Budget 2025: ಮಧ್ಯಮ ವರ್ಗಕ್ಕೆ ಸಿಕ್ತು ಬಂಪರ್ ಕೊಡುಗೆ : ಆದಾಯ ತೆರಿಗೆ ವಿನಾಯಿತಿ ಮಿತಿ 12 ಲಕ್ಷಕ್ಕೆ ಏರಿಕೆ

ಆರ್ಥಿಕ ಹಿಂಜರಿತ, ಹಣದುಬ್ಬರ, ನಿರುದ್ಯೋಗ ಸಮಸ್ಯೆ, ಜಿಡಿಪಿಯಲ್ಲಿ ಇಳಿಕೆ ಹೀಗೆ ಹಲವು ಸವಾಲುಗಳ ಮಧ್ಯೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಶನಿವಾರ ದಾಖಲೆಯ ಎಂಟನೇ ಬಜೆಟ್ ಮಂಡಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅದರಲ್ಲೂ ಮಧ್ಯಮ ವರ್ಗದವರಿಗೆ ಬಂಪರ್ ಘೋಷಣೆಗಳನ್ನು ಮಾಡಿದ್ದಾರೆ.

2025-26ರ ಬಜೆಟ್‌ನಲ್ಲಿ ಬಡತನ, ಯುವಕರು, ಮಹಿಳೆಯರು, ಕೃಷಿ, ಉತ್ಪಾದನೆ, ಎಂಎಸ್‌ಎಂಇಗಳು, ಉದ್ಯೋಗ ಮತ್ತು ಎಲ್ಲರನ್ನೂ ಒಳಗೊಂಡ ಬೆಳವಣಿಗೆಯ ಮೇಲೆ ಕೇಂದ್ರೀಕರಿಸಿದ 10 ಪ್ರಮುಖ ಅಭಿವೃದ್ಧಿ ಕ್ರಮಗಳನ್ನು ಅವರು ವಿವರಿಸಿದ್ದಾರೆ. ಈ ಬಜೆಟ್, ಈ ಸವಾಲುಗಳನ್ನು ಎದುರಿಸಿ, ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯನ್ನು ಸಾಧಿಸುವ ಗುರಿಯನ್ನು ಹೊಂದಿದೆ.

ತೆರಿಗೆದಾರರಿಗೆ ಭರ್ಜರಿ ಗಿಫ್ಟ್: 12 ಲಕ್ಷದವರೆಗೆ ತೆರಿಗೆ ವಿನಾಯಿತಿ

ಅದರಲ್ಲೂ ಪ್ರಮುಖವಾಗಿ ಕೇಂದ್ರ ಬಜೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇಡೀ ದೇಶದ ಮಧ್ಯಮ ವರ್ಗದ ಜನತೆ ನಿಟ್ಟುಸಿರು ಬಿಡುವಂತ ಮಹತ್ವದ ಘೋಷಣೆ ಮಾಡಿದೆ. ಮಧ್ಯಮ ವರ್ಗದ ಆದಾಯ ತೆರಿಗೆಯ ಹೊರೆಯನ್ನ ಇಳಿಸಿದ್ದು, ₹12 ಲಕ್ಷದವರೆಗೂ ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಿದೆ. ಬಜೆಟ್ ಮಂಡನೆ ವೇಳೆ ವಿತ್ತ ಸಚಿವರು " ಮಧ್ಯಮ ವರ್ಗವು ಆರ್ಥಿಕತೆಗೆ ಬಲವನ್ನು ಒದಗಿಸುತ್ತದೆ. ಹೀಗಿರುವಾಗ ಅವರ ಕೊಡುಗೆಯನ್ನು ಗುರುತಿಸಿ, ನಾವು ನಿಯತಕಾಲಿಕವಾಗಿ ತೆರಿಗೆ ಹೊರೆಗಳನ್ನು ಕಡಿಮೆ ಮಾಡಿದ್ದೇವೆ. ₹ 12 ಲಕ್ಷಗಳ ಆದಾಯದವರೆಗೆ ಯಾವುದೇ ಆದಾಯ ತೆರಿಗೆ ಇರುವುದಿಲ್ಲ ಎಂದು ಘೋಷಿಸಲು ನನಗೆ ಸಂತೋಷವಾಗಿದೆ" ಎಂದು ಸೀತಾರಾಮನ್ ಹೇಳಿದರು.

ನಿರ್ಮಲಾ ಸೀತಾರಾಮನ್ ಅವರು ಪರಿಷ್ಕೃತ ಆದಾಯ ತೆರಿಗೆ ಸ್ಲ್ಯಾಬ್‌ಗಳ ವಿವರ ನೀಡಿದ್ದು ಹೀಗೆ:

'ಶೂನ್ಯ ತೆರಿಗೆ' ಸ್ಲ್ಯಾಬ್ ರೂ. 12.00 ಲಕ್ಷದವರೆಗೆ (ವೇತನದಾರರಿಗೆ ರೂ. 75,000 ಸ್ಟ್ಯಾಂಡರ್ಡ್ ಡಿಡಕ್ಷನ್‌ನೊಂದಿಗೆ ರೂ. 12.75 ಲಕ್ಷ)

ಮಧ್ಯಮ ವರ್ಗದ ತೆರಿಗೆಯನ್ನು ಗಣನೀಯವಾಗಿ ಕಡಿಮೆ ಮಾಡಲು ಮತ್ತು ಅವರ ಕೈಯಲ್ಲಿ ಹೆಚ್ಚಿನ ಹಣವನ್ನು ಉಳಿಸಲು ಹೊಸ ರಚನೆ, ಇದು ಕೌಟುಂಬಿಕ ಬಳಕೆ, ಉಳಿತಾಯ ಮತ್ತು ಹೂಡಿಕೆಯನ್ನು ಹೆಚ್ಚಿಸುತ್ತದೆ.

ಎಲ್ಲಾ ತೆರಿಗೆದಾರರಿಗೆ ಪ್ರಯೋಜನವಾಗುವಂತೆ ಸ್ಲ್ಯಾಬ್‌ಗಳು ಮತ್ತು ದರಗಳ ಬದಲಾಯಿಸಲಾಗುತ್ತಿದೆ.

ತೆರಿಗೆ ಸ್ಲ್ಯಾಬ್‌ಗಳು

0-4 ಲಕ್ಷ ರೂಪಾಯಿಗಳು - ಶೂನ್ಯ

4-8 ಲಕ್ಷ ರೂಪಾಯಿಗಳು - 5%

8-12 ಲಕ್ಷ ರೂಪಾಯಿಗಳು - 10%

12-16 ಲಕ್ಷ ರೂಪಾಯಿಗಳು - 15%

16-20 ಲಕ್ಷ ರೂಪಾಯಿಗಳು - 20%

20-24 ಲಕ್ಷ ರೂಪಾಯಿಗಳು - 25%

24 ಲಕ್ಷ ರೂಪಾಯಿಗಳಿಗಿಂತ ಹೆಚ್ಚು - 30%

ಬಜೆಟ್ ನಲ್ಲಿ ವಿತ್ತ ಸಚಿವರು ಹೇಳಿದ ಪ್ರಮುಖಾಂಶ

ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ರಾಷ್ಟ್ರ ನಿರ್ಮಾಣದಲ್ಲಿ ಮಧ್ಯಮ ವರ್ಗದ ಪ್ರಶಂಸನೀಯ ಶಕ್ತಿ ಮತ್ತು ಸಾಮರ್ಥ್ಯವನ್ನು ಯಾವಾಗಲೂ ನಂಬಿದೆ.

ಅವರ ಕೊಡುಗೆಯನ್ನು ಗುರುತಿಸಿ, ಸರ್ಕಾರವು ಕಾಲಕಾಲಕ್ಕೆ ಅವರ ತೆರಿಗೆ ಹೊರೆ ಕಡಿಮೆ ಮಾಡಿದೆ. 2014 ರ ನಂತರ, 'ಶೂನ್ಯ ತೆರಿಗೆ' ಸ್ಲ್ಯಾಬ್ ಅನ್ನು ₹ 2.5 ಲಕ್ಷಕ್ಕೆ ಹೆಚ್ಚಿಸಲಾಯಿತು, ಇದನ್ನು 2019 ರಲ್ಲಿ ₹ 5 ಲಕ್ಷಕ್ಕೆ ಮತ್ತು 2023 ರಲ್ಲಿ ₹ 7 ಲಕ್ಷಕ್ಕೆ ಹೆಚ್ಚಿಸಲಾಯಿತು.

ಈ ಬಜೆಟ್‌ನಲ್ಲಿ, ಹೊಸ ಪದ್ಧತಿಯಲ್ಲಿ ₹ 12 ಲಕ್ಷದವರೆಗೆ (ಅಂದರೆ ಬಂಡವಾಳ ಲಾಭಗಳಂತಹ ವಿಶೇಷ ದರದ ಆದಾಯವನ್ನು ಹೊರತುಪಡಿಸಿ ತಿಂಗಳಿಗೆ ಸರಾಸರಿ ₹ 1 ಲಕ್ಷ ಆದಾಯ) ಯಾವುದೇ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ಸರ್ಕಾರ ಘೋಷಿಸಿದೆ.

ವೇತನದಾರರಿಗೆ, ₹ 75,000 ರ ಪ್ರಮಾಣಿತ ಕಡಿತದ ಪ್ರಯೋಜನವು ಲಭ್ಯವಿರುವುದರಿಂದ, ₹ 12.75 ಲಕ್ಷದವರೆಗೆ ವಾರ್ಷಿಕ ಆದಾಯಕ್ಕೆ ಯಾವುದೇ ಆದಾಯ ತೆರಿಗೆ ಅನ್ವಯಿಸುವುದಿಲ್ಲ.

ವಿವಿಧ ಆದಾಯ ಹಂತಗಳಲ್ಲಿ ಸ್ಲ್ಯಾಬ್ ದರ ಬದಲಾವಣೆಗಳು ಮತ್ತು ರಿಯಾಯಿತಿಯ ಒಟ್ಟು ತೆರಿಗೆ ಪ್ರಯೋಜನವನ್ನು ಉದಾಹರಣೆಗಳೊಂದಿಗೆ ವಿವರಿಸಬಹುದು.

ಹೊಸ ತೆರಿಗೆ ಪದ್ಧತಿಯಲ್ಲಿ, ₹ 12 ಲಕ್ಷ ಆದಾಯ ಹೊಂದಿರುವ ವ್ಯಕ್ತಿಯು ₹ 80,000 ವರೆಗಿನ ಆದಾಯ ತೆರಿಗೆ ವಿನಾಯಿತಿಯನ್ನು ಪಡೆಯುತ್ತಾನೆ. ಅಂದರೆ, ಅವರು ಯಾವುದೇ ಆದಾಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ (ಪರಿಣಾಮಕಾರಿ ತೆರಿಗೆ ದರ 0%)₹ 16 ಲಕ್ಷ ಆದಾಯ ಹೊಂದಿರುವ ವ್ಯಕ್ತಿಯು ತೆರಿಗೆಯಲ್ಲಿ ₹ 50,000 ಪ್ರಯೋಜನವನ್ನು ಪಡೆಯುತ್ತಾನೆ. [ಪಾವತಿಸಬೇಕಾದ ಪರಿಣಾಮಕಾರಿ ಆದಾಯ ತೆರಿಗೆ ದರವು ಕೇವಲ 7.5% ಆಗಿರುತ್ತದೆ] ₹ 50 ಲಕ್ಷ ಆದಾಯ ಹೊಂದಿರುವ ವ್ಯಕ್ತಿಯು ಸಹ ₹ 1,10,000 ಪ್ರಯೋಜನವನ್ನು ಪಡೆಯುತ್ತಾನೆ. [ಪರಿಣಾಮಕಾರಿ ತೆರಿಗೆ ದರವು ಕೇವಲ 21.6% ಆಗಿರುತ್ತದೆ]

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+