ಬ್ರಿಗೇಡ್ ಎಂಟರ್ ಪ್ರೈಸಸ್ ಲಿಮಿಟೆಡ್..ಇದು ಭಾರತದ ಅಗ್ರಗಣ್ಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಕಂಪನಿಗಳಲ್ಲಿ ಒಂದಾಗಿದೆ. ಅಭಿವೃದ್ಧಿ, ನಿರ್ಮಾಣ ಮತ್ತು ನಿರ್ವಹಣಾ ಸೇವೆಗಳಲ್ಲಿಯೂ ಪ್ರಮುಖ ಪಾತ್ರವಹಿಸಿರುವ ಈ ಕಂಪನಿ ಐಷಾರಾಮಿ ಅಪಾರ್ಟ್‌ಮೆಂಟ್‌ಗಳು, ವಿಲ್ಲಾಗಳು, ಐಟಿ ಪಾರ್ಕ್‌ಗಳು, ಬೃಹತ್ ಶಾಪಿಂಗ್ ಮಾಲ್‌ಗಳು ಮತ್ತು ವಾಣಿಜ್ಯ ಬ್ಲಾಕ್‌ಗಳು, ಸ್ಟಾರ್ ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ಸೇವಿತ ಅಪಾರ್ಟ್‌ಮೆಂಟ್‌ಗಳು, ವಸತಿ, ಉದ್ಯಾನ, ವಾಣಿಜ್ಯ, ಶಾಲೆ, ಮತ್ತು ಮನರಂಜನಾ ಸ್ಥಳಗಳು ಹೀಗೆ ನಾನಾ ಪ್ರಾಜೆಕ್ಟ್‌ಗಳನ್ನು ನೀಡಿದೆ. ಈಗ ಇದೇ ಕಂಪನಿ ಹೊಸದೊಂದು ಪ್ರಾಜೆಕ್ಟ್‌ಗೆ ಕೈ ಹಾಕಿದೆ. ಅದು ಕೂಡ ಬೆಂಗಳೂರು ಗ್ರಾಮಾಂತರವಾದ ದೇವನಹಳ್ಳಿಯಲ್ಲಿ..

ಹೌದು, ಹೆಸರಾಂತ ರಿಯಲ್ ಎಸ್ಟೇಟ್ ಕಂಪನಿಯಾದ ಬ್ರಿಗೇಡ್ ಎಂಟರ್‌ಪ್ರೈಸಸ್ ಲಿಮಿಟೆಡ್, ಬೆಂಗಳೂರು ಗ್ರಾಮಾಂತರ ದೇವನಹಳ್ಳಿಯಲ್ಲಿ ಎಬೊನಿ @ ಬ್ರಿಗೇಡ್ ಆರ್ಚರ್ಡ್ಸ್ ಎಂಬ ಹೊಸ ಪ್ರೀಮಿಯಂ ವಸತಿ ಯೋಜನೆ ಆರಂಭಿಸಿದೆ. ಈ ಹೊಸ ಯೋಜನೆ, 135 ಎಕರೆ ವಿಸ್ತೀರ್ಣದ ಬ್ರಿಗೇಡ್ ಆರ್ಚರ್ಡ್ಸ್ ಟೌನ್‌ಶಿಪ್‌ನ ಭಾಗವಾಗಿ ಅಭಿವೃದ್ಧಿಯಾಗುತ್ತಿದೆ.
ಇನ್ನು ಈ ಪ್ರೀಮಿಯಂ ವಸತಿ ಯೋಜನೆಯು 0.5 ಮಿಲಿಯನ್ ಚದರ ಅಡಿ ಅಭಿವೃದ್ಧಿ ಪ್ರದೇಶವನ್ನು ಹೊಂದಿದೆ. ಅಲ್ಲದೇ 230 ವಸತಿ ಘಟಕಗಳು ಈ ಯೋಜನೆಯ ಅಂಶಗಳಾಗಿವೆ. ಹಾಗೆಯೇ ಈ ಯೋಜನೆಯು ₹380 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಆದಾಯ ತರುವ ಸಾಮರ್ಥ್ಯವನ್ನು ಹೊಂದಿದೆ. ಬೆಂಗಳೂರಿನ ಅಧಿಕ ಪ್ರಮಾಣದಲ್ಲಿ ಬೆಳೆಯುತ್ತಿರುವ ವಸತಿ ಬೇಡಿಕೆಗೆ ತಕ್ಕಂತೆ ಈ ಯೋಜನೆ ವಿನ್ಯಾಸಗೊಂಡಿದ್ದು, ನಗರದ ಆಧುನಿಕ ಕುಟುಂಬಗಳಿಗೆ ಉನ್ನತ-ಮಟ್ಟದ ವಾಸಸ್ಥಳವನ್ನು ಒದಗಿಸುವ ಗುರಿಯಿದೆ.
ಈ ಯೋಜನೆಯ ಮಹತ್ವ ಮತ್ತು ವಿಶೇಷತೆ:
ಇನ್ನು ಬ್ರಿಗೇಡ್ ಆರ್ಚರ್ಡ್ಸ್ ಟೌನ್‌ಶಿಪ್ ಸಂಪೂರ್ಣ ಸಂಯೋಜಿತ ವಾಸಸ್ಥಳವಾಗಿದೆ. ಈ ಯೋಜನೆಯಲ್ಲಿ ವಸತಿ, ವಾಣಿಜ್ಯ, ಮತ್ತು ಮನರಂಜನಾ ಜಾಗಗಳು ಸಮರ್ಪಕವಾಗಿ ಸಂಯೋಜಿತಗೊಂಡಿವೆ. ಅಲ್ಲದೇ ಈ ಯೋಜನೆ ನಗರವಾಸಿಗಳಿಗೆ ಐಷಾರಾಮಿ, ಸುಸ್ಥಿರ ಹಾಗೂ ಸಮುದಾಯ ಆಧಾರಿತ ಜೀವನದ ಅನುಭವವನ್ನು ಒದಗಿಸುವಂತೆ ರೂಪುಗೊಂಡಿದೆ.
ಇನ್ನು ಈ ಬಗ್ಗೆ ಬ್ರಿಗೇಡ್ ಎಂಟರ್‌ಪ್ರೈಸಸ್‌ನ ವ್ಯವಸ್ಥಾಪಕ ನಿರ್ದೇಶಕಿ ಪವಿತ್ರ ಶಂಕರ್ ಅವರು ಮಾತನಾಡಿದ್ದಾರೆ. ಅವರ ಪ್ರಕಾರ, ಈ ಯೋಜನೆ ಗ್ರಾಹಕರ ಜೀವನಮಟ್ಟವನ್ನು ಸುಧಾರಿತ್ತದೆ. ಇದು ಕಂಪನಿಯ ಪ್ರಮುಖ ಗುರಿಯಾಗಿದೆ. ಅಲ್ಲದೇ ಈ ಯೋಜನೆಯು ನಮ್ಮ ಗ್ರಾಹಕರ ಅವಶ್ಯಕತೆಗಳಿಗೆ ತಕ್ಕಂತೆ ವಿನ್ಯಾಸಗೊಂಡಿದ್ದು, ಆಧುನಿಕ ಸೌಲಭ್ಯಗಳು ಮತ್ತು ಸಮುದಾಯ ಅನುಭವವನ್ನು ಕೂಡ ಒದಗಿಸುತ್ತದೆ.
ಈ ಯೋಜನೆಯ ಪ್ರಮುಖ ವೈಶಿಷ್ಟ್ಯತೆಗಳೇನು..?
ವಿಶಾಲವಾದ ವಾಸಸ್ಥಳಗಳು:
ವಿಶಾಲವಾದ ವಾಸಸ್ಥಳ ಬೇಕು ಎಂದು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ನಗರ ಜೀವನಕ್ಕೆ ತಕ್ಕಂತೆ ಈ ಯೋಜನೆ ಅಭಿವೃದ್ಧಿಯಾಗುತ್ತಿದೆ. ವಿಶಾಲವಾದ ಮನೆಗಳ ಕೊಡುಗೆ ನೀಡಲಾಗುತ್ತಿದೆ. ಹಾಗೂ ಹವ್ಯಾಸಪೂರ್ಣ ಮತ್ತು ಸೌಕರ್ಯಯುತ ಮನೆಗಳನ್ನು ನಿರ್ಮಿಸಿಕೊಡಲಾಗುತ್ತಿದೆ.
ಸಮೃದ್ಧ ಸೌಲಭ್ಯಗಳು:
ಈ ವಾಸಸ್ಥಳಗಳಲ್ಲಿ ಆಧುನಿಕ ಕ್ಲಬ್‌ಹೌಸ್, ಆಟದ ಮೈದಾನ, ಸ್ಪಾ, ಜಿಮ್, ಸ್ನಾನದಕೊಳಗಳು ಮತ್ತು ಇನ್ನಷ್ಟು ಸೌಲಭ್ಯಗಳಿರುತ್ತವೆ. ಮನೆ ಕೊಳ್ಳುವವರು ತಮಗೆ ಬೇಕಾದ ಸೌಲಭ್ಯಗಳನ್ನು ತ್ವರಿತವಾಗಿ ಬಳಸಿಕೊಳ್ಳಬಹುದು.
ಸುಸ್ಥಿರ ಜೀವನಶೈಲಿ:
ಇಲ್ಲಿ ಸುಸ್ಥಿರ ಜೀವನಶೈಲಿಯೂ ಸಿಗುತ್ತದೆ. ಅಂದರೆ ಈ ವಾಸಸ್ಥಳಗಳಲ್ಲಿ ಮಳೆನೀರು ಸಂಗ್ರಹವಾಗುತ್ತದೆ. ಸೌರಶಕ್ತಿ ಬಳಕೆ ಮತ್ತು ಪರಿಸರ ಸ್ನೇಹಿ ನಿರ್ಮಾಣ ವಿಧಾನಗಳೂ ಇವೆ. ಆಧುನಿಕ ವಾಸಸ್ಥಳದ ತತ್ವಗಳಿಗೆ ಅನುಗುಣವಾಗಿ ನಿರ್ಮಿತ ನವೀನ ವಿನ್ಯಾಸಗೊಳಿಸಲಾಗುತ್ತದೆ.
ಇನ್ನು ಇದು ಬೆಂಗಳೂರು ನಗರದ ಗಡಿಭಾಗದಲ್ಲಿ ನಿರ್ಮಾಣವಾಗುತ್ತಿರುವ ಯೋಜನೆಯಾಗಿದೆ. ಆದರೆ ಎಲ್ಲ ಪ್ರಮುಖ ಸ್ಥಳಗಳಿಗೆ ಸುಲಭವಾಗಿ ಪ್ರವೇಶಿಸಬಹುದಾದ ಪ್ರದೇಶವಿದೆ. ಹೊಸ ವಸತಿ ಯೋಜನೆಯು ವ್ಯಕ್ತಿಗಳು, ಕುಟುಂಬಗಳು ಮತ್ತು ಹೂಡಿಕೆದಾರರಿಗಾಗಿ ಅತ್ಯುತ್ತಮ ಆಯ್ಕೆಯಾಗಿದೆ. ಐಷಾರಾಮಿ ವಾಸನೆ, ಸುಸ್ಥಿರ ಅಭಿವೃದ್ಧಿ, ಮತ್ತು ಸಮುದಾಯ ಜೀವನವನ್ನು ಒಟ್ಟುಗೂಡಿಸುವ ಈ ಯೋಜನೆ ಬೆಂಗಳೂರಿನ ಉನ್ನತ ಮಟ್ಟದ ವಾಸನೆ ಗುರಿ ಇಟ್ಟುಕೊಂಡಿರುವವರಿಗೆ ಅತ್ಯುತ್ತಮ ಅವಕಾಶ.


Click it and Unblock the Notifications