For Quick Alerts
ALLOW NOTIFICATIONS  
For Daily Alerts

ಚೀನಾ ವಸ್ತುಗಳ ಬಹಿಷ್ಕಾರ: ಆರ್ಥಿಕ ಸಲಹೆಗಾರರ ನಿಲುವೇನು?

|

ನವದೆಹಲಿ: ಭಾರತ, ಚೀನಾ ಗಡಿ ಉದ್ವಿಗ್ನತೆಯ ನಂತರ ಭಾರತದಲ್ಲಿ ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕು, ನಿಷೇಧಿಸಬೇಕು ಹಾಗೂ ಆಮದನ್ನು ನಿಲ್ಲಿಸಬೇಕು ಎಂಬ ಬಲವಾದ ಕೂಗು ಕೇಳಿ ಬರುತ್ತಿದೆ.

ಅದರೆ, ಇದು ಸರಿಯಾದ ನಿಲುವಲ್ಲ ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಹೇಳಿದ್ದಾರೆ. ಆರ್ಥಿಕ ಸಂಘಟನೆ ಎಂಸಿಸಿಐ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಮಾತನಾಡಿದ ಅವರು, ಹೊರ ದೇಶಗಳಿಗೆ ಬಾಗಿಲು ಮುಚ್ಚುವುದರಿಂದ ಭಾರತಕ್ಕೆ ಲಾಭ ಆಗುವುದಿಲ್ಲ ಎಂದು ಹೇಳಿದ್ದಾರೆ.

ಚೀನಾ ಮೇಲಿನ ಸಿಟ್ಟಿಗೆ ಮೊಬೈಲ್ Appಗಳ ಮೇಲೆ ಬೀಳ್ತಿದೆ ಪೆಟ್ಟುಚೀನಾ ಮೇಲಿನ ಸಿಟ್ಟಿಗೆ ಮೊಬೈಲ್ Appಗಳ ಮೇಲೆ ಬೀಳ್ತಿದೆ ಪೆಟ್ಟು

1991 ರವರೆಗೆ ದೇಶವು ಆಮದು ನೀತಿಯಲ್ಲಿ ಬದಲಿ ಮಾದರಿಯನ್ನು ಅನುಸರಿಸಿದೆ. ಅದರಿಂದ ಭಾರತಕ್ಕೆ ಹಾನಿಯಾಗುವುದಿಲ್ಲ. ಆದರೆ, ಅಂದಿನಿಂದ ಆ ವಿಧಾನವನ್ನು ಅಪಖ್ಯಾತಿ ಮಾಡಲಾಗಿದೆ ಎಂದು ಕೃಷ್ಣಮೂರ್ತಿ ಹೇಳಿದ್ದಾರೆ. ಪ್ರಸ್ತುತ ಕಾಲ ಘಟ್ಟದಲ್ಲಿ ಭಾರತವು ಇತರ ದೇಶಗಳೊಂದಿಗೆ ಸ್ಪರ್ಧಿಸಬೇಕಾಗಿದೆ. ಹಾಗಾಗಿ ಬೇರೆ ದೇಶಗಳನ್ನು ಆರ್ಥಿಕವಾಗಿ ಬಹಿಷ್ಕರಿಸುವುದು ಸರಿಯಲ್ಲ. ಆದರೆ, ಉದ್ದೇಶಪೂರ್ವಕವಾಗಿ ಗಡಿಯಲ್ಲಿ ಉಪಟಳ ನೀಡುವ ನಡೆಸುವ ದೇಶಗಳೊಂಡಿಗೆ ವ್ಯಾಪಾರ ನಡೆಸಬೇಕು ಎಂದು ನಾನು ಹೇಳುವುದಿಲ್ಲ ಎಂದಿದ್ದಾರೆ.

ಚೀನಾ ವಸ್ತುಗಳ ಬಹಿಷ್ಕಾರ: ಆರ್ಥಿಕ ಸಲಹೆಗಾರರ ನಿಲುವೇನು?

ಕೊರೊನಾವೈರಸ್ ಪರಿಣಾಮವಾಗಿ ಬೇಡಿಕೆ ಕುಸಿದಿದ್ದು, ಅನಿಶ್ಚಿತತೆಯ ಈ ಸಮಯದಲ್ಲಿ ಬೇಡಿಕೆ ಹೆಚ್ಚಿಸಲು ಯಾವುದೇ ಕ್ರಮವೂ ಸಹಾಯ ಮಾಡುವುದಿಲ್ಲ ಎಂದು ಕೃಷ್ಣಮೂರ್ತಿ ಹೇಳಿದ್ದಾರೆ.

English summary

Boycott China Products: This Is Not Help For India Says CEA Krishnamurthy

Boycott China Products: This Is Not Help For India Says CEA Krishnamurthy.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X