ಭಾರತದ ಆರ್ಥಿಕ ನೀತಿಗಳು ಸುಧಾರಣೆಯತ್ತ ಸಾಗುತ್ತಿದೆ. ಅದರಂತೆಯೇ ವಿದೇಶಿ ದೈತ್ಯ ಕಂಪನಿಗಳ ತೆರಿಗೆ ಅನುಸರಣೆ ಹಾಗೂ ಅವುಗಳ ಮೇಲಿನ ನಿಯಂತ್ರಣ ಕೂಡ ಅಷ್ಟೇ ಕಠಿಣಗೊಳ್ಳುತ್ತಿದೆ. ಇದಕ್ಕೆ ಉದಾಹರಣೆ ಎಂದರೆ ಜರ್ಮನಿ ದೇಶದ ಬಾಷ್ ಕಂಪನಿ..ಅಂದರೆ ಬಾಷ್ ಕಂಪನಿಗೆ ಭಾರತೀಯ ತೆರಿಕೆ ಇಲಾಖೆ 20 ಕೋಟಿ ಹೆಚ್ಚು ರೂಪಾಯಿಗಳ ತೆರಿಗೆ ಡಿಮ್ಯಾಂಡ್ ನೋಟಿಸ್ ನೀಡಿದೆ. ಈ ವರ್ಷ...ಅಂದರೆ, 2025ರ ಮಾರ್ಚ್ 28ರಂದು ಹೊರಡಿಸಿದ ಮೌಲ್ಯಮಾಪನ ಆದೇಶದ ಪ್ರಕಾರ, ಆದೇಶದಲ್ಲಿ ₹18.36 ಕೋಟಿ ಮೂಲ ತೆರಿಗೆ ಮತ್ತು ₹1.80 ಕೋಟಿ ಬಡ್ಡಿ ಸೇರಿ ಒಟ್ಟು ಇಪ್ಪತ್ತು ಕೋಟಿಗೂ ಹೆಚ್ಚು ರೂಪಾಯಿಗಳ ತೆರಿಗೆಯನ್ನು ಪಾವತಿಸುವಂತೆ, ಡಿಮ್ಯಾಂಡ್ ನೋಟಿಸ್ ಮೂಲಕ ಸೂಚನೆ ನೀಡಲಾಗಿದೆ.

ಅಂದಹಾಗೆ ಈ ರೀತಿಯ ಒಂದು ಆದೇಶವನ್ನ, ತೆರಿಗೆ ಇಲಾಖೆಯ ಮೌಲ್ಯಮಾಪನ ಘಟಕದಿಂದ ಹೊರಡಿಸಲಾಗಿದೆ. ಕಂಪನಿಯು ಈಗ ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಇದೆ. ಅಲ್ಲದೇ ದಂಡದ ಪರಿಮಾಣವನ್ನು ಇನ್ನೂ ಅಂಗೀಕರಿಸಲಾಗಿಲ್ಲ ಎನ್ನಲಾಗಿದ್ದು, ಬಾಷ್ ಲಿಮಿಟೆಡ್ ತನ್ನ ಸ್ಟಾಕ್ ಎಕ್ಸ್ಚೇಂಜ್ ಫೈಲಿಂಗ್‌ನಲ್ಲಿ ತಿಳಿಸಿದೆ. ಅಲ್ಲದೇ ತೆರಿಗೆ ಪಾವತಿಯಲ್ಲಿ ಸ್ವಲ್ಪ ವಿಳಂಬವಾಗಿದ್ದು, ಅಜಾಗರೂಕತೆ ಉಂಟಾಗಿದ್ದು ಗಮನಕ್ಕೆ ಬಂದ ತಕ್ಷಣವೇ ವರದಿ ಮಾಡಲಾಗಿದೆ. ಇದು ಕಂಪನಿಯ ಯಾವುದೇ ಉದ್ದೇಶಿತ ತೆರಿಗೆ ತಪ್ಪಿಸಿಕೊಳ್ಳುವ ಪ್ರಯತ್ನವಲ್ಲ ಎಂಬುದಾಗಿ ಬಾಷ್ ಸ್ಪಷ್ಟಪಡಿಸಿದೆ. ಇತ್ತ ಬಾಷ್ ಕಂಪನಿ ಕೂಡ ತೆರಿಗೆ ಸಂಬಂಧಿತ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸುತ್ತಿದೆ. ಈ ಟ್ಯಾಕ್ಸ್ ಡಿಮ್ಯಾಮಡ್ ಕಂಪನಿಯ ಆರ್ಥಿಕ ಫಲಿತಾಂಶದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬದನ್ನು ಕೂಡ ಗಮನಿಸಬೇಕಾದದ್ದೇ.
ಭಾರತದಲ್ಲಿ ಸಾಕಷ್ಟು ವಿದೇಶಿ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಅವರು ಯಶಸ್ವಿಯಾಗಿ ಕಂಪನಿ ನಿರ್ವಹಿಸಬೇಕು ಎಂದರೆ, ಸರಿಯಾದ ತೆರಿಗೆ ಪಾವತಿ ಮಾಡುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಅದಕ್ಕಾಗಿ ಆದಾಯ ತೆರಿಗೆ ಇಲಾಖೆ ಹೆಚ್ಚಿನ ಮೌಲ್ಯಮಾಪನವನ್ನು ನಡೆಸುತ್ತಿದೆ.
1. ವಿದೇಶಿ ಕಂಪನಿಗಳಿಗೆ ಹೆಚ್ಚಿನ ತೆರಿಗೆ ಪರಿಶೀಲನೆ:
ಇನ್ನು ಹಸ್ತಾಂತರ ದರ ತಪಾಸಣೆಯು ಕಳೆದ ಕೆಲವು ವರ್ಷಗಳಿಂದ, ಹೆಚ್ಚು ಕಠಿಣಗೊಂಡಿವೆ. ಬಹುರಾಷ್ಟ್ರೀಯ ಕಂಪನಿಗಳು, ತಮ್ಮ ಒಡಹುಟ್ಟಿದ ಸಹಚರ ಸಂಸ್ಥೆಗಳ ನಡುವಿನ ವಾಣಿಜ್ಯ ವಹಿವಾಟುಗಳ ಮೂಲಕ ತೆರಿಗೆ ಲಾಭ ಪಡೆಯುತ್ತವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಹೀಗಾಗಿ ಆದಾಯ ತೆರಿಗೆ ಇಲಾಖೆ ಈಗ ವಹಿವಾಟುಗಳ ಸಚ್ಚಚಿತ್ತತೆಯನ್ನು ಪರಿಶೀಲಿಸಲು ಹೊಸ ತಂತ್ರಗಳನ್ನು ಬಳಸುತ್ತಿದೆ.
2. ತೆರಿಗೆ ತಪ್ಪಿಸುವ ಕಂಪನಿಗಳ ವಿರುದ್ಧ ತೀವ್ರ ಕ್ರಮ:
ಇದಿಷ್ಟೇ ಅಲ್ಲ ಕೆಲವು ವಿದೇಶಿ ಕಂಪನಿಗಳು ಪರದೇಶಿ ವಹಿವಾಟು ಮತ್ತು ಆಂತರಿಕ ಲಾಭ ಹಂಚಿಕೆಗಳ ಮೂಲಕ ತೆರಿಗೆ ಪಾವತಿ ತಪ್ಪಿಸುವ ಪ್ರಯತ್ನದಲ್ಲಿವೆ. ಹೀಗಾಗಿ ಭಾರತದ ಆದಾಯ ತೆರಿಗೆ ಇಲಾಖೆ ವ್ಯಾಪಕ ತನಿಖೆ ಮತ್ತು ನೋಟಿಸ್ ಜಾರಿಗಳನ್ನು ಮಾಡುತ್ತಿವೆ.
3. ತೆರಿಗೆ ಸಂಬಂಧಿತ ತೊಂದರೆಗಳಿಂದ ಪರಿಣಾಮ:
ಇನ್ನು ಬಾಷ್ ಮತ್ತು ವೋಕ್ಸ್‌ವ್ಯಾಗನ್ ಪ್ರಕರಣಗಳು ಮುಂಬರುವ ದಿನಗಳಲ್ಲಿ, ವಿದೇಶಿ ನೇರ ಬಂಡವಾಳ ಹೂಡಿಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಭಾರತದಲ್ಲಿ ಮೂಡೀಸ್, ಫಿಚ್ ಮುಂತಾದ ಅಂತರಾಷ್ಟ್ರೀಯ ಶ್ರೇಣೀಕರಣ ಸಂಸ್ಥೆಗಳು ಇಂತಹ ಪ್ರಕರಣಗಳನ್ನು ಗಮನಿಸುತ್ತವೆ. ಈ ವಿದೇಶಿ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡುವ ಮೊದಲು ನೀತಿ, ನಿರ್ದೇಶ ಮತ್ತು ತೆರಿಗೆ ವ್ಯವಹಾರಗಳ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗಿದೆ.
ಒಟ್ಟಿನಲ್ಲಿ ಭಾರತದಲ್ಲಿ ತೆರಿಗೆ ನಿಯಮಗಳು ಸದೃಢಗೊಳ್ಳುತ್ತಿವೆ. ಅಲ್ಲದೇ ಎಲ್ಲಾ ವಿದೇಶಿ ಕಂಪನಿಗಳು ಸಮಗ್ರ ಪಾರದರ್ಶಕತೆ ಮತ್ತು ಪಾಲನೆ ತಂತ್ರಗಳೊಂದಿಗೆ ಮುನ್ನಡೆಯಬೇಕಾಗಿದೆ. ಬಾಷ್ ಲಿಮಿಟೆಡ್‌ನ ತೆರಿಗೆ ವಿಚಾರ ಇದಕ್ಕೆ ದೊಡ್ಡ ಉದಾಹರಣೆಯಾಗಿದ್ದು, ಮುಂದಿನ ದಿನಗಳಲ್ಲಿ ಇತರ ಕಂಪನಿಗಳಿಗೆ ಕೂಡ ಇದರಿಂದ ಪಾಠ ಕಲಿಯಬಹುದಾಗಿದೆ. ಹೀಗಾಗಿ ಈಗಲೇ ಎಚ್ಚೆತ್ತುಕೊಳ್ಳುವುದು ಮುಖ್ಯವಾಗಿದೆ.


Click it and Unblock the Notifications