ಎಫ್‌ಎಂಸಿಜಿಯಲ್ಲಿ ಪ್ರಮುಖ ಸಂಸ್ಥೆಯಾದ ಬ್ರಿಟಾನಿಯಾ ಇಂಡಸ್ಟ್ರೀಸ್ ಗ್ರಾಮೀಣ ಆರ್ಥಿಕತೆಯ ಕುಸಿತದ ಅಥವಾ ಮಂದಗತಿಯ ಸ್ಪಷ್ಟ ಚಿಹ್ನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಬ್ರಿಟಾನಿಯಾದ ಪೋರ್ಟ್‌ಫೋಲಿಯೊ ಈಗ ನಗರ-ಕೇಂದ್ರಿತವಾಗಿದೆ. ಇದು ಗ್ರಾಮೀಣಕ್ಕಿಂತ 1.3 ಪಟ್ಟು ಹೆಚ್ಚು ಎಂದು ಕಂಪನಿಯು ವರದಿಯಲ್ಲಿ ತಿಳಿಸಿದೆ.
ಕಳೆದ ಬುಧವಾರ ಕಂಪನಿಯು ಸೆಪ್ಟೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ. ಸಂಸ್ಥೆಯ ನಿವ್ವಳ ಲಾಭ ವರ್ಷದಿಂದ ವರ್ಷಕ್ಕೆ ಸುಮಾರು ಶೇಕಡ 19 ರಷ್ಟು ಬೆಳವಣಿಗೆಯನ್ನು ಕಂಡು 588 ಕೋಟಿ ರೂಪಾಯಿಗೆ ತಲುಪಿದೆ ಎಂದು ವರದಿಯಲ್ಲಿ ಸಂಸ್ಥೆಯು ಮಾಹಿತಿ ನೀಡಿದೆ.

"2 ವರ್ಷಗಳ ಅಧಿಕ ಹಣದುಬ್ಬರದ ಸವಾಲಿನ ವಾತಾವರಣದಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ. ಗ್ರಾಮೀಣ ಪ್ರದೇಶಗಳಲ್ಲಿನ ನಮ್ಮ ಸಾಮರ್ಥ್ಯವು ಹೆಚ್ಚು ವಿಸ್ತಾರವಾಗುತ್ತಿದೆ. ಗ್ರಾಮೀಣ ಆರ್ಥಿಕ ಮಂದಗತಿಯ ಹೊರತಾಗಿಯೂ ಗ್ರಾಮೀಣ ವಿತರಣೆಯ ವಿಸ್ತರಣೆಯನ್ನು ಮುಂದುವರಿಸಿದ್ದೇವೆ," ಎಂದು ಬ್ರಿಟಾನಿಯಾ ಇಂಡಸ್ಟ್ರೀಸ್‌ನ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವರುಣ್ ಬೆರ್ರಿ ಹೇಳಿದರು.
ಬ್ರಿಟಾನಿಯಾ ತನ್ನ ಕೆಲವು ಪ್ರಮುಖ ಬ್ರ್ಯಾಂಡ್ ಮತ್ತು ಸ್ಟಾಕ್-ಕೀಪಿಂಗ್ ಘಟಕಗಳಲ್ಲಿ ಬೆಲೆ ಕಡಿತದ ಕ್ರಮವನ್ನು ಕೈಗೊಂಡಿದೆ. ಇದು ಮಾರುಕಟ್ಟೆ ಷೇರಿನಲ್ಲಿ ಸ್ವಲ್ಪ ಚೇತರಿಕೆಗೆ ಕಾರಣವಾಗಿದೆ. ಗ್ರಾಮೀಣ ಮಂದಗತಿಯ ಹೊರತಾಗಿಯೂ ಬ್ರಿಟಾನಿಯಾ ಗ್ರಾಮೀಣ ವಿತರಣೆಯಲ್ಲಿ ತನ್ನ ವಿಸ್ತರಣೆಯನ್ನು ಮುಂದುವರೆಸಿತು. ಆದರೆ ಮಧ್ಯಪ್ರಾಚ್ಯ ಮತ್ತು ರಷ್ಯಾದಲ್ಲಿ ನಡೆಯುತ್ತಿರುವ ಕಲಹದಿಂದ, ಜಾಗತಿಕ ಸರಕುಗಳ ಬೆಲೆಗಳು ಅಸ್ಥಿರವಾಗಿಯೇ ಉಳಿದಿವೆ.
"ಮಾರುಕಟ್ಟೆ ನಾಯಕರಾಗಿ, ಬೆಲೆಗಳನ್ನು ಹೆಚ್ಚಿಸುವ ಜವಾಬ್ದಾರಿ ನಮ್ಮ ಮೇಲಿದೆ," ಎಂದು ಕಂಪನಿ ಹೇಳಿದೆ. ಸರಕುಗಳ ಬೆಲೆಗಳು ಕಡಿಮೆಯಾದ ಬಳಿಕ ಬ್ರಿಟಾನಿಯಾ ಬೆಲೆಯನ್ನು ಕಡಿತ ಮಾಡುತ್ತದೆ. ಭವಿಷ್ಯದಲ್ಲಿ ಸರಕುಗಳ ಬೆಲೆಗಳು ಹೆಚ್ಚಾಗುವ ನಿರೀಕ್ಷೆಯೊಂದಿಗೆ, ಸಂಸ್ಥೆ ಬೆಲೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು, ಇದು ಅನಿವಾರ್ಯವಾಗಿದೆ ಎಂದು ಬ್ರಿಟಾನಿಯಾ ಹೇಳಿದೆ.
"ನಾವು ಪರಿಸ್ಥಿತಿ ಮತ್ತು ನಮ್ಮ ವ್ಯವಹಾರದ ಮೇಲೆ ಸರಕುಗಳ ಬೆಲೆ ಏರಿಕೆ ಪ್ರಭಾವದ ಬಗ್ಗೆ ಜಾಗರೂಕರಾಗಿದ್ದೇವೆ. ನಮ್ಮ ಕಾರ್ಯತಂತ್ರವು ಲಾಭವನ್ನು ಉಳಿಸಿಕೊಳ್ಳುವಾಗ ಮಾರುಕಟ್ಟೆ ಪಾಲನ್ನು ಹೆಚ್ಚಿಸುವೆಡೆ ಗಮನ ಇರುತ್ತದೆ," ಎಂದು ಕೂಡಾ ಇದೇ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ವರುಣ್ ಬೆರ್ರಿ ಮಾಹಿತಿ ನೀಡಿದರು.
ಕೇಕ್ ಮತ್ತು ಬ್ರೆಡ್‌ಗಳನ್ನು ಮಾರಾಟ ಮಾಡುವ ಬ್ರಿಟಾನಿಯಾದ ಕಾರ್ಯಾಚರಣೆ ಆದಾಯವು ಶೇಕಡ 1.2 ರಷ್ಟು ಏರಿಕೆಯಾಗಿದ್ದು, 4,433 ಕೋಟಿ ರೂಪಾಯಿ ಅಥವಾ 532.6 ಮಿಲಿಯನ್ ಡಾಲರ್ ಆಗಿದೆ. ಆದರೆ ವಿಶ್ಲೇಷಕರ ಅಂದಾಜು ಆಗಿದ್ದ 4,543 ಕೋಟಿ ರೂಪಾಯಿಗಿಂತ ಇದು ಕಡಿಮೆಯಾಗಿದೆ. ಎಫ್‌ಎಂಸಿಜಿ ಪ್ರಮುಖ ಸಂಸ್ಥೆಯ ಮಾರ್ಜಿನ್ ಕೂಡ 343 ಬೇಸಿಸ್ ಪಾಯಿಂಟ್‌ಗಳ ಏರಿಕೆ ಕಂಡು ಶೇಕಡ 19.68 ಕ್ಕೆ ತಲುಪಿದೆ.


Click it and Unblock the Notifications