ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಫ್ಯಾಷನ್ ಟ್ರೆಂಡ್ ಗಳು ಕೂಡಾ ಬದಲಾಗುತ್ತಿರುತ್ತವೆ. ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಹೆಸರಿನಲ್ಲಿ ಕಂಪೆನಿಗಳು ಚಿತ್ರವಿಚಿತ್ರ ವಸ್ತುಗಳನ್ನು ಮಾರಾಟ ಮಾಡಲು ಪ್ರಾರಂಭಿಸಿರುವುದು ಹೊಸದಲ್ಲ. ಒಮ್ಮೊಮ್ಮೆ ಯಾಕೋ ಅತಿರೇಕ ಅನ್ನಿಸಿದ್ದುಂಟು. ಯಾಕೆಂದರೆ ಈ ಫ್ಯಾಷನ್ ಕಂಪೆನಿಗಳು ತಮ್ಮ ಚಿತ್ರ ವಿಚಿತ್ರ ಉತ್ಪನ್ನಗಳನ್ನು ತಯಾರಿಸುವುದು ಮಾತ್ರವಲ್ಲದೇ ದುಬಾರಿ ದರಕ್ಕೆ ಮಾರಾಟ ಮಾಡುತ್ತವೆ.
ಜನಸಾಮಾನ್ಯರಿಗೆ ವಿಚಿತ್ರ ಅನ್ನಿಸುವ ಉಡುಗೆಗಳನ್ನು ಖರೀದಿಸುವ ಅನೇಕ ಜನರಿದ್ದಾರೆ. ಇದೀಗ ಅಂತಹದ್ದೇ ವಿಚಿತ್ರ ಬಟ್ಟೆಯೊಂದು ಫ್ಯಾಶನ್ ಲೋಕದಲ್ಲಿ ಭಾರಿ ಸದ್ದು ಮಾಡುತ್ತಿದೆ. ಆ ಡ್ರೆಸ್ ನೋಡಿದ್ರೆ ನಿಮಗೆ ನಗಬೇಕೋ ಆಶ್ಚರ್ಯಪಡಬೇಕೋ ಎಂದು ತಿಳಿಯದೇ ಕನ್ಪ್ಯೂಸ್ ಆಗೋದು ಸಹಜ. ಅದೇನಂದ್ರೆ ಬಬಲ್ ರಾಪ್‌ನಿಂದ ಮಾಡಿದ ಡ್ರೆಸ್! ಹೌದು, ನೀವು ತಪ್ಪಾಗಿ ಓದಿಲ್ಲ. ಅದೇ ನಾವು ಪಾರ್ಸೆಲ್‌ಗಳನ್ನ ಪ್ಯಾಕ್ ಮಾಡೋ ಬಬಲ್ ರಾಪ್! ಈ ಡ್ರೆಸ್‌ಗಳ ಬೆಲೆ ಕೂಡ ಕಮ್ಮಿ ಇರಬಹುದು ಎಂದುಅಂದುಕೊಳ್ಳಬೇಡಿ. ಯಾಕೆಂದರೆ ಇದರ ರೇಟ್ ನೋಡಿ ಮೂಗಿನ ಮೇಲೆ ಬೆರಳಿಟ್ಟಿಕೊಳ್ಳಬೇಕಾದಿತು.!

"ಬಲೆನ್ಸಿಯಾಗ ಆಫ್ ಬೆಲಾರಸ್" ಎಂದು ಕರೆಯಲ್ಪಡುವ ಬ್ರ್ಯಾಂಡ್ ತಯಾರಿಸಿದ ಉಡುಪು ವೈರಲ್ ಆಗಿದ್ದು ಇದು ತನ್ನ ವಿಶಿಷ್ಟ ಮತ್ತು ವಿಶೇಷ ವಿನ್ಯಾಸಕ್ಕಾಗಿ ಪ್ಯಾಷನ್ ಪ್ರಿಯರ ಗಮನವನ್ನು ಸೆಳೆಯುತ್ತಿದೆ. ಹೊಸ ವರ್ಷದ ಸಾಂಪ್ರಾದಾಯಿಕ ಉಡುಗೆಗಳಿಗಿಂತ ಇದು ಪರ್ಯಾಯ ಮತ್ತು ಸಂಪೂರ್ಣ ಭಿನ್ನವಾಗಿದೆ ಎಂದು ಬ್ರ್ಯಾಂಡ್ ಹೇಳಿಕೊಂಡಿದೆ. ಇವರ ಈ ಸಂಗ್ರಹದಲ್ಲಿ ಡ್ರೆಸ್ ಮತ್ತು ಜಾಕೆಟ್‌ಗಳು ಲಭ್ಯವಿದ್ದು, ಬಲೆನ್ಸಿಯಾಗ ಆಫ್ ಬೆಲಾರಸ್ ಎಂಡು ಕರೆಯಲ್ಪಡುವ ZNWR ಎಂಬ ಬ್ರ್ಯಾಂಡ್ ಮಾರಾಟಕ್ಕಿಟ್ಟಿದೆ.
ಮಿನ್ಸ್ಕ್‌ನಲ್ಲಿರುವ ಡಾನಾ ಮಾಲ್‌ನಲ್ಲಿರುವ ಜನಪ್ರಿಯ ಸ್ಪ್ಯಾನಿಷ್ ಬ್ರ್ಯಾಂಡ್ ZNWR ಸ್ಟೋರ್‌ನಲ್ಲಿ ಟಿಕ್‌ಟಾಕ್ ಬಳಕೆದಾರರಾಗಿರುವ ಯಾನಾ ಎಂಬಾಕೆ ಟಿಕ್‌ಟಾಕ್ ವೀಡಿಯೊವನ್ನು ಪೋಸ್ಟ್ ಮಾಡಿದಾಗ ವಿಶೇಷ ಉಡುಪು ವೈರಲ್ ಆಗಲು ಆರಂಭವಾಯಿತು. ತಮ್ಮ ವಿಡಿಯೋ ಮೂಲಕ ಬಬಲ್ ರಾಪ್ ಡ್ರೆಸ್ ಅನ್ನು ತೋರಿಸಿದ್ದು , "ಹುಡುಗಿಯರೇ, ನೀವು ವಿಶೇಷ ಡ್ರೆಸ್ ಹುಡುಕುತ್ತಿದ್ದರೆ, ಇಲ್ಲಿ ನೋಡಿ" ಎಂಬ ಟ್ಯಾಗ್ ಹಾಕಿದ್ದರು. ಇದು ಲಕ್ಷಾಂತರ ಜನರ ಗಮನವನ್ನು ಸೆಳೆದಿದ್ದು, ಹೊಸ ವರ್ಷಕ್ಕಾಗಿ ಅತಿರಂಜಿತವಾದ ಉಡುಪು ಹುಡುಕುವ ಪ್ಯಾಷನ್ ಪ್ರಿಯರಿಗೆ ಈ ಹೊಸ ಪ್ಲಾಸ್ಟಿಕ್ ಬಟ್ಟೆಗಳನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.
ಬಬಲ್ ರಾಪ್ ಡ್ರೆಸ್:
ಬಬಲ್ ರಾಪ್‌ನಿಂದ ಸಂಪೂರ್ಣವಾಗಿ ಮಾಡಲ್ಪಟ್ಟ ಈ ಡ್ರೆಸ್ ಪ್ಯಾಕಿಂಗ್ ಬಳಸುವ ಸಾಧನವಲ್ಲ ಎಂಬುವುದು ಮೊದಲು ಅರಿತುಕೊಳ್ಳಬೇಕು. ಯಾಕೆಂದರೆ ಥೇಟ್ ಬಬಲ್ ರಾಪ್ ನಂತೆಯೇ ಇರುವ ಈ ಫ್ಯಾಷನ್ ಉಡುಗೆಯಲ್ಲಿ ದೊಡ್ಡ ದೊಡ್ಡ ಗುಳ್ಳೆಗಳಿದ್ದು, ಅದನ್ನ ಒಡೆಯೋದು ಖಂಡಿತ ಖುಷಿ ಕೊಡುತ್ತೆ ಅಂತ ಯಾನಾ ಅವರು ಹೇಳಿದ್ದಾರೆ. ಇದು ನಿಜವಾದ ಫ್ಯಾಷನ್ ಉಡುಗೆ ಎಂದು ಜನರಿಗೆ ತೋರಿಸಲು, ಯಾನಾ ಉಡುಗೆಗೆ ಅಳವಡಿಸಿದ್ದ ಜಿಪ್ಪರ್ ಮತ್ತು ಬೆಲೆಯ ಟ್ಯಾಗ್ ಅನ್ನು ತೋರಿಸಿದ್ದಾರೆ.
ಬೆಲೆ ಎಷ್ಟು ಗೊತ್ತಾ?
ಈ ಪ್ಯಾಷನ್ ಬ್ರ್ಯಾಂಡ್ ಹೇಳುವ ಪ್ರಕಾರ ಇದು ಲಿಮಿಟೆಡ್ ಎಡಿಷನ್ ಆಗಿದ್ದು, ಕೇವಲ 20 ಡ್ರೆಸ್ ಮತ್ತು 20 ಜಾಕೆಟ್‌ಗಳು ಲಭ್ಯವಿದೆಯಂತೆ. ಜಾಕೆಟ್‌ನ ಬೆಲೆ ಕೇವಲ ₹9,900 (S$158 ಅಥವಾ) ಆಗಿದೆ. ಇನ್ನು ಡ್ರೆಸ್ ಬೆಲೆ ₹7,200 ಆಗಿದೆ (S$116).ಸದ್ಯ ಈ ವಿಚಿತ್ರ ಉಡುಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಪ್ಯಾಷನ್ ಪ್ರಿಯ ವಿಚಿತ್ರಾವತಾರ ಒಂದೆಡೆಯಾದರೆ ನಮ್ಮಂತವರಿಗೆ ಈ ಡ್ರೆಸ್ ಹಾಕೋದು ಬಿಡಿ ಖರೀದಿಸುವುದು ಕೂಡಾ ಭಾರೀ ಕಷ್ಟ !


Click it and Unblock the Notifications