ಬಜೆಟ್‌ಗಾಗಿ ಈಗಾಗಲೇ ದಿನಗಣನೆ ಆರಂಭವಾಗಿದೆ. ಈ ಬಾರಿ ಬಜೆಟ್‌ನಲ್ಲಿ ಯಾವೆಲ್ಲಾ ಬದಲಾವಣೆಗಳಾಗಬಹುದು, ಯಾವ ವಿಭಾಗಕ್ಕೆ ಎಷ್ಟು ಅನುದಾನಗಳನ್ನ ಸರ್ಕಾರ ನೀಡಲಿದೆ ಎಂಬ ಕುತೂಹಲದಲ್ಲಿ ಎಲ್ಲರೂ ಇದ್ದಾರೆ. ಇದೇ ರೀತಿ ಪ್ರತೀ ಬಾರಿ ಬಜೆಟ್‌ನಲ್ಲೂ ಕೂಡ ಸಬ್ಸಿಡಿ ಯೋಜನೆಗಳಿಗಾಗಿ ಒಂದಿಷ್ಟು ಹಂಚಿಕೆಯನ್ನ ಮಾಡಲಾಗುತ್ತದೆ. ಅದೇ ರೀತಿ ಈ ಬಾರಿ ಕೂಡ ನಿರೀಕ್ಷೆ ಮಾಡಲಾಗಿದೆ. ಇನ್ನು ಈ ವರ್ಷ ಯಾವ ಯಾವ ಸಬ್ಸಿಡಿಗಳಿಗೆ ಎಷ್ಟು ಅನುದಾನ ಸಿಗಬಹುದು ಎನ್ನುವುದನ್ನು ಇಲ್ಲಿ ತಿಳಿಯಿರಿ.
ಕೇಂದ್ರ ಬಜೆಟ್ ಮಂಡನೆ ದೂರದಲ್ಲೇನು ಇಲ್ಲ. ಇನ್ನೆರಡು ದಿನಗಳಲ್ಲಿ ಅಂದರೆ ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಬಜೆಟ್ ಮಂಡನೆ ವೇಳೆ ಹತ್ತು ಹಲವು ಕ್ಷೇತ್ರಗಳಿಗೆ ಪ್ರತ್ಯೇಕವಾಗಿ ಬಜೆಟ್ ಹಂಚಿಕೆಯನ್ನ ಮಾಡಲಾಗುತ್ತದೆ. ಅಂತೆಯೇ ಸಬ್ಸಿಡಿ ಯೋಜನೆಗಳಿಗೂ ಕೂಡ ಒಂದಿಷ್ಟು ಅನುದಾನವನ್ನ ಕೇಂದ್ರ ನೀಡಲಿದೆ. ಪ್ರಮುಖವಾಗಿ ಬಡವರಿಗೆ ನೆರವಾಗಲು ಸರ್ಕಾರ ಈ ಸಬ್ಸಿಡಿಗಳನ್ನ ನೀಡುತ್ತದೆ. ಹೀಗಾಗಿ ಎಲ್ಲರ ಗಮನ ಕೂಡ ಈ ಸಬ್ಸಿಡಿಗಳ ಮೇಲೆ ಇರುತ್ತದೆ. ಆಹಾರ, ರಸಗೊಬ್ಬರ, ಇಂಧನ ಸೇರಿದಂತೆ ಇತರೆಗಳಿಗೆ ಸಬ್ಸಿಡಿಯನ್ನ ನೀಡಬೇಕಾಗುತ್ತದೆ.
ಸಬ್ಸಿಡಿಗಳನ್ನ ನೀಡುವ ಉದ್ದೇಶವೇನು?
ಮೊದಲಿಗೆ ಈ ಸಬ್ಸಿಡಿಗಳೆಂದರೆ, ಸರ್ಕಾರ ಜನರಿಗೆ ಮತ್ತವರ ವ್ಯವಹಾರಗಳಿಗೆ ನೆರವಾಗಲು ನೀಡುವ ಅನುದಾನಗಳು ಅಥವಾ ತೆರಿಗೆ ವಿನಾಯಿತಿಗಳಾಗಿವೆ. ಈ ಸಬ್ಸಿಡಿಗಳ ಪ್ರಮುಖ ಉದ್ದೇಶ ಅಆರ್ವಜನಿಕರಿಗೆ ಬೇಕಾಗುವ ಸರಕು ಸಾಮಗ್ರಿಗಳನ್ನ ಕೈಗೆಟುಕುವ ಬೆಲೆಯಲ್ಲಿ ನೀಡುವ ಉದ್ದೇಶವನ್ನ ಹೊಂದಿದೆ. ಇದರ ಜೊತೆಗೆ ಕೆಲವು ವಸ್ತುಗಳ ಉತ್ಪಾದನೆ ಮತ್ತು ಬಳಕೆಯನ್ನ ಉತ್ತೇಜಿಸುವ ಗುರಿಯನ್ನ ಇದು ಹೊಂದಿದೆ.

ಜನರಿಗೆ ಆಹಾರ ಸಬ್ಸಿಡಿ, ಕೃಷಿ ಸಬ್ಸಿಡಿ, ಇಂಧನ ಸಬ್ಸಿಡಿ, ರಸಗೊಬ್ಬರ ಸಬ್ಸಿಡಿ ಹೀಗೆ ಇತರೆ ಸಬ್ಸಿಡಿಗಳನ್ನ ಸರ್ಕಾರ ನೀಡುತ್ತದೆ. ಈ ಆಹಾರ ಸಬ್ಸಿಡಿಯನ್ನ ನೀಡುವ ಉದ್ದೇಶ ಬಡವರಿಗೆ ಆಹಾರ ಧನ್ಯಗಳು ಕೈಗೆಟುಕುವ ದರದಲ್ಲಿ ನೀಡುವ ಉದ್ದೇಶವಾಗಿದೆ. ಜೊತೆಗೆ ಎಲ್ಲರಿಗೂ ಆಹಾರವನ್ನ ಒದಗಿಸುವ ಗುರಿಯನ್ನ ಹೊಂದಿದೆ. ಹಾಗೆ ಈ ಕೃಷಿ ಮತ್ತು ರಸ ಗೊಬ್ಬರ ಸಬ್ಸಿಡಿ ರೈತರಿಗೆ ನೀಡಲಾಗುತ್ತದೆ. ಕೃಷಿ ಸಂಬಂಧಿತ ಉಪಕರಣಗಳನ್ನ ಖರೀದಿ ಮಾಡಲು ಹಾಗೆ ರಸಗೊಬ್ಬರಗಳನ್ನ ಅಂದರೆ ಯುರಿಯಾ ಮತ್ತು ಇತರೆ ಪೋಷಕಾಂಶಗಳನ್ನ ಖರೀದಿಸಲು ಸಹಾಯ ಮಾಡುತ್ತದೆ. ಇನ್ನು ಇಂಧನ ಸಬ್ಸಿಡಿಯಲ್ಲಿ ಅಡುಗೆ ಅನಿಲ, ಸೀಮೆ ಎಣ್ಣೆ ಹೀಗೆ ಇತರೆ ಇಂಧನಗಳನ್ನ ಒಳಗೊಂಡಿದ್ದು, ಈ ಮೂಲಕ ಜನರು ಕಡಿಮೆ ಬೆಲೆಗೆ ದಿನಬಳಕೆ ಇಂಧನಗಳನ್ನ ಖರೀದಿ ಮಾಡಬಹುದು. ಸಾರ್ವಜನಿಕರಿಗೆ ಹೊರೆಯಾಗದಿರಲಿ ಎಂಬ ನಿಟ್ಟಿನಲ್ಲಿ ಸರ್ಕಾರ ಈ ಸಬ್ಸಿಡಿಗಳನ್ನ ನೀಡುತ್ತದೆ. ಪ್ರತೀ ವರ್ಷ ಕೂಡ ಈ ಸಬ್ಸಿಡಿಗಳಿಗಾಗಿಯೇ ಪ್ರತ್ಯೇಕ ಹಂಚಿಕೆಯನ್ನ ಕೇಂದ್ರ ಮಾಡುತ್ತದೆ.
ಆಹಾರ ಸಬ್ಸಿಡಿ
ಭಾರತ ಸರ್ಕಾರವು ಬಡವರಿಗೆ ನಿರ್ಗತಿಕರಿಗೆ ಆಹಾರ ಧನ್ಯಗಳನ್ನ ಒದಗಿಸಲು, ಪ್ರಮುಖ ಯೋಜನೆಗಳ ಮೂಲಕ ಸಬ್ಸಿಡಿ ದರದಲ್ಲಿ ಆಹಾರ ಧನ್ಯಗಳನ್ನ ನೀಡಲಾಗುತ್ತದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಅಡಿಯಲ್ಲಿ ಸರ್ಕಾರ ಜನರಿಗೆ ಈ ಸಬ್ಸಿಡಿಯನ್ನ ನೀಡುತ್ತದೆ. ಈ ಸಬ್ಸಿಡಿಯಲ್ಲಿ ಎರಡು ಪ್ರಕಾರಗಳಿವೆ. ಒಂದು ಆಹಾರ ಧಾನ್ಯಗಳನ್ನ ರಾಜ್ಯಗಳು ಮತ್ತು ಅವುಗಳ ಏಜೆನ್ಸಿಗಳು ಸಂಗ್ರಹಿಸಿ ಅದನ್ನ ಭಾರತೀಯ ಆಹಾರ ನಿಗಮಕ್ಕೆ ನೀಡುತ್ತವೆ. ನಂತರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ (ಡಿಎಫ್‌ಪಿಡಿ) ನೀಡಿದ ತಾತ್ಕಾಲಿಕ ವೆಚ್ಚದ ಪ್ರಕಾರ ಇತರೆ ರಾಜ್ಯಗಳಿಗೆ ಹಣವನ್ನ ಬಿಡುಗಡೆ ಮಾಡಲಾಗುತ್ತದೆ. ಮತ್ತೊಂದು ಪ್ರಕಾರವನ್ನ ಗಮಿನಿಸುವುದಾದ್ರೆ ಆ ಪ್ರಕಾರವಾಗಿ ಮೊದಲಿಗೆ ಆಹಾರ ಧಾನ್ಯಗಳನ್ನ ಖರೀದಿ ಮಾಡಿ ವಿತರಣೆ ಮಾಡುವ ಹೊಣೆ ರಾಜ್ಯ ಸರ್ಕಾರಗಳದ್ದಾಗಿರುತ್ತದೆ. ಇನ್ನು ರಾಝ್ಯಗಳು ಹೆಚ್ಚು ಧಾನ್ಯಗಳನ್ನ ಸಂಗ್ರಹಿಸಿದರೆ, ಆ ಧಾನ್ಯಗಳನ್ನ ಎಫ್‌ಸಿಐಗೆ ರವಾನೆ ಮಾಡಬೇಕಾಗುತ್ತದೆ. ಇನ್ನು ಮಧ್ಯದಲ್ಲಿ ರಾಜ್ಯಳಿಗೆ ಆಹಾರ ಧಾನ್ಯಗಳ ಕೊರತೆ ಉಂಟಾದ್ರೆ ಆ ವೇಳೆ ಎಫ್‌ಐಸಿ ರಾಜ್ಯಗಳಿಗೆ ನೀಡುತ್ತದೆ.
ಕೇಂದ್ರ ಸರ್ಕಾರವು ಆಹಾರ ಸಬ್ಸಿಡಿಗಾಗಿ 2021-22ರಲ್ಲಿ ರೂ 2,88,718.54 ಕೋಟಿಯನ್ನ ಮೀಸಲಟ್ಟಿತ್ತು. ನಂತರ 2022-23ರಲ್ಲಿ ರೂ 2,72,501.70 ಕೋಟಿ ಹಂಚಿಕೆ ಮಾಡಿತ್ತು. ಆಹರ ಸಬ್ಸಿಡಿಗಾಗಿ 2023-24ರಲ್ಲಿ ರೂ 2,11,394.39 ಕೋಟಿಯನ್ನ ಹಂಚಿಕೆ ಮಾಡಿತ್ತು. ಹಾಗೆ ಕಳೆದ ವರ್ಷ ಅಂದರೆ 2024 ರಲ್ಲಿ, ಸರ್ಕಾರವು ಆಹಾರ ಸಬ್ಸಿಡಿಗಾಗಿ 2,05,250 ಕೋಟಿ ರೂ. ಹಂಚಿಕೆ ಮಾಡಿತ್ತು. ಇನ್ನು 2025ರಲ್ಲಿ ಆಹಾರ ಸಬ್ಸಿಡಿಗಾಗಿ ಎಷ್ಟು ಹಂಚಿಕೆ ಮಾಡಬಹುದು ಎಂದು ಜನರು ಎದುರು ನೋಡುತ್ತದ್ದಾರೆ.
ರಸಗೊಬ್ಬರ ಸಬ್ಸಿಡಿ
ರೈತರಿಗಾಗಿ ಸರ್ಕಾರ ಈ ರಸಗೊಬ್ಬರ ಸಬ್ಸಿಡಿಯನ್ನ ನೀಡುತ್ತದೆ. ಈ ಮೂಲಕ ರೈತರು ಕೈಗೆಟುಕುವ ದರದಲ್ಲಿ ಯುರಿಯಾ ಹಾಗೆ ಇತರೆ ಪೌಷ್ಟಿಕಾಂಶಗಳನ್ನ ಖರೀದಿಮಾಡಬಹುದು. ಇನ್ನು ಈ ಹಣವನ್ನ ಸರ್ಕಾರ ರಸಗೊಬ್ಬರ ಉತ್ಪಾದಕರಿಗೆ ನೀಡುತ್ತದೆ. ನಂತರ ರೈತರು ರಸಗೊಬ್ಬರಕ್ಕೆ ಇರುವ ಬೆಲೆಗಂತ ಕಡಿಮೆ ಬೆಲೆ ಖರೀದಿ ಮಾಡಬಹುದು. ಈ ರಸಗೊಬ್ಬರ ಸಬ್ಸಿಡಿಗಾಗಿ ಸರ್ಕಾರ ಜುಲೈ 2024 ರಲ್ಲಿ 1,64,000 ಕೋಟಿ ರೂಗಳನ್ನ ಮೀಸಲಿಟ್ಟಿತ್ತು. ಇನ್ನು ಈ ಬಾರಿ ಎಷ್ಟು ನೀಡಬಹುದು ಎಂದು ರೈತರು ಹೆಚ್ಚಿನ ನಿರೀಕ್ಷೆಯಲ್ಲಿದ್ದಾರೆ.
ಇಂಧನ ಸಬ್ಸಿಡಿ
ಈ ಇಂಧನ ಸಬ್ಸಿಡಿಗಾಗಿ ಸರ್ಕಾರ ಈ ಬಾರಿ ಕೇವಲ 12 ಸಾವಿರ ಕೋಟಿ ರೂಪಾಯಿಗಳನ್ನು ಮಾತ್ರ ಮೀಸಲಿಡುವ ನಿರೀಕ್ಷೆ ಇದೆ. ಈ ಇಂಧನ ಸಬ್ಸಿಡಿಗಳಲ್ಲಿ ಅಡುಗೆ ಅನಿಲ, ಅಂದರೆ ಎಲ್‌ಪಿಜಿ ಮತ್ತು ಸೀಮೇಎಣ್ಣೆ ಒಳಗೊಂಡಿದೆ. ಇನ್ನು ಈ ಎಲ್‌ಪಿಜಿಗಾಗಿ 11,925 ಕೋಟಿ ನೀಡುವ ನಿರೀಕ್ಷೆ ಇದೆ.
ಇತರೆ ಸಬ್ಸಿಡಿ
ಈ ಪ್ರಮುಖ ಸಬ್ಸಿಡಿಗಳ ಜೊತೆಗೆ ಸರ್ಕಾರ ಸಬ್ಸಿಡಿಗಳನ್ನ ಕೂಡ ನೀಡ್ತಿದೆ. ಇದಕ್ಕಾಗ ಕಂದ್ರ ಸರ್ಕಾರ 50 ಸಾವಿರ ಕೋಟಿ ರೂಗಳನ್ನ ಖರ್ಚು ಡುವ ನಿರೀಕ್ಷೆ ಇದೆ. ಡ್ಡಿ ಸಬ್ಸಿಡಿಗಳು, ವಿದ್ಯಾರ್ಥಿ ವೇತನ ಯೋಜನೆಗಳು, ಬವಸತಿ ಯೋಜನೆಗಳು,ರಾಷ್ಟ್ರೀಯ ವಿದ್ಯುತ್ ಮೇಲೆ ಕೂಡ ಸಬ್ಸಿಡಿಯನ್ನ ನೀಡಲಿದೆ.
ಕಳೆದ ಬಾರಿ ಕೇಂದ್ರ ಸರ್ಕಾರ 48 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿನ ಬಜೆಟ್ ಮಂಡಿಸುವ ಮೂಲಕ ದಾಖಲೆಯನ್ನ ಬರೆದಿದೆ. ಇದರಲ್ಲಿ ಶೇಕಡಾ 9 ರಷ್ಟು ಸಬ್ಸಿಡಿಗಳಿಗಾಗಿ ಸರ್ಕಾರ ಖರ್ಚು ಮಾಡಿದೆ. ಇನ್ನುಳಿದಂತೆ ಇತರೆ ವಿಭಗಗಳಿಗೆ ಹಂಚಿಕೆ ಮಾಡಿದೆ. ಕಳೆದ ಬಾರಿಯಂತೆ ಈ ಬಾರಿ ಕೂಡ ಜನರು ಹೆಚ್ಚಿನ ನಿರೀಕ್ಷೆಯೊಂದಿಗೆ ಬಜೆಟ್ ಮಂಡನೆಗಾಗಿ ಎದುರು ನೋಡುತ್ತಿದ್ದಾರೆ.


Click it and Unblock the Notifications