಶ:

ಭಾರತದಲ್ಲಿ ಅನ್‌ಲಿಮಿಟೆಡ್‌ ಆಗಿ ಉಚಿತ ಏರ್‌ಪೋರ್ಟ್ ಲೌಂಜ್ ಪ್ರವೇಶ ಪಡೆಯಬಹುದು. ಓ ಲಾಭ ಪಡೆಯುವ ಮುನ್ನ ತ್ರೈಮಾಸಿಕದಲ್ಲಿ ₹40,000 ಖರ್ಚು ಮಾಡಬೇಕು. ಅಂದರೆ BOB ಟಿಯಾರಾ ಕಾರ್ಡ್‌ ಹೊಂದಿರುವವರು, ಏಪ್ರಿಲ್ 1 ರಿಂದ ಜೂನ್ 30ರೊಳಗೆ ₹40,000 ಅಥವಾ ಅದಕ್ಕಿಂತ ಹೆಚ್ಚು ಖರ್ಚು ಮಾಡಿದರೆ ಜುಲೈ 1 ರಿಂದ ಸೆಪ್ಟೆಂಬರ್ 30 ತ್ರೈಮಾಸಿಕದಲ್ಲಿ ಅನ್‌ಲಿಮಿಟೆಡ್ ಲೌಂಜ್ ಪ್ರವೇಶ ಪಡೆಯಬಹುದು.

6. ಅಂತರಾಷ್ಟ್ರೀಯ ಖರ್ಚುಗಳ ಮೇಲೆ ವಿದೇಶೀ ವಿನಿಮಯ ಶುಲ್ಕ ಕಡಿತ:

ಸಾಮಾನ್ಯವಾಗಿ ಬೇರೆ ಬ್ಯಾಂಕ್‌ಗಳು ವಿದೇಶೀ ವಿನಿಮಯ ಶುಲ್ಕವನ್ನು, 3.5%ರಷ್ಟು ವಿಧಿಸುತ್ತವೆ. ಆದರೆ, BOB ಟಿಯಾರಾ ಕ್ರೆಡಿಟ್ ಕಾರ್ಡ್‌ನಲ್ಲಿ ಕೇವಲ 2% ಶುಲ್ಕ ಇದೆ. ಇದರಿಂದ ಅಂತರಾಷ್ಟ್ರೀಯ ಖರ್ಚುಗಳ ಮೇಲೆ ಹೆಚ್ಚು ಉಳಿತಾಯ ಮಾಡಬಹುದು.

7. ಜೀವನಶೈಲಿ ಮತ್ತು ಮನರಂಜನೆ:

ಮನರಂಜನೆಗಾಗಿ ಈಗೆಲ್ಲಾ ಹೆಚ್ಚು ಜನರು ಓಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಅವಲಂಬಿಸಿದ್ದಾರೆ. ಹೀಗಾಗಿ ಅಮೆಜಾನ್ ಪ್ರೈಮ್, ಡಿಸ್ನೇ ಪ್ಲಸ್ ಹಾಟ್‌ಸ್ಟಾರ್‍‌ ಹಾಗೂ ಗಾನಾ ಪ್ಲಸ್‌ಗೆ ವಾರ್ಷಿಕ ಉಚಿತ ಸದಸ್ಯತ್ವ ನೀಡಲಾಗುತ್ತದೆ. ಅಲ್ಲದೇ ಕನಿಷ್ಠ 2 ಚಲನಚಿತ್ರ ಟಿಕೆಟ್‌ಗಳ ಖರೀದಿಗೆ ₹250 ರಿಯಾಯಿತಿ ನೀಡಲಾಗುತ್ತದೆ. ಚಲನಚಿತ್ರ ಹೊರತುಪಡಿಸಿ ಇತರ ಈವೆಂಟ್ ಟಿಕೆಟ್‌ಗಳಿಗೂ ಅನ್ವಯಿಸುತ್ತದೆ. ಜೊತೆಗೆ ಬುಕ್‌ ಮೈ ಶೋನಲ್ಲಿ Buy One Get One ಆಫರ್‍‌ ಕೂಡ ಒದಗಿಸಲಾಗುತ್ತಿದೆ. ಆದರೆ ಈ ಎಲ್ಲಾ ಪ್ರಯೋಜನಗಳು ಪ್ರಾಥಮಿಕ ಕಾರ್ಡ್‌ಹೋಲ್ಡರ್‌ಗೆ ಮಾತ್ರ ಅನ್ವಯಿಸುತ್ತದೆ.

8. ಇಂಧನ ಶುಲ್ಕದಲ್ಲಿ ವಿನಾಯಿತಿ:

ಎಲ್ಲಾ ಇಂಧನ ಪಂಪ್‌ಗಳಲ್ಲಿ 1% ಇಂಧನ ಸುಂಕ ವಿನಾಯಿತಿ ನೀಡಲಾಗುತ್ತಿದ್ದು, ಇದು ₹400 ರಿಂದ ₹5,000 ನಡುವೆ ಇಂಧನ ಖರೀದಿಗೆ ಮಾತ್ರ ಅನ್ವಯಿಸುತ್ತದೆ. ಹಾಗೆಯೇ ಪ್ರತಿ ಸ್ಟೇಟ್ಮೆಂಟ್ ಚಕ್ರಕ್ಕೆ ಗರಿಷ್ಠ ₹250 ತನಕ ವಿನಾಯಿತಿಯನ್ನು ಪಡೆಯಬಹುದು. ಇನ್ನು ಇಂಧನ ಖರೀದಿಗೆ ಯಾವುದೇ ರಿವಾರ್ಡ್ ಪಾಯಿಂಟ್‌ಗಳನ್ನು ನೀಡಲಾಗುವುದಿಲ್ಲ.

9. ಉಚಿತ ಆಡ್-ಆನ್ ಕಾರ್ಡ್‌ಗಳು:

ಪ್ರಾಥಮಿಕ ಕಾರ್ಡ್‌ಹೋಲ್ಡರ್ ಉಚಿತ ಆಡ್-ಆನ್ ಕಾರ್ಡ್‌ಗಳನ್ನು ಪಡೆಯಬಹುದು. ಅಂದರೆ ಗರಿಷ್ಠ 3 ಆಡ್-ಆನ್ ಕಾರ್ಡ್‌ಗಳು ಲೈಫ್ಟೈಮ್ ಉಚಿತವಾಗಿ ಪಡೆಯಬಹುದು. ಇವುಗಳನ್ನು ತಮ್ಮ ಜೀವನ ಸಂಗಾತಿ, ಮಕ್ಕಳು, ತಂದೆ-ತಾಯಿ, ಸಹೋದರರು, ಇತ್ಯಾದಿಗಳಿಗೆ ಪಡೆಯಬಹುದು. ಹಾಗೆಯೇ ಆಡ್-ಆನ್ ಕಾರ್ಡ್ ಹೊಂದಿರುವ ವ್ಯಕ್ತಿಯ ಕನಿಷ್ಠ ವಯಸ್ಸು 18 ವರ್ಷ ಇರಬೇಕು.

10. ಶುಲ್ಕಗಳು ಮತ್ತು ತೆರಿಗೆಳು:

ಈ ಕಾರ್ಡ್‌ಗೆ ಸೇರ್ಪಡೆ ಮತ್ತು ವಾರ್ಷಿಕ ಶುಲ್ಕ ₹2,499 ಎನ್ನಲಾಗಿದೆ. ಒಂದು ವೇಳೆ ಕಾರ್ಡ್‌ಹೋಲ್ಡರ್ ಮೊದಲ 60 ದಿನಗಳೊಳಗೆ ₹25,000 ಖರ್ಚು ಮಾಡಿದರೆ, ಸೇರ್ಪಡೆ ಶುಲ್ಕ ಹಿಂತಿರುಗಿಸಲಾಗುತ್ತದೆ. ವರ್ಷದಲ್ಲಿ 2,50,000 ರೂ. ಖರ್ಚು ಮಾಡಿದರೆ, ವಾರ್ಷಿಕ ಶುಲ್ಕವೂ ವಾಪಸು ಪಡೆಯಬಹುದು.ಈ ಎಲ್ಲಾ ಲಾಭಗಳು ಸಮಯಕ್ಕೆ ಬಿಲ್ ಪಾವತಿಸುವ ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತದೆ.

ಈ ಕಾರ್ಡ್‌ ಪಡೆಯಲು ಅರ್ಹತೆ ಏನಿರಬೇಕು..?

  • ಈ ಕಾರ್ಡ್ ಪಡೆಯಲು ಮೊದಲು ನೀವು ಭಾರತೀಯ ನಿವಾಸಿಗಳಾಗಿರಬೇಕು.
  • ಸಾಲರಿ / ಸ್ವಯಂ ಉದ್ಯೋಗಿಯಾದರೆ, ವಾರ್ಷಿಕ ಆದಾಯ ಕನಿಷ್ಠ ₹7.2 ಲಕ್ಷ ಇರಬೇಕು.
  • ನೌಕರಿಯಲ್ಲಿರುವವರಿಗೆ ವಯಸ್ಸು 21 ರಿಂದ 60 ವರ್ಷ ಇರಬೇಕು.
  • ಕೊನೆಯ 2 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಸಲ್ಲಿಸಬೇಕು.
  • ಸ್ವಯಂ ಉದ್ಯೋಗಿಗಳಿಗೆ ವಯಸ್ಸು 21 ರಿಂದ 65 ವರ್ಷ ಇರಬೇಕು.
  • ಕೊನೆಯ 3 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಸಲ್ಲಿಸಬೇಕು

ಇನ್ನು ಈ ಕಾರ್ಡ್‌ ಪಡೆಯುವ ಮೊದಲು ಗ್ರಾಹಕರು ತಾವು ನಿಯಮಿತವಾಗಿ ಆನ್‌ಲೈನ್ ಶಾಪಿಂಗ್, ಟ್ರಾವೆಲ್, ಮತ್ತು ಎಂಟರ್‌ಟೈನ್‌ಮೆಂಟ್‌ಗಾಗಿ ಹೆಚ್ಚು ಖರ್ಚು ಮಾಡುತ್ತೀರಾ ಎಂಬುದನ್ನು ಪರಿಗಣಿಸಬೇಕು. ಈ ಎಲ್ಲಾ ಪ್ರಯೋಜನಗಳನ್ನು ಮಹಿಳೆಯರಿಗಾಗಿ ಬ್ಯಾಂಕ್ ಆಫ್ ಬರೋಡಾ ನೀಡುತ್ತಿದ್ದು, ಮಹಿಳೆಯರಿಗೆ ನಿಜಕ್ಕೂ ಖುಷಿಯ ಸಂಗತಿಯಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+