ಹಿಂದಿ ಚಿತ್ರರಂಗದ (Bollywood) ಲೆಜೆಂಡ್‌ಗಳಲ್ಲಿ ಧರ್ಮೇಂದ್ರ (Dharmendra) ಕೂಡಾ ಒಬ್ಬರು. ಆರು ದಶಕಗಳಿಗೂ ಹೆಚ್ಚು ಕಾಲದಿಂದ ತಮ್ಮ ಅದ್ಭುತ ನಟನೆಯಿಂದ ದೇಶದೆಲ್ಲೆಡೆ ಅಭಿಮಾನಿಗಳನ್ನು ಹೊಂದಿದ್ದಾರೆ. ಸಿನಿಮಾದಲ್ಲಿ ಯಶಸ್ಸಿ ನಟನಾಗಿದ್ದಲ್ಲದೇ, ವ್ಯವಹಾರದಲ್ಲೂ ಉತ್ತಮ ನಾಯಕ ಎಂದೆನಿಸಿಕೊಡಿದ್ದಾರೆ. 'ಬಾಲಿವುಡ್‌ನ ಹಿ-ಮ್ಯಾನ್' (Bollywood He Man) ಎಂದೇ ಖ್ಯಾತರಾದ 89 ವರ್ಷದ ನಟ ಧರ್ಮೇಂದ್ರ ಇದೀಗ ನಿಧನರಾಗಿದ್ದಾರೆ (Dharmendra Death). ಪಂಜಾಬ್‌ನ ಸಣ್ಣ ಗ್ರಾಮದಲ್ಲಿ ಜನಿಸಿದ ಧರ್ಮೇಂದ್ರ, ಭಾರತದ ಅತ್ಯಂತ ಜನಪ್ರಿಯ ಸೆಲೆಬ್ರಿಟಿಗಳಲ್ಲಿ ಒಬ್ಬರು.

ಕನಸುಗಾರ "ಸೂಪರ್‌ಸ್ಟಾರ್ ಆಗಿದ್ದು ಹೇಗೆ?
ಪಂಜಾಬ್‌ನ ಸಾಹನೆವಾಲ್‌ನಲ್ಲಿ ಜನಿಸಿದ ಧರ್ಮೇಂದ್ರ ಅವರಿಗೆ ಚಲನಚಿತ್ರಗಳೆಂದರೆ ಬಾಲ್ಯದಿಂದಲೂ ಬಹಳ ಆಸಕ್ತಿ. ಸಿನಿಮಾದಲ್ಲಿ ಅವರೂ ಕೂಡಾ ಆಕ್ಟ್ ಮಾಡಬೇಕೆಂದು ಕನಸು ಕಂಡಿದ್ದರಂತೆ. ಅದೇ ರೀತಿ ಫಿಲ್ಮ್‌ಫೇರ್ ನ್ಯೂ ಟ್ಯಾಲೆಂಟ್ ಸ್ಪರ್ಧೆಯನ್ನು ಗೆದ್ದ ನಂತರ, ಅವರು ನಟನಾ ವೃತ್ತಿಗಾಗಿ ಮುಂಬೈಗೆ ಕಾಲಿಡುತ್ತಾರೆ. 1960ರಲ್ಲಿ ತೆರೆಕಂಡ 'ದಿಲ್ ಭಿ ತೇರಾ ಹಮ್ ಭಿ ತೇರೆ' ಚಿತ್ರದ ಮೂಲಕ ಸಿನಿ ಜಗತ್ತಿಗೆ ಪಾದಾರ್ಪಣೆ ಮಾಡಿದರು. 'ಫೂಲ್ ಔರ್ ಪತ್ಥರ್' (1966) ಚಿತ್ರವು ಅವರಿಗೆ ಸಿನಿ ಕೆರಿಯರ್‌ನಲ್ಲಿ ಹೊಸ ದಾರಿಯನ್ನು ನೀಡಿತು. ಮುಂದಿನ ಕೆಲವು ದಶಕಗಳಲ್ಲಿ, 'ಸತ್ಯಕಾಮ್' (1969) ಮತ್ತು 'ಮೇರಾ ಗಾಂವ್ ಮೇರಾ ದೇಶ್' (1971) ಹೀಗೆ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದರು..
ಅವರ ನಟನೆ, ತೆರೆ ಮೇಲೆ ಕಾಣುತ್ತಿದ್ದ ಲುಕ್ ಮತ್ತು ಹೇಮಾ ಮಾಲಿನಿ ಅವರೊಂದಿಗಿನ ಜೋಡಿಯು ಅವರನ್ನು ಮತ್ತಷ್ಟು ಜನಪ್ರಿಯಗೊಳಿಸಿತು.
300ಕ್ಕೂ ಅಧಿಕ ಚಿತ್ರದಲ್ಲಿ ನಟನೆ!
ತಮ್ಮ ವೃತ್ತಿಜೀವನದುದ್ದಕ್ಕೂ, ಲೆಜೆಂಡ್ ನಟ ಧರ್ಮೇಂದ್ರ 300ಕ್ಕೂ ಅಧಿಕ ಚಲನಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಆಕ್ಷನ್ ಹೀರೋದಿಂದ ಹಿಡಿದು ರೋಮ್ಯಾಂಟಿಕ್ ಪಾತ್ರಗಳವರೆಗೂ ಎಲ್ಲಾ ಪಾತ್ರದಲ್ಲಿ ಸೈ ಎನಿಸಿಕೊಂಡಿದ್ದರು.
1983ರಲ್ಲಿ, ಧರ್ಮೇಂದ್ರ ಅವರು ತಮ್ಮ ನಿರ್ಮಾಣ ಸಂಸ್ಥೆ 'ವಿಜೇತಾ ಫಿಲ್ಮ್ಸ್' ಅನ್ನು ಪ್ರಾರಂಭಿಸಿದರು. ಈ ಸಂಸ್ಥೆ 'ಬೆತಾಬ್' ಮತ್ತು 'ಬರ್ಸಾತ್' ನಂತಹ ಯಶಸ್ವಿ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಈ ಚಿತ್ರಗಳ ಮೂಲಕ ಅವರ ಪುತ್ರರಾದ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಅವರನ್ನು ಬಾಲಿವುಡ್‌ಗೆ ಪರಿಚಯಿಸಿದ್ದಾರೆ. ಇತ್ತೀಚೆಗೆ, ತಮ್ಮ ಮೊಮ್ಮಗ ಕರಣ್ ಡಿಯೋಲ್ ಅವರ ಚೊಚ್ಚಲ ಚಿತ್ರ 'ಪಾಲ್ ಪಾಲ್ ದಿಲ್ ಕೆ ಪಾಸ್' ಚಿತ್ರಕ್ಕೂ ಸಹ ಇದೇ ನಿರ್ಮಾಣ ಸಂಸ್ಥೆ ಹೂಡಿಕೆ ಹಾಕಿದೆ.
ವೈಯಕ್ತಿಕ ಜೀವನ
ಧರ್ಮೇಂದ್ರ ಅವರು ಎರಡು ವಿವಾಹವಾಗಿದ್ದಾರೆ. ಅವರು 19 ವಯಸ್ಸಿನಲ್ಲೇ ಅಂದರೆ 1954 ರಲ್ಲಿ ಪ್ರಕಾಶ್ ಕೌರ್ ಅವರನ್ನು ವಿವಾವಾದರು. ಅವರಿಗೆ ಇಬ್ಬರು ಪುತ್ರರಿದ್ದಾರೆ, ಸನ್ನಿ ಮತ್ತು ಬಾಬಿ ಡಿಯೋಲ್, ಇಬ್ಬರೂ ತಮ್ಮದೇ ಆದ ರೀತಿಯಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಂತರ ಧರ್ಮೇಂದ್ರ ಅವರು 1980ರಲ್ಲಿ ನಟಿ ಹೇಮಾ ಮಾಲಿನಿಯನ್ನು ವಿವಾಹವಾದರು. ಪ್ರೀತಿ ಮಾಡಿ ಮದುವೆಯಾದ ಇವರಿಗೆ ಇಶಾ ಮತ್ತು ಅಹನಾ ಡಿಯೋಲ್ ಎಂಬ ಇಬ್ಬರು ಪುತ್ರಿಯರಿದ್ದಾರೆ.
ಸಿನಿಮಾದಲ್ಲೂ ಸೈ, ವ್ಯಾಪಾರಕ್ಕೂ ಜೈ!
ಸಿನಿಮಾದ ಮಾತ್ರವಲ್ಲದೇ, ಧರ್ಮೇಂದ್ರ ಒಂದು ಬಹುದೊಡ್ಡ ವ್ಯಾಪಾರ ಸಾಮ್ರಾಜ್ಯವನ್ನು ನಿರ್ಮಿಸಿದ್ದಾರೆ. ಅವರ ಅಂದಾಜು ನಿವ್ವಳ ಮೌಲ್ಯ ₹335-₹450 ಕೋಟಿಗಳಷ್ಟಿದೆ ಎನ್ನಲಾಗಿದೆ. ಡಿಯೋಲ್ ಕುಟುಂಬದ ಒಟ್ಟು ಸಂಪತ್ತು ₹1,000 ಕೋಟಿಗಳನ್ನು ಮೀರಿದೆ ಎಂದು ವರದಿಯಾಗಿದೆ.
ನಟನೆಯ ಆದಾಯದ ಜೊತೆಗೆ, ಧರ್ಮೇಂದ್ರ ರಿಯಲ್ ಎಸ್ಟೇಟ್ ಮತ್ತು ಹಾಸ್ಪಿಟಾಲಿಟಿ ಕ್ಷೇತ್ರಗಳಲ್ಲೂ ಹೂಡಿಕೆ ಮಾಡಿದ್ದರು. ಅವರ 'ಗರಮ್ ಧರಮ್ ಧಾಬಾ' ಮತ್ತು ಕರ್ನಾಲ್ ಹೆದ್ದಾರಿಯಲ್ಲಿರುವ 'ಹೀ-ಮ್ಯಾನ್' ಎಂಬ ರೆಸ್ಟೋರೆಂಟ್‌ಗಳು ಅವರ ಜನಪ್ರಿಯತೆಯನ್ನು ಬಿಂಬಿಸುತ್ತವೆ. ಈ ಎರಡೂ ರೆಸ್ಟೋರೆಂಟ್‌ಗಳು ತುಂಬಾನೇ ಬೇಡಿಯದ್ದಾಗಿದೆ.
ಧರ್ಮೇಂದ್ರ ತಮ್ಮ ಮುಂಬೈನ ಮನೆ ಮತ್ತು ಲೋನಾವಾಲಾದಲ್ಲಿನ 100 ಎಕರೆ ವಿಸ್ತಾರವಾದ ಫಾರ್ಮ್‌ಹೌಸ್ ಜೊತೆಯೇ ಸಮಯ ಕಳೆಯುತ್ತಿದ್ದರು. ಇನ್ನು ಧರ್ಮೇಂದ್ರ ಅವರು ಮಹಾರಾಷ್ಟ್ರದಲ್ಲಿ ₹17 ಕೋಟಿಗೂ ಹೆಚ್ಚು ಮೌಲ್ಯದ ಹೆಚ್ಚುವರಿ ಭೂಮಿಯನ್ನು ಸಹ ಹೊಂದಿದ್ದರು.
ವಾಹನಗಳ ಬಗ್ಗೆ ಬಹಳಷ್ಟು ಕ್ರೇಜ್ ಹೊಂದಿದ್ದ ಧರ್ಮೇಂದ್ರ, ರೇಂಜ್ ರೋವರ್ ಇವೋಕ್, ಮರ್ಸಿಡಿಸ್-ಬೆನ್ಜ್ SL500 ಮತ್ತು ವಿಂಟೇಜ್ ಫಿಯೆಟ್ ನಂತಹ ಕಾರುಗನ್ನು ಹೊಂದಿದ್ದರು ಎನ್ನಲಾಗಿದೆ.


Click it and Unblock the Notifications