ಮಹಿಳೆಯರಿಗಾಗಿ TIARA ಕ್ರೆಡಿಟ್ ಕಾರ್ಡ್ ಪ್ರಾರಂಭಿಸಿದ BOBCARD; ಇಲ್ಲಿದೆ ಸಂಪೂರ್ಣ ವಿವರ

ಬ್ಯಾಂಕ್‌ ಆಪ್‌ ಬರೋಡಾದ ಅಂಗಸಂಸ್ಥೆಯಾದ BOBCARD ಲಿಮಿಟೆಡ್ ಮಹಿಳೆಯರಿಗಾಗಿ ಉತ್ತಮ ಕೊಡುಗೆಗಳನ್ನ ಪರಿಚಯಿಸ್ತಿದೆ. ಮಹಿಳೆಯರಿಗಾಗಿ ಅವರ ಆರ್ಥಿಕ ಸ್ವಾತಂತ್ರವನ್ನ ಬೆಂಬಲಿಸುವ ಸಲುವಾಗಿ BOBCARD ಲಿಮಿಟೆಡ್ TIARA ಕ್ರೆಡಿಟ್ ಕಾರ್ಡ್ ಅನ್ನು ಪರಿಚಯ ಮಾಡ್ತಿದೆ. ಈ ಕಾರ್ಡ್‌ಗಳನ್ನ ಪಡೆಯುವ ಮೂಲಕ ಮಹಿಳೆಯರು ಹತ್ತು ಹಲವು ಪ್ರಯೋಜನಗಳನ್ನ ತಮ್ಮದಾಗಿಸಿಕೊಳ್ಳಬಹುದು.

ಬ್ಯಾಂಕ್ ಆಪ್‌ ಬರೋಡಾದ ಅಂಗಸಂಸ್ಥೆಯಾದ BOBCARD ಲಿಮಿಟೆಡ್ ಪರಿಚಯಿಸ್ತಿರುವ TIARA ಕ್ರೆಡಿಟ್ ಕಾರ್ಡ್ RuPay ನೆಟ್‌ವರ್ಕ್‌ನಲ್ಲಿ ಲಭ್ಯವಿದ್ದು, ಈ ಕಾರ್ಡ್‌ ಮೂಲಕ ಪ್ರಯಾಣ, ಊಟ, ಮನರಂಜನೆ, ಆರೋಗ್ಯ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಸಾಕಷ್ಟು ಪ್ರಯೋಜನಗಳನ್ನ ಪಡೆಯಬಹುದು.

ಮಹಿಳೆಯರಿಗಾಗಿ TIARA ಕ್ರೆಡಿಟ್ ಕಾರ್ಡ್ ಪ್ರಾರಂಭಿಸಿದ BOBCARD!

ಪ್ರಮುಖ ವೈಶಿಷ್ಟ್ಯಗಳು

ನೀವು ಈ ಕ್ರೆಡಿಟ್‌ ಕಾರ್ಡ್‌ಳ ಸೇವೆಗಳನ್ನ ಪಡೆಯಬೇಕೆಂದಿದ್ದರೆ ಅದು ಕೂಡ ಈಗ ಬಹಳ ಸುಲಭ. ಮೊದಲು ಈ ಸೇವೆಗಳನ್ನ ಪಡೆಯಲು ನೀವು ವಾರ್ಷಿಕವಾಗಿ ಜಿಎಸ್‌ಟಿ ಸೇರಿದಂತೆ 2,499ರೂ. ಶುಲ್ಕವನ್ನ ಪಾವತಿಸಬೇಕಾಗುತ್ತದೆ. ಹಾಗೆ ನೀವು ಸೇರಿದ ದಿನಾಂಕದಿಂದ ಮೊದಲ 60 ದಿನಗಳಲ್ಲಿ ಒಟ್ಟು ₹25,000 ಖರ್ಚು ಮಾಡಿದರೆ ನೀವು ಈ ಸೇರುವ ಶುಲ್ಕವನ್ನು ಮನ್ನಾ ಮಾಡಬಹುದು. ಹಾಗೆ ನೀವು ಇಡೀ ವರ್ಷದೊಳಗೆ 2,50,000 ರೂ. ಖರ್ಚು ಮಾಡಿದರೆ ವಾರ್ಷಿಕ ಶುಲ್ಕವನ್ನು ನೀವು ಮನ್ನಾ ಮಾಡಬಹುದು. ಹಾಗೆ ನೀವು ಈ ಮೂಲಕ ಅತ್ಯತ್ತಮ ರಿವಾರ್ಡ್‌ ಪಾಯಿಂಟ್‌ಗಳನ್ನ ಕೂಡ ಪಡೆಯಬಹುದು.

ರಿವಾರ್ಡ್ ಪಾಯಿಂಟ್‌ಗಳು

-ನೀವು ನಿಮ್ಮ ಪ್ರಯಾಣಕ್ಕಾಗಿ, ಭೋಜನ ಮತ್ತು ಅಂತರಾಷ್ಟ್ರೀಯ ಖರೀದಿಗಳಿಗಾಗಿ ಹಣವನ್ನ ವ್ಯಯ ಮಾಡಿದ ಪ್ರತಿ 100 ರೂಪಾಯಿಗಳಿಗೆಗೆ 15 ರಿವಾರ್ಡ್ ಪಾಯಿಂಟ್‌ಗಳನ್ನ ನೀವು ಗಳಿಸುತ್ತೀರಿ.

-ಹಾಗೆ ಇತರ ಖರೀದಿಗಳಲ್ಲಿ ಪ್ರತಿ 100 ರೂ.ಗೆ 3 ರಿವಾರ್ಡ್ ಪಾಯಿಂಟ್‌ಗಳನ್ನ ನೀವು ಗಳಿಸಬಹುದು.

-ಯುಪಿಐ ಪಾವತಿಗಳನ್ನು ರಿವಾರ್ಡ್ ಪಾಯಿಂಟ್‌ಗಳಿಗೆ ಪ್ರತಿ ಸೈಕಲ್‌ಗೆ 500 ರೂಗಳಿಗೆ ಮಿತಿಗೊಳಿಸಲಾಗಿದೆ. (1 ರಿವಾರ್ಡ್ ಪಾಯಿಂಟ್ = ₹0.25)

ಜೀವನಶೈಲಿಯ ಪ್ರಯೋಜನಗಳು:

-ಪ್ರತಿ ತ್ರೈಮಾಸಿಕಕ್ಕೆ 500 ರೂಗಳ ಮೌಲ್ಯದ Nykaa, Myntra ಮತ್ತು Flipkart ನಂತಹ ಬ್ರ್ಯಾಂಡ್‌ಗಳಿಗೆ ರಿಯಾಯಿತಿ ವೋಚರ್‌ಗಳನ್ನ ನೀವು ಪಡೆಯುತ್ತೀರಿ.

-ತ್ರೈಮಾಸಿಕ 1500 ರೂಪಾಯಿಯ ಮೌಲ್ಯದ Lakme Salon ವೋಚರ್‌ಗಳು ನಮ್ಮದಾಗುತ್ತವೆ.

ಮನರಂಜನಾ ಕೊಡುಗೆಗಳು:

-Amazon Prime ಅಥವಾ Disney Hotstar, ಮತ್ತು Gaana Plusಗಾಗಿ ವಾರ್ಷಿಕ ಮೆಂಬರ‌ಶಪ್‌ಗಳನ್ನ ಪಡೆಯಬಹುದು.
-BookMyShow ಮೂಲಕ ಚಲನಚಿತ್ರ ಟಿಕೆಟ್‌ಗಳ ಮೇಲೆ 250 ರೂಗಳ ರಿಯಾಯಿತಿ ಇದು ಕೂಡ ತ್ರೈಮಾಸಿಕಕ್ಕೆ ಒಮ್ಮೆ ಇರುತ್ತದೆ.

ಊಟ ಮತ್ತು ದಿನಸಿ:

-ವರ್ಷದಲ್ಲಿ ಅಂದರೆ 3 ತಿಂಗಳವರೆಗೆ ಅನಿಯಮಿತ ಉಚಿತ ವಿತರಣೆಗಳಿಗಾಗಿ Swiggy One ಮೆಂಬರ್‌ಶಿಪ್‌ ಪಡೆಯಬಹುದು.

-ಪ್ರತಿ ತ್ರೈಮಾಸಿಕಕ್ಕೆ 250ರೂ. ಮೌಲ್ಯದ ಬಿಗ್ ಬಾಸ್ಕೆಟ್ ರಿಯಾಯಿತಿ ವೋಚರ್‌ಗಳನ್ನ ನಿಮ್ಮದಾಗಿಸಿಕೊಳ್ಳಿ.

ಆರೋಗ್ಯ ಮತ್ತು ವಿಮೆ:

-ಉಚಿತ ಮಹಿಳಾ ಆರೋಗ್ಯ ಪ್ಯಾಕೇಜ್‌ ಅನ್ನು ಪಡೆಯಬಹುದು. ಇದರಲ್ಲಿ ಪ್ಯಾಪ್ ಸ್ಮೀಯರ್ ಮತ್ತು ಮ್ಯಾಮೊಗ್ರಫಿ ಪರೀಕ್ಷೆಗಳು ಒಳಗೊಂಡಿರುತ್ತವೆ.

-10 ಲಕ್ಷದವರೆಗಿನ ವೈಯಕ್ತಿಕ ಅಪಘಾತ ಮತ್ತು ಶಾಶ್ವತ ಅಂಗವೈಕಲ್ಯ ರಕ್ಷಣೆ.

ಹೆಚ್ಚುವರಿ ಪ್ರಯೋಜನಗಳು:

-ಅನಿಯಮಿತ ದೇಶೀಯ ವಿಮಾನ ನಿಲ್ದಾಣದ ಕೋಣೆ ಪ್ರವೇಶವಿರುತ್ತದೆ, ಅಂದರೆ ಯಾವುದೇ ನಿರ್ಬಂಧಗಳಿಲ್ಲದೆ ಭಾರತದಲ್ಲಿ ವಿಮಾನ ನಿಲ್ದಾಣದ ವಿಶ್ರಾಂತಿ ಕೋಣೆಗಳನ್ನು ಪ್ರವೇಶಿಸಬಹುದು.

-ಅಂತರಾಷ್ಟ್ರೀಯ ಖರೀದಿಗಳ ಮೇಲೆ 2% ನಷ್ಟು ಫಾರೆಕ್ಸ್ ಮಾರ್ಕ್-ಅಪ್ ಕಡಿಮೆಯಾಗಿದೆ.
-ಇಂಧನ ಸರ್ಚಾರ್ಜ್ ಮನ್ನಾ.

BOBCARD ಲಿಮಿಟೆಡ್

BOBCARD Ltd. ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾದ ಅಂಗಸಂಸ್ಥೆಯಾಗಿದೆ . ಕ್ರೆಡಿಟ್ ಕಾರ್ಡ್‌ಗಳ ವಿತರಣೆ ಮತ್ತು ನಿರ್ವಹಣೆಯ ಮೇಲೆ ಕೇಂದ್ರೀಕರಿಸಲು ಸ್ಥಾಪಿಸಲಾದ BOBCARD Ltd. ವಿವಿಧ ಗ್ರಾಹಕರ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಕ್ರೆಡಿಟ್ ಕಾರ್ಡ್ ಉತ್ಪನ್ನಗಳ ಶ್ರೇಣಿಯನ್ನು ನೀಡುತ್ತದೆ. ಇವುಗಳಲ್ಲಿ ರಿವಾರ್ಡ್ ಪಾಯಿಂಟ್‌ಗಳು, ಕ್ಯಾಶ್‌ಬ್ಯಾಕ್, ಪ್ರಯಾಣದ ಪ್ರಯೋಜನಗಳು ಮತ್ತು ಏರ್‌ಪೋರ್ಟ್ ಲಾಂಜ್ ಪ್ರವೇಶ ಮತ್ತು ವಿಮಾ ರಕ್ಷಣೆಯಂತಹ ಪ್ರೀಮಿಯಂ ವೈಶಿಷ್ಟ್ಯಗಳನ್ನು ಒದಗಿಸುವ ಕಾರ್ಡ್‌ಗಳು ಸೇರಿವೆ.

ಕಂಪನಿಯು ಬ್ಯಾಂಕ್ ಆಫ್ ಬರೋಡಾದ ವ್ಯಾಪಕ ನೆಟ್‌ವರ್ಕ್ ಅನ್ನು ತನ್ನ ಗ್ರಾಹಕರಿಗೆ ಸೇವೆಗಳು ಮತ್ತು ಬೆಂಬಲವನ್ನು ಒದಗಿಸಲು, ಕ್ರೆಡಿಟ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು, ನಿರ್ವಹಿಸಲು ಮತ್ತು ಪಾವತಿಸಲು ಸುಲಭವಾದ ಮಾರ್ಗವನ್ನು ನೀಡುತ್ತದೆ. BOBCARD Ltd. ತನ್ನ ಸ್ಪರ್ಧಾತ್ಮಕ ಕೊಡುಗೆಗಳು ಮತ್ತು ಗ್ರಾಹಕ ಸೇವೆಯ ಮೂಲಕ ಗ್ರಾಹಕರಿಗೆ ತಡೆರಹಿತ ಮತ್ತು ಲಾಭದಾಯಕ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+