ಕೇಂದ್ರ ಬಜೆಟ್‌ನಲ್ಲಿ " ಸಬ್ಸಿಡಿಗಳು" ಆರ್ಥಿಕ ಕಲ್ಯಾಣ ಯೋಜನೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಯಾಕೆಂದರೆ ಭಾರತದಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಲು ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಅನೇಕ ಸಬ್ಸಿಡಿಗಳನ್ನು ನೀಡುತ್ತವೆ. ಸಬ್ಸಿಡಿಗಳು ಬೆಲೆಗಳನ್ನು ತಟಸ್ಥಗೊಳಿಸಲು, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ದುರ್ಬಲ ವರ್ಗಗಳಿಗೆ ಬೆಂಬಲ ನೀಡಲು ಸಹಾಯ ಮಾಡುತ್ತವೆ.
ಈ ಬಾರಿ 2025 ರ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನ ಮುಂದೆ ತಮ್ಮ ಏಳನೇ ಅನುಕ್ರಮ ಬಜೆಟ್ ಮಂಡಿಸಲಿದ್ದಾರೆ. ಹಾಗಿದ್ರೆ ಬಜೆಟ್ ನಲ್ಲಿ ನೀಡಲಾಗುವ ಸಬ್ಸಿಡಿಗಳು ಯಾವುವು ಮತ್ತು ಅವುಗಳನ್ನು ಹೇಗೆ ವಿತರಿಸಲಾಗುತ್ತದೆ ಎಂಬುದನ್ನು ವಿವರವಾಗಿ ನೋಡೋಣ.

ಸಬ್ಸಿಡಿ ಎಂದರೇನು?
ಸಬ್ಸಿಡಿ ಎಂದರೆ ಸರ್ಕಾರವು ವ್ಯಕ್ತಿಗಳು ಅಥವಾ ವ್ಯವಹಾರಗಳಿಗೆ ನಗದು ಪಾವತಿಗಳು, ಅನುದಾನಗಳು ಅಥವಾ ತೆರಿಗೆ ವಿನಾಯಿತಿಗಳ ಮೂಲಕ ನೀಡುವ ಆರ್ಥಿಕ ನೆರವು ಎಂದು ಕರೆಯಬಹುದು.ಇದು ಸಾಮಾನ್ಯವಾಗಿ ನಗದು ಪಾವತಿ ಅಥವಾ ತೆರಿಗೆ ಕಡಿತದ ರೂಪದಲ್ಲಿರುತ್ತದೆ. ಕೆಲವು ರೀತಿಯ ಹೊರೆಗಳನ್ನು ಕಡಿಮೆ ಮಾಡಲು ಸಬ್ಸಿಡಿಯನ್ನು ಸಾಮಾನ್ಯವಾಗಿ ನೀಡಲಾಗುತ್ತದೆ ಮತ್ತು ಇದನ್ನು ಸಾಮಾನ್ಯವಾಗಿ ಸಾರ್ವಜನಿಕರ ಒಟ್ಟಾರೆ ಹಿತದೃಷ್ಟಿಯಿಂದ ಪರಿಗಣಿಸಲಾಗುತ್ತದೆ.
ಸಬ್ಸಿಡಿಗಳ ಮುಖ್ಯ ಉದ್ದೇಶವೆಂದರೆ ಜನರಿಗೆ ಅಗತ್ಯ ವಸ್ತುಗಳು ಮತ್ತು ಸೇವೆಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡುವುದು ಮತ್ತು ನಿರ್ದಿಷ್ಟ ವಸ್ತುಗಳ ಉತ್ಪಾದನೆ ಮತ್ತು ಬಳಕೆಯನ್ನು ಪ್ರೋತ್ಸಾಹಿಸುವುದು, ವಿಶೇಷವಾಗಿ ಸಬ್ಸಿಡಿ ಸಾಮಾಜಿಕ ಪ್ರಯೋಜನಗಳನ್ನು ಹೊಂದಿರುತ್ತದೆ.
ಕೃಷಿ ಸಬ್ಸಿಡಿ
ಸರ್ಕಾರ ನೀಡುವ ಸಬ್ಸಿಡಿಗಳಲ್ಲಿ ಕೃಷಿ ಸಬ್ಸಿಡಿಯೂ ಒಂದು. ಇದನ್ನು ನಾವು ಸ್ಥೂಲವಾಗಿ ನೇರ ಸಬ್ಸಿಡಿಗಳು ಮತ್ತು ಪರೋಕ್ಷ ಸಬ್ಸಿಡಿ ಎಂದು ಎರಡು ವಿಧಗಳಾಗಿ ವರ್ಗೀಕರಿಸಬಹುದು
ನೇರ ಸಬ್ಸಿಡಿ: ಈ ಸಬ್ಸಿಡಿಗಳು ರೈತರು ಅಥವಾ ವ್ಯಕ್ತಿಗಳಿಗೆ ಮಾಡಿದ ನೈಜ ನೇರೆಪಾವತಿಗಳನ್ನು ಒಳಗೊಂಡಿರುತ್ತದೆ. ಸರ್ಕಾರವು ನೇರವಾಗಿ ಹಣವನ್ನು ವರ್ಗಾಯಿಸುತ್ತದೆ ಅಥವಾ ಫಲಾನುಭವಿಗೆ ಹಣಕಾಸಿನ ನೆರವು ನೀಡುತ್ತದೆ. ಉದ್ಯಾಹರಣೆಗೆ ನೋಡುವುದಾದರೆ ಭಾರತದಲ್ಲಿನ ಈ ರೀತಿಯ ಸಬ್ಸಿಡಿಗಳಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಸೇರಿದೆ, ಇದು ಎಲ್ಲಾ ಭೂಮಿ ಹೊಂದಿರುವ ರೈತ ಕುಟುಂಬಗಳಿಗೆ ವರ್ಷಕ್ಕೆ 6,000 ರೂಪಾಯಿಗಳನ್ನು ಮೂರು ಕಂತುಗಳಲ್ಲಿ ಒದಗಿಸುತ್ತದೆ.
ಪರೋಕ್ಷ ಸಬ್ಸಿಡಿಗಳು: ಪರೋಕ್ಷ ಸಬ್ಸಿಡಿಗಳು ಒಂದು ನಿರ್ದಿಷ್ಟ ಸರಕು ಅಥವಾ ಸೇವೆಯ ಬೆಲೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದರಿಂದ ರೈತರಿಗೆ ಅವುಗಳು ಹೆಚ್ಚು ಕೈಗೆಟುಕುವಂತಾಗುತ್ತದೆ. ಈ ಸಬ್ಸಿಡಿಗಳನ್ನು ಸಾಮಾನ್ಯವಾಗಿ ರಿಯಾಯಿತಿಗಳ ರೂಪದಲ್ಲಿ ನೀಡಲಾಗುತ್ತದೆ. ಭಾರತದಲ್ಲಿನ ಪರೋಕ್ಷ ಸಬ್ಸಿಡಿಗಳ ಸಾಮಾನ್ಯ ಉದಾಹರಣೆಗಳಲ್ಲಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP), ರಸಗೊಬ್ಬರ ಸಬ್ಸಿಡಿಗಳು (ಯೂರಿಯಾ), ನೀರಾವರಿ ಸಬ್ಸಿಡಿಗಳು (PMKSY), ಬಡ್ಡಿದರದ ಸಬ್ಸಿಡಿಗಳು (ಕಿಸಾನ್ ಕ್ರೆಡಿಟ್ ಕಾರ್ಡ್), ಬೆಳೆ ವಿಮೆ ಸಬ್ಸಿಡಿಗಳು (PMFBY) ಇತ್ಯಾದಿಗಳು ಸೇರಿವೆ.
ಬಡ್ಡಿಯ ಮೇಲಿನ ಸಬ್ಸಿಡಿಗಳು
ಬಜೆಟ್‌ನಲ್ಲಿನ ಬಡ್ಡಿಯ ಮೇಲಿನ ಸಬ್ಸಿಡಿಗಳು ಶಿಕ್ಷಣ, ವಸತಿ ಮತ್ತು ಕೃಷಿ ಮುಂತಾದ ನಿರ್ದಿಷ್ಟ ವಲಯಗಳಿಗೆ ಬಡ್ಡಿದರಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿವೆ. ಉದಾಹರಣೆಗಳೆಂದರೆ ವಿದ್ಯಾರ್ಥಿಗಳಿಗೆ ಕೇಂದ್ರ ವಲಯ ಬಡ್ಡಿ ಸಬ್ಸಿಡಿ ಯೋಜನೆ (ಸಿಎಸ್‌ಐಎಸ್), ರೈತರಿಗೆ ಬಡ್ಡಿ ಸಬ್ವೆನ್ಷನ್ ಯೋಜನೆ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ವಸತಿ ಸಾಲಗಳಿಗಾಗಿ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆ (ಸಿಎಲ್‌ಎಸ್‌ಎಸ್) ಇತ್ಯಾದಿಗಳಉ
ಆಹಾರ ಸಬ್ಸಿಡಿ
ಭಾರತ ಸರ್ಕಾರವು 2013 ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (National Food Security Act -ಎನ್‌ಎಫ್‌ಎಸ್‌ಎ) ಮತ್ತು ಇತರ ಕಲ್ಯಾಣ ಯೋಜನೆಗಳ (ಒಡಬ್ಲ್ಯುಎಸ್) ಅಡಿಯಲ್ಲಿ ವಿವಿಧ ಕೇಂದ್ರ ಯೋಜನೆಗಳ ಮೂಲಕ ಗುರಿಪಡಿಸಿದ ಫಲಾನುಭವಿಗಳಿಗೆ ಬಹಳ ಕಡಿಮೆ ಬೆಲೆಯಲ್ಲಿ ಆಹಾರ ಧಾನ್ಯಗಳನ್ನು ಒದಗಿಸುತ್ತದೆ. ಆಹಾರ ಸಬ್ಸಿಡಿಗೆ ಉದಾಹರಣೆಗೆ ಆದ್ಯತೆ ಕುಟುಂಬ (ಪಿಎಚ್‌ಎಚ್), ಅಂತೋದಯ ಅನ್ನ ಯೋಜನೆ (ಎಎವೈ), ಪ್ರಧಾನ ಮಂತ್ರಿ ಪೋಷಣ (ಮೊದಲು ಮಿಡ್ದೇ ಮೀಲ್ ಎಂದು ಕರೆಯುತ್ತಿದ್ದರು) ಮತ್ತು ಏಕೀಕೃತ ಬಾಲ ಅಭಿವೃದ್ಧಿ ಸೇವೆಗಳು (Integrated Child Development Services (ICDS)).
ರಸಗೊಬ್ಬರ ಸಬ್ಸಿಡಿ
ರಸಗೊಬ್ಬರ ಸಬ್ಸಿಡಿ ಎಂದರೆ ಸರ್ಕಾರವು ರೈತರಿಗೆ ರಸಗೊಬ್ಬರವನ್ನು ಕಡಿಮೆ ಬೆಲೆಗೆ ಒದಗಿಸಲು ನೀಡುವ ಆರ್ಥಿಕ ನೆರವು. ಇದರಿಂದ ರೈತರು ತಮ್ಮ ಬೆಳೆಗಳಿಗೆ ಅಗತ್ಯವಾದ ರಸಗೊಬ್ಬರಗಳನ್ನು ಸುಲಭವಾಗಿ ಖರೀದಿಸಬಹುದು ಮತ್ತು ಕೃಷಿ ಉತ್ಪಾದನೆಯನ್ನು ಹೆಚ್ಚಿಸಬಹುದು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರಗಳ ಬೆಲೆ ಏರಿಳಿತವಾಗುವಾಗ, ಈ ಸಬ್ಸಿಡಿಗಳು ರೈತರನ್ನು ಬೆಲೆ ಏರಿಕೆಯ ಪರಿಣಾಮದಿಂದ ರಕ್ಷಿಸುತ್ತವೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications