ಭಾರತೀಯರ ಕನಸು ಆಕಾಂಕ್ಷೆಗಳು, ಆದಾಯ ತೆರಿಗೆ ಬದಲಾವಣೆ, ಆರ್ಥಿಕ ಸುಧಾರಣೆಗಳು,ಹೆಚ್ಚಿನ ಹಣದುಬ್ಬರ, ಹೆಚ್ಚುತ್ತಿರುವ ವಿತ್ತೀಯ ಕೊರತೆ ಹಾಗೂ ಮಂದಗತಿಯ ಆರ್ಥಿಕತೆಗೆ ವೇಗೆ ನೀಡುವ ಜಟಿಲ ಸವಾಲಿನ ನಡುವೆ ಕೇಂದ್ರ ಸರ್ಕಾರದ ಬಹುನಿರೀಕ್ಷೆಯ ಬಜೆಟ್ ಫೆ.1ರ ಇಂದು ಪ್ರಕಟವಾಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ಸತತ ೮ನೇ ಬಾರಿಗೆ ಬಜೆಟ್ ಮಂಡಿಸಿ ಚಾರಿತ್ರಿಕ ದಾಖಲೆ ಬರೆಯಲು ಮುಂದಾಗಿದ್ದಾರೆ.
ಫೆಬ್ರವರಿ 1, ಬೆಳಗ್ಗೆ 11 ಗಂಟೆ ವೇಳೆಗೆ ಸಂಸತ್ ನಲ್ಲಿ 2025-26ನೇ ಬಜೆಟ್ ಮಂಡನೆ ಆರಂಭವಾಗಲಿದ್ದು, ವಿತ್ತ ಸಚಿವೆ ಬಜೆಟ್ ಭಾಷಣ ಮಾಡಲಿದ್ದಾರೆ.ಹಣಕಾಸು ಸಚಿವೆ ಸೀತಾರಾಮನ್ ಅವರು ಸತತ 8 ನೇ ಬಜೆಟ್ ಭಾಷಣ ಮಾಡುವ ಮೂಲಕ ಇತಿಹಾಸವನ್ನು ಸೃಷ್ಟಿಸಲಿದ್ದಾರೆ. ಇದು ಮೋದಿ 3.0 ರ ಮೊದಲ ಪೂರ್ಣ ಬಜೆಟ್ ಆಗಿದೆ. ಕ ಳೆದ ಬಾರಿ 84 ಲಕ್ಷ ಕೋಟಿ ಬಜೆಟ್ ಗಾತ್ರವಿದ್ದ ದೇಶದ ಬಜೆಟ್ ಈ ಬಾರಿ ಸುಮಾರು 55 ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡಿಸುವ ನಿರೀಕ್ಷೆ ಇದೆ. ಪ್ರತಿ ಬಜೆಟ್ ನಲ್ಲೂ ಮಧ್ಯಮ ವರ್ಗದ ಜನರ ನಿರೀಕ್ಷೆ, ಆದಾಯ ತೆರಿಗೆ ಮಿತಿಯಲ್ಲಿ ಏರಿಕೆ. ತೆರಿಗೆ ವಿನಾಯಿತಿ ಮಿತಿಯನ್ನು 10 ಲಕ್ಷ ರೂ.ವರೆಗೆ ವಿಸ್ತರಿಸಿ ಎನ್ನುವ ಒತ್ತಾಯಗಳು ಕೇಳಿಬಂದಿವೆ. ಅದಾಯ ತೆರಿಗೆ ಮಿತಿಯನ್ನು 12-14 ಲಕ್ಷ ರೂ.ಗೆ ಏರಿಸಲಾಗುತ್ತದೆ ಎಂದೂ ಹೇಳಲಾಗುತ್ತಿದೆ. ಅದರೂ ಇದರಲ್ಲಿ ಯಾವುದು ನಿಜವಾಗುತ್ತೆ ಎನ್ನುವುದು ಕಾದು ನೋಡಬೇಕು.

2025ರ ಬಜೆಟ್‌ನಲ್ಲಿ ಹಳೆಯ ತೆರಿಗೆ ಪದ್ಧತಿಯನ್ನು ಕ್ರಮೇಣವಾಗಿ ತೆಗೆದುಹಾಕುವ ಕೆಲವು ಸುಧಾರಣೆಗಳು ಮತ್ತು ವರ್ಷಕ್ಕೆ 10 ಲಕ್ಷ ರೂಪಾಯಿಗಿಂತ ಕಡಿಮೆ ಗಳಿಸುವವರಿಗೆ ಶೂನ್ಯ ಆದಾಯ ತೆರಿಗೆಯನ್ನು ಪರಿಚಯಿಸುವ ಸಾಧ್ಯತೆಯಿದೆ.
ಬಜೆಟ್ ಅಧಿವೇಶನದ ಮೊದಲ ದಿನ ಹಾಗೂ ಬಜೆಟ್ ಮಂಡನೆಗೆ ಒಂದು ದಿನ ಮುಂಚಿತವಾಗಿ ಶುಕ್ರವಾರ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಅವರು ಸಿದ್ಧಪಡಿಸಿದ್ದ ಆರ್ಥಿಕ ಸಮೀಕ್ಷೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಂಡಿಸಿದ್ದು 2026ರ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆಯನ್ನು ಶೇ.6.3 ಮತ್ತು ಶೇ.6.8ರ ನಡುವೆ ಇರಬಹುದೆಂದು ಆರ್ಥಿಕ ಸಮೀಕ್ಷೆ ಅಂದಾಜಿಸಿದೆ.
ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಮಂಡನೆಗೂ ಮುನ್ನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ತಂಡದೊಂದಿಗೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡುವುದು ಸಂಪ್ರದಾಯ. ಈ ಹಿಂದಿನ ಬಾರಿ ರಾಷ್ಟ್ರಪತಿಗಳು ವಿತ್ತಸಚಿವೆಗೆ 'ದಹಿ-ಚೀನಿ' (ಸಕ್ಕರೆ- ಮೊಸರು) ಸವಿಯಲು ನೀಡಿದ್ದರು. ಈ ಬಾರಿಯೂ ಅದೇ ಸಂಪ್ರದಾಯ ಮುಂದುವರಿಸುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಪ್ರಮುಖ ಕಾರ್ಯ ಕೈಗೊಳ್ಳುವ ಮೊದಲು ಅದೃಷ್ಟವನ್ನು ದಯಪಾಲಿಸಲು ಭಾರತೀಯ ಕುಟುಂಬಗಳಲ್ಲಿ ಹಿರಿಯರು ನಡೆಸುವ ಆಚರಣೆ ಇದಾಗಿದೆ.
2025-26ರ ಬಜೆಟ್ ತಂಡದಲ್ಲಿ ಇರುವ ಪ್ರಮುಖರು
ಕಂದಾಯ ಕಾರ್ಯದರ್ಶಿ ತುಹಿನ್ ಪಾಂಡೆ, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್ ಸೇಠ್, ವೆಚ್ಚ ಕಾರ್ಯದರ್ಶಿ ಮನೋಜ್ ಗೋವಿಲ್, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (ಡಿಐಪಿಎಎಂ) ಕಾರ್ಯದರ್ಶಿ ಅರುಣೀಶ್ ಚಾವ್ಲಾ, ಹಣಕಾಸು ಸೇವೆಗಳ ಕಾರ್ಯದರ್ಶಿ ಎಂ.ನಾಗರಾಜು ಮತ್ತು ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರನ್ ಅವರು ಬಜೆಟ್ ರೂಪಿಸುವಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಹಕಾರ ನೀಡಿದ ತಂಡದಲ್ಲಿದ್ದಾರೆ.
ಬಜೆಟ್ 2025: ಯಾವಾಗ ಮತ್ತು ಎಲ್ಲಿ ಲೈವ್ ಆಗಿ ವೀಕ್ಷಿಸುವುದು?
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಭಾಷಣವು ಬೆಳಿಗ್ಗೆ 11 ಗಂಟೆಗೆ IST ನಲ್ಲಿ ಪ್ರಾರಂಭವಾಗುತ್ತದೆ. ಕೇಂದ್ರ ಬಜೆಟ್ 2025 ರ ಪ್ರಸ್ತುತಿಯನ್ನು ಇವುಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ
ದೂರದರ್ಶನ, ಸಂಸದ್ ಟಿವಿ ಮತ್ತು ಸಂಸತ್ತಿನ ಅಧಿಕೃತ ಚಾನೆಲ್‌ಗಳು.
ಸರ್ಕಾರದ ಅಧಿಕೃತ ಯೂಟ್ಯೂಬ್ ಚಾನೆಲ್‌ಗಳು ಮತ್ತು X ಹ್ಯಾಂಡಲ್‌ಗಳು.
ಗುಡ್ ರಿಟರ್ನ್ಸ್ ನಲ್ಲಿ ನೀವು ಬಜೆಟ್ ಪ್ರಮುಖಾಂಶಗಳ ಕ್ಷಣ ಕ್ಷಣದ ಅಪ್ಡೇಟ್ ನೋಡಬಹುದು


Click it and Unblock the Notifications