ಬಜೆಟ್ 2024: ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಗಾಗಿ ಬ್ಯಾಂಕಿಂಗ್ ಕಾನೂನುಗಳಿಗೆ ತಿದ್ದುಪಡಿ ಸಾಧ್ಯತೆ

ನವದೆಹಲಿ, ಜುಲೈ 16: ಕಳೆದ ಕೆಲವು ವರ್ಷಗಳ ಕೇಂದ್ರ ಬಜೆಟ್ ಗಮನಿಸುವುದಾದರೆ ಬ್ಯಾಂಕಿಂಗ್ ವಲಯಕ್ಕೆ ಯಾವುದೇ ಪ್ರಮುಖ ಘೋಷಣೆ ಆಗಿರಲಿಲ್ಲ. ಆದರೆ ಇದೇ ಜು. 22 ರಿಂದ ಆರಂಭವಾಗಲಿರುವ ಕೇಂದ್ರ ಬಜೆಟ್ 2024 ಅಧಿವೇಶನದಲ್ಲಿ ಹಲವಾರು ಬ್ಯಾಂಕಿಂಗ್ ಕಾನೂನುಗಳಿಗೆ ತಿದ್ದುಪಡಿ ಮಸೂದೆ ಮಂಡಿಸುವ ಸಾಧ್ಯತೆ ಇದೆ. ಒಂದು ಅಂದಾಜು ಪ್ರಕಾರ ಕೇಂದ್ರದ ಹೊಸ ಎನ್‌ಡಿಎ ಸರ್ಕಾರಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಪ್ರಮುಖ ಸುಧಾರಣೆಗಳಿಗೆ ಅವಕಾಶವಿದೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣದತ್ತ ಗಮನಹರಿಸುವ ಸಾಧ್ಯತೆಗಳಿವೆ.

ರಾಷ್ಟ್ರೀಕೃತ ಬ್ಯಾಂಕ್ ಗಳ ಖಾಸಗೀಕರಣಗೊಳಿಸಲು ಸರ್ಕಾರವು, ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ ಮತ್ತು ಬ್ಯಾಂಕಿಂಗ್ ಕಂಪನಿಗಳ ಕಾಯಿದೆ, 1970 ಮತ್ತು 1980 ಕಾಯ್ದೆಯನ್ನು ಕಾನೂನುಗಳನ್ನು ತಿದ್ದುಪಡಿ ಮಾಡಬಹುದಾದ ಸಾಧ್ಯತೆ ಇದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಹಿಂದೆ 2021 ರ ಕೇಂದ್ರ ಬಜೆಟ್‌ನಲ್ಲಿ ಇದೇ ರೀತಿಯ ತಿದ್ದುಪಡಿಗಳನ್ನು ಪ್ರಸ್ತಾಪಿಸಿದ್ದರು. 2021-22ರ ಹಣಕಾಸು ವರ್ಷಕ್ಕೆ ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಒಂದು ಸಾಮಾನ್ಯ ವಿಮಾ ಕಂಪನಿಯನ್ನು ಖಾಸಗೀಕರಣಗೊಳಿಸುವ ಯೋಜನೆಯನ್ನು ಅವರು ಘೋಷಿಸಿದ್ದರು. ಆದರೆ ಈ ಪ್ರಸ್ತಾಪಗಳು ಕಾರ್ಯರೂಪಕ್ಕೆ ಬರಲಿಲ್ಲ.

ಬ್ಯಾಂಕಿಂಗ್ ಕಾನೂನುಗಳಿಗೆ ತಿದ್ದುಪಡಿ ಸಾಧ್ಯತೆ

ಇನ್ನು ಈ ಎರಡು ಕಾಯ್ದೆಗಳು ಎರಡು ಹಂತಗಳಲ್ಲಿ ಬ್ಯಾಂಕ್‌ಗಳ ರಾಷ್ಟ್ರೀಕರಣಗೊಳಿಸಲಾಗಿತ್ತು. ಬ್ಯಾಂಕ್‌ಗಳ ಖಾಸಗೀಕರಣಕ್ಕಾಗಿ ಈ ಕಾನೂನುಗಳ ನಿಬಂಧನೆಗಳನ್ನು ಬದಲಾಯಿಸಬೇಕಾಗಿದೆ . ಒಂದು ವೇಳೆ ತಿದ್ದುಪಡಿಗೆ ಸಂಸತ್ತುಅನುಮೋದನೆ ನೀಡಿದರೆ, ಸರ್ಕಾರ ತನ್ನ ಹೂಡಿಕೆ ಶೇಕಡಾ 51 ಕ್ಕಿಂತ ತಗ್ಗಿಸಿಕೊಳ್ಳಬಹುದು. ಅಲ್ಲದೇ ಬ್ಯಾಂಕ್ ಗಳ ಆಡಳಿತದ ಸುಧಾರಣೆ ಜೊತೆಗೆ ಹೂಡಿಕೆದಾರರ ರಕ್ಷಣೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಮೂಲಗಳು ತಿಳಿಸಿವೆ.

ಕೇರ್ ರೇಟಿಂಗ್ಸ್ ಅಂಕಿಅಂಶಗಳ ಪ್ರಕಾರ, ಮೇ ತಿಂಗಳಲ್ಲಿ ಬ್ಯಾಂಕ್‌ಗಳ ಒಟ್ಟು ಕ್ರೆಡಿಟ್ ಆಫ್‌ಟೇಕ್ ಶೇಕಡಾ 16.1 ರಷ್ಟು ಹೆಚ್ಚಾಗಿದೆ. ಇದು ವರ್ಷದಿಂದ ವರ್ಷಕ್ಕೆ ನೋಡುವುದಾದರೆ 0.70 ಶೇಕಡಾ ಹೆಚ್ಚು. ಕಳೆದ ಒಂದು ವರ್ಷದಲ್ಲಿ ಬಹುತೇಕ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಷೇರುಗಳು ಏರಿಕೆ ಕಂಡಿವೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಷೇರುಗಳ ಖರೀದಿಗೆ ಹೂಡಿಕೆದಾರರು ಆಸಕ್ತಿ ತೋರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿನ ತನ್ನ ಪಾಲನ್ನು ಮಾರಾಟ ಮಾಡುವ ಮೂಲಕ ಸರ್ಕಾರವು ಉತ್ತಮ ಹಣವನ್ನು ಗಳಿಸಲು ಇದು ಸರಿಯಾದ ಸಮಯವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಹಲವಾರು ಮಹತ್ವದ ಬ್ಯಾಂಕ್ ವಿಲೀನಗಳು ನಡೆದಿವೆ. ಉದಾಹರಣೆಗೆ, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಅನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ವಿಲೀನಗೊಳಿಸಲಾಯಿತು, ಇದು ಭಾರತದ ಎರಡನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಅನ್ನು ರಚಿಸಿತು. ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್‌ಗೆ ವಿಲೀನಗೊಳಿಸಿದರೆ, ಅಲಹಾಬಾದ್ ಬ್ಯಾಂಕ್ ಅನ್ನು ಇಂಡಿಯನ್ ಬ್ಯಾಂಕ್‌ಗೆ ವಿಲೀನಗೊಳಿಸಲಾಯಿತು.

ಇದಲ್ಲದೆ, ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಅನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಂಯೋಜಿಸಲಾಯಿತು. 2019 ರಲ್ಲಿ ಗಮನಾರ್ಹ ವಿಲೀನದಲ್ಲಿ, ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ಅನ್ನು ಬ್ಯಾಂಕ್ ಆಫ್ ಬರೋಡಾಕ್ಕೆ ಒಳಪಡಿಸಲಾಯಿತು. ಇದಕ್ಕೂ ಮೊದಲು, ಏಪ್ರಿಲ್ 2017 ರಲ್ಲಿ, ಎಸ್‌ಬಿಐ ಐದು ಸಹವರ್ತಿ ಬ್ಯಾಂಕ್‌ಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕ್ ಅನ್ನು ತನ್ನೊಂದಿಗೆ ವಿಲೀನಗೊಳಿಸಿತ್ತು.

ಇನ್ನೊಂದೆಡೆ ಕೆಲವು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ವಿಲೀನದ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮಾಧ್ಯಮ ವರದಿಯಲ್ಲಿ ಹೇಳಲಾಗಿದೆ. ಒಟ್ಟಾರೆ ಈ ಕಾರ್ಯತಂತ್ರದ ಕ್ರಮಗಳು ಬ್ಯಾಂಕಿಂಗ್ ವಲಯದ ಒಟ್ಟಾರೆ ಆರೋಗ್ಯವನ್ನು ಬಲಪಡಿಸಲು ಮತ್ತು ಭಾರತದ ಆರ್ಥಿಕ ಬೆಳವಣಿಗೆಗೆ ಧನಾತ್ಮಕ ಕೊಡುಗೆಯನ್ನು ನಿರೀಕ್ಷಿಸಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+