ಬಹು ನಿರೀಕ್ಷಿತ ಕೇಂದ್ರ ಬಜೆಟ್ ಅಧಿವೇಶನಕ್ಕೆ ದಿನಗಣನೆ ಶುರುವಾಗಿದೆ. ಜನವರಿ 31ರಿಂದ ಏಪ್ರಿಲ್ 4ರ ಸಂಸತ್‌ನ 1೮ ನೇ ಲೋಕಸಭೆಯ ಬಜೆಟ್ ಅಧಿವೇಶನ ನಡೆಯಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2025-26 ಅನ್ನು ಮಂಡಿಸಲಿದ್ದಾರೆ. ಇದಕ್ಕೂ ಪೂರ್ವ ತಯಾರಿ ಎಂಬಂತೆ ಇಂದು ಹಲ್ವಾ ಸಮಾರಂಭ ನಡೆಯಲಿದೆ.
ಜನವರಿ 24ರ ಇಂದು (ಶುಕ್ರವಾರ) ಸಂಜೆ, ಕೇಂದ್ರ ಸರ್ಕಾರವು ಬಜೆಟ್ ತಯಾರಿಕೆಯ ಅಂತಿಮ ಹಂತವನ್ನು ಸೂಚಿಸುವ ಸಂಪ್ರದಾಯಿಕ ಹಲ್ವಾ ಸಮಾರಂಭವನ್ನು ಸೆಂಟ್ರಲ್ ಸೆಕ್ರೆಟರಿಯೇಟ್‌ನ ನಾರ್ತ್ ಬ್ಲಾಕ್‌ನಲ್ಲಿ ಆಯೋಜಿಸಿದೆ.

ಈ ಸಮಾರಂಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನೇತೃತ್ವ ವಹಿಸಲಿದ್ದು, ರಾಜ್ಯ ಸಚಿವ ಪಂಕಜ್ ಚೌಧರಿ ಮತ್ತು ಹಲವಾರು ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ. ಬಜೆಟ್ ತಯಾರಿಕೆ ಮತ್ತು ಸಂಕಲನ ಪ್ರಕ್ರಿಯೆಯಲ್ಲಿ ತೊಡಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ಈ ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ.
ಬಜೆಟ್‌ನ ಒಂದು ಅವಿಭಾಜ್ಯ ಆರಂಭಿಕ ಸಂಪ್ರದಾಯವು "ಹಲ್ವಾ ಸಮಾರಂಭ" ಆಗಿದೆ. ಇದು ಬಜೆಟ್‌ಗೆ ಸಂಬಂಧಿಸಿದ ವಿವಿಧ ದಾಖಲೆಗಳ ಮುದ್ರಣ ಪ್ರಕ್ರಿಯೆಯ ಅಧಿಕೃತ ಪ್ರಾರಂಭದ ಸೂಚಕವಾಗಿದ್ದು, ಪ್ರತಿ ಬಜೆಟ್ ಮುನ್ನ ಈ ಸಂಪ್ರದಾಯವನ್ನು ಆಚರಿಸಲಾಗುತ್ತದೆ.
ಹಲ್ವಾ ಸಮಾರಂಭಕ್ಕೂ ಬಜೆಟ್ ಗೌಪ್ಯತೆಗೂ ಅವಿನಾಭಾವ ನಂಟು
"ಹಲ್ವಾ ಸಮಾರಂಭ"ವು ಕೇಂದ್ರ ಬಜೆಟ್ ತಯಾರಿಕೆಗಾಗಿ "ಲಾಕ್-ಇನ್" ಪ್ರಕ್ರಿಯೆ ಪ್ರಾರಂಭವಾಗುವ ಮೊದಲು ಪ್ರತಿ ವರ್ಷವೂ ನಡೆಯುತ್ತದೆ. ಈ ಸಮಾರಂಭದಲ್ಲಿ ನಾರ್ತ್ ಬ್ಲಾಕ್‌ನಲ್ಲಿ ದೊಡ್ಡ ಕಡಾಯಿಯಲ್ಲಿ "ಹಲ್ವಾ" ತಯಾರಿಸಲಾಗುತ್ತದೆ. ಹಣಕಾಸು ಸಚಿವರು ಈ ಕಡಾಯಿಯನ್ನು ಬಳಿ ಬಂದು ಆಚರಣೆಯ ಸಂಕೇತವಾಗಿ ಹಲ್ವಾ ಬೆರೆಸಿ, ಬಜೆಟ್ ತಯಾರಿಕೆ ಪ್ರಕ್ರಿಯೆಯಲ್ಲಿ ತೊಡಗಿರುವ ಎಲ್ಲರಿಗೂ ಹಲ್ವಾವನ್ನು ಸವಿಯಲು ನೀಡುತ್ತಾರೆ. ಈ ಸಂಪ್ರದಾಯವು ಬಜೆಟ್ ತಯಾರಿಕೆ ಪ್ರಕ್ರಿಯೆಯಲ್ಲಿ ತೊಡಗಿರುವ ಹಣಕಾಸು ಸಚಿವಾಲಯದ ಅಧಿಕಾರಿಗಳ ಕಠಿಣ ಪರಿಶ್ರಮವನ್ನು ಗುರುತಿಸುವ ಒಂದು ಮಾರ್ಗವಾಗಿದೆ.
ಹಲ್ವಾ ಸಮಾರಂಭವು ಸಂಸತ್ತಿನಲ್ಲಿ ಮಂಡಿಸುವ ಮೊದಲು ಎಲ್ಲಾ ಬಜೆಟ್ ದಾಖಲೆಗಳನ್ನು ಮುದ್ರಿಸುವ ಪ್ರಕ್ರಿಯೆಯನ್ನು ಸೂಚಿಸುತ್ತದೆ. ಹಲ್ವಾ ಸಮಾರಂಭವು ಹಣಕಾಸು ಸಚಿವಾಲಯದಲ್ಲಿ "ಲಾಕ್‌ಡೌನ್" ಪ್ರಾರಂಭವಾಗುವುದನ್ನು ಸೂಚಿಸುವ ಮಹತ್ವದ ಘಟನೆಯಾಗಿದೆ. ಇದಾದ ಬಳಿಕ ಸಚಿವಾಲಯದ ಆವರಣದಿಂದ ಹೊರಬರಲು ಯಾವುದೇ ಅಧಿಕಾರಿಗೆ ಅವಕಾಶವಿಲ್ಲ. ಹಣಕಾಸು ದಾಖಲೆಯನ್ನು ಸಂಸತ್ತಿನಲ್ಲಿ ಮಂಡಿಸಿದ ನಂತರವೇ ಬಜೆಟ್ ತಂಡದಲ್ಲಿರುವ ಎಲ್ಲರಿಗೂ ಹೊರಹೋಗಲು ಅವಕಾಶ ನೀಡಲಾಗುತ್ತದೆ .
ಯಾವುದೇ ಅಧಿಕಾರಿಯೂ ಸಚಿವಾಲಯದ ಆವರಣವನ್ನು ಬಿಡಲು ಅನುಮತಿಸುವುದಿಲ್ಲ. ಹಣಕಾಸು ದಾಖಲೆಯನ್ನು ಸಂಸತ್ತಿನಲ್ಲಿ ಮಂಡಿಸಿದ ನಂತರವೇ ಬಜೆಟ್ ತಂಡದಲ್ಲಿರುವ ಯಾರಾದರೂ ಹೊರಗೆ ಹೋಗಲು ಅನುಮತಿಸಲಾಗುತ್ತದೆ. 1980 ರಿಂದಲೂ, ಕೇಂದ್ರ ಬಜೆಟ್‌ನ ಮುದ್ರಣವು ನಾರ್ತ್ ಬ್ಲಾಕ್‌ನ ಬೇಸ್‌ಮೆಂಟ್‌ನಲ್ಲಿನಡೆಯುತ್ತಿರುವ ವೈಶಿಷ್ಟ್ಯವಾಗಿದೆ. ಬಜೆಟ್ ದಾಖಲೆಯ ಸುತ್ತಲಿನ ಗೌಪ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳನ್ನು ಸ್ನೇಹಿತರು ಮತ್ತು ಕುಟುಂಬದಿಂದ ದೂರ ಇರಿಸಲಾಗುತ್ತದೆ, ಸಂಪರ್ಕ ಮಾಡುವ ಅವಕಾಶವನ್ನು ಕೂಡಾ ನೀಡಲಾಗುವುದಿಲ್ಲ. ಮೊಬೈಲ್ ಫೋನ್‌ಗಳ ಬಳಕೆಯನ್ನು ನಿಷೇಧಿಸುವುದು ಸೇರಿದಂತೆ ಕಟ್ಟುನಿಟ್ಟಾದ ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ಹಣಕಾಸು ಸಚಿವ ಜಾನ್ ಮಥಾಯ್ ಅವರ ಅಧಿಕಾರಾವಧಿಯಲ್ಲಿ 1950 ರ ಕೇಂದ್ರ ಬಜೆಟ್ ತಯಾರಿಕೆಯ ಸಮಯದಲ್ಲಿ ಸಂಭವಿಸಿದ ಮಾಹಿತಿ ಸೋರಿಕೆಯ ಬಳಿಕ ಈ ಕಠಿಣ ಕ್ರಮವನ್ನು ಪಾಲಿಸಲಾಗುತ್ತಿದೆ.
ಇದಲ್ಲದೇ ಹಲ್ವಾ ಸಮಾರಂಭವು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ಆಳವಾಗಿ ಬೇರೂರಿದೆ ಎಂದರೆ ತಪ್ಪಾಗಲಾರದು. ಸಿಹಿತಿಂಡಿಗಳ ತಯಾರಿಕೆ ಮತ್ತು ಹಂಚುವುದು ಅನೇಕ ಭಾರತೀಯ ಸಮಾರಂಭಗಳು ಮತ್ತು ಹಬ್ಬಗಳಲ್ಲಿ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಈ ಆಚರಣೆಯು ಬಜೆಟ್ ಅನ್ನು ಹಬ್ಬವಾಗಿಸುವ ಮೂಲಕ, ಸಮಾರಂಭವು ಸಂಪ್ರದಾಯ ಮತ್ತು ಆಧುನಿಕ ಆಡಳಿತ ಪದ್ಧತಿಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ.
ಬಜೆಟ್ ಅಧಿವೇಶನದ ವಿವರ:
ಸಂಸತ್ತಿನ ಈ ಸಲದ ಬಜೆಟ್ ಅಧಿವೇಶನ ಜನವರಿ 31ಕ್ಕೆ ಆರಂಭವಾಗಲಿದ್ದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಬೆಳಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಇದಕ್ಕೂ ಮೊದಲು ಜನವರಿ 31ಕ್ಕೆ ಆರ್ಥಿಕ ಸಮೀಕ್ಷೆ ಪ್ರಕಟವಾಗಲಿದೆ. ಜನವರಿ 31 ರಿಂದ ಏಪ್ರಿಲ್ 4ರ ತನಕ ನಡೆಯಲಿದ್ದು, ಇದರ ಮೊದಲ ಭಾಗವು ಜನವರಿ 31 ರಂದು ಪ್ರಾರಂಭವಾಗಿ ಫೆಬ್ರವರಿ 13 ರಂದು ಮುಕ್ತಾಯಗೊಳ್ಳಲಿದೆ. ಅಧಿವೇಶನದ ಎರಡನೇ ಭಾಗವು ಮಾರ್ಚ್ 10 ರಂದು ಪ್ರಾರಂಭವಾಗಿ ಏಪ್ರಿಲ್ 4 ರಂದು ಮುಕ್ತಾಯಗೊಳ್ಳಲಿದೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications