ಮುಂಬೈ, ನವೆಂಬರ್ 02: ಬಾಲಿವುಡ್ ನಟಿ, ನೃತ್ಯಗಾರ್ತಿ ಮಾಧುರಿ ದೀಕ್ಷಿತ್ ಮುಂಬೈನಲ್ಲಿ ಬಾಡಿಗೆಗೆ ಮನೆ ಪಡೆದಿದ್ದಾರೆ. ತಿಂಗಳಿಗೆ 12.5 ಲಕ್ಷದಂತೆ ಮೂರು ವರ್ಷಗಳಿಗೆ ಬಾಡಿಗೆ ಮನೆ ಪಡೆದಿದ್ದಾರೆ ಎಂದು Zapkey.com ವರದಿ ಮಾಡಿದೆ.
ತೇಜಾಬ್ ಹಾಗೂ ಹಮ್ ಆಪ್‌ಕೆ ಹೇ ಕೌನ್ ಸೇತಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಮಾಧುರಿ ದೀಕ್ಷಿತ್ ವರ್ಲಿಯಲ್ಲಿರುವ ಇಂಡಿಯಾಬುಲ್ಸ್ ಬ್ಲೂ ಕಟ್ಟಡದ 29ನೇ ಮಹಡಿಯಲ್ಲಿ 5,500 ರೂ ಚದರ ಅಡಿ ವಿಸ್ತೀರ್ಣದ ಮನೆಯನ್ನು ಬಾಡಿಗೆಗೆ ಪಡೆದಿದ್ದಾರೆ.
ಪ್ರತಿ ವರ್ಷ ಶೇ.5ರಷ್ಟು ಬಾಡಿಗೆ ಏರಿಕೆಯಾಗಲಿದ್ದು, ಮೂರು ವರ್ಷಗಳಿಗೆ ಅಲ್ಲಿ ಬಾಡಿಗೆ ಪಡೆದಿದ್ದಾರೆ. ಈಗಾಗಲೇ 3 ಕೋಟಿ ರೂ.ವನ್ನು ಮಾಧುರಿ ನೀಡಿದ್ದಾರೆ. ಅಕ್ಟೋಬರ್ 26ರಂದು ಬಾಡಿಗೆ ನೋಂದಣಿಯಾಗಿದೆ. ಮಾಲೀಕರಾದ ಕಾಜಲ್ ಹಾಗೂ ನಟಿ ಮಾಧುರಿಯಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಅನೇಕ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಮಾಧುರಿ ದೀಕ್ಷಿತ್ 1984ರಲ್ಲಿ ಬಿಡುಗಡೆಯಾದ ಅಬೋಧ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಆದರೆ ಅವರಿಗೆ ಹೆಚ್ಚು ಹೆಸರು ತಂದುಕೊಟ್ಟ ಚಿತ್ರ 1988ರಲ್ಲಿ ತೆರೆಕಂಡ ತೇಜಾಬ್. ನಾಯಕಿಯ ಮೇಲೆಯೇ ಕೇಂದ್ರಿಕೃತವಾದ ಈ ಚಿತ್ರ ಮಾಧುರಿ ಅವರನ್ನು ತಾರಾಪಟ್ಟಕ್ಕೇರಿಸಿತು.
ಮಾಧುರಿ ದೀಕ್ಷಿತ್ 1980, 1990 ಮತ್ತು 2000 ರ ದಶಕದ ಆರಂಭದಲ್ಲಿ ಜನಪ್ರಿಯ ಮತ್ತು ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಬಾಲಿವುಡ್ ನಟಿ. ಮಾಧುರಿ ಬಾಲಿವುಡ್'ನ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸುವ ಮೂಲಕ ಭಾರತೀಯ ಚಿತ್ರರಂಗಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಇವರು ಉತ್ತಮ ನಟಿ ಮಾತ್ರವಲ್ಲ, ಉತ್ತಮ ನರ್ತಕಿ ಕೂಡ. ಇದೇ ಕಾರಣಕ್ಕಾಗಿ ಅವರು ಭಾರತ ಮತ್ತು ವಿಶ್ವದಾದ್ಯಂತ ಲಕ್ಷಾಂತರ ಜನರ ಮೆಚ್ಚುಗೆಯನ್ನು ಪಡೆದಿದ್ದಾರೆ.
ವರದಿಗಳನ್ವಯ ಅವರು ಮುಂಬೈ ಹಾಗೂ ಅಮೆರಿಕಾದಲ್ಲಿ ಆಸ್ತಿ ಹೊಂದಿದ್ದಾರೆನ್ನಲಾಘಿದೆ. ಅವರ ಬಳಿ ಅನೇಕ ರೆಸಿಡೆನ್ಶಿಯಲ್ ಅಪಾರ್ಟ್ಮೆಂಟ್ ಹಾಘೂ ಕಮರ್ಶಿಯಲ್ ಪ್ರಾಪರ್ಟಿ ಕೂಡಾ ಇದೆ.
ಇನ್ನು ಕೆಲ ವರ್ಷಗಳ ಹಿಂದೆ ಅವರು ಫ್ಲೋರಿಡಾದಲ್ಲಿ ಬಹುದೊಡ್ಡ ನಿವೇಶನ ಖರೀದಿಸಿದ್ದರೆನ್ನಲಾಗಿದೆ. ಮಿಯಾಮಿಯಲ್ಲಿ ಒಂದು ಮಾಲ್ ಕೂಡಾ ಖರೀದಿಸಿದ್ದಾರೆ. ಆಡಿ, ರಾಲ್ಸ್ ರಾಯ್ಸ್ ಹಾಗೂ ಸ್ಕೋಡಾ ರಾಪಿಡ್‌ನಂತಹ ಐಷಾರಾಮಿ ಕಾರುಗಳನ್ನೂ ಹೊಂದಿದ್ದಾರೆ.
ಸಲ್ಮಾನ್ ಖಾನ್ ಡುಪ್ಲೆಕ್ಸ್ ಅಪಾರ್ಟ್ಮೆಂಟ್ ಬಾಡಿಗೆ ತಿಂಗಳಿಗೆಷ್ಟಿದೆ? : ಹಿಂದಿ ಚಿತ್ರರಂಗದ ಜನಪ್ರಿಯ ನಟ ಸಲ್ಮಾನ್ ಖಾನ್ ಒಡೆತನದ ಬಾಂದ್ರಾದ ಡುಪ್ಲೆಕ್ಸ್ ಅಪಾರ್ಟ್ಮೆಂಟ್ ಬಾಡಿಗೆ ಒಪ್ಪಂದ ಪತ್ರ ಇಂದು ನವೀಕರಿಸಿದ್ದಾರೆ. ಬಾಂದ್ರಾದ ಈ ಅಪಾರ್ಟ್‌ಮೆಂಟ್ ಬಾಡಿಗೆ ತಿಂಗಳಿಗೆ ಎಷ್ಟಿರಬಹುದು ಎಂಬುದು ಇದೀಗ ಬಹಿರಂಗವಾಗಿದೆ.
ಮುಂದಿನ ಮೂರು ವರ್ಷಗಳ ಅವಧಿಗೆ ಬಾಡಿಗೆ ಒಪ್ಪಂದ ಪತ್ರವನ್ನು ನವೀಕರಿಸಲಾಗಿದ್ದು, ತಿಂಗಳಿಗೆ 8.25 ಲಕ್ಷ ರು ಪಾವತಿಸುತ್ತಿದ್ದಾರೆ ಎಂದು ಜಾಪ್ ಕೀ.ಕಾಂ ವರದಿ ಮಾಡಿದೆ.
ಸಲ್ಮಾನ್ ಖಾನ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಒಡೆತನದಲ್ಲಿರುವ ಬಾಂದ್ರಾದ ಮಕ್ಬಾ ಹೈಟ್ಸ್ ಕಟ್ಟಡದ 17ನೇ ಹಾಗೂ 18ನೇ ಮಹಡಿಯ ಡುಪ್ಲೆಕ್ಸ್ ಅಪಾರ್ಟ್ಮೆಂಟ್ ಬಾಡಿಗೆ ಒಪ್ಪಂದ ರಿನ್ಯೂ ಮಾಡಲಾಗಿದೆ. ಸಲ್ಮಾನ್ ಅಪ್ತರಾದ ಬಾಬಾ ಸಿದ್ದಿಕಿ ಹಾಗೂ ಜೀಶನ್ ಸಿದ್ದಿಕಿ ಅವರು ಸಹಿ ಹಾಕಿ ಪತ್ರಗಳನ್ನು ಪಡೆದಿದ್ದಾರೆ ಎಂದು ಮನಿಕಂಟ್ರೋಲ್ ವರದಿ ಹೇಳಿದೆ.
ಆಗಸ್ಟ್ 30, 2021ರಂದೇ ನೋಂದಣಿ ಮಾಡಿಕೊಳ್ಳಲಾಗಿದೆ. ಮಾರ್ಚ್ 1 ರಿಂದ ಕರಾರು ಪತ್ರ ನೋಂದಣಿ ಪ್ರಕ್ರಿಯೆ ನಡೆಸಲಾಗಿದೆ. ಸುಮಾರು 2,265 ಚದರ ಅಡಿ ವಿಸ್ತೀರ್ಣದ ಈ ಕಟ್ಟಡ 10 ಕಾರು ಪಾರ್ಕಿಂಗ್ ಜಾಗವನ್ನು ಹೊಂದಿದೆ. 17ನೇ ಮಹಡಿಯೂ 1,167.03 ಚದರಡಿ ವಿಸ್ತೀರ್ಣ ಹೊಂದಿದ್ದು, 1,227.84 ಚದರಡಿ ಟೆರೇಸ್ ಇದೆ. 18ನೇ ಮಹಡಿ 1,098.78 ಚದರಡಿ ಇದ್ದು, 431.63 ಚದರಡಿ ಟೆರೇಸ್ ಹೊಂದಿದೆ. ಈ ಒಪ್ಪಂದ ನವೀಕರಣ ಬಗ್ಗೆ ಸಲ್ಮಾನ್ ಖಾನ್ ಕಚೇರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಬಾಂದ್ರಾದಲ್ಲೇ ಇರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ ನಲ್ಲಿ ಸಲ್ಮಾನ್ ಖಾನ್ ಹಾಗೂ ಕುಟುಂಬ ನೆಲೆಸಿದೆ. ಪನ್ವೇಲ್ ನಲ್ಲಿ ದೊಡ್ಡ ಫಾರ್ಮ್ ಹೌಸ್ ಹೊಂದಿದ್ದಾರೆ. ಬಾಂದ್ರಾದ ಅಪಾರ್ಟ್ಮೆಂಟ್ ನಿರ್ಮಾಣ ವೇಳೆಯಲ್ಲೇ 30 ಕೋಟಿ ರು ಕೊಟ್ಟು ಖರೀದಿಸಿದ್ದರು ಎಂಬ ಸುದ್ದಿ ಕಳೆದ ಎರಡು ವರ್ಷಗಳ ಹಿಂದೆ ಬಂದಿತ್ತು. ನಂತರ ಮಕ್ಬಾ ಹೈಟ್ಸ್ ಡುಪ್ಲೆಕ್ಸ್ ಅಪಾರ್ಟ್ಮೆಂಟ್ ಗಳನ್ನು ತಮ್ಮ ಆಪ್ತರಾದ ಬಾಬಾ ಸಿದ್ದಿಕಿ ಸುಪರ್ದಿಗೆ ಸಲ್ಮಾನ್ ನೀಡಿದ್ದರು.
ಭಾರತದ ಮೊತ್ತ ಮೊದಲ ಕ್ರಿಪ್ಟೋ ಟೋಕನ್ ಚಿಂಗಾರಿಯ ಗರಿ ಲೋಕಾರ್ಪಣೆ ಮಾಡಿರುವ ಸಲ್ಮಾನ್ ಖಾನ್ ಅವರು ಕ್ರಿಪ್ಟೋಕರೆನ್ಸಿಯಲ್ಲಿ ಆಸಕ್ತಿ ಹೊಂದಿದ್ದಾರೆ ಎಂಬ ವಿಷಯವೂ ಬಹಿರಂಗವಾಗಿದೆ. NFT ಕ್ಷೇತ್ರದತ್ತ ಸಿನಿಮಾ ಸೆಲೆಬ್ರಿಟಿಗಳು ಮುಖ ಮಾಡುತ್ತಿದ್ದು, ಮುಂಬೈನ ರಿಯಲ್ ಎಸ್ಟೇಟ್ ನಲ್ಲೂ ಡಿಜಿಟಲ್ ಕರೆನ್ಸಿ ಓಡಾಡುತ್ತಿದೆ ಎಂಬ ಸುದ್ದಿಯಿದೆ. ಮನೆ, ಬಂಗಲೆ ನೋಂದಣಿ ವೇಳೆ, ವೈಟ್ , ಬ್ಲಾಕ್ ಎಂದು ಸ್ಟ್ಯಾಂಪ್ ಡ್ಯೂಟಿ ಕಟ್ಟಿ ಕೂಡಾ ಇಂತಿಷ್ಟು ಉಪ ನೋಂದಣಿ ಕಚೇರಿಯ ಅಧಿಕಾರಿಗಳಿಗೆ ನೀಡುವ ಕಾಲವಿತ್ತು. ಈಗೆಲ್ಲ ಇದು ಡಿಜಿಟಲ್ ಕರೆನ್ಸಿ, ಗೂಗಲ್ ಪೇ ಸೇರಿದಂತೆ ಡಿಜಿಟಲ್ ಪೇಮೆಂಟ್ ಗೇಟ್ ವೇ ಗಳು ಸ್ಥಾನ ಪಡೆದುಕೊಂಡಿವೆ.
ಪ್ರತಿವರ್ಷ ಮುಂಬೈ ನಗರದಲ್ಲೇ ಅತಿದೊಡ್ಡ ಈದ್ ಪಾರ್ಟಿ ಕೊಡುವ ಬಾಬಾ ಸಿದ್ದಿಕಿ ಅವರು ಸಲ್ಮಾನ್ ಖಾನ್ ಒಡೆತನದ ಸಂಸ್ಥೆಯ ಮೂಲಕ ಈ ಅಪಾರ್ಟ್ಮೆಂಟ್ ವ್ಯವಹಾರ ಕುದುರಿಸಿದ್ದರು. ನಂತರ 2021ರಲ್ಲಿ ಬಾಡಿಗೆ ಒಪ್ಪಂದ ನವೀಕರಿಸಿದ್ದು, 11 ತಿಂಗಳಿಗೆ ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications